ಮಕ್ಕಳನ್ನು ಕಾಪಾಡಲು ಹೋಗಿ ನೀರಿನಲ್ಲಿ ಕೊಚ್ಚಿಹೋದ ತಂದೆ; ಮಧ್ಯಪ್ರದೇಶದಲ್ಲೊಂದು ದಾರುಣ ಘಟನೆ

ಡ್ಯಾಮಿನ ನೀರಿನ ಮಟ್ಟ ಕ್ಷಣದಿಂದ ಕ್ಷಣಕ್ಕೆ ಏರತೊಡಗಿದ್ದನ್ನು ಕಂಡ ರಿಜ್ವಾನ್​ ನೀರಿಗೆ ಹಾರಿ ಮೂವರೂ ಮಕ್ಕಳನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸಿದರು. ಆದರೆ, ಅಷ್ಟರಲ್ಲಿ ನೀರಿನೊಳಗಿದ್ದ ಚೂಪಾದ ಕಲ್ಲು ಅವರ ಕಾಲಿಗೆ ತಗುಲಿದ್ದರಿಂದ ಅಲ್ಲೇ ಸಿಲುಕಿಕೊಂಡರು.

Sushma Chakre | news18-kannada
Updated:September 11, 2019, 8:38 PM IST
ಮಕ್ಕಳನ್ನು ಕಾಪಾಡಲು ಹೋಗಿ ನೀರಿನಲ್ಲಿ ಕೊಚ್ಚಿಹೋದ ತಂದೆ; ಮಧ್ಯಪ್ರದೇಶದಲ್ಲೊಂದು ದಾರುಣ ಘಟನೆ
ಸಾಂಧರ್ಭಿಕ ಚಿತ್ರ
Sushma Chakre | news18-kannada
Updated: September 11, 2019, 8:38 PM IST
ಭೂಪಾಲ್ (ಸೆ. 11): ನೀರಿನಲ್ಲಿ ಮುಳುಗುತ್ತಿದ್ದ ತನ್ನ ಮಕ್ಕಳನ್ನು ಕಾಪಾಡಿದ ತಂದೆ ತಾನೇ ಪ್ರಾಣ ಕಳೆದುಕೊಂಡ ಘಟನೆ ಭೂಪಾಲ್​ನಲ್ಲಿ ನಡೆದಿದೆ. ಶಾಲಾ ಬಸ್​ ಡ್ರೈವರ್ ಆಗಿದ್ದ 35 ವರ್ಷದ ರಿಜ್ವಾನ್​ ಖಾನ್​ ತನ್ನ ಪತ್ನಿ ಮತ್ತು ಮೂವರು ಮಕ್ಕಳ ಜೊತೆಗೆ ಮಧ್ಯಪ್ರದೇಶದ ಕೊಲಾರ್​ ಡ್ಯಾಂಗೆ ಪಿಕ್​ನಿಕ್​ಗೆ ತೆರಳಿದ್ದಾಗ ಈ ದಾರುಣ ಘಟನೆ ನಡೆದಿದೆ.

ಮಕ್ಕಳ ಜೊತೆಗೆ ನೀರಿನಲ್ಲಿ ಆಟವಾಡುತ್ತಿದ್ದ ರಿಜ್ವಾನ್​ ಬಳಿಕ ದಡಕ್ಕೆ ಹೋಗಿದ್ದರು. ಈ ವೇಳೆ ಕೊಲಾರ್​ ಡ್ಯಾಮಿನ ನೀರಿನ ಮಟ್ಟ ಏರತೊಡಗಿತು. ಡ್ಯಾಮಿನ ನೀರಿನ ಮಟ್ಟ ಕ್ಷಣದಿಂದ ಕ್ಷಣಕ್ಕೆ ಏರತೊಡಗಿದ್ದನ್ನು ಕಂಡ ರಿಜ್ವಾನ್​ ನೀರಿಗೆ ಹಾರಿ ಮೂವರೂ ಮಕ್ಕಳನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸಿದರು. ಆದರೆ, ಅಷ್ಟರಲ್ಲಿ ನೀರಿನೊಳಗಿದ್ದ ಚೂಪಾದ ಕಲ್ಲು ಅವರ ಕಾಲಿಗೆ ತಗುಲಿದ್ದರಿಂದ ಅಲ್ಲೇ ಸಿಲುಕಿಕೊಂಡರು. ಅವರ ಹೆಂಡತಿ ಮತ್ತು ಸುತ್ತಲಿದ್ದವರು ಸೇರಿ ಕಾಪಾಡಲು ಪ್ರಯತ್ನಿಸಿದರೂ ರಿಜ್ವಾನ್‌ ನೀರಿನಲ್ಲಿ ಕೊಚ್ಚಿಕೊಂಡು ಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಹೆಲ್ಮೆಟ್​ ಫ್ರೀ; ವಿನೂತನ ಅಭಿಯಾನಕ್ಕೆ ಮುಂದಾದ ಒರಿಸ್ಸಾ ಸರ್ಕಾರ

ಈ ಬಗ್ಗೆ ಅಲ್ಲಿನ ಪೊಲೀಸರು ಕೂಡ ಸ್ಪಷ್ಟಪಡಿಸಿದ್ದು, ಮಕ್ಕಳನ್ನು ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡ ಅಪ್ಪನ ಸಾವಿಗೆ ಸ್ಥಳೀಯರು ಕಂಬನಿ ಮಿಡಿದಿದ್ದಾರೆ. ಡ್ಯಾಮಿಗೆ ಹೆಚ್ಚುವರಿ ನೀರು ಬಿಟ್ಟ ಕಾರಣ ನೀರಿನ ಮಟ್ಟ ಏರಿಕೆಯಾಗಿತ್ತು. ನೀರಿನಲ್ಲಿ ಕೊಚ್ಚಿಕೊಂಡು ಹೋದ ರಿಜ್ವಾನ್​ ಮೃತದೇಹವನ್ನು ಸಂಜೆಯ ವೇಳೆ ಹೊರತೆಗೆಯಲಾಗಿದೆ. ಕೊಲಾರ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...