News18 India World Cup 2019

‘ಭೋಲೋ ಭಾರತ್​ ಮಾತಾಕೀ ಜೈ’ ಅಂದಿದ್ದಕ್ಕೆ ಜಮ್ಮು-ಕಾಶ್ಮೀರ ಮಾಜಿ ಸಿಎಂ ವಿರುದ್ಧ ಪ್ರತಿಭಟನೆ


Updated:August 22, 2018, 2:56 PM IST
‘ಭೋಲೋ ಭಾರತ್​ ಮಾತಾಕೀ ಜೈ’ ಅಂದಿದ್ದಕ್ಕೆ ಜಮ್ಮು-ಕಾಶ್ಮೀರ ಮಾಜಿ ಸಿಎಂ ವಿರುದ್ಧ ಪ್ರತಿಭಟನೆ

Updated: August 22, 2018, 2:56 PM IST
ನ್ಯೂಸ್​-18 ಕನ್ನಡ

ಶ್ರೀನಗರ(ಆಗಸ್ಟ್​.22): ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಅವರು, ಕಾರ್ಯಕ್ರಮವೊಂದರಲ್ಲಿ ‘ಭೋಲೋ ಭಾರತ್​ ಮಾತಾಕಿ ಜೈ’ ಎಂದು ಘೋಷಣೆ ಕೂಗಿದ್ದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಕೆಲವು ಸಂಘಟನೆಗಳು ಶ್ರೀನಗರದಲ್ಲಿ ಬೀದಿಗಳಿದು ಚಪ್ಪಲಿ ತೋರಿಸುವ ಮೂಲಕ ಪ್ರತಿಭಟನೆ ನಡೆಸುತ್ತಿದ್ಧಾರೆ. ಅಲ್ಲದೇ ಫಾರೂಕ್​ ಅವರನ್ನು ಕಾಶ್ಮೀರದಿಂದ ಹೊರಹಾಕಲು ಒತ್ತಾಯಿಸುತ್ತಿದ್ಧಾರೆ.

ಪ್ರತಿಭಟನೆಯಿಂದ ಕಾಶ್ಮೀರದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಪೊಲೀಸರು ಪ್ರತಿಭಟನಕಾರರನ್ನು ತಡೆಯುವಲ್ಲಿ ವಿಫಲರಾಗಿದ್ಧಾರೆ. ಅಲ್ಲದೇ ಸಂಘಟನಕಾರರು ಮಾಜಿ ಸಿಎಂ ವಿರುದ್ಧ ಘೋಷಣೆ ಕೂಗುವ ಮೂಲಕ ಕಲ್ಲು ಎಸೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ಧಾರೆ.

ಈ ಹಿಂದೆ ಫಾರೂಕ್​ ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಕೆಲವು ಸಂಘಟಕರು ಬೀದಿಗಿಳಿದಿದ್ದರು.

ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ ಸ್ವತ್ತು. ಅದು ಇಸ್ಲಾಮಾಬಾದ್ ಗೆ ಸಂಬಂಧಿಸಿದ್ದು ಎಂದು ಫಾರೂಕ್ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲ, ಜಮ್ಮು ಕಾಶ್ಮೀರ ರಾಜ್ಯವನ್ನು ಕೇಂದ್ರ ಸರ್ಕಾರ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಹಾಗೂ ಸರಿಯಾದ ಸೌಲಭ್ಯ ನೀಡುತ್ತಿಲ್ಲ ಎಂದು ಹೇಳುವ ಮೂಲಕ ಫಾರೂಕ್ ವಿವಾದ ಸೃಷ್ಟಿಸಿದ್ದರು.
Loading...

1994ರಲ್ಲಿ ಸಂಸತ್ತು ಅಂಗೀಕರಿಸಿದ ಮಸೂದೆ ಪ್ರಕಾರ, ಜಮ್ಮು-ಕಾಶ್ಮೀರ ಸಂಪೂರ್ಣ ಭಾರತಕ್ಕೆ ಸಂಬಂಧಿಸಿದ್ದು ಎಂದು ಉಲ್ಲೇಖವಿದೆ. ಅಲ್ಲದೆ, ಫಾರೂಕ್ ಹೇಳಿಕೆ ದೇಶದ್ರೋಹ ಮಾತ್ರವಲ್ಲ, ಭಾರತದ ವೈವಿಧ್ಯತೆಯನ್ನೇ ಪ್ರಶ್ನಿಸಿದಂತೆ ಎಂದು ಸಂಘಕರು ಹೋರಾಟ ನಡೆಸಿದ್ದರು.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...