FASTag: ಇಂದು ಮಧ್ಯರಾತ್ರಿಯಿಂದ ಫಾಸ್ಟ್‌ಟ್ಯಾಗ್ ಕಡ್ಡಾಯ; ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..!

ಫಾಸ್ಟ್‌ಟ್ಯಾಗ್ ಖರೀದಿಸಲು ಅರ್ಜಿದಾರರು ಕಡ್ಡಾಯವಾದ ಕೆವೈಸಿ ಪ್ರಕ್ರಿಯೆಗೆ ವಾಹನ ನೋಂದಣಿ ದಾಖಲೆ ಮತ್ತು ವೈಯಕ್ತಿಕ ಗುರುತನ್ನು ಒದಗಿಸಬೇಕಾಗುತ್ತದೆ. ಆದರೆ, ಬ್ಯಾಂಕುಗಳಲ್ಲಿ ನೀವು ಈಗಾಗಲೇ ಗ್ರಾಹಕರಾಗಿದ್ದರೆ, ನಿಮಗೆ ಆರ್‌ಸಿ ವರದಿ ಮಾತ್ರ ಬೇಕಾಗುತ್ತದೆ. ನೀವು ಏರ್‌ಟೆಲ್ ಮತ್ತು ಪೇಟಿಎಂನಂತಹ ಇತರ ವಿಧಾನಗಳ ಮೂಲಕ ಅರ್ಜಿ ಸಲ್ಲಿಸುತ್ತಿದ್ದರೆ, ನೀವು ವೈಯಕ್ತಿಕ ಐಡಿಯನ್ನು ಪ್ರೊಡ್ಯೂಸ್‌ ಮಾಡುವ ಅಗತ್ಯವಿಲ್ಲ ಮತ್ತು ನೀವು ಆರ್‌ಸಿಯನ್ನು ಮಾತ್ರ ನೀಡಬೇಕಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ(ಫೆ.15): ಫೆಬ್ರವರಿ 15 ರ ಮಧ್ಯರಾತ್ರಿಯಿಂದ ಫಾಸ್ಟ್‌ಟ್ಯಾಗ್ ಬಳಕೆ ಕಡ್ಡಾಯವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ತಮ್ಮ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅಳವಡಿಸಲು ವಿಫಲರಾದ ವಾಹನ ಬಳಕೆದಾರರಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಮೊತ್ತಕ್ಕಿಂತ ಎರಡು ಪಟ್ಟು ವಿಧಿಸಲಾಗುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

  "ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ ಪ್ಲಾಜಾಗಳಲ್ಲಿನ ಎಲ್ಲಾ ಪಥಗಳನ್ನು 2021 ರ ಫೆಬ್ರವರಿ 15/16 ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ 'ಟೋಲ್‌ ಪ್ಲಾಜಾದ ಫಾಸ್ಟ್ಯಾಗ್ ಲೇನ್' ಎಂದು ಘೋಷಿಸಲು ನಿರ್ಧರಿಸಲಾಗಿದೆ" ಎಂದು ಹೇಳಿಕೆ ತಿಳಿಸಿದೆ.

  "ಫಾಸ್ಟ್‌ಟ್ಯಾಗ್‌ನೊಂದಿಗೆ ಅಳವಡಿಸದ ಅಥವಾ ಮಾನ್ಯ / ಕ್ರಿಯಾತ್ಮಕ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ಫಾಸ್ಟ್‌ಟ್ಯಾಗ್‌ ಲೇನ್‌ಗೆ ಪ್ರವೇಶಿಸುವುದರಿಂದ ಆ ಎಂ ಮತ್ತು ಎನ್ ವರ್ಗದ ವಾಹನಗಳಿಗೆ ಅನ್ವಯವಾಗುವ ಶುಲ್ಕದ ಎರಡು ಪಟ್ಟು ಸಮಾನ ಶುಲ್ಕವನ್ನು ಪಾವತಿಸಲಾಗುತ್ತದೆ" ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

  ಫಾಸ್ಟ್‌ಟ್ಯಾಗ್‌ ಬಗ್ಗೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

  ಫಾಸ್ಟ್‌ಟ್ಯಾಗ್‌ ಎಂದರೇನು ಮತ್ತು ಅದು ಎಷ್ಟು ಕಾಲ ಮಾನ್ಯವಾಗಿರುತ್ತದೆ?
  ಇದು ನಿಮ್ಮ ಕಾರಿನ ವಿಂಡ್‌ಶೀಲ್ಡ್‌ಗೆ ಒಳಗಿನಿಂದ ಜೋಡಿಸಲಾದ ಸ್ಟಿಕ್ಕರ್ ಆಗಿದೆ. ಫಾಸ್ಟ್‌ಟ್ಯಾಗ್‌ ನಿಮ್ಮ ವಾಹನದ ಎಲ್ಲಾ ನೋಂದಣಿ ವಿವರಗಳೊಂದಿಗೆ ಲಿಂಕ್ ಮಾಡಲಾದ ರೇಡಿಯೊ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್ಎಫ್ಐಡಿ) ಬಾರ್‌ಕೋಡ್ ಅನ್ನು ಸಹ ಹೊಂದಿದೆ. ಇದು ವಿತರಣೆಯ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ.

  ಫಾಸ್ಟ್‌ಟ್ಯಾಗ್‌ ಹೇಗೆ ಕೆಲಸ ಮಾಡುತ್ತದೆ?
  ನೀವು ಟೋಲ್ ಪ್ಲಾಜಾದ ಮೂಲಕ ಹಾದುಹೋಗುವಾಗ, ಫಾಸ್ಟ್‌ಟ್ಯಾಗ್‌ ರೀಡರ್ಸ್‌ ಲಭ್ಯವಿರುತ್ತದೆ. ಅದು ನಿಮ್ಮ ಸ್ಟಿಕ್ಕರ್‌ಗೆ ಓದುತ್ತದೆ ಮತ್ತು ನಂತರ ಅಗತ್ಯವಾದ ಮೊತ್ತವನ್ನು ಕಡಿತಗೊಳಿಸುತ್ತದೆ. ಈ ಪ್ರಕ್ರಿಯೆಯು ಟೋಲ್ ಪ್ಲಾಜಾದಲ್ಲಿ ನಿಲ್ಲಿಸುವ, ಮನುಷ್ಯನೊಂದಿಗೆ ಸಂವಹನ ನಡೆಸುವ ಮತ್ತು ಹಣವನ್ನು ಪಾವತಿಸುವ ಅಗತ್ಯವನ್ನು ನಿವಾರಿಸುತ್ತದೆ.

  ಅನುದಾನಕ್ಕೆ ಆಗ್ರಹಿಸಿ ಇಂದು ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳು ‌ಬಂದ್...!

  ನೀವು ಫಾಸ್ಟ್‌ಟ್ಯಾಗ್‌ ಅನ್ನು ಖರೀದಿಸಲು ಯಾವ ದಾಖಲೆಗಳು ಬೇಕು?
  ಫಾಸ್ಟ್‌ಟ್ಯಾಗ್ ಖರೀದಿಸಲು ಅರ್ಜಿದಾರರು ಕಡ್ಡಾಯವಾದ ಕೆವೈಸಿ ಪ್ರಕ್ರಿಯೆಗೆ ವಾಹನ ನೋಂದಣಿ ದಾಖಲೆ ಮತ್ತು ವೈಯಕ್ತಿಕ ಗುರುತನ್ನು ಒದಗಿಸಬೇಕಾಗುತ್ತದೆ. ಆದರೆ, ಬ್ಯಾಂಕುಗಳಲ್ಲಿ ನೀವು ಈಗಾಗಲೇ ಗ್ರಾಹಕರಾಗಿದ್ದರೆ, ನಿಮಗೆ ಆರ್‌ಸಿ ವರದಿ ಮಾತ್ರ ಬೇಕಾಗುತ್ತದೆ. ನೀವು ಏರ್‌ಟೆಲ್ ಮತ್ತು ಪೇಟಿಎಂನಂತಹ ಇತರ ವಿಧಾನಗಳ ಮೂಲಕ ಅರ್ಜಿ ಸಲ್ಲಿಸುತ್ತಿದ್ದರೆ, ನೀವು ವೈಯಕ್ತಿಕ ಐಡಿಯನ್ನು ಪ್ರೊಡ್ಯೂಸ್‌ ಮಾಡುವ ಅಗತ್ಯವಿಲ್ಲ ಮತ್ತು ನೀವು ಆರ್‌ಸಿಯನ್ನು ಮಾತ್ರ ನೀಡಬೇಕಾಗಿದೆ.

  ಫಾಸ್ಟ್‌ಟ್ಯಾಗ್‌ ಅನುಕೂಲಗಳು ಯಾವುವು?
  ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರ ಪ್ರಕಾರ, ಪ್ರಯಾಣಿಕರಿಗೆ ಫಾಸ್ಟ್‌ಟ್ಯಾಗ್ ಉಪಯುಕ್ತವಾಗಿದೆ. ಏಕೆಂದರೆ ನಗದು ಪಾವತಿಗಾಗಿ ಟೋಲ್ ಪ್ಲಾಜಾಗಳಲ್ಲಿ ಇನ್ನು ಮುಂದೆ ನಿಲ್ಲುವ ಅಗತ್ಯವಿಲ್ಲ. ಸ್ವಯಂಚಾಲಿತ ಟೋಲ್ ಪಾವತಿ ವ್ಯವಸ್ಥೆಗೆ ಬದಲಾಯಿಸುವುದು ಅಂತಿಮವಾಗಿ ಸಮಯ ಮತ್ತು ಇಂಧನವನ್ನು ಉಳಿಸುತ್ತದೆ.

  ಫಾಸ್ಟ್‌ಟ್ಯಾಗ್‌ ಅನ್ನು ನೀವು ಎಲ್ಲಿ ಪಡೆಯಬಹುದು?
  ಫಾಸ್ಟ್‌ಟ್ಯಾಗ್ ಅನ್ನು ಮನೆಗೆ ತಲುಪಿಸಲು ಸರ್ಕಾರ ಬ್ಯಾಂಕುಗಳು ಮತ್ತು ಇ-ಕಾಮರ್ಸ್ ಚಾನೆಲ್‌ಗಳು ಸೇರಿದಂತೆ ಹಲವಾರು ಏಜೆನ್ಸಿಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಈಗಿನಂತೆ, ಪ್ರಸ್ತುತ ಫಾಸ್ಟ್‌ಟ್ಯಾಗ್‌ಗಳನ್ನು ನೀಡುವ ಬ್ಯಾಂಕುಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿ ಹಲವು ಬ್ಯಾಂಕ್‌ಗಳಿವೆ. ಇತ್ತೀಚೆಗೆ, ಐಸಿಐಸಿಐ ಬ್ಯಾಂಕ್ ಮತ್ತು ಗೂಗಲ್ ಸಹಯೋಗವನ್ನು ಘೋಷಿಸಿದ್ದು, ಅರ್ಜಿದಾರರಿಗೆ ಗೂಗಲ್ ಪೇ ಮೂಲಕ ಫಾಸ್ಟ್‌ಟ್ಯಾಗ್ ಪಾವತಿಸಲು ಅವಕಾಶ ನೀಡುತ್ತದೆ. ಅಮೆಜಾನ್, ಪೇಟಿಎಂ ಅಥವಾ ಏರ್‌ಟೆಲ್ ಪೇ ಅಪ್ಲಿಕೇಶನ್‌ನಂತಹ ಇತರ ಕೆಲವು ಆಯ್ಕೆಗಳು ಇವೆ. ಭಾರತದಾದ್ಯಂತ ಕೆಲವು ಟೋಲ್ ಪ್ಲಾಜಾಗಳಲ್ಲಿ ಅವುಗಳನ್ನು ಖರೀದಿಸುವಂತಹ ಸಾಂಪ್ರದಾಯಿಕ ವಿಧಾನಗಳು ಸಹ ಲಭ್ಯವಿದೆ.

  ಬ್ಯಾಲೆನ್ಸ್ ಅನ್ನು ನೀವು ಹೇಗೆ ಪರಿಶೀಲಿಸುತ್ತೀರಿ ಮತ್ತು ಫಾಸ್ಟ್‌ಟ್ಯಾಗ್‌ ಅನ್ನು ರೀಚಾರ್ಜ್ ಮಾಡುವುದು ಹೇಗೆ?
  ಬ್ಯಾಂಕಿನ ಇ-ಕಾಮರ್ಸ್ ಪಾಲುದಾರರು ಅರ್ಜಿದಾರರಿಗೆ ಫಾಸ್ಟ್‌ಟ್ಯಾಗ್‌ ವ್ಯಾಲೆಟ್ ಅನ್ನು ಕ್ರಿಯೇಟ್‌ ಮಾಡುತ್ತಾರೆ. ಅದರ ನಂತರ ಬೇಕಾಗಿರುವುದು ವ್ಯಾಲೆಟ್‌ಗೆ ಹಣವನ್ನು ಸೇರಿಸುವುದು. ಉದಾಹರಣೆಗೆ, ಒಬ್ಬ ವ್ಯಕ್ತಿಯು ಬ್ಯಾಂಕಿನ ಮೂಲಕ ಫಾಸ್ಟ್‌ಟ್ಯಾಗ್ ಖರೀದಿಸಿದರೆ, ಅವರು ನೇರವಾಗಿ ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಳಿಸುತ್ತಾರೆ ಮತ್ತು ನೀವು ಬ್ಯಾಂಕ್ ಖಾತೆಯಲ್ಲಿ ಬಾಕಿ ಉಳಿಸಿಕೊಳ್ಳಬೇಕು. ಇಲ್ಲಿ ಮೊಬೈಲ್ ಪಾವತಿ ಬ್ಯಾಂಕುಗಳ ಸಂದರ್ಭದಲ್ಲಿ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ ಮತ್ತು ಇತರ ಪಾವತಿ ಆಯ್ಕೆಗಳನ್ನು ಬಳಸಿಕೊಂಡು ಫಾಸ್ಟ್‌ಟ್ಯಾಗ್‌ ಅನ್ನು ರೀಚಾರ್ಜ್ ಮಾಡಲು ಸೇವೆಗಳು ನಿಮಗೆ ಅನುಮತಿಸುತ್ತದೆ. ನೀವು ಅದನ್ನು ಏರ್‌ಟೆಲ್ ಮೂಲಕ ಖರೀದಿಸುತ್ತಿದ್ದರೆ ಇಲ್ಲೂ ಅದೇ ರೀತಿ ರೀಚಾರ್ಜ್ ಮಾಡಬಹುದು. ಏರ್‌ಟೆಲ್ ಪೇಮೆಂಟ್ ಮೂಲಕವೂ ನಿಮ್ಮ ಫಾಸ್ಟ್ಯಾಗ್ ಅನ್ನು ನೀವು ರೀಚಾರ್ಜ್ ಮಾಡಬಹುದು.

  ಫಾಸ್ಟ್‌ಟ್ಯಾಗ್ ಪಡೆಯುವುದರಿಂದ ಯಾರು ವಿನಾಯಿತಿ ಪಡೆದಿದ್ದಾರೆ?
  ಟೋಲ್ ಪಾವತಿಸುವುದರಿಂದ ವಿನಾಯಿತಿ ಪಡೆದ ಜನರು ಫಾಸ್ಟ್‌ಟ್ಯಾಗ್ ಬಳಸಬೇಕಾಗಿಲ್ಲ. ಅವರಲ್ಲಿ ನ್ಯಾಯಾಧೀಶರು, ಶಾಸಕರು, ಮಂತ್ರಿಗಳು, ಉನ್ನತ ಅಧಿಕಾರಿಗಳು, ಉನ್ನತ ಮಿಲಿಟರಿ ಅಧಿಕಾರಿಗಳು ಮತ್ತು ತುರ್ತು ಸೇವಾ ಕಾರ್ಯಕರ್ತರು ಸೇರಿದ್ದಾರೆ.
  Published by:Latha CG
  First published: