ಇತ್ತೀಚೆಗೆ ಮದುವೆ ಎಂಬುದು ಆಡಂಬರವಾಗಿದೆ,(Luxury) ಹೆಣ್ಣು ಮಕ್ಕಳ ಮದುವೆ (Marriage) ಮಾಡುವ ಪೋಷಕರಿಗಂತೂ (Parent) ಹೆಚ್ಚಿನ ಜವಬ್ದಾರಿ, ಗಂಡಿನ ಕಡೆ ಆಸೆ ಆಕ್ಷಾಂಕೆ ಈಡೆಸುವಲ್ಲಿ ಸಾಕಾಗಿ ಹೋಗುತ್ತದೆ, ಆದರೆ ಕೇಳರದ ಕಣ್ಣೂರು(Kannur) ನ ವ್ಯಕ್ತಿಯೊಬ್ಬರು ತಮ್ಮ ಹೆಣ್ಣು ಮಗಳ (Daughter) ಮದುವೆ ಮಾಡುವ ಜೊತೆಗೆ ಇನ್ನು ಬಡ ಹೆಣ್ಣು ಮಕ್ಕಳ ಮದುವೆ ಮಾಡಿದಲ್ಲದೇ ಚಿನ್ನದ (Gold) ರೂಪದಲ್ಲಿ ಉಡುಗೊರೆಯನ್ನು (Gifted) ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಹೌದು ತಮ್ಮ ಮಗಳ ಮದುವೆ ಮಾಡುವಾಗ ಪ್ರತಿಷ್ಠೆ ತೋರಿಸುವಂತೆ ಮಾಡುವ ಜನರ ಮುಂದೆ ಈ ತಂದೆ ಮಾಡಿದ ಕೆಲಸ ನಿಜಕ್ಕೂ ಮಾದರಿಯಾಗಿದೆ. ಕೇರಳದ ಕಣ್ಣೂರು ಮೂಲದ ವ್ಯಕ್ತಿಯೊಬ್ಬ ತನ್ನ ಮಗಳ ಜತೆಗೆ ಇತರೆ ಐವರು ಹೆಣ್ಣು ಮಕ್ಕಳ ಮದುವೆ ಮಾಡಿರುವ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಇಲ್ಲಿನ ಎಡಚೆರಿಯಲ್ಲಿ ನಡೆದ ಈ ಮದುವೆ ಇತರಿಗೂ ಒಂದು ಪಾಠವಾಗಿದೆ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ: Adoptionನಿಂದ ಬೇರೆಯವರ ಮಡಿಲು ಸೇರಿದ್ದ ಮಗು, ಈಗ ಹೆತ್ತ ತಂದೆ-ತಾಯಿಯ ಮದುವೆ ಮಾಡಿಸಿದೆ!
ತಂದೆ ಕಾರ್ಯಕ್ಕೆ ಮೆಚ್ಚುಗೆ
ಮುಸ್ಲಿಂ ಸಲೀಂ ತನ್ನ ಮಗಳು ರಮೀಸಾ ಮದುವೆ ಜತೆಗೆ ವಯನಾಡು, ಎಡಚೆರಿ, ಗುಡಲೂರ್, ಮಲಪ್ಪುರಂ ಮತ್ತು ಮೆಪ್ಪಯ್ಯುರ್ ಮೂಲದ ಬಡ ಕುಟುಂಬದ ಯುವತಿಯರಿಗೆ ಅವರವರ ಧರ್ಮಕ್ಕೆ ಅನುಗುಣವಾಗಿ ಶಾಸ್ತ್ರೋಕ್ತವಾಗಿ ಮದುವೆ ಮಾಡುವ ಮೂಲಕ ಧರ್ಮಕ್ಕಿಂತ ಮಾನವೀಯತೆಯೇ ದೊಡ್ಡದು ಎಂಬುದನ್ನು ಸಾರಿದ್ದಾರೆ. ಅಲ್ಲದೆ, ಎಲ್ಲ ಧರ್ಮಗಳನ್ನು ಗೌರವಿಸುವವನೇ ನಿಜವಾದ ಮಾನವ ಎಂಬ ಸಂದೇಶವನ್ನು ಸಾರಿದ್ದಾರೆ. ಈ ಕೆಲಸ ಸಾಮಾಜಿಕ ಜಾಲದಲ್ಲಿ ವೈರಲ್ ಆಗುತ್ತಿದ್ದಂತೆ ಹೆಣ್ಣು ಮಕ್ಕಳ ತಂದೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿನ್ನವನ್ನು ಉಡುಗೊರೆ
ಸಾಮೂಹಿಕ ಮದುವೆಯಲ್ಲಿ ಎರಡು ಮದುವೆ ಹಿಂದು ಸಂಪ್ರದಾಯದಂತೆ ನಡೆದರೆ, ಉಳಿದ ಮೂರು ಮದುವೆ ಇಸ್ಲಾಮಿಕ್ ಪದ್ಧತಿಯಂತೆ ಜರುಗಿರುವುದು ವಿಶೇಷ. ಮುನವ್ವರ ಅಲಿ ಶಿಹಾಬ್ ತಂಗಳ ಎಂಬುವರು ವಿವಾಹವನ್ನು ನೆರವೇರಿಸಿದರು. ಸಲೀಂ ಮಗಳು ರಮೀಸಾ ಸೇರಿದಂತೆ ಎಲ್ಲರೂ ಒಂದೇ ರೀತಿಯ ಸೀರೆಯನ್ನು ಧರಿಸಿದ್ದರು. ಈ ಮೂಲಕ ನಾವೆಲ್ಲರೂ ಭಾರತೀಯರು ಎಂಬ ಸಂದೇಶದ ಜತೆಗೆ ನಾವೆಲ್ಲರೂ ಸಮಾನರು ಎಂದು ಸಾರಿದರು. ಇನ್ನು ಸಲೀಂ ಐದೂ ಹೆಣ್ಣುಮಕ್ಕಳಿಗೂ ತಲಾ 10 ಸವರನ್ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ, ಇದ್ದರಿಂದ ಬಡ ಹೆಣ್ಣಮಕ್ಕಳಿಗೆ ನೆಲೆಸಿಕ್ಕದಂತಾಗಿದೆ.
ಬಡ ಹೆಣ್ಣುಮಕ್ಕಳಕ್ಕೆ ದಾರಿ
ಸಲೀಂ ತನ್ನ ಮಗಳನ್ನು ವರದಕ್ಷಿಣೆ ಕೇಳದ ವ್ಯಕ್ತಿಯೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ದರಂತೆ. ಅದರಂತೆ ವರದಕ್ಷಿಣೆ ಪಡೆಯದ ವರನು ಕೂಡ ತನ್ನ ಮಗಳಿಗೆ ಹುಡುಕಿ ಮದುವೆ ಮಾಡಿದ್ದಾರೆ. ಅಲ್ಲದೇ ತಮ್ಮ ಮಗಳ ಮದುವೆ ಜೊತೆ ಬಡ ಹೆಣ್ಣಮಕ್ಕಳಿಗೂ ಮದುವೆ ಮಾಡಬೆಕೇಂದು ಸಲೀಂ ಮೊದಲೇ ನಿರ್ಧಾರ ಮಾಡಿದ್ದರು ಎನ್ನಲಾಗಿದೆ, ಅವರ ಆಸೆ ಅದೇ ಮದುವೆಯಲ್ಲಿ ಬಡ ಹೆಣ್ಣುಮಕ್ಕಳ ದಾಂಪತ್ಯ ಜೀವನದ ದಾರಿ ಮಾಡಿಕೊಟ್ಟಿದ್ದಾರೆ. ಸ್ವತಃ ಸಲೀಂ ಅನೇಕ ಕುಟುಂಬಗಳಿಗೆ ಭೇಟಿ ನೀಡಿ ಅರ್ಹ ಯುವತಿಯರನ್ನು ಪತ್ತೆಹಚ್ಚಿದ್ದರು. ಇದೀಗ ರಮೀಸಾಳ ಮದುವೆಗೆ ಇಟ್ಟಿದ್ದ ಹಣವನ್ನು ದುಂದುವೆಚ್ಚಕ್ಕೆ ಖರ್ಚು ಮಾಡುವ ಬದಲು ಒಳ್ಳೆ ಉದ್ದೇಶಕ್ಕೆ ಬಳಸುವ ಮೂಲಕ ಸಮಾಜಕ್ಕೆ ಸಂದೇಶ ಸಾರಿದ್ದಾರೆ.
ಇದನ್ನೂ ಓದಿ: Love Case: 15ರ ಬಾಲಕನ ಜೊತೆ 22 ವರ್ಷದ ಯುವತಿಯ ಲವ್, ಮದುವೆಯಾಗಿ ಪೊಲೀಸರ ಅತಿಥಿಯಾದ ಜೋಡಿ
ವಿವಾಹ ವಯಸ್ಸು
ಮಹಿಳೆಯರ ಕನಿಷ್ಠ ವಿವಾಹ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಒಪ್ಪಿಗೆ ನೀಡಿತ್ತು, ಕಳೆದ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಪ್ರಧಾನಿ ಮೋದಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಸರ್ಕಾರವು ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ನಿರಂತರವಾಗಿ ಕಾಳಜಿ ವಹಿಸುತ್ತದೆ. ಹೆಣ್ಣು ಮಕ್ಕಳನ್ನು ಅಪೌಷ್ಟಿಕತೆಯಿಂದ ರಕ್ಷಿಸಲು, ಅವರು ಸರಿಯಾದ ವಯಸ್ಸಿನಲ್ಲಿ ಮದುವೆಯಾಗುವುದು ಅವಶ್ಯಕ" ಎಂದು ಪ್ರಧಾನಿ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ