• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Viral Video: ವರನಿಗೆ ಚಪ್ಪಲಿಯಲ್ಲಿ ಹೊಡೆದ ಮಾವನ ಮನೆಯವ್ರು! ವೈರಲ್ ವಿಡಿಯೋಗೆ ನೆಟ್ಟಿಗರ ಪ್ರಶಂಸೆ

Viral Video: ವರನಿಗೆ ಚಪ್ಪಲಿಯಲ್ಲಿ ಹೊಡೆದ ಮಾವನ ಮನೆಯವ್ರು! ವೈರಲ್ ವಿಡಿಯೋಗೆ ನೆಟ್ಟಿಗರ ಪ್ರಶಂಸೆ

ವೈರಲ್ ವಿಡಿಯೋದಲ್ಲಿ ವರ ವರದಕ್ಷಿಣೆಯಾಗಿ ಬೈಕ್​ ಬೇಕೆಂದು ಬೇಡಿಕೆ ಇಟ್ಟಿದ್ದಾನೆ.  ಇದರಿಂದ ಕುಪಿತನಾದ ವರದ ಮಾವ ವರನಿಗೆ ಮದುವೆಗೆ ಬಂದಿದ್ದ ಸಂಬಂಧಿಕರ ಮುಂದೆಯೇ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ವರ ವರದಕ್ಷಿಣೆಯಾಗಿ ಬೈಕ್​ ಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಇದರಿಂದ ಕುಪಿತನಾದ ವರದ ಮಾವ ವರನಿಗೆ ಮದುವೆಗೆ ಬಂದಿದ್ದ ಸಂಬಂಧಿಕರ ಮುಂದೆಯೇ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ವರ ವರದಕ್ಷಿಣೆಯಾಗಿ ಬೈಕ್​ ಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಇದರಿಂದ ಕುಪಿತನಾದ ವರದ ಮಾವ ವರನಿಗೆ ಮದುವೆಗೆ ಬಂದಿದ್ದ ಸಂಬಂಧಿಕರ ಮುಂದೆಯೇ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

  • Share this:

ವರದಕ್ಷಿಣೆ (Dowry) ಒಂದು ಸಾಮಾಜಿಕ ಪಿಡುಗಾಗಿದೆ. ಹಲವಾರು ವರ್ಷಗಳಿಂದ ಈ ಅನಿಷ್ಟ ಪದ್ದತಿಯಿಂದ ಸಾವಿರಾರು ಮಹಿಳೆಯರ ಸಾವಿಗೆ ಕಾರಣವಾಗಿದೆ. ಕಾಲ ಬದಲಾದರೂ ಈ ಅನಿಷ್ಟ ಪದ್ದತಿ ಇನ್ನೂ ಅಲ್ಲಲ್ಲಿ ಕೇಳಿಬರುತ್ತಿದೆ. ಅದರಲ್ಲೂ ವಿದ್ಯಾವಂತರೂ (Educated) ಕೂಡ ವರದಕ್ಷಿಣೆಗೆ ಆಸೆ ಪಟ್ಟು ಹೆಣ್ಣು ಮಕ್ಕಳನ್ನು ಹಿಂಸಿಸುವ ಪ್ರಕರಣಗಳು ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ (Social Media) ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ವರದಕ್ಷಿಣಿಗೆಗಾಗಿ ಬೈಕ್ (Bike)​ ಕೇಳಿದವವಿಗೆ ವಧುವಿನ ತಂದೆ ಚಪ್ಪಲಿಯಲ್ಲಿ ಹೊಡೆಯುವ ದೃಶ್ಯ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.


ಬೈಕ್ ಕೇಳಿದ್ದಕ್ಕೆ ಥಳಿತ


ವೈರಲ್ ವಿಡಿಯೋದಲ್ಲಿ ವರ ವರದಕ್ಷಿಣೆಯಾಗಿ ಬೈಕ್​ ಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಇದರಿಂದ ಕುಪಿತನಾದ ವರದ ಮಾವ ವರನಿಗೆ ಮದುವೆಗೆ ಬಂದಿದ್ದ ಸಂಬಂಧಿಕರ ಮುಂದೆಯೇ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆದರೆ ಈ ಘಟನೆ ನಡೆದಿರುವುದು ಎಲ್ಲಿ ಎಂಬುವುದು ಖಚಿತವಾಗಿಲ್ಲ. ಆದರೆ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವರನಿಗೆ ತಕ್ಕ ಶಾಸ್ತಿಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಈ ವಿಡಿಯೋ ಶೇರ್​ ಮಾಡಿಕೊಂಡಿರುವ ವ್ಯಕ್ತಿ, " ಅಳಿಯನೊಬ್ಬ ವರದಕ್ಷಿಣೆಯಾಗಿ ಬೈಕ್ ಕೇಳಿದ್ದಾನೆ. ಈ ವೇಳೆ ಆತನ ಮಾವ ಎಲ್ಲರೆದುರು ಚಪ್ಪಲಿಯಲ್ಲಿ ಥಳಿಸಿದ್ದಾರೆ. ವರದಕ್ಷಿಣೆಯನ್ನು ಸಾಮಾಜದಿಂದ ಭಹಿಷ್ಕರಿಸಲು ಇದು ಒಳ್ಳೆಯ ಮಾರ್ಗ " ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Viral News: ನಿಮ್ಮ ಮನೆಯ ನಾನ್‌ವೆಜ್‌ ಅಡುಗೆ ವಾಸನೆ ಸಹಿಸೋಕೆ ಆಗ್ತಿಲ್ಲ! ಪಕ್ಕದ ಮನೆಯವರಿಗೆ ಪತ್ರ ಬರೆದ ಸಸ್ಯಾಹಾರಿ ಕುಟುಂಬ


ಕಣ್ಣೀರಿಟ್ಟು ಕೈ ಮುಗಿದ ವರ


ಮಾವನ ಹೊಡೆಯುತ್ತಿದ್ದಂತೆ ಅಳುತ್ತಲೇ ವರನೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ ಟ್ವಿಟರ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೋವನ್ನು ಅಸಲಿಯದ್ದಲ್ಲ ಎಂದು ತಿಳಿದುಬಂದಿದೆ. ಭಾರತದ ಅನೇಕ ಭಾಗಗಳಲ್ಲಿ ಇನ್ನೂ ಪ್ರಚಲಿತದಲ್ಲಿರುವ ಈ ಅನಿಷ್ಟ ಪದ್ದತಿಯ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿಯ ನಾಟಕದ ವೀಡಿಯೊ ಮಾಡಲಾಗಿದೆ ಎಂದು ಟ್ವಿಟರ್​ ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ.



10 ಲಕ್ಷ ವೀಕ್ಷಣೆ


ಈವರೆಗೆ 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್​ ವೈರಲ್ ಆಗಿದೆ. ಸಾವಿರಾರು ಮಂದಿ ಲೈಕ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ.


ಮಹಿಳೆಯರಂತೆ ಬಟ್ಟೆ ತೊಡುತ್ತಿದ್ದ ಗಂಡ, ವರದಕ್ಷಿಣೆ ದೂರು ಕೊಟ್ಟ ಪತ್ನಿ!


ವ್ಯಕ್ತಿಯೊಬ್ಬ ಹೆಂಗಸರು ಹೆಚ್ಚಾಗಿ ಇಷ್ಟಪಡುವ ಲಿಪ್‌ ಸ್ಟಿಕ್ ಹಚ್ಚಿಕೊಳ್ಳುವುದರ ಜೊತೆಗೆ ಹೆಂಗಸರಂತೆ ಡ್ರೆಸ್ ಹಾಕಿಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದ. ಅಷ್ಟು ಸಾಲದು ಎಂಬಂತೆ ನನಗೆ ಮಹಿಳೆಯರಿಗಿಂತ ಪುರುಷರೇ ಜಾಸ್ತಿ ಇಷ್ಟವಾಗುತ್ತಾರೆ ಅಂತ ಹೇಳುತ್ತಿದ್ದನಂತೆ. ಪತಿಯ ವರ್ತನೆಯಿಂದ ನೊಂದ ಪತ್ನಿ ಆತನ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಮ್ಯಾಟ್ರಿಮೋನಿಯಲ್ಲಿ ಪರಿಚಯ, 2020ರಲ್ಲಿ ವಿವಾಹ


ಈ ದಂಪತಿ 2020ರಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್‌ ಒಂದರಲ್ಲಿ ಪರಸ್ಪರ ಪರಿಚಯವಾಗಿದ್ರಂತೆ. ಬಳಿಕ ಪ್ರಪೋಸಲ್ ಒಪ್ಪಿಗೆ ಆಗಿ, ಇಬ್ಬರೂ ಭೇಟಿಯಾಗಿ, ಮದುವೆ ಬಗ್ಗೆ ಯೋಚಿಸಿದ್ದಾರೆ. ಅದರಂತೆ ಇಬ್ಬರ ವಿವಾಹವೂ ನಡೆದಿದೆ.


ಮದುವೆ ವೇಳೆ ಭರ್ಜರಿ ವರದಕ್ಷಿಣೆ


ಈತ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪ್ರತಿಷ್ಠಿತ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದನಂತೆ. ಹೀಗಾಗಿ ಮದುವೆಯ ವೇಳೆ ಸಂತ್ರಸ್ತೆ ಮನೆಯವರು ಆತನಿಗೆ ಭರ್ಜರಿ ವರದಕ್ಷಿಣೆ ನೀಡಿದ್ದಾರೆ. 800 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಮತ್ತು 5 ಲಕ್ಷ ರೂಪಾಯಿ ಹಣವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದಾರಂತೆ.


 


ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ


ಒಂದೆಡೆ ಗಂಡನ ವಿಚಿತ್ರ ವರ್ತನೆ, ಮತ್ತೊಂದೆಡೆ ಅತ್ತೆಯ ವರದಕ್ಷಿಣೆ ಕಿರುಕುಳ.. ಹೀಗೆ ನೊಂದ ಮಹಿಳೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಳಂತೆ. ಹೀಗಾಗಿ ಮನೆ ಬಿಟ್ಟು ಸೋದರ ಮಾವನ ಮನೆಗೆ ತೆರಳಿದ್ದಳಂತೆ.

top videos


    ಇದೀಗ ಸಂತ್ರಸ್ತ ಮಹಿಳೆ ಗಂಡ ಹಾಗೂ ಅತ್ತೆ ಮನೆಯವರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾಳೆ. ಮಹಿಳೆ ಹಾಗೂ ಆಕೆ ಕುಟುಂಬಸ್ಥರು ನೀಡಿದ ದೂರಿನನ್ವಯ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

    First published: