Budget 2020 | ಎರಡನೇ ಬಜೆಟ್ ಮಂಡನೆಗೆ ಸಿದ್ಧರಾಗಿರುವ ನಿರ್ಮಲಾ ಸೀತಾರಾಮನ್ ಮುಂದಿದೆ ಭಾರೀ ಸವಾಲು

2024-25ರ ಹೊತ್ತಿಗೆ 350 ಲಕ್ಷ ಕೋಟಿ ಜಿಡಿಪಿ ಗಾತ್ರದ ಆರ್ಥಿಕತೆ ಅಭಿವೃದ್ಧಿಯಾಗಬೇಕಾದರೆ ಜಿಡಿಪಿ ಬೆಳವಣಿಗೆ ದರ ಶೇ.8ರಿಂದ 9ರಷ್ಟಿರಬೇಕು. ಈ ದರ ಬೇಗನೆ ಮೇಲೆ ಬರಬೇಕಾದರೆ ಅಂತರರಾಷ್ಟ್ರೀಯ ಹಣಕಾಸು ನಿಧಿ ಸೂಚಿಸಿದಂತಹ ದಿಟ್ಟ ರಚನಾತ್ಮಕ ಸುಧಾರಣೆಗಳನ್ನು ಹೊಂದಿರುವ ಬಜೆಟ್​ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಬೇಕಾಗಿದೆ.

HR Ramesh | news18-kannada
Updated:January 30, 2020, 5:26 PM IST
Budget 2020 | ಎರಡನೇ ಬಜೆಟ್ ಮಂಡನೆಗೆ ಸಿದ್ಧರಾಗಿರುವ ನಿರ್ಮಲಾ ಸೀತಾರಾಮನ್ ಮುಂದಿದೆ ಭಾರೀ ಸವಾಲು
ಪ್ರಾತಿನಿಧಿಕ ಚಿತ್ರ
  • Share this:
ಆರ್ಥಿಕ ಕುಸಿತ, ಉದ್ಯೋಗ ಕಡಿತದ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಾದ ಶೇ.3ರಷ್ಟು ಏರಿಕೆಯ ಸಂಕಟದ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಎರಡನೇ ಬಜೆಟ್ ಮಂಡನೆಗೆ ಸಿದ್ಧರಾಗಿದ್ದಾರೆ. 

ದೇಶದ ಅರ್ಥವ್ಯವಸ್ಥೆಯು 70 ವರ್ಷಗಳಲ್ಲಿ ಕಂಡು ಕೇಳರಿಯದ ಹಿನ್ನಡೆಯಿಂದ ಬಳಲುತ್ತಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಈ ಹಿಂದೆಯೇ ಹೇಳಿದ್ದರು. ಅದೇ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಅಲ್ಪಾವಧಿಗಷ್ಟೇ ಮಂದಗತಿ ಬೆಳವಣಿಗೆ ಎಂದು ಇತ್ತೀಚೆಗೆ ಹೇಳುವ ಮೂಲಕ ದೇಶದ ಜನರನ್ನು ಸಮಾಧಾನಪಡಿಸುವ ಯತ್ನ ಮಾಡಿದ್ದರು.

2019-20ನೇ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ.6.1ರಷ್ಟು ಆಗಬಹುದು ಎಂದು ಆರ್​ಬಿಐ ಈ ಹಿಂದೆ ಅಂದಾಜಿಸಿತ್ತು. ಆರ್ಥಿಕ ವಲಯಗಳು ಇನ್ನಷ್ಟು ದುರ್ಬಲಗೊಂಡಿದ್ದನ್ನು ಗಮನಿಸಿ ಈಗ ಅದು ತನ್ನ ಅಂದಾಜನ್ನು ಶೇ.5ಕ್ಕೆ ತಗ್ಗಿಸಿದೆ. 2024-25ರ ಹೊತ್ತಿಗೆ 350 ಲಕ್ಷ ಕೋಟಿ ಜಿಡಿಪಿ ಗಾತ್ರದ ಆರ್ಥಿಕತೆ ಅಭಿವೃದ್ಧಿಯಾಗಬೇಕಾದರೆ ಜಿಡಿಪಿ ಬೆಳವಣಿಗೆ ದರ ಶೇ.8ರಿಂದ 9ರಷ್ಟಿರಬೇಕು. ಈ ದರ ಬೇಗನೆ ಮೇಲೆ ಬರಬೇಕಾದರೆ ಅಂತರರಾಷ್ಟ್ರೀಯ ಹಣಕಾಸು ನಿಧಿ ಸೂಚಿಸಿದಂತಹ ದಿಟ್ಟ ರಚನಾತ್ಮಕ ಸುಧಾರಣೆಗಳನ್ನು ಹೊಂದಿರುವ ಬಜೆಟ್​ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಬೇಕಾಗಿದೆ.

ಇದನ್ನು ಓದಿ: ಭಾರತೀಯ ರಾಜಕಾರಣಿಗಳ ‘ವೋಟಿಗೆ ನೋಟು’ ತಂತ್ರ ಕದ್ದರಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್?

ಸೆಪ್ಟೆಂಬರ್​ನಲ್ಲಿ ಕಾರ್ಪೊರೇಟ್ ವಲಯಕ್ಕೆ ನೀಡಿದ ತೆರಿಗೆ ದರ ಕಡಿತದ ಬಂಪರ್ ಕೊಡುಗೆಯನ್ನು ಮುಂದುವರಿಸುವ ಅವಶ್ಯವಾಗಿದೆ. ವಿಶ್ವದ ಒಟ್ಟು ಸರಕುಗಳ ರಫ್ತು ವ್ಯಾಪಾರದಲ್ಲಿ ಭಾರತದ ಪಾಲು ಕೇವಲ ಶೇ.1.7ರಷ್ಟು ಇದೆ. ಬರಲಿರುವ ಬಜೆಟ್ ರಫ್ತು ವ್ಯಾಪಾರಕ್ಕೆ ಇನ್ನಷ್ಟು ವಿತ್ತೀಯ ಉತ್ತೇಜನ ನೀಡಬೇಕಾಗಿದೆ. ನಿರ್ಮಲಾ ಅವರು ಯಾವುದನ್ನೂ ಬಿಡುವಂತಿಲ್ಲ. ಸಂದಿಗ್ಧ ಪರಿಸ್ಥಿತಿಯಲ್ಲಿ ಬಜೆಟ್​ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್​ ಅವರಿಗೆ ಇದು ಖಂಡಿತವಾಗಿಯೂ ಸತ್ವಪರೀಕ್ಷೆಯಾಗಿದೆ.
First published: January 30, 2020, 5:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading