• Home
  • »
  • News
  • »
  • national-international
  • »
  • Fertility Rate: 10 ವರ್ಷಗಳಲ್ಲಿ ಭಾರತದಲ್ಲಿ ಫಲವತ್ತತೆ ದರ 20% ರಷ್ಟು ಕುಸಿತ, SRS ವರದಿ

Fertility Rate: 10 ವರ್ಷಗಳಲ್ಲಿ ಭಾರತದಲ್ಲಿ ಫಲವತ್ತತೆ ದರ 20% ರಷ್ಟು ಕುಸಿತ, SRS ವರದಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕಳೆದ ಒಂದು ದಶಕದಲ್ಲಿ ಭಾರತದಲ್ಲಿ (India) ಸಾಮಾನ್ಯ ಫಲವತ್ತತೆ ದರ (ಜಿಎಫ್‌ಆರ್‌) ಶೇ.20ರಷ್ಟು ಕುಸಿದಿದೆ. ಜಿಎಫ್‌ ಆರ್‌ 15-49 ವರ್ಷಗಳ ಸಂತಾನೋತ್ಪತ್ತಿ ವಯಸ್ಸಿನ ಒಂದು ವರ್ಷದಲ್ಲಿ 1,000 ಮಹಿಳೆಯರಿಗೆ (Women's) ಜನಿಸಿದ ಮಕ್ಕಳ (New Born Babies) ಸಂಖ್ಯೆಯನ್ನು ಸೂಚಿಸುತ್ತದೆ.

ಮುಂದೆ ಓದಿ ...
  • Share this:

ಚೀನಾಕ್ಕೆ (China) ಸೆಡ್ಡು ಹೊಡೆಯುವಂತೆ ಭಾರತದ ಜನಸಂಖ್ಯೆ (Indian Population) ಏರುತ್ತಲೇ ಇರುವ ವಿದ್ಯಾಮಾನ ಕೆಲ ವರ್ಷಗಳ ಹಿಂದಷ್ಟೇ ನಡೆಯುತ್ತಿತ್ತು. ಆದರೆ ಈಗ ಬಂದ ಹೊಸ ವರದಿಗಳು ಭಾರತದ ಜನಸಂಖ್ಯಾ ಸ್ಫೋಟದ ಗಣನೀಯ ಇಳಿಕೆಯನ್ನು ತೋರಿಸುತ್ತಿದೆ ಎನ್ನಬಹುದು. ಪ್ರಸ್ತುತ ಹೊರಬಿದ್ದಿರುವ ವರದಿಗಳ ಪ್ರಕಾರ, ಕಳೆದ ಒಂದು ದಶಕದಲ್ಲಿ ಭಾರತದಲ್ಲಿ (India) ಸಾಮಾನ್ಯ ಫಲವತ್ತತೆ ದರ (ಜಿಎಫ್‌ಆರ್‌) ಶೇ.20ರಷ್ಟು ಕುಸಿದಿದೆ. ಜಿಎಫ್‌ ಆರ್‌ 15-49 ವರ್ಷಗಳ ಸಂತಾನೋತ್ಪತ್ತಿ ವಯಸ್ಸಿನ ಒಂದು ವರ್ಷದಲ್ಲಿ 1,000 ಮಹಿಳೆಯರಿಗೆ (Women's) ಜನಿಸಿದ ಮಕ್ಕಳ (New Born Babies) ಸಂಖ್ಯೆಯನ್ನು ಸೂಚಿಸುತ್ತದೆ.


ಭಾರತದಲ್ಲಿ ಸಾಮಾನ್ಯ ಫಲವತ್ತತೆ ದರ ಕುಸಿತ
ಭಾರತದಲ್ಲಿನ ಸರಾಸರಿ ಸಾಮಾನ್ಯ ಫಲವತ್ತತೆ ದರ, 2008ರಿಂದ 2010ರ ವರೆಗೆ 86.1 ರಷ್ಟಿತ್ತು ಮತ್ತು 2018-20ರಲ್ಲಿ 68.7ಕ್ಕೆ ಇಳಿದಿದೆ, ಇತ್ತೀಚೆಗೆ ಬಿಡುಗಡೆಯಾದ ಮಾದರಿ ನೋಂದಣಿ ವ್ಯವಸ್ಥೆ (SRS) ಡೇಟಾ 2020ರ ಅಂಕಿಅಂಶಗಳ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿಯೇ ಅತಿಹೆಚ್ಚು ಫಲವತ್ತತೆ ದರ ಇಳಿಕೆಯಾಗಿದೆ. ನಗರ ಪ್ರದೇಶಗಳಲ್ಲಿ 15.6% ಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ 20.2% ರಷ್ಟು ಕುಸಿತ ಕಂಡಿದೆ.


ಕುಸಿತಕ್ಕೆ ಕಾರಣ?
AIIMS ನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಮಾಜಿ ಮುಖ್ಯಸ್ಥೆ ಡಾ. ಸುನೀತಾ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಫಲವತ್ತತೆಯಲ್ಲಿನ ಕುಸಿತವು ಜನಸಂಖ್ಯೆಯ ಬೆಳವಣಿಗೆಯಲ್ಲಿ ಇಳಿಕೆಯನ್ನು ಸೂಚಿಸುತ್ತದೆ, ಇದು ಉತ್ತಮ ಸಂಕೇತವಾಗಿದೆ.
ಮದುವೆಯ ವಯಸ್ಸಿನ ಹೆಚ್ಚಳ, ಮಹಿಳೆಯರಲ್ಲಿ ಸುಧಾರಿತ ಸಾಕ್ಷರತೆ ಪ್ರಮಾಣ ಮತ್ತು ಆಧುನಿಕ ಗರ್ಭನಿರೋಧಕ ವಿಧಾನಗಳ ಸುಲಭ ಲಭ್ಯತೆ ಈ ಬದಲಾವಣೆಯ ಹಿಂದಿನ ಕೆಲವು ಪ್ರಮುಖ ಅಂಶಗಳಾಗಿವೆ ಎಂದು ಅವರು ಹೇಳಿದರು.


ಇದನ್ನೂ ಓದಿ:  Spoons In Stomach: ಹೊಟ್ಟೆಯಲ್ಲಿತ್ತು 63 ಚಮಚ! ಚಿಕಿತ್ಸೆ ನೀಡಿದ ವೈದ್ಯರೇ ತಬ್ಬಿಬ್ಬು


ಸಾಮಾನ್ಯ ಫಲವತ್ತತೆ ದರ, 2020ರ ವರದಿಯಲ್ಲಿ GFR ಕಡಿತದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿನ ಸಾಕ್ಷರತೆಯ ಪಾತ್ರವನ್ನು ಪ್ರಮುಖವಾಗಿ ತಜ್ಞರು ಗುರುತಿಸಿದ್ದಾರೆ. ಅನಕ್ಷರಸ್ಥ ಮತ್ತು ಸಾಕ್ಷರ ಮಹಿಳೆಯರ ಜಿಎಫ್‌ ಆರ್ ಗಳ ನಡುವೆ ವ್ಯತ್ಯಾಸವಿದೆ ಮತ್ತು ನಂತರದ ಹಂತವು ರಾಷ್ಟ್ರೀಯ ಮಟ್ಟದಲ್ಲಿ GFR ನ ಕೆಳಮಟ್ಟವನ್ನು ಚಿತ್ರಿಸುತ್ತದೆ ಎಂದು ‌ವರದಿ ಹೇಳುತ್ತದೆ.


ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ 2008-10 ಮತ್ತು 2018-20ರ ನಡುವೆ ನೋಡುವುದಾದರೆ, ಜಮ್ಮು ಮತ್ತು ಕಾಶ್ಮೀರ (29.2) ಸಾಮಾನ್ಯ ಫಲವತ್ತತೆ ದರದಲ್ಲಿ ಗರಿಷ್ಠ ಕುಸಿತವನ್ನು ಕಂಡಿದೆ. ನಂತರ ದೆಹಲಿ (28.5), ಉತ್ತರ ಪ್ರದೇಶ (24), ಜಾರ್ಖಂಡ್ (24) ಮತ್ತು ರಾಜಸ್ಥಾನ (23.2) ರಾಜ್ಯಗಳಲ್ಲಿ ಇಳಿಕೆಯಾಗಿದೆ. ಮಹಾರಾಷ್ಟ್ರದಲ್ಲಿ, ಕಳೆದ ಎರಡು ದಶಕಗಳಲ್ಲಿ GFR 18.6% ರಷ್ಟು ಕುಸಿದಿದೆ.


ವರದಿಯಲ್ಲೇನಿದೆ?
ಇತ್ತೀಚಿನ SRS ಡೇಟಾ ಪ್ರಕಾರ ಭಾರತದಲ್ಲಿ ಒಟ್ಟು ಫಲವತ್ತತೆ ದರ (ಸಂತಾನೋತ್ಪತ್ತಿ ವಯಸ್ಸಿನಲ್ಲಿ ಪ್ರತಿ ಮಹಿಳೆಗೆ ಜನನಗಳು) 2 ಆಗಿದೆ. ಬಿಹಾರ ಅತ್ಯಧಿಕ TFR (3.0) ವರದಿ ಮಾಡಿದರೆ ದೆಹಲಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳವು ಕಡಿಮೆ ಒಟ್ಟು ಫಲವತ್ತತೆ ದರವನ್ನು (1.4) ವರದಿ ಮಾಡಿದೆ.


ಎಸ್‌ ಆರ್‌ ಎಸ್‌ ದತ್ತಾಂಶವು ಬದಲಿ ಮಟ್ಟದ ಟಿಎಫ್‌ಆರ್ 2.1 ಅನ್ನು ರಾಷ್ಟ್ರೀಯ ಮಟ್ಟದಲ್ಲಿ ದೆಹಲಿ (1.4), ತಮಿಳುನಾಡು (1.4), ಪಶ್ಚಿಮ ಬಂಗಾಳದೊಂದಿಗೆ ಸಾಧಿಸಲಾಗಿದೆ ಎಂದು ತೋರಿಸುತ್ತದೆ. ಮಿಕ್ಕಂತೆ ಇದರ ಪ್ರಮಾಣ ಇತರೆ ರಾಜ್ಯಗಳಲ್ಲಿ ಈ ರೀತಿಯಾಗಿದೆ ಆಂಧ್ರಪ್ರದೇಶ (1.5), ಹಿಮಾಚಲ ಪ್ರದೇಶ (1.5), ಜಮ್ಮು ಮತ್ತು ಕಾಶ್ಮೀರ (1.5), ಕೇರಳ (1.5), ಮಹಾರಾಷ್ಟ್ರ (1.5), ಪಂಜಾಬ್ (1.5), ತೆಲಂಗಾಣ (1.5), ಕರ್ನಾಟಕ (1.6), ಒಡಿಶಾ (1.8), ಉತ್ತರಾಖಂಡ (1.8), ಗುಜರಾತ್ (2.0), ಹರಿಯಾಣ (2.0) ಮತ್ತು ಅಸ್ಸಾಂ (2.1).


ಇದನ್ನೂ ಓದಿ:  Viral Video: ಮೈಕ್​ಗೆ ಕಾಂಡೋಮ್ ಸುತ್ತಿದ ವರದಿಗಾರ್ತಿ! ಬೇರೇನೂ ಸಿಕ್ಕಿಲ್ವಾ ಎಂದ ವೀಕ್ಷಕರು!


ಪ್ರಸ್ತುತ, ಗ್ರಾಮೀಣ ಮಹಿಳೆಯ ಟಿಎಫ್‌ಆರ್ ರಾಷ್ಟ್ರೀಯ ಮಟ್ಟದಲ್ಲಿ 2.2 ಆಗಿದೆ, ಇದು ನಗರ ಮಹಿಳೆ (1.6) ಗಿಂತ ಹೆಚ್ಚಾಗಿದೆ ಎಂದು ವರದಿ ಸೂಚಿಸಿದೆ. ಈ ಮೇಲಿನ ವರದಿಯ ಪ್ರಕಾರ ಜನಸಂಖ್ಯೆಯ ಪ್ರಮಾಣ ಇಳಿಯುತ್ತಿದೆ ಎಂಬ ಸಮಾಧಾನಕರ ವಿಚಾರ ಒಂದು ಕಡೆಯಾದರೆ, ಭಾರತೀಯರಲ್ಲಿ ಬಂಜೆತನ ಸಮಸ್ಯೆ ಹೆಚ್ಚಾಗುತ್ತಿದೆಯೇ ಎಂಬ ಆತಂಕ ಕೂಡ ಶುರುವಾಗಿದೆ.

Published by:Ashwini Prabhu
First published: