ಶ್ರೀಲಂಕಾ ಬಾಂಬ್ ದಾಳಿಯ ಸಂಚುಕೋರನ ಕುಟುಂಬ ಎನ್​ಕೌಂಟರ್​ನಲ್ಲಿ ನಾಶ

ಶುಕ್ರವಾರ ರಾತ್ರಿ ಸಮ್ಮನ್​ತುರೈನಲ್ಲಿ ಶಂಕಿತ ಉಗ್ರರು ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ 15 ಜನ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್​ ವಕ್ತಾರ ರುವನ್​ ಗುಣಶೇಖರ ತಿಳಿಸಿದ್ದರು.

Rajesh Duggumane | news18
Updated:April 28, 2019, 5:15 PM IST
ಶ್ರೀಲಂಕಾ ಬಾಂಬ್ ದಾಳಿಯ ಸಂಚುಕೋರನ ಕುಟುಂಬ ಎನ್​ಕೌಂಟರ್​ನಲ್ಲಿ ನಾಶ
ಎನ್​ಕೌಂಟರ್​ ನಡೆದ ಪ್ರದೇಶದಲ್ಲಿ ಪೊಲೀಸರು ಶೋಧಕಾರ್ಯ ನಡೆಸುತ್ತಿರುವುದು
  • News18
  • Last Updated: April 28, 2019, 5:15 PM IST
  • Share this:
ಕೊಲಂಬೋ (ಏ.28): ಶ್ರೀಲಂಕಾ ದಾಳಿಯ ಸಂಚುಕೋರ ಎಂದು ಹೇಳಲಾದ ಝಹ್ರಾನ್​ ಹಶೀಮ್​ನ ತಂದೆ ಹಾಗೂ ಸಹೋದರರನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗಿದೆ.

ಉಗ್ರರ ಅಡಗುತಾಣಗಳ ಮೇಲೆ ಶ್ರೀಲಂಕಾ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಆರು ಮಕ್ಕಳು ಸೇರಿದಂತೆ 15 ಜನರು ಸಾವನ್ನಪ್ಪಿದ್ದರು. ಇದರಲ್ಲಿ ಝಹ್ರಾನ್​ ಹಶೀಮ್ ತಂದೆ ಮೊಹ್ಮದ್​ ಹಶೀಮ್​ ಹಾಗೂ ಸಹೋದರರಾದ ಝೈನೀ ಹಶೀಮ್​, ರಿಲ್ವಾನ್​ ಹಶೀಮ್​ ಕೂಡ ಹತ್ಯೆಯಾಗಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋದಲ್ಲಿ ಮೊಹ್ಮದ್​, ಝೈನೀ ಹಾಗೂ ರಿಲ್ವಾನ್​ ಇಸ್ಲಾಂ ಧರ್ಮದ ಮೇಲೆ ನಂಬಿಕೆ ಇಲ್ಲದವರ ವಿರುದ್ಧ ಯುದ್ಧ ಮಾಡಿ ಎಂದು ಕರೆ ನೀಡಿದ್ದರು. ಶ್ರೀಲಂಕಾ ಕಾರ್ಯಾಚರಣೆಯಲ್ಲಿ ಮೃತರಾಗಿರುವ ಹಾಗೂ ವಿಡಿಯೋದಲ್ಲಿ ಕಾಣಿಸಿಕೊಂಡವರು ಒಂದೇ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಾಂಬ್​ ದಾಳಿ ಹಿನ್ನೆಲೆ; ಎರಡು ಉಗ್ರ ಸಂಘಟನೆಗಳ ಮೇಲೆ ನಿಷೇಧ ಹೇರಿದ ಶ್ರೀಲಂಕಾ

ಶುಕ್ರವಾರ ರಾತ್ರಿ ಸಮ್ಮನ್​ತುರೈನಲ್ಲಿ ಶಂಕಿತ ಉಗ್ರರು ಹಾಗೂ ಯೋಧರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ 15 ಜನ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್​ ವಕ್ತಾರ ರುವನ್​ ಗುಣಶೇಖರ ತಿಳಿಸಿದ್ದರು.

ಈಸ್ಟರ್​ ಪ್ರಾರ್ಥನೆ ವೇಳೆ  ಕೊಲಂಬೋದ ಚರ್ಚ್​ ಹಾಗೂ ಸ್ಟಾರ್​ ಹೋಟೆಲ್​ಗಳಲ್ಲಿ ಬಾಂಬ್​​ ಸರಣಿ ಸ್ಫೋಟ ಸಂಭವಿಸಿತ್ತು. ಒಟ್ಟು ಎಂಟು ಕಡೆಗಳಲ್ಲಿ ಬಾಂಬ್​ ಸ್ಫೋಟವಾಗಿತ್ತು. ಈ ವೇಳೆ 250 ಜನರು ಮೃತಪಟ್ಟು 450ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಭಾನುವಾರ ಬೆಳಗ್ಗೆ 8:45ರ ಸುಮಾರಿಗೆ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ 6 ಬಾಂಬುಗಳು ಸ್ಪೋಟಗೊಂಡವು. ಕೆಲ ಹೊತ್ತಿನ ಬಳಿಕ ಮತ್ತೆರಡು ಬಾಂಬ್ ಸ್ಫೋಟಗೊಂಡವೆನ್ನಲಾಗಿದೆ. ದೇಶಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿತ್ತು. ಐಸಿಸ್​ ದಾಳಿಯ ಹೊಣೆ ಹೊತ್ತಿದೆ.

ಇದನ್ನೂ ಓದಿಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 359 ಅಲ್ಲ 253ಕರ್ನಾಟಕದ ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ರಂಗಪ್ಪ, ರಮೇಶ್​, ನಾರಾಯಣ ಚಂದ್ರಶೇಖರ್, ಶೆಟ್ಟಿಪಾಳ್ಯ ರಾಮಕೃಷ್ಣಪ್ಪ ನಾಗರಾಜ್, ಹನುಮಯ್ಯ ಶಿವಕುಮಾರ್, ರೆಮುರೈ ತುಳಸಿರಾಮ್, ಮಾರೇಗೌಡ, ಪುಟ್ಟರಾಜು ಕೊಲಂಬೋ ಬಾಂಬ್​ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.

 

ನಿಮ್ಮ ನ್ಯೂಸ್​18 ಕನ್ನಡವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸಲು ಕೆಳಗಿನ ಲಿಂಕ್​ ಕ್ಲಿಕ್ ಮಾಡಿ: www.instagram.com/news18kannada
First published: April 28, 2019, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading