ಶ್ರೀನಗರ: ಕಾಂಗ್ರೆಸ್ (Congress) ಪಕ್ಷದ ಭಾರತ್ ಭಾರತ್ ಜೋಡೋ ಯಾತ್ರೆಯು (Bharat Jodo Yatra) ಜಮ್ಮು ಮತ್ತು ಕಾಶ್ಮೀರ (Union Territory Jammu and Kashmir) ಕೇಂದ್ರಾಡಳಿತ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಖ್ ಅಬ್ದುಲ್ಲಾ (National Conference leader Farooq Abdullah) ಅವರು ರಾಹುಲ್ ಗಾಂಧಿ ಅವರನ್ನು ವೇದ ವಿದ್ವಾಂಸರಾದ ಆದಿ ಶಂಕರಾಚಾರ್ಯರಿಗೆ (Adi Shankaracharya) ಹೋಲಿಸಿದ್ದಾರೆ. ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರನ್ನು ಮೊದಲು ಭಗವಾನ್ ರಾಮನಿಗೆ (Lord Rama) ಹೋಲಿಸಲಾಗಿತ್ತು. ಇದೀಗ ಶಂಕರಾಚಾರ್ಯರೊಂದಿಗೆ (Shankaracharya) ಹೋಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಲಖನ್ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಫಾರೂಖ್ ಅಬ್ದುಲ್ಲಾ ಅವರು, ಶಂಕರಾಚಾರ್ಯರ ನಂತರ ಕನ್ಯಾಕುಮಾರಿಯಿಂದ (Kanya Kumari) ಕಾಶ್ಮೀರದವರೆಗೆ ಯಾತ್ರೆ ಕೈಗೊಂಡ ಮೊದಲ ವ್ಯಕ್ತಿ ರಾಹುಲ್ ಗಾಂಧಿ (Rahul Gandhi) ಎಂದು ಹಾಡಿ ಹೊಗಳಿದ್ದಾರೆ.
ಅನೇಕ ಶತಮಾನಗಳ ಹಿಂದೆ ಕಾಶ್ಮೀರಕ್ಕೆ ಬಂದಿದ್ದ ಶಂಕರಾಚಾರ್ಯರು
ಅನೇಕ ಶತಮಾನಗಳ ಹಿಂದೆ ಶಂಕರಾಚಾರ್ಯರು ಇಲ್ಲಿಗೆ ಬಂದಿದ್ದರು. ರಸ್ತೆಗಳಿಲ್ಲದಿದ್ದರೂ ದಟ್ಟ ಕಾಡಿನಲ್ಲಿಯೇ ಅವರು ನಡೆದು ಬಂದಿದ್ದರು. ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದುಕೊಂಡು ಬಂದಿದ್ದರು. ಅದೇ ಕನ್ಯಾಕುಮಾರಿಯಿಂದ ಯಾತ್ರೆ ಕೈಗೊಂಡು ಕಾಶ್ಮೀರ ತಲುಪುತ್ತಿರುವ ಎರಡನೇ ವ್ಯಕ್ತಿ ರಾಹುಲ್ ಗಾಂಧಿ ಎಂದಿದ್ದಾರೆ.
ಭಾರತ್ ಜೋಡೋ ಯಾತ್ರೆ ಮೂಲಕ ಭಾರತ ಒಗ್ಗೂಡಿಸುವ ಪ್ರಯತ್ನ
ಭಾರತವನ್ನು ಒಗ್ಗೂಡಿಸುವುದು ಈ ಯಾತ್ರೆಯ ಗುರಿಯಾಗಿದೆ ಎಂದು ಅಷ್ಟಮಠಾಧೀಶರು ಹೇಳಿದರು. ಭಾರತವನ್ನು ಒಗ್ಗೂಡಿಸುವುದು ಈ ಯಾತ್ರೆಯ ಗುರಿಯಾಗಿದೆ. ಭಾರತದಲ್ಲಿ ದ್ವೇಷವನ್ನು ಸೃಷ್ಟಿಸಲಾಗುತ್ತಿದೆ ಮತ್ತು ಧರ್ಮಗಳನ್ನು ಪರಸ್ಪರ ಎತ್ತಿಕಟ್ಟಲಾಗುತ್ತಿದೆ. ನಾವೆಲ್ಲರೂ ಒಂದಾಗಿದ್ದ ಗಾಂಧಿ ಮತ್ತು ರಾಮರ ಭಾರತ ಒಂದಾಗಿತ್ತು. ಈ ಯಾತ್ರೆಯ ಮೂಲಕ ಭಾರತವನ್ನು ಒಂದುಗೂಡಿಸುವ ಪ್ರಯತ್ನಿಸಲಾಗುತ್ತಿದೆ. ಆದರೆ ವಿರೋಧಿಗಳು ದೇಶ, ಮಾನವೀಯತೆ ಮತ್ತು ಜನರ ವಿರೋಧಿಗಳಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹಿಂದೂ ಧರ್ಮವನ್ನು ಏಕೀಕರಿಸುವಲ್ಲಿ ಶಂಕರಾಚಾರ್ಯರ ಕೊಡುಗೆ ಅಪಾರ
ಆದಿ ಶಂಕರಾಚಾರ್ಯರು ಎಂಟನೇ ಶತಮಾನದ ಭಾರತೀಯ ಅತೀಂದ್ರಿಯ ಮತ್ತು ದಾರ್ಶನಿಕರಾಗಿದ್ದರು, ಅವರು ಅದ್ವೈತ ವೇದಾಂತದ ಸಿದ್ಧಾಂತವನ್ನು ಪ್ರತಿಪಾದಿಸಿದರು ಮತ್ತು ಭಾರತದಾದ್ಯಂತ ನಾಲ್ಕು "ಮಠಗಳನ್ನು" ಸ್ಥಾಪಿಸುವ ಮೂಲಕ ಹಿಂದೂ ಧರ್ಮವನ್ನು ಏಕೀಕರಿಸುವಲ್ಲಿ ಮಹತ್ವದ ಕೊಡುಗೆ ನೀಡಿದರು ಎಂದು ತಿಳಿಸಿದ್ದಾರೆ.
ಈ ಹಿಂದೆ ರಾಹುಲ್ ಗಾಂಧಿ ಅವರನ್ನು ರಾಮನಿಗೆ ಹೋಲಿಸಿದ್ದ ಸಲ್ಮಾನ್ ಖುರ್ಷಿದ್
ಈ ಹಿಂದೆ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರು, ಭಾರತ್ ಜೋಡೋ ಪಾದಯಾತ್ರೆಯನ್ನು ರಾಮಾಯಣ ಮಹಾಕಾವ್ಯಕ್ಕೆ, ರಾಹುಲ್ ಗಾಂಧಿ ಅವರನ್ನು ಶ್ರೀರಾಮನಿಗೆ ಮತ್ತು ಕಾಂಗ್ರೆಸ್ ಅನ್ನು ಭಾರತಕ್ಕೆ ಹೋಲಿಸಿದ್ದರು.
ಎಲ್ಲರ ಮಧ್ಯೆ ರಾಹುಲ್ ತಪಸ್ಸು ಮಾಡುತ್ತಿರೋ ಯೋಗಿಯಂತೆ ಕಾಣಿಸ್ತಾರೆ
ರಾಹುಲ್ ಗಾಂಧಿ ಅತಿಮಾನುಷ ವ್ಯಕ್ತಿ, ನಾವು ಚಳಿಯಿದೆ ಎಂದು ಜಾಕೆಟ್ ಧರಿಸುತ್ತಿದರೆ, ಅವರು ಕೇವಲ ಟೀ-ಶರ್ಟ್ ಧರಿಸಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಅವರು ಎಲ್ಲರ ಮಧ್ಯೆ ತಪಸ್ಸು ಮಾಡುತ್ತಿರುವ ಯೋಗಿಯಂತೆ ಕಾಣಿಸುತ್ತಿದ್ದಾರೆ. ಭಗವಾನ್ ರಾಮನ ಪಾದುಕೆ ಬಹಳ ದೂರದವರೆಗೂ ಸಾಗುತ್ತದೆ.
ಕೆಲವೊಮ್ಮೆ ಶ್ರೀರಾಮ ತಲುಪಲು ಸಾಧ್ಯವಾಗದ ಕಡೆ ಆತನ ಸಹೋದರ ಭರತ್ ಪಾದುಕೆಯನ್ನು ತೆಗೆದುಕೊಂಡು ಹೋಗುತ್ತಾನೆ. ಅದರಂತೆ ನಾವು ಸಹ ಉತ್ತರ ಪ್ರದೇಶಕ್ಕೆ ಪಾದುಕೆಯನ್ನು ಹೊತ್ತೊಯ್ಯುತ್ತಿದ್ದೇವೆ. ಈಗ ಪಾದುಕೆ ಉತ್ತರ ಪ್ರದೇಶವನ್ನು ತಲುಪಿದೆ. ರಾಮ್ ಜಿ(ರಾಹುಲ್ ಗಾಂಧಿ) ಕೂಡ ಬರುತ್ತಾರೆ, ಇದು ನಮ್ಮ ನಂಬಿಕೆ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ