News18 India World Cup 2019

ಮೋದಿ ವಿರುದ್ಧ ಧಿಕ್ಕಾರ ಕೂಗಿದ್ದಕ್ಕೆ ಬಂಧನ; ತಮಿಳುನಾಡಿನ ವಿಮಾನ ನಿಲ್ದಾಣದಲ್ಲಿ ಮಹಿಳೆಯ ಹೈಡ್ರಾಮಾ

news18
Updated:September 4, 2018, 4:49 PM IST
ಮೋದಿ ವಿರುದ್ಧ ಧಿಕ್ಕಾರ ಕೂಗಿದ್ದಕ್ಕೆ ಬಂಧನ; ತಮಿಳುನಾಡಿನ ವಿಮಾನ ನಿಲ್ದಾಣದಲ್ಲಿ ಮಹಿಳೆಯ ಹೈಡ್ರಾಮಾ
news18
Updated: September 4, 2018, 4:49 PM IST
ನ್ಯೂಸ್​18 ಕನ್ನಡ

ಚೆನ್ನೈ (ಸೆ. 4): ತಮಿಳುನಾಡು ಬಿಜೆಪಿ ಅಧ್ಯಕ್ಷ ತಮಿಳ್ಸಾಯಿ ಸೌಂದರರಾಜನ್ ಜೊತೆ ಪ್ರಯಾಣಿಸುತ್ತಿದ್ದ ಮಹಿಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರಣಕ್ಕೆ ಆಕೆಯನ್ನು ವಶಕ್ಕೆ ಪಡೆದ ಘಟನೆ ನಿನ್ನೆ ತೂತಿಕೋರಿನ್​ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಸೌಂದರರಾಜನ್​ ಅವರ ಸಹಪ್ರಯಾಣಿಗರಾಗಿದ್ದ ಲೂಯಿಸ್​ ಸೋಫಿಯಾ ಎಂಬ ಮಹಿಳೆ ವಿಮಾನದಲ್ಲಿ ಮೋದಿ ಸರ್ಕಾರದ ವಿರುದ್ಧ 'ಫ್ಯಾಸಿಸ್ಟ್​ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ' ಎಂದು ಘೋಷಣೆ ಕೂಗಿದ ಕಾರಣ ಆಕೆಯನ್ನು ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಮಹಿಳೆ ಕೆನಡಾದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದು, ಭಾರತಕ್ಕೆ ವಾಪಸ್ಸಾಗುತ್ತಿದ್ದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ತಮಿಳ್ಸಾಯಿ ಸೌಂದರರಾಜನ್ ಕುಳಿತಿದ್ದ ಸೀಟಿನ ಬಳಿಯೇ ಕುಳಿತಿದ್ದ ಆಕೆ ಎದ್ದು ನಿಂತು ಕೇಂದ್ರ ಸರ್ಕಾರ ಫ್ಯಾಸಿಸ್ಟ್ ಸರ್ಕಾರ ಎಂದು ಘೋಷಣೆ ಕೂಗಲು ಪ್ರಾರಂಭಿಸಿದಳು. ಇದರಿಂದಾಗಿ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಯಿತು.

 ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದ ಕೂಡಲೆ ಹೊರಬಂದ ಸೌಂದರರಾಜನ್​ ಆ ಮಹಿಳೆಯ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಂಡ ಬಿಜೆಪಿ ಅಧ್ಯಕ್ಷ ಸೌಂದರರಾಜನ್​ ಪೊಲೀಸರಿಗೆ ದೂರು ನೀಡಿದ್ದು, ಆ ದೂರಿನ ಆಧಾರದಲ್ಲಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು. ಇಂದು ಆಕೆಗೆ ಜಾಮೀನು ಸಿಕ್ಕಿದೆ. ಲೂಯಿಸ್​ ಸೋಫಿಯಾ ಅವರ ಬಂಧನಕ್ಕೆ ತಮಿಳು ನಟ ಕಮಲ್​ ಹಾಸನ್​, ಕಾಂಗ್ರೆಸ್​ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...