2 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಕಾಶ್ಮೀರದ ಮಾಜಿ ಸಿಎಂ ಮಗಳು ಮತ್ತು ಸಹೋದರಿಯ ಬಿಡುಗಡೆ

ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಗೃಹ ಬಂಧನ ಮುಂದುವರೆದಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಮುಂಜಾಗ್ರತಾ ಕ್ರಮವಾಗಿ ಫಾರೂಕ್ ಅಬ್ದುಲ್ಲಾ ಅವರನ್ನು ಸುಮಾರು 3 ತಿಂಗಳಿನಿಂದ ಕೇಂದ್ರ ಸರ್ಕಾರ ಗೃಹ ಬಂಧನದಲ್ಲಿಟ್ಟಿದೆ.

Latha CG | news18-kannada
Updated:October 17, 2019, 10:27 AM IST
2 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಕಾಶ್ಮೀರದ ಮಾಜಿ ಸಿಎಂ ಮಗಳು ಮತ್ತು ಸಹೋದರಿಯ ಬಿಡುಗಡೆ
ಫಾರೂಕ್ ಅಬ್ದುಲ್ಲಾ ಅವರ ಸಹೋದರಿ
  • Share this:
ಶ್ರೀನಗರ(ಅ.17): ಕಳೆದ ಎರಡು ದಿನಗಳಿಂದ ಪೊಲೀಸ್​ ವಶದಲ್ಲಿದ್ದ ಜಮ್ಮು- ಕಾಶ್ಮೀರದ ಮಾಜಿ ಸಿಎಂ ಫಾರೂಕ್​ ಅಬ್ದುಲ್ಲಾ ಅವರ ಮಗಳು ಮತ್ತು ಸಹೋದರಿ ಸೇರಿ 13 ಜನರನ್ನು ಕಣಿವೆ ರಾಜ್ಯದ ಪೊಲೀಸರು ಕೆಲವು ನಿಬಂಧನೆಗಳ ಮೇಲೆ ಇಂದು ಬಿಡುಗಡೆ ಮಾಡಿದ್ದಾರೆ.

ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ, ಮಂಗಳವಾರ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಸಹೋದರಿ ಸುರೈಯಾ ಮತ್ತು ಮಗಳು ಸಫಿಯಾ ಅಬ್ದುಲ್ಲಾ ಸಹ ಪಾಲ್ಗೊಂಡಿದ್ದರು. ಹೀಗಾಗಿ ಇವರಿಬ್ಬರೂ ಸೇರಿದಂತೆ ಸುಮಾರು 13 ಮಹಿಳೆಯರನ್ನುಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು.

ಇದೀಗ ನ್ಯಾಯಾಂಗ ಬಂಧನದಲ್ಲಿದ್ದ ಎಲ್ಲಾ ಮಹಿಳೆಯರನ್ನು ವೈಯಕ್ತಿಕ ಬಾಂಡ್​ 10 ಸಾವಿರ ರೂ. ಹಾಗೂ ಸೆಕ್ಷನ್ 107ರ ಅಡಿಯಲ್ಲಿ ತಲಾ 40 ಸಾವಿರ ರೂ. ಜಾಮೀನು. ಜೊತೆಗೆ ಶಾಂತಿಯನ್ನು ಕಾಪಾಡಿಕೊಳ್ಳುತ್ತೇವೆ ಎಂಬ ಭರವಸೆಯೊಂದಿಗೆ ಬಿಡುಗಡೆ ಮಾಡಲಾಗಿದೆ.

ಕಾಶ್ಮೀರದಲ್ಲಿ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಮಗಳು ಮತ್ತು ಸಹೋದರಿ ಪೊಲೀಸ್ ವಶಕ್ಕೆ

ಬಿಡುಗಡೆಯ ನಂತರ ಮಾತನಾಡಿರುವ ಮಹಿಳೆಯರು  "ನಾವು ಜೈಲಿನಲ್ಲಿದ್ದ ಅಷ್ಟೂ ಸಮಯ ಆರಾಮಾಗಿದ್ದೆವು ಎಂದು ತಿಳಿಸಿದ್ದಾರೆ. ಆದರೆ ಬಿಡುಗಡೆ ಬಳಿಕ ಮಾಧ್ಯಮಗಳ ಎದುರು ಪ್ರತಿಕ್ರಿಯೆ ನೀಡಲು ಓಮರ್ ಅಬ್ದುಲ್ಲಾ ಅವರ ಮಗಳು ಸಫಿಯಾ ಅಬ್ದುಲ್ಲಾ ನಿರಾಕರಿಸಿದ್ದಾರೆ.

ಆದರೆ, ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಗೃಹ ಬಂಧನ ಮುಂದುವರೆದಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಮುಂಜಾಗ್ರತಾ ಕ್ರಮವಾಗಿ ಫಾರೂಕ್ ಅಬ್ದುಲ್ಲಾ ಅವರನ್ನು ಸುಮಾರು 3 ತಿಂಗಳಿನಿಂದ ಕೇಂದ್ರ ಸರ್ಕಾರ ಗೃಹ ಬಂಧನದಲ್ಲಿಟ್ಟಿದೆ. ಅವರ ಮಗ ಓಮರ್ ಅಬ್ದುಲ್ಲಾ ಅವರನ್ನು ಶ್ರೀನಗರದ ಹರಿ ನಿವಾಸದ ಅತಿಥಿ ಗೃಹದಲ್ಲಿ ಇರಿಸಲಾಗಿದೆ. ಪೀಪಲ್ಸ್​ ಡೆಮಾಕ್ರಟಿಕ್​ ಪಕ್ಷದ ಮುಖ್ಯಸ್ಥ ಮೆಹಬೂಬ ಮಫ್ತಿ ಅವರ ಗೃಹಬಂಧನ ಸಹ ಮುಂದುವರೆದಿದೆ.

First published:October 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading