ಕಾಶ್ಮೀರದಲ್ಲಿ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಮಗಳು ಮತ್ತು ಸಹೋದರಿ ಪೊಲೀಸ್ ವಶಕ್ಕೆ

ಕಾಶ್ಮೀರ ವಿಚಾರದಲ್ಲಿ ಕೇಂದ್ರ ತೆಗೆದುಕೊಂಡ ನಿರ್ಧಾರಕ್ಕೆ ನಾವು ಕಾಶ್ಮೀರಿ ಮಹಿಳೆಯರು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದು ಫಾರೂಕ್ ಅಬ್ದುಲ್ಲಾ ಮಗಳು ಮತ್ತು ಸಹೋದರಿ ನೇತೃತ್ವದಲ್ಲಿ ಮಹಿಳೆಯರ ಗುಂಪು ಪ್ರತಿಭಟಿಸಿತು.

news18
Updated:October 15, 2019, 2:51 PM IST
ಕಾಶ್ಮೀರದಲ್ಲಿ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಮಗಳು ಮತ್ತು ಸಹೋದರಿ ಪೊಲೀಸ್ ವಶಕ್ಕೆ
ಫಾರೂಕ್ ಅಬ್ದುಲ್ಲಾ ಅವರ ಸಹೋದರಿ
  • News18
  • Last Updated: October 15, 2019, 2:51 PM IST
  • Share this:
ಶ್ರೀನಗರ(ಅ. 15): ಜಮ್ಮು-ಕಾಶ್ಮೀರದ ವಿಶೇಷಾಧಿಕಾರ ಕಿತ್ತು ಇಬ್ಭಾಗ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಇಂದು ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು. ಈ ವೇಳೆ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಸಹೋದರಿ ಸುರೈಯಾ ಮತ್ತು ಮಗಳು ಸಫಿಯಾ ಸೇರಿದಂತೆ ಐದಾರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು.

ಕೈಯಲ್ಲಿ ಕಪ್ಪು ಬಣ್ಣದ ಬಟ್ಟೆ ಮತ್ತು ಕೈಯಲ್ಲಿ ಫಲಕವನ್ನಿಡಿದು ಮಹಿಳೆಯರ ಗುಂಪು ಪ್ರತಿಭಟನೆ ನಡೆಸಿತು. ಪ್ರತಿಭಟನೆ ಕೈಬಿಟ್ಟು ವಾಪಸ್ ಹೋಗುವಂತೆ ಪೊಲೀಸರು ಸೂಚಿಸಿದರು. ಆದರೆ, ಮಹಿಳೆಯರು ತಮ್ಮ ಪ್ರತಿಭಟನೆ ಮುಂದುವರಿಸಿದರು. ಆಗ ಸಿಆರ್​ಪಿಎಫ್​ನ ಮಹಿಳಾ ಸಿಬ್ಬಂದಿಯು ಪ್ರತಿಭಟನೆಯ ಮುಂದಾಳತ್ವ ವಹಿಸಿದವರನ್ನು ವಶಕ್ಕೆ ಪಡೆದುಕೊಂಡು ಜೈಲಿಗೆ ಕರೆದೊಯ್ದರು.

ಇದನ್ನೂ ಓದಿ: ಸಮಾಜವನ್ನು ವಿಭಜಿಸಲು ಯತ್ನಿಸುತ್ತಿರುವ ಆರ್​ಎಸ್​ಎಸ್​ ಸಂಘಟನೆಯನ್ನು ನಿಷೇಧಿಸಬೇಕು; ಸಿಖ್ ಪ್ರಧಾನ ಅರ್ಚಕ ಒತ್ತಾಯ

ಪ್ರತಿಭಟನಾಕಾರರು ಸಿದ್ಧಪಡಿಸಿದ್ದ ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡುವುದನ್ನು ತಡೆಯಲು ಪೊಲೀಸರು ಮಾಡಿದ ಪ್ರಯತ್ನ ವಿಫಲವಾಯಿತು. ಪ್ರತಿಭಟನಾಕಾರರು ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಕಾಶ್ಮೀರದಲ್ಲಿ ಮಹಿಳೆಯರಿಗೆ ಅವಮಾನವಾಗಿದೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಶ್ಮೀರೀ ಮಹಿಳೆಯರಾಗಿ ತಾವು ವಿರೋಧಿಸುತ್ತೇವೆ ಎಂದವರು ತಿಳಿಸಿದ್ದಾರೆ.

“35ಎ ಮತ್ತು 370ನೇ ವಿಧಿಯನ್ನು ಹಿಂಪಡೆದದ್ದು ಮತ್ತು ಜಮ್ಮು-ಕಾಶ್ಮೀರವನ್ನು ಇಬ್ಭಾಗ ಮಾಡಿದ್ದು ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವಾಗಿದೆ. ನಾವು ಕಾಶ್ಮೀರಿ ಮಹಿಳೆಯರು ಇದಕ್ಕೆ ಅಸಮ್ಮತಿಸುತ್ತೇವೆ… ಇಲ್ಲಿಯ ನಾಗರಿಕರ ಮೂಲಭೂತ ಹಕ್ಕುಗಳನ್ನ ಮರುಸ್ಥಾಪಿಸಬೇಕು. ಇಲ್ಲಿನ ಮಹಿಳೆಯರಿಗೆ ಒಬ್ಬ ಸಾಮಾನ್ಯ ಪ್ರಜೆಯಾಗಿ ಮೋಸ ಮತ್ತು ಅವಮಾನವಾಗಿದೆ” ಎಂದು ಪ್ರತಿಭಟನಾಕಾರರ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಜೆಎನ್​ಯು-ಪ್ರೆಸಿಡೆನ್ಸಿಗಳಲ್ಲಿ ಕನ್ಹಯ್ಯ ಕುಮಾರ್​ ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಆದರ್ಶವಾಗಿದ್ದ ಅಭಿಜಿತ್​ ಸಾಧನೆಯ ಹಾದಿ

ರಾಷ್ಟ್ರೀಯ ಮಾಧ್ಯಮಗಳು ಕೂಡ ಕಾಶ್ಮೀರದ ವಸ್ತು ಸ್ಥಿತಿಗೆ ತದ್ವಿರುದ್ಧವಾಗಿ ಸುಳ್ಳು ವರದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿರುವ ಇವರು, ಕಾಶ್ಮೀರದಲ್ಲಿ ಬಂಧಿತರಾದವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಈ ಭಾಗವನ್ನು ಮಿಲಿಟಿಮುಕ್ತ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಆಗಸ್ಟ್ ತಿಂಗಳಲ್ಲಿ ಸರ್ಕಾರ ಕಾಶ್ಮೀರ ಕಾರ್ಯಾಚರಣೆ ಘೋಷಿಸಿದಾಗಿನಿಂದಲೂ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಹಲವು ರಾಜಕೀಯ ನೇತಾರರು, ಪ್ರತ್ಯೇಕತಾವಾದಿ ಹೋರಾಟಗಾರರನ್ನು ಬಂಧನದಲ್ಲಿಡಲಾಗಿದೆ. 83 ವರ್ಷದ ಫಾರೂಕ್ ಅಬ್ದುಲ್ಲಾ ವರನ್ನು ಸಾರ್ವಜನಿಕ ಸುರಕ್ಷತೆ ಕಾಯ್ದೆ (ಪಿಎಸ್​ಎ) ಅಡಿ ಬಂಧನಕ್ಕೊಳಪಡಿಸಲಾಗಿದೆ. ಈ ಕಾಯ್ದೆ ಅಡಿ ಕ್ರಮ ಕೈಗೊಂಡರೆ 6 ತಿಂಗಳವರೆಗೂ ವಿಚಾರಣೆ  ನಡೆಸುವ ಅಗತ್ಯವಿರುವುದಿಲ್ಲ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading