Narendra Modi turns 71: ಬಾಲ್ಯದಲ್ಲಿ ಸೇನೆ ಸೇರುವ ಕನಸು ಕಂಡಿದ್ದ ಮೋದಿ; ಪ್ರಧಾನಿ ಜೀವನದ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಆಸಕ್ತಿ ವಿಷಯಗಳು!

ಬಾಲ್ಯದಲ್ಲಿ ಟೀ  ಮಾರಾಟ ಮಾಡುತ್ತಾ ಬಿಜೆಪಿಯ ಕಾರ್ಯಕರ್ತನಾಗಿ ಬೆಳೆದು ಇಂದು ರಾಷ್ಟ್ರ ನಾಯಕರಾಗಿರುವ ಅವರ ಬಗ್ಗೆ ಅನೇಕ ಕುತೂಹಲಕಾರಿ ಸಂಗತಿಗಳು ಅನೇಕರಿಗೆ ತಿಳಿದಿದೆ. ಆದರೆ ಅವರ ಬಗ್ಗೆ ಗೊತ್ತಿಲ್ಲದ ಅನೇಕ ವಿಚಾರಗಳು ಇದ್ದು, ಈ ಕುರಿತ ಮಾಹಿತಿ ಇಲ್ಲಿದೆ

ನರೇಂದ್ರ ಮೋದಿ

ನರೇಂದ್ರ ಮೋದಿ

 • Share this:
   ನವದೆಹಲಿ (ಸೆ. 17): ದೇಶದೆಲ್ಲೆಡೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (Narendra modi Birthady) ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮೋದಿ ಅವರ 71ನೇ ಜನ್ಮದಿನಕ್ಕೆ ರಾಷ್ಟ್ರದೆಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಅವರ ಈ ಹುಟ್ಟಿದ ದಿನವನ್ನು ವಿಶೇಷವಾಗಿ ಆಚರಿಸಲು ಬಿಜೆಪಿ ಅನೇಕ ಕಾರ್ಯಕ್ರಮ ನಡೆಸುತ್ತಿದೆ. ಇದರಲ್ಲಿ ಒಂದು ದೇಶಾದ್ಯಂತ ಜನರಿಗೆ ಕೋವಿಡ್ ಲಸಿಕೆ ವಿತರಣೆ. ಈಗಾಗಲೇ ಮಧ್ಯಾಹ್ನದ ಹೊತ್ತಿಗೆ ಒಂದು ಕೋಟಿ ಲಸಿಕೆ ವಿತರಣೆ ಕಾರ್ಯ ನಡೆಯುತ್ತಿದೆ. ಇದೇ ವರ್ಷ ಮೋದಿ ಅವರು ಸಾರ್ವಜನಿಕ ಜೀವನಕ್ಕೆ ಬಂದು ಅಂದರೆ ಗುಜರಾತ್​ ಮುಖ್ಯಮಂತ್ರಿಯಾಗಿ 20 ವರ್ಷ ಆಗಿರುವುದು ಮತ್ತೊಂದು ವಿಶೇಷ.

  ಮುಖ್ಯಮಂತ್ರಿಯಾಗಿ ಮಾದರಿ ಗುಜರಾತ್​ ಅಭಿವೃದ್ಧಿ ಪಡಿಸಿದ ಮೋದಿ ಇಂದು ವಿಶ್ವದ ಪ್ರಖ್ಯಾತಿ ವ್ಯಕ್ತಿಗಳಲ್ಲಿ ಒಬ್ಬರು , ಅಮೆರಿಕದ ಅಧ್ಯಕ್ಷರನ್ನು ಹಿಂದಿಕ್ಕಿ ಅವರ ವರ್ಚಸ್ಸು ವೃದ್ಧಿಯಾಗಿದೆ. ಬಾಲ್ಯದಲ್ಲಿ ಟೀ  ಮಾರಾಟ ಮಾಡುತ್ತಾ ಬಿಜೆಪಿಯ ಕಾರ್ಯಕರ್ತನಾಗಿ ಬೆಳೆದು ಇಂದು ರಾಷ್ಟ್ರ ನಾಯಕರಾಗಿರುವ ಅವರ ಬಗ್ಗೆ ಅನೇಕ ಕುತೂಹಲಕಾರಿ ಸಂಗತಿಗಳು ಅನೇಕರಿಗೆ ತಿಳಿದಿದೆ. ಆದರೆ ಅವರ ಬಗ್ಗೆ ಗೊತ್ತಿಲ್ಲದ ಅನೇಕ ವಿಚಾರಗಳು ಇದ್ದು, ಈ ಕುರಿತ ಮಾಹಿತಿ ಇಲ್ಲಿದೆ

  ಸೇನೆಗೆ ಸೇರಬೇಕು ಎಂದು ಕನಸು ಕಂಡಿದ್ದ ಮೋದಿ
  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಲ್ಯದಿಂದಲೂ ದೇಶ ಸೇವೆ ಮಾಡಬೇಕು ಎಂಬ ಕನಸು ಅಗಾಧವಾಗಿತ್ತು. ಇದೇ ಕಾರಣಕ್ಕೆ ಅವರು ಚಿಕ್ಕವರಿದ್ದಾಗಲೇ ಸೇನೆ ಸೇರಬೇಕು ಎಂದು ಕನಸು ಕಂಡಿದ್ದರು. ಇದೇ ಕಾರಣಕ್ಕೆ ಜಾಮ್​ ನಗರದ ಸೈನಿಕ ಶಾಲೆಗೆ ಸೇನೆ ಶಾಲೆ ಸೇರಬೇಕು ಎಂದು ನಿರ್ಧರಿಸಿದ್ದರು. ಆದರೆ, ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಇದಕ್ಕೆ ಅವಕಾಶ ನೀಡಲಿಲ್ಲ. ಸೈನಿಕ ಶಾಲೆಗೆ ಸೇರಲು ಮನೆಯಲ್ಲಿ ನಿರಾಕರಿಸಿದರು. ಈ ಹಿನ್ನಲೆ ತಮ್ಮ ಕುಟುಂಬದ ಆಧಾರವಾಗಿದ್ದ ತಂದೆಯವರ ಟೀ ಅಂಗಡಿಯಲ್ಲಿ ಕಾರ್ಯ ನಿರ್ವಹಿಸಲು ಮುಂದಾದರು. ಈ ವೇಳೆ ಅವರ ಕುಟುಂಬ 40 -12 ಅಡಿ ಸಣ್ಣ ಮನೆಯಲ್ಲಿ ವಾಸವಾಗಿತ್ತು.

  ತಮ್ಮ ಜೀವನದ ದಿಕ್ಕು ಬದಲಾದರೂ ಅವರಲ್ಲಿನ ಸೇನೆಗೆ ಸೇರಬೇಕು ಎಂಬ ಕನಸು ಮಾತ್ರ ಹಾಗೇ ಇತ್ತು. ತಮ್ಮ ಹರೆಯದಲ್ಲಿ ಅಂದರೆ 1965ರಲ್ಲಿ ಭಾರತ ಪಾಕಿಸ್ತಾನ ಯುದ್ದ ಸಂದರ್ಭದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸೈನಿಕರಿಗೆ ಅವರು ಟೀ ಸರಬರಾಜು ಮಾಡುತ್ತಿದ್ದರು. ತಮ್ಮ ಸೇನೆಯ ಕನಸಿನಿಂದಲೇ ಅವರು ಪ್ರತಿ ದೀಪಾವಳಿಯನ್ನು ಸೈನಿಕರ ಜೊತೆಯಲ್ಲಿ ಆಚರಿಸುತ್ತಾರೆ.

  ಉತ್ತಮ ವಾಗ್ಮಿ
  ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ವಾಗ್ಮಿ ಎಂಬುದರಲ್ಲಿ ಎರಡು ಮಾತಿಲ್ಲ. ವಡ್ನಗರ್​ನಲ್ಲಿ ಶಾಲೆ ಶಿಕ್ಷಣ ಪಡೆದ ಅವರು, ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಶಾಲೆಯಲ್ಲಿ ಯಾವುದೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿರುತ್ತಿದ್ದರು, ಇದಕ್ಕಾಗಿ ಅವರು ಗಂಟೆಗಟ್ಟಲೇ ಶಾಲೆಯ ಗ್ರಂಥಾಲಯದಲ್ಲಿ ತಯಾರಿ ನಡೆಸುತ್ತಿದ್ದರು.

  ತಮ್ಮ ಮಾತು, ಭಾಷಣದ ಕಲೆಯಿಂದಲೇ ಅವರು ರಾಜಕೀಯ ಪ್ರವೇಶಿಸುತ್ತಿದ್ದಂತೆ ಎಲ್ಲರ ಗಮನ ಸೆಳೆದು ಬಿಜೆಪಿ ವಕ್ತಾರರಾದರು. ಬಳಿಕ ಲೋಕಸಭೆಗೆ ಸ್ಪರ್ಧಿಸಿ ದೇಶದಲ್ಲಿ ಹೊಸ ಅಲೆ ಸೃಷ್ಟಿಸಿದರು

  ಇದನ್ನು ಓದಿ: ದೇವಾಲಯಗಳು ನಮ್ಮ ಅಸ್ಮಿತೆ, ದೇವಸ್ಥಾನಗಳ ರಕ್ಷಣೆ ಮಾಡುತ್ತೇವೆ; ಸಿಎಂ ಬಸವರಾಜ ಬೊಮ್ಮಾಯಿ

  ಹೊಸತನದ ಕನಸುಗಾರ
  ಸಣ್ಣವಯಸ್ಸಿನಿಂದಲೇ ಸ್ವಾಮಿ ವಿವೇಕನಂದರ ಬಗ್ಗೆ ಹೆಚ್ಚು ಆಕರ್ಷಣೆಯನ್ನು ಮೋದಿ ಹೊಂದಿದ್ದರು. ಇದೇ ಕಾರಣಕ್ಕೆ ಅವರು ಹೊಸ ಜ್ಞಾನದ ಸೆಳೆತಕ್ಕಾಗಿ ತಪ್ಪಸ್ಸಿನ ಜೀವನ ನಡೆಸಲು ಮುಂದಾದರು. ಇದಕ್ಕಾಗಿ ಉಪ್ಪು, ಮೆಣಸಿನಕಾಯಿ, ಎಣ್ಣೆ, ಬೆಲ್ಲ ತ್ಯಜಿಸಿ ತಪ್ಪಸಿನ ಆಚರಣೆಗೆ ನಿರ್ಧರಿಸಿದರು. ಇದಕ್ಕಾಗಿ ಅವರು ಗುಜರಾತ್​ನಿಂದ ಪಶ್ಚಿಮ ಬಂಗಾಳಕ್ಕೆ ತೆರಳಿ ಅಲ್ಲಿಂದ ಹಿಮಾಲಯದತ್ತ ಪ್ರಯಣಿಸಿದರು

  ಧುರೀಣರ ಮಾರ್ಗದರ್ಶನ
  1973 ರಲ್ಲಿ ಗುಜರಾತ್ ನಲ್ಲಿ ನವನಿರ್ಮಾಣ ಚಳುವಳಿ ಎಂಬ ಸ್ಥಾಪನಾ ವಿರೋಧಿ ಆಂದೋಲನ ಆರಂಭವಾದಾಗ ನರೇಂದ್ರ ಮೋದಿಯವರಿಗೆ ಇಪ್ಪತ್ತನೆಯ ವಯಸ್ಸಾಗಿತ್ತು. ಅವರು ವಿದ್ಯಾರ್ಥಿಗಳ ಆಂದೋಲನದಲ್ಲಿ ಭಾಗವಹಿಸಿದರು, ಜಯಪ್ರಕಾಶ ನಾರಾಯಣ ಅವರ ನೇತೃತ್ವದಲ್ಲಿನ ಹೋರಾಟದ ವೇಳೆ ಅವರೊಂದಿಗೆ ಭಾಗಿಯಾಗಿದರು. ಇದೇ ಸಂದರ್ಭದಲ್ಲಿ ಅವರು ಮತ್ತೊಬ್ಬ ನಾಯಕ ಜಾರ್ಜ್​ ಫರ್ನಾಂಡಿಸ್​ ಅವರ ಜೊತೆ ಸಂವಾದ ನಡೆಸಿದರು. ನವನಿರ್ಮಾಣ ಚಳುವಳಿಯ ಅಹಿಂಸಾತ್ಮಕವಾಗಿ ಉಳಿಯಬೇಕು ಎಂದು ನಿರಾಕರಿಸಿದರು.
  Published by:Seema R
  First published: