ಐವರು ಭಾರತೀಯ ಯೋಧರನ್ನು ಕೊಂದೆವೆಂದ ಪಾಕ್; ಇದು ಸುಳ್ಳು ಎಂದು ಭಾರತ ಸ್ಪಷ್ಟನೆ

ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್​​ ನಮ್ಮ ಸೇನೆ ಅಪ್ರಚೋದಿತ ದಾಳಿ ನಡೆಸುತ್ತಿರುವುದು ನಿಜ. ಆದರೆ, ಇದಕ್ಕೆ ನಾವು ದಿಟ್ಟ ಉತ್ತರ ನೀಡುತ್ತಿದ್ದೇವೆ. ನಮ್ಮ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನಿ ಯೋಧರ ಉದ್ಧಟತನಕ್ಕೆ ತಕ್ಕಶಾಸ್ತಿ ಮಾಡಿದ್ದೇವೆ- ಭಾರತ

news18
Updated:August 15, 2019, 10:39 PM IST
ಐವರು ಭಾರತೀಯ ಯೋಧರನ್ನು ಕೊಂದೆವೆಂದ ಪಾಕ್; ಇದು ಸುಳ್ಳು ಎಂದು ಭಾರತ ಸ್ಪಷ್ಟನೆ
ಗಡಿ ನಿಯಂತ್ರಣ ರೇಖೆ
  • News18
  • Last Updated: August 15, 2019, 10:39 PM IST
  • Share this:
ನವದೆಹಲಿ(ಆಗಸ್ಟ್​​.15): ಭಾರತದ ಐವರು ಯೋಧರನ್ನು ಹೊಡೆದುರುಳಿಸಿದ್ದೇವೆ ಎಂದ ಪಾಕಿಸ್ತಾನದ ಬಣ್ಣ ಬಯಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಉಭಯ ದೇಶಗಳ ನಡುವೆ ನಡೆದ ಗುಂಡಿ ದಾಳಿಯಲ್ಲಿ ಭಾರತದ ಐವರು ಸೈನಿಕರನ್ನು ಕೊಂದು ಹಾಕಿದ್ದೇವೆ ಎಂದು ಪಾಕ್​​ ಸೇನೆಯ ವಕ್ತಾರ ಆಸೀಫ್​​​ ಘಾಫೂರ್ ಟ್ವೀಟ್​​ ಮಾಡಿದ್ದರು. ಈ ಬೆನ್ನಲ್ಲೇ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಭಾರತ ಸೇನೆಯೂ, ಗುಂಡಿನ ಚಕಮಕಿಯಲ್ಲಿ ನಮ್ಮ ಯಾವುದೇ ಯೋಧರು ಸಾವನ್ನಪ್ಪಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಪಾಕಿಸ್ತಾನದ ಸುಳ್ಳಿಗೆ ತಕ್ಕ ಉತ್ತರ ನೀಡಿದೆ.ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್​​ ನಮ್ಮ ಸೇನೆ ಮೇಲೆ ಅಪ್ರಚೋದಿತ ದಾಳಿ ನಡೆಸುತ್ತಿರುವುದು ನಿಜ. ಆದರೆ, ಇದಕ್ಕೆ ನಾವು ದಿಟ್ಟ ಉತ್ತರ ನೀಡುತ್ತಿದ್ದೇವೆ. ನಮ್ಮ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನಿ ಯೋಧರ ಉದ್ಧಟತನಕ್ಕೆ ತಕ್ಕಶಾಸ್ತಿ ಮಾಡಿದ್ದೇವೆ. ನಾವೇ ಮೂವರು ಪಾಕಿಸ್ತಾನಿ ಯೋಧರನ್ನು ಹೊಡೆದುರುಳಿಸಿದ್ದೇವೆ. ನಮ್ಮ ವಲಯದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.

ಇದನ್ನೂ ಓದಿ: ಕಾಶ್ಮೀರ ವಿಚಾರದಲ್ಲಿ ಪಾಕ್ ಬೆನ್ನಿಗೆ ನಿಂತ ಚೀನಾ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಾಳೆ ಚರ್ಚೆ370ನೇ ವಿಧಿ ರದ್ದುಗೊಳಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ದೇಶಗಳ ನಡುವಿನ ಗಡಿ ಪ್ರದೇಶದಲ್ಲಿ ಬೆಳಗಿನಿಂದಲೇ ಗುಂಡಿನ ಚಕಮಕಿ ನಡೆಯುತ್ತಿದೆ. ಪಾಕಿಸ್ತಾನಿ ಯೋಧರು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಕೂಡಲೇ ಎಚ್ಚೆತ್ತ ಭಾರತೀಯ ಸೇನೆ ಪಾಕಿಸ್ತಾನಿ ಯೋಧರ ದಾಳಿಗೆ ಪ್ರತಿದಾಳಿ ನಡೆಸಿದೆ.
--------------
First published:August 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ