Cycle Girl: ಕಳೆದ ವರ್ಷ ಲಾಕ್​ಡೌನ್​ನಲ್ಲಿ 1200 ಕಿಮೀ ಸೈಕಲ್​ ತುಳಿದು ಸುದ್ದಿಯಾಗಿದ್ದ ಬಿಹಾರದ ಬಾಲಕಿಯ ತಂದೆ ಸಾವು!

ದರ್ಬಂಗಾ ಜಿಲ್ಲೆಯ ಸಿರ್ಹುಲ್ಲಿ ಗ್ರಾಮದ ನಿವಾಸಿಯಾಗಿದ್ದ ಅವರು ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದು, ಮೃತರಿಗೆ ನೆರವು ಮತ್ತು ಗೌರವ ಸಲ್ಲಿಸಲು ಸಂಬಂಧಪಟ್ಟ ಸಿಂಗ್‌ಬರಾ ಬ್ಲಾಕ್‌ನ ಬಿಡಿಒ ಅವರನ್ನು ಗ್ರಾಮಕ್ಕೆ ಕಳಿಸಲಾಗಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬಿಹಾರದ ಬಾಲಕಿ ಜ್ಯೋತಿ ಕುಮಾರಿ ಮತ್ತು ತಂದೆ ಮೋಹನ್ ಪಾಸ್ವಾನ್.

ಬಿಹಾರದ ಬಾಲಕಿ ಜ್ಯೋತಿ ಕುಮಾರಿ ಮತ್ತು ತಂದೆ ಮೋಹನ್ ಪಾಸ್ವಾನ್.

 • Share this:
  ಬಿಹಾರ (ಮೇ 31); ಕಳೆದ ಮೊದಲ ಕೊರೋನಾ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಏಕಾಏಕಿ ಮೇ.25 ರಂದು ದೇಶದಲ್ಲಿ ಲಾಕ್​ಡೌನ್ ಹೇರಿತ್ತು. ಇದರಿಂದ ಹಲವರು ತಾವು ಇದ್ದ ಸ್ಥಳದಲ್ಲೇ ಸಲುಕಿಕೊಂಡು ಸಂಕಷ್ಟಕ್ಕೆ ಒಳಗಾಗಿದ್ದರು. ಲಕ್ಷಾಂತರ ವಲಸೆ ಕಾರ್ಮಿಕರು ಮಹಾ ನಡಿಗೆಯನ್ನು ಕೈಗೊಂಡ ಘೋರವೂ ನಡೆದಿತ್ತು. ಇದೇ ಸಂದರ್ಭದಲ್ಲಿ ಲಾಕ್‌ಡೌನ್‌ನಿಂದಾಗಿ ಹರಿಯಾಣದ ಗುರುಗ್ರಾಮ್‌ನಲ್ಲಿ ಸಿಲುಕಿಕೊಂಡಿದ್ದ ತನ್ನ ಗಾಯಗೊಂಡ ತಂದೆಯನ್ನು 1,200 ಕಿ.ಮೀ ಗಿಂತಲೂ ದೂರದ ಹಳ್ಳಿಗೆ ಸೈಕಲ್‌ನ ಹಿಂಭಾಗದಲ್ಲಿ ಕೂರಿಸಿ ಕರೆದೊಯ್ದ ಜ್ಯೋತಿ ಕುಮಾರಿ ಎಂಬ ಬಿಹಾರ ಮೂಲದ ಬಾಲಕಿಯ ತಂದೆ ಮೋಹನ್ ಪಾಸ್ವಾನ್ ಅವರು ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ.

  ದರ್ಬಂಗಾ ಜಿಲ್ಲೆಯ ಸಿರ್ಹುಲ್ಲಿ ಗ್ರಾಮದ ನಿವಾಸಿಯಾಗಿದ್ದ ಅವರು ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದು, ಮೃತರಿಗೆ ನೆರವು ಮತ್ತು ಗೌರವ ಸಲ್ಲಿಸಲು ಸಂಬಂಧಪಟ್ಟ ಸಿಂಗ್‌ಬರಾ ಬ್ಲಾಕ್‌ನ ಬಿಡಿಒ ಅವರನ್ನು ಗ್ರಾಮಕ್ಕೆ ಕಳಿಸಲಾಗಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.  2020 ರ ಮಾರ್ಚ್‌ ಅಂತ್ಯದಲ್ಲಿ ದೇಶಾದ್ಯಂತ ಹೇರಲಾದ ಲಾಕ್‌ಡೌನ್‌ ಸಮಯದಲ್ಲಿ ಹದಿಮೂರು ವರ್ಷದ ಜ್ಯೋತಿ ಕುಮಾರಿ ಅವರು ತಮ್ಮ ತಂದೆಯನ್ನು ಗುರುಗ್ರಾಮದಿಂದ ಬಿಹಾರದಲ್ಲಿರುವ ತಮ್ಮ ಗ್ರಾಮಕ್ಕೆ ಕರೆತರಲು ಬರೋಬ್ಬರಿ 1200 ಕಿ.ಮೀ ಸೈಕಲ್ ತುಳಿದಿದ್ದರು. ಈ ಘಟನೆಗೆ ಇಡೀ ವಿಶ್ವವೇ ಮರುಕ ಪಟ್ಟಿತ್ತು ಮತ್ತು ಇಂತಹ ಸಮಸ್ಯೆಯನ್ನು ಸೃಷ್ಟಿಸಿದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು.

  ಇದನ್ನೂ ಓದಿ: DK Shivakumar: ಬಿಜೆಪಿ ನಾಯಕರಿಗೆ ಕಣ್ಣು, ಹೃದಯ ಇದೆಯಾ?; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಆಕ್ರೋಶ

  ಮಾಧ್ಯಮಗಳು ಅವರ ಪ್ರಯಾಣದ ಬಗ್ಗೆಗಿನ ವರದಿಯನ್ನು ಮಾಡಿದ ನಂತರ ಬಾಲಕಿಯನ್ನು ಬಿಹಾರದ ‘ಸೈಕಲ್‌ ಹುಡುಗಿ’ ಎಂದು ಕರೆಯಲಾಗಿತ್ತು. ಅಲ್ಲದೆ, ಅಧಿಕಾರಿಗಳು ಆಕೆಗೆ ಕ್ರೀಡಾ ಬೈಸಿಕಲ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಜೊತೆಗೆ ಕ್ರೀಡೆಯಲ್ಲಿ ತರಬೇತಿ ನೀಡಲು ಹಲವಾರು ರೀತಿಯ ನೆರವನ್ನು ಘೋಷಿಸಲಾಗಿತ್ತು.

  ಇದನ್ನೂ ಓದಿ: Corona 3rd Wave: ಮಹಾರಾಷ್ಟ್ರದ ಒಂದೇ ಜಿಲ್ಲೆಯ 8,000 ಮಕ್ಕಳಿಗೆ ಕೊರೋನಾ ಸೋಂಕು: ಮೂರನೇ ಅಲೆಗೆ ಸಿದ್ಧತೆ!

  ಕಳೆದ ವರ್ಷವು ಕೇಂದ್ರ ಸರ್ಕಾರವು ಯಾವುದೆ ಮುನ್ಸೂಚನೆಯಿಲ್ಲದೆ ದೇಶದಾದ್ಯಂತ ಕೊರೊನಾ ಲಾಕ್‌ಡೌನ್‌ ಹೇರಿದ್ದರಿಂದ ಕೋಟ್ಯಾಂತರ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಈಡಾಗಿದ್ದರು. ಲಕ್ಷಾಂತರ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಲು ಸಾರಿಗೆ ವ್ಯವಸ್ಥೆಯಿಲ್ಲದೆ ಪರದಾಡುವಂತಾಯಿತು. ವಲಸೆ ಕಾರ್ಮಿಕರು ಸಾವಿರಾರು ಕಿಮೀ ದೂರವಿರುವ ತಮ್ಮ ಹಳ್ಳಿಗಳಿಗೆ ತೆರಳಲು ನಡಿಗೆಯನ್ನೇ ಆಶ್ರಯಿಸಿದ್ದು, ದೇಶವು ಮಹಾವಲಸೆಗೆ ಕಾರಣವಾಯಿತು. ಈ ವೇಳೆ ಹಲವು ಕಾರ್ಮಿಕರು ದೇಶದ ಹೆದ್ದಾರಿಗಳಲ್ಲಿ ಮೃತಪಟ್ಟಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:MAshok Kumar
  First published: