ಸ್ಟಾನ್ ಸ್ವಾಮಿ ಅವರನ್ನು ಜೈಲಿನಲ್ಲಿ ಕೊಲ್ಲಲಾಗಿದೆ: ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪ

84 ವರ್ಷದ ವೃದ್ದರು ನರೇಂದ್ರ ಮೋದಿ ಸರ್ಕಾರವನ್ನು ಉರುಳಿಸಬಲ್ಲರು ಎಂದರೆ, ದೇಶದ ಅಡಿಪಾಯ ಅಷ್ಟು ದುರ್ಬಲವಾಗಿದೆಯೆ..? ಎಂದು ರಾವತ್​ ಪ್ರಶ್ನಿಸಿದ್ದಾರೆ. 

ಸಂಜಯ್​ ರಾವತ್​

ಸಂಜಯ್​ ರಾವತ್​

 • Share this:
  ಕ್ಯಾಥೋಲಿಕ್ ಪಾದ್ರಿಯಾಗಿದ್ದ ಸ್ಟ್ಯಾನ್ ಸ್ವಾಮಿ ಕೇರಳ ಮೂಲದವರಾಗಿದ್ದು  ಮಾನವ ಹಕ್ಕು ಮತ್ತು ಬುಡಕಟ್ಟು ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಎಲ್ಗರ್​ ಪರಿಷತ್ತಿನಲ್ಲಿ ಆಯೋಜಿಸಿದ್ದ ಸಭೆ ಹಾಗೂ  ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಎನ್​ಐಎ ಕಳೆದ ವರ್ಷ ಇವರನ್ನು ಬಂಧಿಸಿತ್ತು. ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದ ಸ್ಟಾನ್ ಸ್ವಾಮಿ ಅವರ ಮೇಲೆ ಭಯೋತ್ಪಾದನ ತಡೆ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿತ್ತು.

  ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿಯವರ ಸಾವಿನ ಕುರಿತು ಒಕ್ಕೂಟ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ ಸಂಸದ ಸಂಜಯ್ ರಾವತ್‌, ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟಾನ್ ಸ್ವಾಮಿಯವರನ್ನು ಜೈಲಿನಲ್ಲಿ ಕೊಲ್ಲಲಾಗಿದೆ ಎಂದು ಆರೋಪಿಸಿದ್ದಾರೆ.

  ಪಾರ್ಕಿನ್​ಸನ್​ ಕಾಯಿಲೆಯಿಂದ ಬಳಲುತ್ತಿದ್ದ ಸ್ಟಾನ್​ ಸ್ವಾಮಿ ಅವರು ’ನೀರು ಕುಡಿಯಲು ಸ್ಟ್ರಾ ಅಥವಾ ಸಿಪ್ಪರ್​ ಕೊಡಿ ಎಂದು ಮನವಿ ಮಾಡಿದ್ದರು’, ಆದರೆ ಪೊಲೀಸರು ಈ ವಿಚಾರದಲ್ಲಿ ಅಮಾನವೀಯವಾಗಿ ನಡೆದುಕೊಂಡಿದ್ದರು.  ಕೊರೋನಾ ಬಂದ ಕಾರಣ ಇವರಿಗೆ ಸಾಕಷ್ಟು ಆರೋಗ್ಯ ಹದಗೆಟ್ಟಿತ್ತು.

  84 ವರ್ಷದ ವೃದ್ದರು ನರೇಂದ್ರ ಮೋದಿ ಸರ್ಕಾರವನ್ನು ಉರುಳಿಸಬಲ್ಲರು ಎಂದರೆ, ದೇಶದ ಅಡಿಪಾಯ ಅಷ್ಟು ದುರ್ಬಲವಾಗಿದೆಯೆ..? ಎಂದು ರಾವತ್​ ಪ್ರಶ್ನಿಸಿದ್ದಾರೆ. 

  ಕಳೆದ ಅಕ್ಟೋಬರ್‌ನಲ್ಲಿ ಎಲ್ಗರ್ ಪರಿಷತ್ ಪ್ರಕರಣಕ್ಕೆ (ಭೀಮಾ ಕೋರೆಗಾಂವ್) ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಫಾದರ್‌ ಸ್ಟಾನ್ ಸ್ವಾಮಿ ಅವರನ್ನು ಬಂಧಿಸಿತ್ತು. ‍ಜುಲೈ 5 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನ್ಯಾಯಾಂಗ ಬಂಧನದಲ್ಲಿಯೇ ಅವರು ನಿಧನರಾದರು.

  ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ’’ಇಂದಿರಾ ಗಾಂಧಿ ಜಾರ್ಜ್ ಫರ್ನಾಂಡಿಸ್‌ಗೆ ಹೆದರುತ್ತಿದ್ದರು. ಜಾರ್ಜ್ ಅವರಿಗೆ ಫಾದರ್ ಸ್ಟಾನ್ ಸ್ವಾಮಿಯಂತೆ ವಯಸ್ಸಾಗಿರಲಿಲ್ಲ. ಆದರೆ ಇಂದಿನ ಸರ್ಕಾರವು 84-85 ವರ್ಷ ವಯಸ್ಸಿನ ಫಾದರ್‌ ಸ್ಟಾನ್ ಸ್ವಾಮಿ ಮತ್ತು ವರವರ ರಾವ್ ಅವರಿಗೆ ಹೆದರಿದೆ. ಜೈಲಿನಲ್ಲಿಯೇ ಸ್ಟಾನ್ ಸ್ವಾಮಿ ಕೊಲ್ಲಲ್ಪಟ್ಟರು” ಎಂದು ಸಂಜಯ್ ರಾವತ್   ಹೇಳಿದ್ದಾರೆ.

  ಎಲ್ಗರ್ ಪರಿಷತ್‌ನಲ್ಲಿ ನಡೆದ ಭಾಷಣಗಳು ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ಬೆಂಬಲಿಸಲಾಗುವುದಿಲ್ಲ. ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಿರುವ ಸಂಜಯ್​ ರಾವತ್​ ಅವರು, ಆದಾದ ಬಳಿಕ ನಡೆದದ್ದನ್ನು ಸ್ವಾತಂತ್ರ್ಯವನ್ನು ಭೇದಿಸುವ ಪಿತೂರಿ ಎಂದು ಕರೆಯಬೇಕು ಎಂದು  ಹೇಳಿದ್ದಾರೆ.

  “ಕಾಡುಗಳಲ್ಲಿ ಬುಡಕಟ್ಟು ಜನರಿಗೆ ತಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸುವುದು ದೇಶದ್ರೋಹವಾಗಬಹುದೇ..?” ಎಂದು ಪ್ರಶ್ನಿಸಿದ್ದಾರೆ.

  ಇದನ್ನೂ ಓದಿ: ನಿಂತಲ್ಲೇ ನಿಂತಿವೆ ಸೀಜ್ ಆದ ವಾಹನಗಳು- 38 ಸಾವಿರ ವಾಹನಗಳ ಹರಾಜಿಗೆ ಕೋರ್ಟ್ ಮೊರೆ ಹೋದ ಪೊಲೀಸರು

  “ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗಿಂತ ಮಾವೋವಾದಿಗಳು ಮತ್ತು ನಕ್ಸಲರು ಹೆಚ್ಚು ಅಪಾಯಕಾರಿಯಾಗಿದ್ದರೂ ಜೈಲಿನಲ್ಲಿ 84 ವರ್ಷದ ಅಸಹಾಯಕ ಫಾದರ್ ಸ್ಟಾನ್ ಸ್ವಾಮಿಯವರ ಸಾವನ್ನು ಸಮರ್ಥಿಸಲಾಗುವುದಿಲ್ಲ. ಸರ್ಕಾರವನ್ನು ವಿರೋಧಿಸುವುದು ಮತ್ತು ದೇಶ ವಿರೋಧದ ನಡುವೆ ವ್ಯತ್ಯಾಸವಿದೆ. ಸರ್ಕಾರವನ್ನು ವಿರೋಧಿಸುವುದು ದೇಶದ ವಿರುದ್ಧದ ಪಿತೂರಿ ಎಂದು ಯಾರಾದರೂ ಭಾವಿಸಿದರೆ, ಅವರ ಮನಸ್ಸಿನಲ್ಲಿ ಸರ್ವಾಧಿಕಾರದ ಗುಣಗಳನ್ನು ಬಿತ್ತಲಾಗುತ್ತಿದೆ” ಎಂದು ಸಂಜಯ್ ರಾವತ್ ಹೇಳಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: