ಕೇರಳ: 13 ವರ್ಷದ ಮಗಳನ್ನು ಸಂಬಂಧಿಕರ ಮನೆಗೆ ಕರೆತಂದು ಲೈಂಗಿಕ ಕಿರುಕುಳ (Sexually Abuse) ನೀಡಿದ ತಂದೆಗೆ (Father) ಪತ್ತನಂತಿಟ್ಟ ಪೋಕ್ಸೋ ನ್ಯಾಯಾಲಯ (POCSO Court) 78 ವರ್ಷಗಳ ಕಠಿಣ ಸಜೆ ಮತ್ತು 2,75,000 ರೂ ದಂಡದ ವಿಧಿಸಿ ತೀರ್ಪು ನೀಡಿದೆ. ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಮೂರೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಆರೋಪಿ ಅತಿಯಾದ ಕುಡಿತದ ಚಟದಿಂದ ಬೇಸತ್ತಿದ್ದ ಆತನ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಈ ಹಿನ್ನೆಲೆಯಲ್ಲಿ ಬಾಲಕಿ ತನ್ನ ಅಜ್ಜಿ (ತಂದೆಯ ಅಮ್ಮ) ಹಾಗೂ ಅತ್ತೆಯ ಜೊತೆ ಇದ್ದಳು. ಆಘಾತಕಾರಿ ವಿಷಯವೆಂದರೆ ಈ ಪಾಪಿ ತಂದೆ ಬಾಲಕಿ 8ನೇ ತರಗತಿ ಓದುತ್ತಿದ್ದಾಗಿನಿಂದಲೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿಯಾರೂ ಇಲ್ಲದ ಸಂ ತನ್ನ ಮಗಳನ್ನು ರಜೆಯ ದಿನ ಬಂಧಿಕರ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದಾಗ ಮಗಳ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾನೆ. ಮರುದಿನ ಬಾಲಕಿ ಮನೆಗೆ ಹಿಂದಿರುಗಿದಾಗ ಆಕೆಯ ಕೆನ್ನೆಯ ಮೇಲಿದ್ದ ಗಾಯವನ್ನು ನೋಡಿದ ಹುಡುಗಿಯ ತಂದೆಯ ಸಹೋದರಿ ಅತ್ತೆ ಅನುಮಾನಗೊಂಡು, ಬಳಿಕ ಬಾಲಕಿಯ ಶಿಕ್ಷಕರಿಗೆ ಮಾಹಿತಿ ನೀಡಿದ್ದಾಳೆ. ಬಾಲಕಿಯನ್ನ ಶಿಕ್ಷಕರು ವಿಚಾರಿಸಿದಾಗ ತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವುದು ಬೆಳಕಿಗೆ ಬಂದಿದೆ.
78 ವರ್ಷ ಜೈಲು ಶಿಕ್ಷೆ
ಇನ್ನೂ ವಿಚಾರಣೆ ವೇಳೆ ಆರೋಪಿ ಸಹೋದರಿ ಮತ್ತು ತಾಯಿ ಬಾಲಕಿ ತಂದೆ ಪರ ವಾಲಿದ್ದು, ಪ್ರಕರಣವನ್ನು ತಿರುಚಲು ಪ್ರಯತ್ನಿಸಿದ್ದರು. ಆದರೆ ಸಾಕ್ಷಿ ಆಧಾರಗಳಿಂದ ಅತ್ಯಾಚಾರವಾಗಿರುವುದು ಸಾಬೀತಾಗಿದ್ದರಿಂದ 50 ವರ್ಷದ ಆರೋಪಿಗೆ 78 ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗಿದೆ.
ಶಾಲೆ ಮುಗಿಸಿ ಹೋಗುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ
ಸಿಕ್ಕಿಂ ರಾಜ್ಯದ ರಾಜಧಾನಿ ಗ್ಯಾಂಗ್ಟಾಕ್ನಲ್ಲಿ ಕಳೆದ ಏಪ್ರಿಲ್ 14 ರಂದು ಈ ಘಟನೆ ನಡೆದಿದ್ದು, ಶಾಲೆಗೆ ಹೋಗಿದ್ದ ಬಾಲಕಿ ಕಾಣೆಯಾದ ಬಳಿಕ ಮೂರು ದಿನಗಳ ನಂತರ ಆಕೆಯ ಶವ ಪತ್ತೆಯಾಗಿತ್ತು. ಅದರನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಜಾಡು ಹಿಡಿದು ಹೊರಟಾಗ ಬಾಲಕಿ ಮೇಲೆ ಕ್ಯಾಬ್ ಡ್ರೈವರ್ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ವಿಚಾರ ಪೊಲೀಸರಿಗೆ ತಿಳಿದು ಬಂದಿದೆ.
ಮನೆಗೆ ಬಿಡುವುದಾಗಿ ಕಾರಿನಲ್ಲಿ ಕರೆದೊಯ್ದಿದ್ದ ಚಾಲಕ
ಏಪ್ರಿಲ್ 14ರಂದು ಎಂದಿನಂತೆ ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ತಡೆದ ಕ್ಯಾಬ್ ಡ್ರೈವರ್ ಮನೆಗೆ ಲಿಫ್ಟ್ ಕೊಡೋದಾಗಿ ಹೇಳಿ ಕಾರ್ನಲ್ಲಿ ಕರೆದೊಯ್ದಿದ್ದಾನೆ. ಬಳಿಕ ಆತ ಪೆಟ್ರೋಲ್ ಪಂಪ್ನಲ್ಲಿ ಕಾರ್ ನಿಲ್ಲಿಸಿ ಆಕೆಗೆ ತಿಂಡಿ ಮತ್ತು ಜ್ಯೂಸ್ ಕೊಡಿಸಿದ್ದಾನೆ. ಆ ಬಳಿಕ ಆತ ಆಕೆಯನ್ನು ಹತ್ತಿರದ ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ದುರಂತ ಅಂತ್ಯದ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಬಾಲಕಿಯ ಕೊಲೆಗೆ ಕಾರಣವಾದ 29 ವರ್ಷದ ಕ್ಯಾಬ್ ಡ್ರೈವರ್ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮಗಳ ಸಾವಿನಿಂದ ಕಂಗಾಲಾಗಿರುವ ತಾಯಿ, ‘ ನನ್ನ ಮಗಳು ಜೀವನ್ಮರಣ ಹೋರಾಟ ನಡೆಸಿದ್ದಾಳೆ. ಸಾಯುವ ಮುನ್ನ ಆಕೆಗೆ ಚಿತ್ರಹಿಂಸೆ ನೀಡಲಾಗಿದೆ. ಆರೋಪಿಗಳಿಗೂ ಅದೇ ಶಿಕ್ಷೆ ನೀಡಬೇಕು. ಆರೋಪಿಯನ್ನು ನಮ್ಮ ಕೈಗೆ ಒಪ್ಪಿಸಿದರೆ ನಾನು ಆತನಿಗೆ ಅದೇ ರೀತಿ ಹಿಂಸೆ ನೀಡುತ್ತೇನೆ’ ನೋವಿನಿಂದ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ