• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Shocking News: ಆಂಬುಲೆನ್ಸ್ ನೀಡದ ಆಸ್ಪತ್ರೆ; ಮಗಳ ಶವವನ್ನು ತೊಡೆಯಲ್ಲಿಟ್ಟು ಬೈಕ್‌ನಲ್ಲಿ ಹೊತ್ತೊಯ್ದ ತಂದೆ!

Shocking News: ಆಂಬುಲೆನ್ಸ್ ನೀಡದ ಆಸ್ಪತ್ರೆ; ಮಗಳ ಶವವನ್ನು ತೊಡೆಯಲ್ಲಿಟ್ಟು ಬೈಕ್‌ನಲ್ಲಿ ಹೊತ್ತೊಯ್ದ ತಂದೆ!

ಆಂಬುಲೆನ್ಸ್

ಆಂಬುಲೆನ್ಸ್

ಆಸ್ಪತ್ರೆಯ ಸಿಬ್ಬಂದಿ ಮಗಳ ಶವ ಸಾಗಿಸಬೇಕಾದರೆ ಹಣ ನೀಡಬೇಕೆಂದು ಕೇಳಿದ್ದು, ಅವರ ಬಳಿ ಸಾಕಷ್ಟು ಹಣ ಇಲ್ಲದ ಕಾರಣ ಮಾನವೀಯತೆ ದೃಷ್ಟಿಯಿಂದ ಸಹಕರಿಸಲು ಮನವಿ ಮಾಡಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಅವರ ಬೇಡಿಕೆಗೆ ಸ್ಪಂದಿಸದೆ ಆಂಬುಲೆನ್ಸ್ ನೀಡಲು ಆಗೋದಿಲ್ಲ ಎಂದು ಕಡ್ಡಿ ತುಂಡಾಗುವಂತೆ ಹೇಳಿದ್ದಾರೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Bhopal, India
  • Share this:

ಭೋಪಾಲ್: ಸರ್ಕಾರಿ ಆಸ್ಪತ್ರೆಯೊಂದು ಆಂಬುಲೆನ್ಸ್ ನೀಡಲು ನಿರಾಕರಿಸಿದ ಕಾರಣ ಶೋಕತಪ್ತರಾಗಿದ್ದ ತಂದೆಯೊಬ್ಬರು ತನ್ನ 13 ವರ್ಷದ ಮಗಳ ಶವವನ್ನು ಮೋಟಾರ್‌ ಸೈಕಲ್‌ನಲ್ಲಿ ಹೊತ್ತೊಯ್ದ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಶಹದೋಲ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಆಂಬ್ಯುಲೆನ್ಸ್ ನೀಡದೆ ಅಮಾನವೀಯತೆ ಮೆರೆದಿದ್ದು, ಬೈಕ್‌ನಲ್ಲಿ ಮಗಳ ಶವವನ್ನು ಕೊಂಡೊಯ್ದಾಗ ನಿಜಕ್ಕೂ ಎಂತವರ ಮನಸ್ಸು ಕರಗುವಂತಿತ್ತು.


ಇಲ್ಲಿನ ಶಾಹದೋಲ್‌ನಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿ ಇರುವ ಕೋಟ ಗ್ರಾಮದಲ್ಲಿ ವಾಸ ಇರುವ ಲಕ್ಷ್ಮಣ್‌ ಸಿಂಗ್ ಅವರ 13 ವರ್ಷದ ಮಗಳಿಗೆ ಕಳೆದ ಸೋಮವಾರ ಅನಾರೋಗ್ಯ ಕಾಡಿದೆ. ತೀವ್ರ ಅಸ್ವಸ್ಥಗೊಂಡಾಗ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆಕೆ ರಕ್ತ ಹೀನತೆಯಿಂದ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮಗಳ ಸಾವಿನಿಂದ ತೀವ್ರ ಕಂಗಾಲಾದ ತಂದೆ ಮುಂದೇನು ಮಾಡಬೇಕೆಂದು ತೋಚದೆ ಬಳಿಕ ಆಸ್ಪತ್ರೆಯ ಸಿಬ್ಬಂದಿ ಬಳಿ ಆಂಬುಲೆನ್ಸ್ ನೀಡುವಂತೆ ಕೇಳಿದ್ದಾರೆ.


ಇದನ್ನೂ ಓದಿ: Delhi: ಮೆಟ್ರೋದಲ್ಲಿ ಹಸ್ತಮೈಥುನ ಮಾಡಿದವನ ಪತ್ತೆಗೆ ಸಾರ್ವಜನಿಕರ ಮೊರೆ ಹೋದ ಪೊಲೀಸರು!


ಆದರೆ ಆಸ್ಪತ್ರೆಯ ಸಿಬ್ಬಂದಿ ಮಗಳ ಶವ ಸಾಗಿಸಬೇಕಾದರೆ ಹಣ ನೀಡಬೇಕೆಂದು ಕೇಳಿದ್ದು, ಅವರ ಬಳಿ ಸಾಕಷ್ಟು ಹಣ ಇಲ್ಲದ ಕಾರಣ ಮಾನವೀಯತೆ ದೃಷ್ಟಿಯಿಂದ ಸಹಕರಿಸಲು ಮನವಿ ಮಾಡಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಅವರ ಬೇಡಿಕೆಗೆ ಸ್ಪಂದಿಸದೆ ಆಂಬುಲೆನ್ಸ್ ನೀಡಲು ಆಗೋದಿಲ್ಲ ಎಂದು ಕಡ್ಡಿ ತುಂಡಾಗುವಂತೆ ಹೇಳಿದ್ದಾರೆ. ಮೊದಲೇ ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದ ತಂದೆ ದಾರಿ ತೋಚದೆ ಅನಿವಾರ್ಯವಾಗಿ ಎತ್ತಿ ಬೆಳೆಸಿದ ಮಗಳ ಶವವನ್ನು ಬೈಕ್‌ನಲ್ಲೇ ತೊಡೆ ಮೇಲೆ ಮಲಗಿಸಿ ಊರಿಗೆ ಹೊತ್ತೊಯ್ದಿದ್ದಾರೆ.


ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೃತ ಬಾಲಕಿಯ ತಂದೆ ಲಕ್ಷ್ಮಣ್ ಸಿಂಗ್, ಆಸ್ಪತ್ರೆಯ ಅಧಿಕಾರಿಗಳಲ್ಲಿ ಆಂಬುಲೆನ್ಸ್ ನೀಡುವಂತೆ ನಾವು ಕೇಳಿದ್ದೆವು. ಆದರೆ 15 ಕಿ.ಮೀಗಿಂತ ದೂರದ ಸ್ಥಳಗಳಿಗೆ ವಾಹನಗಳು ಕೊಡೋದಿಲ್ಲ. ನೀವೇ ಬೇಕಾದ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದರು. ನಮ್ಮಲ್ಲಿ ಸಾಕಷ್ಟು ಹಣವೂ ಇರಲಿಲ್ಲ. ಹಾಗಾಗಿ ನಮಗೆ ಬೇರೆ ಉಪಾಯವಿಲ್ಲದೆ ಮಗಳ ಶವವನ್ನು ಬೈಕ್‌ನಲ್ಲಿ ಕೊಂಡೊಯ್ದೆವು ಎಂದು ಹೇಳಿದ್ದಾರೆ.


ಇದನ್ನೂ ಓದಿ: Horror News: ಪೆನ್‌ ಹಿಡಿಯಬೇಕಿದ್ದ ಕೈಲಿ ಚೂರಿ ಹಿಡಿದ್ರು, 12 ವರ್ಷದ ಹುಡುಗನನ್ನು ಕೊಂದೇ ಬಿಟ್ರು!



ಈ ವಿಷಯ ಶಾದೂಲ್ ಕಲೆಕ್ಟರ್‌ ವಂದನಾ ವೈದ್ಯ ಅವರಿಗೆ ತಿಳಿದ ಬೆನ್ನಲ್ಲೇ ಲಕ್ಷ್ಮಣ್‌ ಸಿಂಗ್ ಅವರ ಮನೆಗೆ 20 ಕಿಲೋ ಮೀಟರ್ ದೂರವಿರುವಾಗ ವಾಹನ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಸ್ವಲ್ಪ ಆರ್ಥಿಕ ಸಹಾಯವನ್ನೂ ಒದಗಿಸಿದ್ದಾರೆ. ಅಲ್ಲದೇ ಆಂಬುಲೆನ್ಸ್ ನಿರಾಕರಿಸಿದ ಬಗ್ಗೆ ವಿಸ್ತೃತವಾಗಿ ತನಿಖೆಗೂ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

First published: