ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ; ಪೊಲೀಸರಿಗೆ ದೂರು ನೀಡಿದ ಆರೋಪಿಯ ನಾಲ್ಕನೇ ಹೆಂಡತಿ!

ಮೂರನೇ ಹೆಂಡತಿ ಮಗಳಿಗೆ 13 ವರ್ಷ. ಈಕೆ ಹೊರ ಜಿಲ್ಲೆಯಲ್ಲಿ ಉಳಿದುಕೊಂಡು ಶಿಕ್ಷಣ ಪಡೆಯುತ್ತಿದ್ದಳು. ಲಾಕ್ಡೌನ್ ಆರಂಭವಾದ ವೇಳೆ ಮನೆಗೆ ಬಂದಿದ್ದಳು. ಈ ವೇಳೆ ತಂದೆ ನಿರಂತರವಾಗಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಹೈದರಾಬಾದ್​ (ಜೂ.1 ): ಮಕ್ಕಳನ್ನು ಎಲ್ಲರೂ ಮುದ್ದಿನಿಂದ ಸಾಕುತ್ತಾರೆ. ಮಕ್ಕಳೆಂದರೆ ದೇವರ ಸಮಾನ ಎಂದು ಭಾವಿಸಿದವರೂ ಅನೇಕ ಮಂದಿ ಇದ್ದಾರೆ. ಆದರೆ, ಇಲ್ಲೊಬ್ಬ ಕಾಮುಕ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈತನ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.

  ತೆಲಂಗಾಣದ ವಿಕಾರಬಾದ್ ಜಿಲ್ಲೆಯ ಕಾರನ್ ಕೊಂಟೆಯಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರ ಎಸಗಿದ ಆರೋಪಿಗೆ ಬರೋಬ್ಬರಿ ನಾಲ್ವರು ಹೆಂಡತಿಯರು. ಮೊದಲ ಎರಡು ಹೆಂಡತಿಯರಿಗೆ ಈತ ವಿಚ್ಛೇದನ ನೀಡಿದ್ದರೆ, ಮೂರನೇ ಹೆಂಡತಿ ರೋಗ ಬಂದು ಮೃತಪಟ್ಟಿದ್ದಳು. ಸದ್ಯ ಈತ ನಾಲ್ಕನೇ ಹೆಂಡತಿ ಜೊತೆ ವಾಸವಾಗಿದ್ದ.

  ಮೂರನೇ ಹೆಂಡತಿ ಮಗಳಿಗೆ 13 ವರ್ಷ. ಈಕೆ ಹೊರ ಜಿಲ್ಲೆಯಲ್ಲಿ ಉಳಿದುಕೊಂಡು ಶಿಕ್ಷಣ ಪಡೆಯುತ್ತಿದ್ದಳು. ಲಾಕ್ಡೌನ್ ಆರಂಭವಾದ ವೇಳೆ ಮನೆಗೆ ಬಂದಿದ್ದಳು. ಈ ವೇಳೆ ತಂದೆ ನಿರಂತರವಾಗಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

  ಇದನ್ನೂ ಓದಿ:  ದೇಶದಲ್ಲಿ ಒಂದೇ ದಿನ 8 ಸಾವಿರಕ್ಕೂ‌ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆ, ಏಳನೇ ಸ್ಥಾನಕ್ಕೆ ಜಿಗಿದ ಭಾರತ

  ಭಯದಿಂದ ಈ ಬಗ್ಗೆ ಸಂತ್ರಸ್ತೆ ಕೂಡ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ, ಇತ್ತೀಚೆಗೆ ತನಗಾಗುತ್ತಿರುವ ಕಿರುಕುಳದ ಬಗ್ಗೆ ಮಲತಾಯಿ ಜೊತೆ ಸಂತ್ರಸ್ತೆ ಹೇಳಿಕೊಂಡಿದ್ದಳು. ಹೀಗಾಗಿ, ಆರೋಪಿಯ ನಾಲ್ಕನೇ ಹೆಂಡತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.  ಸದ್ಯ, ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು ಮಾಡಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ.
  First published: