Homework ಮಾಡಿಲ್ಲ ಅಂತ ಮಗನನ್ನು ತಲೆಕೆಳಗಾಗಿ ನೇತು ಹಾಕಿದ ಪಾಪಿ ತಂದೆ!
ಉದಯ್ಪುರದ ಬುಂದಿ ಜಿಲ್ಲೆಯ ದಾಬಿಯಲ್ಲಿ ಈ ಘಟನೆ ನಡೆದಿದೆ. ಮಗನನ್ನು ತಲೆಕೆಳಗಾಗಿ ನೇತು ಹಾಕಿದಲ್ಲದೇ ಪಾಪಿ ತಂದೆ ಹೊಡೆಯಲು ದೊಣ್ಣೆಯನ್ನು ತಂದಿದ್ದಾನೆ, ಕೂಡಲೇ ತಾಯಿ ಮಧ್ಯೆ ಪ್ರವೇಶಿಸಿ ಮಗನನ್ನು ರಕ್ಷಿಣೆ ಮಾಡಿದ್ದಾರೆ. ತಂದೆ ನೀಡಿದ ಶಿಕ್ಷೆಯನ್ನು ತಾಳಲಾರದೇ 8 ವರ್ಷದ ಮಗು ಜೋರಾಗಿ ಆಳಲು ಆರಂಭಿಸಿದ್ದಾನೆ
ಹೋಮ್ ವರ್ಕ್ (Homework) ಮಾಡಿಲ್ಲವೆಂದರೆ ಎರಡೇಟು ಬಾರಿಸುತ್ತಾರೆ. ಇನ್ನೇನಾದರೂ ಸಣ್ಣಪುಟ್ಟ ಶಿಕ್ಷೆ ನೀಡುತ್ತಾರೆ ಇಲ್ಲ ಮುದ್ದು ಮಾಡಿ ಬರೆಸುತ್ತಾರೆ. ಆದರೆ ಇಲ್ಲೊಬ್ಬ ತಂದೆ ಹೋಮ್ ವರ್ಕ್ ಮಾಡಿಲ್ಲ ಎಂದು ತನ್ನ 8 ವರ್ಷದ ಮಗುನನ್ನು ತಲೆಕೆಳಗಾಗಿ (Upside Down) ಮಾಡಿ ಫ್ಯಾನಿಗೆ ನೇತು ಹಾಕಿ ಚಿತ್ರಚಿಂಸೆ (Torture) ನೀಡಿರುವ ಘಟನೆ ರಾಜಸ್ತಾನದ (Rajasthan) ಉದಯ್ಪುರದಲ್ಲಿ ನಡೆದಿದೆ. ಶಾಲೆಯಿಂದ ಮನೆಗೆ ಬಂದ ಮಗ ಕೂಡಲೇ ಹೋಮ್ ವರ್ಕ್ ಮಾಡಿಲ್ಲ ಎಂಬ ಕ್ಷುಲಕ್ಕ ಕಾರಣಕ್ಕೆ ತಲೆಕೆಳಗಾಗಿ ನೇತು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿದೆ ತಡ ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ನೇತು ಹಾಕಬೇಡ ಎಂದು ಮನವಿ
ಉದಯ್ಪುರದ ಬುಂದಿ ಜಿಲ್ಲೆಯ ದಾಬಿಯಲ್ಲಿ ಈ ಘಟನೆ ನಡೆದಿದೆ. ಮಗನನ್ನು ತಲೆಕೆಳಗಾಗಿ ನೇತು ಹಾಕಿದಲ್ಲದೇ ಪಾಪಿ ತಂದೆ ಹೊಡೆಯಲು ದೊಣ್ಣೆಯನ್ನು ತಂದಿದ್ದಾನೆ, ಕೂಡಲೇ ತಾಯಿ ಮಧ್ಯೆ ಪ್ರವೇಶಿಸಿ ಮಗನನ್ನು ರಕ್ಷಿಣೆ ಮಾಡಿದ್ದಾರೆ. ತಂದೆ ನೀಡಿದ ಶಿಕ್ಷೆಯನ್ನು ತಾಳಲಾರದೇ 8 ವರ್ಷದ ಮಗು ಜೋರಾಗಿ ಆಳಲು ಆರಂಭಿಸಿದ್ದಾನೆ, ಹಾಗೂ ಅಳುತ್ತಾ ನನ್ನನ್ನು ಕೊಂದು ಬಿಡು, ಆದರೆ ನನ್ನನ್ನು ನೇತು ಹಾಕಬೇಡ ಎಂದು ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಮಗನ ಜೀವ ಉಳಿಸಿದ ತಾಯಿ...
ಈ ಹಿಂದೆಯೂ ತಮ್ಮ ಮಗನಿಗೆ ಇದೇ ರೀತಿ ಶಿಕ್ಷೆ ನೀಡಿದ್ದಕ್ಕೆ ತಾಯಿ ಮನನೊಂದಿದ್ದಳು, ಹಾಗಾಗಿ ಈ ಬಾರಿ ಆತನಿಗೆ ಬುದ್ದಿ ಕಲಿಸಬೇಕೆಂದು ತೀರ್ಮಾನಿಸಿ, ಮಗುವಿನ ತಾಯಿ ಕಿಟಕಿಯ ಹೊರಗೆ ಮೊಬೈಲ್ ಇಟ್ಟು ರೆಕಾರ್ಡಿಂಗ್ ಮಾಡಲು ಪ್ರಾರಂಭಿಸಿದ್ದಾರೆ, ಮತ್ತು ಒಳಗೆ ಹೋಗಿ ತನ್ನ ಪತಿಯನ್ನು ಬೆಂಬಲಿಸುವಂತೆ ನಟಿಸಿದ್ದಾಳೆ. ಇಡೀ ಘಟನೆಯನ್ನು ಸಂಪೂರ್ಣವಾಗಿ ಮೊಬೈಲ್ನಲ್ಲಿ ರೆಕಾರ್ಡ್ ಮಾಡಲಾಗಿದೆ. ಇದೇ ವಿಹೃದಯಹೀನ ಚಿತ್ರಹಿಂಸೆಯ ಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಕ್ಕಳ ಮೇಲೆ ನಿರಂತರವಾಗಿ ಚಿತ್ರಹಿಂಸೆ
ಘಟನೆಯ ನಂತರ, ಹುಡುಗ ಮತ್ತು ಅವನ ತಾಯಿ ಚಿತ್ತೋರ್ಗಢದ ಜೋಗ್ನಿಯಾಮಾತಾ ಪ್ರದೇಶಕ್ಕೆ ಹೋದರು, ಅಲ್ಲಿ ಅವರು ತಮ್ಮ ಚಿಕ್ಕಪ್ಪನಿಗೆ ವೀಡಿಯೊವನ್ನು ತೋರಿಸಿದರು. ನಂತರ ಮಹಿಳೆಯ ಸಹೋದರ ಚೈಲ್ಡ್ಲೈನ್ಗೆ ಕರೆ ಮಾಡಿ ಘಟನೆಯನ್ನು ವಿವರಸಿದ್ದಾರೆ. ಆರೋಪಿಯು ತನ್ನ ಮಗನನ್ನು ಸೀಲಿಂಗ್ ಫ್ಯಾನ್ಗೆ ನೇತು ಹಾಕುವ ಮೊದಲು ಅವನ ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಿದ್ದಾನೆ. ಮಗುವಿಗೆ ದೊಣ್ಣೆಯಿಂದ ಥಳಿಸಲು ಯತ್ನಿಸಿದ್ದು, ಪತ್ನಿ ತಡೆದಿದ್ದಾರೆ. ಆರೋಪಿ ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದು. ವರದಿಯ ಪ್ರಕಾರ, ಘಟನೆ ನವೆಂಬರ್ 17 ರಂದು ನಡೆದಿದೆ. ವಿಡಿಯೋದಲ್ಲಿ, ಮಗು ತನ್ನ ತಂದೆಗೆ ನೇತು ಹಾಕದಂತೆ ವಿನಂತಿಸುತ್ತಿರುವುದನ್ನು ಕಾಣಬಹುದು. ಮಹಿಳೆ ತನ್ನ ಪತಿಗೆ ಮಗುವನ್ನು ನೇಣು ಹಾಕಲು ಸಹಾಯ ಮಾಡುವುದನ್ನು ನೋಡಬಹುದಾದರೂ, ಆತನ ಕ್ರೌರ್ಯವನ್ನು ಸೆರೆಹಿಡಿಯಲು ಅವರು ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಲಕನ ಚಿಕ್ಕಪ್ಪನ ಪ್ರಕಾರ, ಆರೋಪಿಯು ತನ್ನ ಮಗ ಮತ್ತು 5 ವರ್ಷದ ಮಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದನು ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಔಪಚಾರಿಕ ಪ್ರಕರಣ ದಾಖಲಾಗಿಲ್ಲ ಎಂದು ವರದಿಯಾಗಿದೆ. ಆರೋಪಿಯ ಹಿಂಸಾತ್ಮಕ ಸ್ವಭಾವದಿಂದಾಗಿ ಕುಟುಂಬದವರು ದೂರು ದಾಖಲಿಸಲು ಹೆದರುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಪ್ರಕರಣವನ್ನು ಗಮನಕ್ಕೆ ತಂದಿದ್ದು, ಕ್ರಮ ಕೈಗೊಂಡು 3 ದಿನಗಳಲ್ಲಿ ವರದಿ ಸಲ್ಲಿಸುವಂತೆ ಬಂಡಿ ಎಸ್ಪಿಗೆ ಸೂಚಿಸಿದೆ.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ