ವೆಟರಿನರಿ ವೈದ್ಯೆ ಕೇಸ್​​: ತ್ವರಿತ ನ್ಯಾಯಾಲಯ ಸ್ಥಾಪಿಸಿ ವಿಚಾರಣೆ ಪೂರ್ಣಗೊಳಿಸುವಂತೆ ಸಿಎಂ ಕೆಸಿಆರ್​​ ಸೂಚನೆ

ಈಕೆಯನ್ನು ಆರೋಪಿಗಳು ಹೊಡೆದು ಸಾಯಿಸಿದರಾ ಅಥವಾ ಕತ್ತುಹಿಸುಕಿ ಕೊಂದರಾ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿಲ್ಲ. ಈಗ ನಾಲ್ವರನ್ನು ಬಂಧಿಸಿರುವ ಪೊಲೀಸರು ಈ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿದ್ಧಾರೆ.

news18-kannada
Updated:December 2, 2019, 11:37 AM IST
ವೆಟರಿನರಿ ವೈದ್ಯೆ ಕೇಸ್​​: ತ್ವರಿತ ನ್ಯಾಯಾಲಯ ಸ್ಥಾಪಿಸಿ ವಿಚಾರಣೆ ಪೂರ್ಣಗೊಳಿಸುವಂತೆ ಸಿಎಂ ಕೆಸಿಆರ್​​ ಸೂಚನೆ
ತೆಲಂಗಾಣ ಅತ್ಯಾಚಾರ
  • Share this:
ಬೆಂಗಳೂರು(ಡಿ.01): ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಹತ್ಯೆ ಪ್ರಕರಣ ಸಂಬಂಧ ಮೊದಲ ಬಾರಿಗೆ ಸಾರ್ವಜನಿಕವಾಗಿ ತೆಲಂಗಾಣ ಸಿಎಂ ಕೆ.ಸಿ ಚಂದ್ರಶೇಖರ್​​ ಮೌನ ಮುರಿದಿದ್ದಾರೆ. ಕೂಡಲೇ ತ್ವರಿತ ನ್ಯಾಯಲಯ ಸ್ಥಾಪಿಸಿ ವಿಚಾರಣೆ ಪೂರ್ಣಗೊಳಿಸಿ ಎಂದು ಪೊಲೀಸ್​​ ಅಧಿಕಾರಿಗಳಿಗೆ ಕೆಸಿಆರ್ ಆದೇಶಿಸಿದ್ದಾರೆ. ಪ್ರಕರಣ ಕುರಿತಂತೆ ಮೂರು ದಿನಗಳ ಬಳಿಕ ಮೊದಲ ಬಾರಿಗೆ ಹೇಳಿಕೆ ನೀಡಿರುವ ಸಿಎಂ ಕೆಸಿಆರ್​​​, ಈ ಘಟನೆ ಖಂಡನೀಯ. ಮೃತ ಕುಟುಂಬಕ್ಕೆ ಬೇಕಾದ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಸಿಎಂ ಕೆ. ಚಂದ್ರಶೇಖರ್​​ ಪುತ್ರ ಸಚಿವ ಕೆ ಟಿ.ರಾಮರಾವ್‌ ಕೂಡ ಪ್ರಿಯಾಂಕಾ ಭೀಕರ ಹತ್ಯೆಯನ್ನು ಖಂಡಿಸಿದ್ಧಾರೆ. ಆರೋಪಿಗಳಿಗೆ ಮರಣ ದಂಡನೆ ವಿಧಿಸಲು ಕಾನೂನು ರೂಪಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯಿಸಿದ್ದಾರೆ. ಮಹಿಳೆ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಕಾಮುಕರನ್ನು ಗಲ್ಲಿಗೇರಿಸಬೇಕೆಂದು ಎಂದು ಟ್ವೀಟ್​ ಮಾಡಿದ್ಧಾರೆ.

ಈಗಾಗಲೇ ಪ್ರಿಯಾಂಕಾ ರೆಡ್ಡಿ ಹತ್ಯೆ ಪ್ರಕರಣವನ್ನು ಸೈಬಾರಾಬಾದ್ ಪೊಲೀಸರು ಭೇದಿಸಿದ್ಧಾರೆ. ಈಕೆಯನ್ನು ಹತ್ಯೆ ಮಾಡುವ ಮುನ್ನ ದುಷ್ಕರ್ಮಿಗಳು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆಗೈದಿರುವುದು ತಿಳಿದು ಬಂದಿದೆ. ಈ ಪ್ರಕರಣ ಸಂಬಂಧ ಸೈಬಾರಾಬಾದ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಟ್ರಕ್ ಡ್ರೈವರ್​ಗಳಾದ ಮೊಹಮ್ಮದ್ ಪಾಶಾ, ನವೀನ್ ಹಾಗೂ ಕ್ಲೀನರ್​ಗಳಾದ ಕೇಶವುಲು ಮತ್ತು ಶಿವ ಎನ್ನಲಾಗಿದೆ.

ತೆಲಂಗಾಣದ ಶಾದ್​ನಗರದ ನಿವಾಸಿಯಾದ 26 ವರ್ಷದ ಪ್ರಿಯಾಂಕಾ ರೆಡ್ಡಿ ವೃತ್ತಿಯಲ್ಲಿ ಪಶು ವೈದ್ಯೆಯಾಗಿದ್ಧಾರೆ. ಬುಧವಾರ ರಾತ್ರಿ ತಮ್ಮ ಮನೆಯಿಂದ ಆಸ್ಪತ್ರೆಗೆ ಹೋಗವ ಮಧ್ಯೆ ಶಂಸಾಬಾದ್​ನಲ್ಲಿ ಈಕೆಯ ದ್ವಿಚಕ್ರ ವಾಹನ ಪಂಕ್ಚರ್ ಆಗಿದೆ. ಅಂದು ರಾತ್ರಿ ನಾಪತ್ತೆಯಾದವರು ಗುರುವಾರ ಹೆಣವಾಗಿ ಪತ್ತೆಯಾಗಿದ್ದಾರೆ. ಈಕೆಯ ದೇಹವನ್ನು ದುಷ್ಕರ್ಮಿಗಳು ಸುಟ್ಟಿದ್ದರು.

ಇದನ್ನೂ ಓದಿ: ಮೋದಿ ಸರ್ಕಾರ ಟೀಕಿಸಲು ಜನ ಹೆದರುತ್ತಿದ್ದಾರೆ; ಚರ್ಚೆಗೀಡಾಯ್ತು ಅಮಿತ್​​ ಶಾ ಮುಂದೆ ರಾಹುಲ್​​ ಬಜಾಜ್ ನೀಡಿದ ಹೇಳಿಕೆ

ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯವನ್ನು ಪರಿಶೀಲಿಸಿದಾಗ ಘಟನೆಯ ಸುಳಿವು ಸಿಕ್ಕಿದೆ. ಪೊಲೀಸರು ಹೇಳುವ ಪ್ರಕಾರ, ಪ್ರಿಯಾಂಕಾ ರೆಡ್ಡಿಯ ಸ್ಕೂಟರ್​ನ ಟಯರ್​ಗಳನ್ನು ಆರೋಪಿಗಳೇ ಪಂಕ್ಚರ್ ಮಾಡಿದ್ದಾರೆ. ಟಯರ್ ಪಂಕ್ಚರ್ ರಿಪೇರಿ ಮಾಡಲು ಸಹಾಯ ಮಾಡುವುದಾಗಿ ಹೇಳಿ ಆಕೆಯನ್ನು ಅಪಹರಿಸಿದ್ದಾರೆ. ನಂತರ ತೋಂಡುಪಳ್ಳಿ ಟೋಲ್ ಗೇಟ್ ಸಮೀಪದಲ್ಲಿರುವ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಟ್ರಕ್​ಗಳ ಮಧ್ಯೆ ಗ್ಯಾಂಗ್ ರೇಪ್ ಮಾಡಿ ಸಾಯಿಸಿದ್ದಾರೆ. ಬಳಿಕ, ಟ್ರಕ್​ನಲ್ಲಿ ಆಕೆಯ ದೇಹವನ್ನು ಸಾಗಿಸಿ ಚರಂಡಿಯೊಂದಕ್ಕೆ ಬಿಸಾಡಿ ಸುಟ್ಟುಹಾಕಿದ್ದಾರೆ. ಆ ನಂತರ ಒಬ್ಬ ಆರೋಪಿಯು ಈಕೆಯ ಸ್ಕೂಟರನ್ನು ತೆಗೆದುಕೊಂಡು ಹೊರವಲಯವೊಂದರ ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದಾನೆನ್ನಲಾಗಿದೆ.

ಈಕೆಯನ್ನು ಆರೋಪಿಗಳು ಹೊಡೆದು ಸಾಯಿಸಿದರಾ ಅಥವಾ ಕತ್ತುಹಿಸುಕಿ ಕೊಂದರಾ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿಲ್ಲ. ಈಗ ನಾಲ್ವರನ್ನು ಬಂಧಿಸಿರುವ ಪೊಲೀಸರು ಈ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿದ್ಧಾರೆ.
First published:December 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ