ಮೊದಲಿನಿಂದಲೂ ಕೆಲವು ರೋಚಕ ಹಾಗೂ ವಿಲಕ್ಷಣ ಸಂಗತಿಗಳ ಬಗ್ಗೆ ಕುತೂಹಲ ಹೊಂದಿರುವವರು 13th ಫ್ರೈಡೇ (Friday) ಬಗ್ಗೆ ಕೇಳದೆ ಇರಲಾರರು. ಈ ದಿನಾಂಕವು ತನ್ನದೆ ಆದ ಒಂದು ವಿಚಿತ್ರ ಛಾಪನ್ನು ಹೊಂದಿದೆ ಹಾಗೂ ಈ ದಿನಾಂಕಕ್ಕೆ ಸಂಬಂಧಿಸಿದಂತೆ ಚಲನಚಿತ್ರವನ್ನೂ ಸಹ ನಿರ್ಮಿಸಲಾಗಿದೆ. ಆದರೆ, ವಾಸ್ತವದಲ್ಲಿ ಈ ದಿನಾಂಕ ನಿಜಕ್ಕೂ ಏನಾದರೂ ಅಸಾಮಾನ್ಯ ಶಕ್ತಿಯ ವಿಶೇಷತೆ ಹೊಂದಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಐತಿಹಾಸಿಕವಾಗಿ ಭಾರತ ಹಾಗೂ ವಿಶ್ವಕ್ಕೆ ಸಂಬಂಧಿಸಿದಂತೆ ಹಲವು ವಿಶೇಷತೆಗಳನ್ನಂತೂ ಖಂಡಿತ ಹೊಂದಿದೆ ಎನ್ನಬಹುದು. ಹದಿಮೂರನೇ ಫೆಬ್ರುವರಿ ದಿನಾಂಕವು ಹಲವು ವಿಶಿಷ್ಟ ಹಾಗೂ ಅದ್ಭುತ ವ್ಯಕ್ತಿಗಳ ಜನ್ಮದಿನ (Birthday) ಹಾಗೂ ಪುನ್ಯಸ್ಮರಣೆಯ ದಿನವಾಗಿದೆ ಎಂಬುದು ವಿಶೇಷ. ಹಾಗಾದರೆ ಈ ದಿನ ಯಾರದ್ದೆಲ್ಲ ಜನ್ಮದಿನಾಂಕವಾಗಿದೆ ಹಾಗೂ ಅವರ ವಿಶೇಷತೆ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಸರೋಜಿನಿ ನಾಯ್ಡು(13 ಫೆಬ್ರುವರಿ 1879 – 2 ಮಾರ್ಚ್ 1949): ಭಾರತದ ಒಬ್ಬ ಶ್ರೇಷ್ಠ ಕವಯಿತ್ರಿ ಹಾಗೂ ಒಬ್ಬ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಯುವ ಸಮುದಾಯದವರಲ್ಲಿ ಇವರು ಒಬ್ಬ ಪ್ರೇರಕ ಶಕ್ತಿಯಾಗಿ ಸಾವಿರಾರು ಯುವಕರ ಮೇಲೆ ಪ್ರಭಾವ ಬೀರಿದ್ದಾರೆ.
ಚಿಕ್ಕವರಾಗಿದ್ದಾಗಲೇ ಸರೋಜಿನಿ ಅವರು ಅಸಾಧಾರಣ ಬುದ್ಧಿ ಸಾಮರ್ಥ್ಯವನ್ನು ಹೊಂದಿದ್ದರು. ತಮ್ಮ ಹದಿಮೂರನೇಯ ವಯಸ್ಸಿನಲ್ಲಿಯೇ ಅವರು ಲೇಡಿ ಆಫ್ ದಿ ಲೇಕ್ ಎಂಬ ಗೀತೆ ಸಂಯೋಜಿಸಿದ್ದರು. 1895 ರಲ್ಲಿ ಸರೋಜಿನಿ ಅವರು ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ ಗೆ ತೆರಳಿದರು. ಅಲ್ಲಿಯೂ ಅವರು ತಮ್ಮ ಕವನ ರಚನೆಯನ್ನು ಅಧ್ಯಯನದ ಜೊತೆ ಮುಂದುವರೆಸಿದರು. ಅಲ್ಲಿ ಅವರು ಗೋಲ್ಡನ್ ಥ್ರಿಶೋಲ್ಡ್ ಎಂಬ ತಮ್ಮ ಪ್ರಥಮ ಕವನ ಸಂಕಲನವನ್ನು ರಚಿಸಿದರು. ತದನಂತರ ಬರ್ಡ್ ಆಫ್ ಟೈಮ್ ಹಾಗೂ ಬ್ರೋಕನ್ ವಿಂಗ್ ಕವನ ಸಂಕಲನಗಳು ಹೊರಬಂದವು. ಸರೋಜಿನಿ ನಾಯ್ಡು ಅವರು ಅಂದಿನ ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಜನಿಸಿದ್ದರು.
ಪಂಡಿತ್ ಗೋಪಾಲ್ ಪ್ರಸಾದ ವ್ಯಾಸ (13 ಫೆಬ್ರುವರಿ 1915 – 28 ಮೇ 2005): ಇವರು ಭಾರತ ಕಂಡಿರುವ ಮೇಧಾವಿ ಚಿಂತಕ, ಬರಹಗಾರ,ಹಾಗೂ ಕವಿಗಳಲ್ಲಿ ಒಬ್ಬರಾಗಿದ್ದಾರೆ. ಬ್ರಿಜ್ ಭಾಷೆಯ ಅದ್ಭುತ ವ್ಯಾಕರಣಕರರಾಗಿ ಗೋಪಾಲ್ ಪ್ರಸಾದ ವ್ಯಾಸ್ ಅವರು ಗುರುತಿಸಿಕೊಂಡಿದ್ದಾರೆ.
ಹಿಂದಿ ಭಾಷೆಯಲ್ಲಿ ವಿನೂತನವಾದಂತಹ ಹಾಸ್ಯ ಸಾಹಿತ್ಯಕ್ಕೆ ಮುನ್ನುಡಿ ಬರೆದ ಖ್ಯಾತಿ ಹೊಂದಿದ್ದಾರೆ. ಹಾಸ್ಯ ರಸದಲ್ಲೂ ದೇಶಭಕ್ತಿಯನ್ನು ಪ್ರಚೋದಿಸುವಂತಹ ಅದ್ಭುತ ಸಾಹಿತ್ಯವನ್ನು ರಚಿಸುವುದರಲ್ಲಿ ಪಂಡಿತರು ಸಿದ್ಧ ಹಸ್ತರಾಗಿದ್ದರು. ಸಾಮಾಜಿಕ ಹಾಗೂ ರಾಜಕೀಯ ಪ್ರಭಾವಿತ ವಿಡಂಬನಾತ್ಮಕ ಹಾಸ್ಯ ಸಾಹಿತ್ಯವನ್ನು ರಚಿಸುವುದರಲ್ಲಿ ಪ್ರಸಿದ್ಧರಾಗಿದ್ದ ಗೋಪಾಲ ಪ್ರಸಾದ ವ್ಯಾಸ ಅವರನ್ನು "ಹಾಸ್ಯರಸವತಾರ" ಎಂದು ಕರೆಯುತ್ತಿದ್ದರು.
ಇದನ್ನೂ ಓದಿ: ಒಂದೆರಡಲ್ಲ, ಹತ್ತಾರು ಕಾರಣಗಳಿಗೆ ಫೆಬ್ರವರಿ 12 ವಿಶೇಷ! ಈ ದಿನದ ಮಹತ್ವ ಏನು ಗೊತ್ತಾ?
ವರುಣ ಭಾಟಿ: ಇವರೊಬ್ಬ ಭಾರತೀಯ ಉದ್ದ ನೆಗೆತ (ಹೈ ಜಂಪ್) ಕ್ರೀಡೆಯ ಕ್ರೀಡಾಪಟುವಾಗಿದ್ದರು. ಇವರು ಬ್ರೆಜಿಲ್ ನಲ್ಲೆ ನಡೆದ ಪ್ಯಾರಾಇಂಪಿಕ್ಸ್ ಕ್ರೀಡೆಯಲ್ಲಿ ದೇಶಕ್ಕಾಗಿ ಪದಕಗಳಿಸಿ ಹೆಮ್ಮೆ ತಂದಿದ್ದಾರೆ. ಇವರು ಹದಿಮೂರು ಫೆಬ್ರವರಿ 1995 ರಂದು ಜನಿಸಿದ್ದಾರೆ.
ಪುಣ್ಯತಿಥಿ
ಬುಧು ಭಗತ್ : ಇವರನ್ನು ಭಾರತದ ಇತಿಹಾಸದಲ್ಲಿ ಒಬ್ಬ ಕ್ರಾಂತಿಕಾರಿ ಎಂದು ಗುರುತಿಸಲಾಗುತ್ತದೆ. ಇವರು ಅನ್ಯಾಯ ಮಾಡುತ್ತಿದ್ದ ಬ್ರಿಟಿಷರು, ಜಮೀನುದಾರರು, ಭೂಮಾಲಿಕರ ವಿರುದ್ಧ ಸಿಡಿದೆದ್ದಿದ್ದರು. 1832 ಫೆಬ್ರವರಿ 13 ರಂದು ಇವರು ತೀರಿಕೊಂಡರು.
ಮಿಂಜುರ್ ಭಕ್ತವತ್ಸಲಂ: ಇವರೊಬ್ಬ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಅಂದಿನ ಮದ್ರಾಸ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡಿದ್ದಾರೆ. ಫೆಬ್ರವರಿ 13, 1987 ರಂದು ಚೆನ್ನೈನಲ್ಲಿ ಇವರು ತೀರಿಕೊಂಡರು.
ಉಸ್ತಾದ್ ಅಮೀರ್ ಖಾನ್ : ಭಾರತದ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಾಗಿದ್ದರು ಇವರು. 1971 ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಫೆಬ್ರವರಿ 13, 1974 ರಂದು ಇವರು ತೀರಿಕೊಂಡರು.
ವಿಶ್ವ ಹಾಗೂ ಭಾರತದಲ್ಲಿ ಫೆಬ್ರವರಿ 13ರ ವಿಶೇಷತೆಗಳು
13 ಫೆಬ್ರವರಿ 1542 – ಇಂಗ್ಲೆಂಡ್ ರಾಣಿ ಕ್ಯಾಥರೀನ್ ಸಾವಿಗೆ ದೂಡಲ್ಪಟ್ಟಳು
13ಫೆಬ್ರವರಿ 1565 – ಹೆನ್ರಿ III ರಾಜನ ಫ್ರಾನ್ಸ್ ನಲ್ಲಿ ಸಿಂಹಾಸನಾರೋಹಣ
13 ಫೆಬ್ರವರಿ 1601 – ಜಾನ್ ಲಾಂಕಾಸ್ಟರ್ ಈಸ್ಟ್ ಇಂಡಿಯಾ ಕಂಪನಿಯ ಮೊದಲ ಹಡಗನ್ನು ಅನ್ನು ಲಂಡನ್ನಿಗೆ ಕೊಂಡೊಯ್ದ
13 ಫೆಬ್ರವರಿ 1633 – ರೋಮ್ ಮುಟ್ಟಿದಾಗ ಇಟಾಲಿಯನ್ ಖಗೋಳ ಜ್ಞಾನ ಗೆಲಿಲಿಯೋ ಬಂಧಿಸಲ್ಪಟ್ಟ
13ಫೆಬ್ರವರಿ 1688 – ಪೋರ್ಚುಗಲ್ ಅನ್ನು ಸ್ಪೇನ್ ದೇಶವು ಪ್ರತ್ಯೇಕ ದೇಶ ಎಂದು ಪರಿಗಣಿಸಿತು
13 ಫೆಬ್ರವರಿ 1689 – ವಿಲಿಯಮ್ ಮತ್ತು ಮೇರಿ ಅವರನ್ನು ಇಂಗ್ಲೆಂಡಿನ ಜಂಟಿ ಆಡಳಿತಗಾರರು ಎಂದು ಘೋಷಿಸಲಾಯಿತು
13 ಫೆಬ್ರವರಿ 1795 – ಅಮೆರಿಕದ ಉತ್ತರ ಕ್ಯಾರೋಲಿನಾದಲ್ಲಿ ಮೊದಲ ರಾಜ್ಯ ವಿವಿ ಪ್ರಾರಂಭವಾಯಿತು
13 ಫೆಬ್ರವರಿ 1820 – ಫ್ರೆಂಚ್ ಸಿಂಹಾಸನಕ್ಕೆ ವಾರಸುದಾರ ಎಂದು ಕ್ಲೈಮ್ ಮಾಡಿದ್ದ ಡಕ್ ಕಿ ಬೆರಿ ಅವರನ್ನು ಹತ್ಯೆಗೈಯ್ಯಲಾಯಿತು
13 ಫೆಬ್ರವರಿ 1920 – ಅಮೆರಿಕದಲ್ಲಿ ನಿಗ್ರೋ ರಾಷ್ಟ್ರೀಯ ಬೇಸ್ ಬಾಲ್ ಲೀಗ್ ಅನ್ನು ಸ್ಥಾಪಿಸಲಾಯಿತು
13 ಫೆಬ್ರವರಿ 1931 – ನವದೆಹಲಿಯನ್ನು ಭಾರತದ ರಾಜಧಾನಿಯನ್ನಾಗಿ ಘೋಷಿಸಲಾಯಿತು
13 ಫೆಬ್ರವರಿ 1945 – ಸೋವಿಯತ್ ಯೂನಿಯನ್ ಜರ್ಮನಿ ಜೊತೆ 49 ದಿನಗಳ ಯುದ್ಧದ ನಂತರ ಹಂಗೇರಿಯ ಬುಡಾಪೇಸ್ಟ್ ಅನ್ನು ವಶಪಡಿಸಿಕೊಂಡಿತು. ಇದರಲ್ಲಿ ಒಂದು ಲಕ್ಷ 59 ಸಾವಿರ ಜನರು ಹತರಾಗಿದ್ದರು.
13 ಫೆಬ್ರವರಿ 1948 – ಈ ದಿನದಂದು ಮಹತ್ಮ ಗಾಂಧಿ ಅವರು ತಮ್ಮ ಆಜೀವನ ಮರಣ ಉಪವಾಸ ಕೈಗೊಂಡಿದ್ದರು.
13 ಫೆಬ್ರವರಿ 1966 – ಪೂರ್ವ ಕಜಾಕಿಸ್ತಾನದಲ್ಲಿ ಸೋವಿಯತ್ ಯೂನಿಯನ್ ಪರಮಣು ಪರೀಕ್ಷೆ ಮಾಡಿತು.
13ಫೆಬ್ರವರಿ 1975 – ಉತ್ತರ ಸಿಪ್ರಸ್ ನಲ್ಲಿ ಟರ್ಕಿ ಪ್ರತ್ಯೇಕ ಅಡಳಿತವನ್ನು ಸ್ಥಾಪಿಸಿತು
13 ಫೆಬ್ರವರಿ 1984 – ನೇವಿಗಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮುಂಬೈನಲ್ಲಿ ಮಜಗಾಂವ್ ಡಾಕ್ ಉದ್ಘಾಟಿಸಿದರು.
13 ಫೆಬ್ರವರಿ 1990 – ಯುಎಸ್, ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳು ಜರ್ಮನಿಯನ್ನು ಒಗ್ಗೂಡಿಸಲು ತೀರ್ಮಾನಿಸಿದವು
13 ಫೆಬ್ರವರಿ 2001 – 'ಎರೋಸ್' ಉಲ್ಕೆಯಲ್ಲಿ ಪ್ರಥಮ ಮಾನವರಹಿತ ಗಗನ ನೌಕೆ ನೆಲೆಯೂರಿತು.
13 ಫೆಬ್ರವರಿ 2003 – ಯಶ್ ಚೋಪ್ರಾ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದರು
13 ಫೆಬ್ರವರಿ 2004 – ಕೌಲಾಲಾಂಪುರದಲ್ಲಿ ಹತ್ತನೇ ಏಷಿಯನ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡ ಪದಕ ಗೆದ್ದಿತು
13 ಫೆಬ್ರವರಿ 2005 – ಸದ್ದಾಂ ಹುಸೈನ್ ನಂತರ ಇರಾಕಿನಲ್ಲಿ ಪ್ರಥಮ ಚುನಾವಣೆಯಲ್ಲಿ ಶಿಯಾ ಇಸ್ಲಾಮಿಕ್ ಫ್ರಂಟ್ ಗೆದ್ದಿತು
13 ಫೆಬ್ರವರಿ 2007 – ತನ್ನ ಪರಮಾಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಉತ್ತರ ಕೊರಿಯಾ ಒಪ್ಪಿಕೊಂಡಿತು
13ಫೆಬ್ರವರಿ 2010 – ಪುಣೆಯ ಯಹೂದಿ ಪ್ರಾರ್ಥನಾ ಮಂದಿರದ ಬಳಿ ಇದ್ದ ಬೇಕರಿಯಲ್ಲಿ ಬಾಂಬ್ ಸ್ಫೋಟ.
13 ಫೆಬ್ರವರಿ 2012 – ಯುರೋಪಿಯನ್ ಸ್ಪೇಸ್ ಏಜನ್ಸಿ ಸ್ಪೇಸ್ ಪೋರ್ಟ್ ನಿಂದ ತನ್ನ ಪ್ರಥಮ ಯುರೋಪಿಯನ್ ವೆಗಾ ರಾಕೆಟ್ ಉಡಾಯಿಸಿತು.
13 ಫೆಬ್ರವರಿ 2014 – ಚೀನಾದ ಕಾಲಿ ನಗರದಲ್ಲಿ ಅಕ್ರಮ ಜೂಜು ಮನೆಯೊಂದರಲ್ಲಿ ಸ್ಫೋಟ
13 ಫೆಬ್ರವರಿಯನ್ನು ವಿಶ್ವ ರೇಡಿಯೋ ದಿನವನ್ನಾಗಿಯೂ ಆಚರಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ