Farmers Protest: ರೈತ ಹೋರಾಟಗಾರರಿಂದ ಇಂದು ಹರಿಯಾಣದಲ್ಲಿ ಬೃಹತ್ ಟ್ರ್ಯಾಕ್ಟರ್​ ರ‍್ಯಾಲಿ; ಪೊಲೀಸರಿಂದ ಮುಂಜಾಗ್ರತಾ ಕ್ರಮ

ಹರಿಯಾಣದ ಇತರ ಭಾಗಗಳಲ್ಲೂ ರೈತರು ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಲು ಇಂದು (ಗುರುವಾರ) ಟ್ರಾಕ್ಟರ್ ಮೆರವಣಿಗೆ ನಡೆಸಲಿದ್ದಾರೆ. ರೈತರ ಟ್ರ್ಯಾಕ್ಟರ್​ ಮೆರವಣಿಗೆಯಿಂದಾಗಿ ಕುಂಡ್ಲಿ ಗಡಿಯಿಂದ ಟಿಕ್ರಿ ಗಡಿಯವರೆಗೆ ಸುಮಾರು ನಾಲ್ಕು ಗಂಟೆಗಳ ಕಾಲ ಸಾಮಾನ್ಯ ಸಂಚಾರದ ಮೇಲೆ ಪರಿಣಾಮ ಬೀರಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರೈತ ಮೆರವಣಿಗೆಗೆ ಸಿದ್ದವಾಗಿರುವ ಟ್ರ್ಯಾಕ್ಟರ್​ಗಳು.

ರೈತ ಮೆರವಣಿಗೆಗೆ ಸಿದ್ದವಾಗಿರುವ ಟ್ರ್ಯಾಕ್ಟರ್​ಗಳು.

 • Share this:
  ಹರಿಯಾಣ (ಜನವರಿ 07); ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದಾದ್ಯಂತ ರೈತ ಸಮುದಾಯ ಬೀದಿಗೆ ಇಳಿದು ಹೋರಾಟ ನಡೆಸುತ್ತಿದೆ. ಇಡೀ ದೇಶದ ರೈತರ ಹೋರಾಟ ಒಂದು ತೂಕವಾದರೆ, ಹರಿಯಾಣ ಮತ್ತು ಪಂಜಾಬ್​ ರೈತರ ಹೋರಾಟ ಮತ್ತೊಂದು ತೂಕವಾಗಿದೆ. ಈ ನಡುವೆ ಇಂದು ಹರಿಯಾಣದ ಕುಂಡ್ಲಿ-ಮನೇಸರ್-ಪಾಲ್ವಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲು ರೈತರು ಅನುಮತಿ ಕೋರಿದ್ದಾರೆ. ಹರಿಯಾಣ ಪೊಲೀಸರು ಸಹ ಅನುಮತಿ ನೀಡಿದ್ದು, ಇಂದು ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ರೈತರ ಟ್ರ್ಯಾಕ್ಟರ್​ ಮೆರವಣಿಗೆ ನಡೆಯಲಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಈ ಮೆರವಣಿಗೆಯಲ್ಲಿ ಸುಮಾರು 2,500 ಟ್ರ್ಯಾಕ್ಟರುಗಳು ರಸ್ತೆಗೆ ಇಳಿಯಲಿವೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಹರಿಯಾಣ ಡಿಜಿಪಿ ಮನೋಜ್​ ಯಾದವ್, "ತಾತ್ವಿಕವಾಗಿ ಕೆಎಂಪಿ ಎಕ್ಸ್‌ಪ್ರೆಸ್‌ವೇಯಲ್ಲಿ ಗುರುವಾರ ಟ್ರಾಕ್ಟರ್ ಮೆರವಣಿಗೆ ನಡೆಸಲು ರೈತರಿಗೆ ಅನುಮತಿ ನೀಡಲು ನಾವು ನಿರ್ಧರಿಸಿದ್ದೇವೆ" ಎಂದು ಎಂದು ತಿಳಿಸಿದ್ದಾರೆ.

  ಹರಿಯಾಣದ ಇತರ ಭಾಗಗಳಲ್ಲೂ ರೈತರು ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಲು ಇಂದು (ಗುರುವಾರ) ಟ್ರಾಕ್ಟರ್ ಮೆರವಣಿಗೆ ನಡೆಸಲಿದ್ದಾರೆ. ರೈತರ ಟ್ರ್ಯಾಕ್ಟರ್​ ಮೆರವಣಿಗೆಯಿಂದಾಗಿ ಕುಂಡ್ಲಿ ಗಡಿಯಿಂದ ಟಿಕ್ರಿ ಗಡಿಯವರೆಗೆ ಸುಮಾರು ನಾಲ್ಕು ಗಂಟೆಗಳ ಕಾಲ ಸಾಮಾನ್ಯ ಸಂಚಾರದ ಮೇಲೆ ಪರಿಣಾಮ ಬೀರಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  ಆದರೆ, "ನಾವು ರೈತ ಮೆರವಣಿಗೆಯನ್ನು ಸುರಕ್ಷಿತವಾಗಿ ನಡೆಯುವಂತೆ ಮತ್ತು ಜನರಿಗೆ ಹೆಚ್ಚಿನ ಅನಾನುಕೂಲತೆಯನ್ನುಂಟುಮಾಡದೆ ನಡೆಯುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇವೆ" ಎಂದು ಹರಿಯಾಣ ಡಿಜಿಪಿ ಮನೋಜ್​ ಯಾದವ್ ತಿಳಿಸಿದ್ದಾರೆ.

  ಅಂಬಾಲಾ-ದೆಹಲಿ ಹೆದ್ದಾರಿಯಲ್ಲಿ (ಎನ್‌ಎಚ್ -44) ಭಾರಿ ವಾಹನಗಳ ಚಲನೆಯನ್ನು ಕರ್ನಾಲ್ ಮತ್ತು ಪಾಣಿಪತ್‌ನಿಂದ ಸಂಚಾರವನ್ನು ಬದಲಿಸಲಾಗುವುದು. ಸಣ್ಣ ವಾಹನಗಳನ್ನು ಸೋನಿಪತ್‌, ಗನೌರ್, ಮುರ್ತಾಲ್ ಮತ್ತು ಬಾಲ್​ಗರ್​ನಿಂದ ತಿರುಗಿಸಲಾಗುವುದು ಎಂದು ಸೋನಿಪತ್ ಪೊಲೀಸ್​ ವರಿಷ್ಠಾಧಿಕಾರಿ ಜಶಂದೀಪ್ ಸಿಂಗ್ ರಾಂಧಾವಾ ತಿಳಿಸಿದ್ದಾರೆ.

  ಇದನ್ನೂ ಓದಿ: Mob at US Capitol: ಟ್ರಂಪ್​ ಬೆಂಬಲಿಗರಿಂದ ಸಂಸತ್​ ದಾಳಿ; ಘಟನೆಗೆ ಖಂಡನೆ, ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಮೋದಿ ಒತ್ತಾಯ

  ಇನ್ನೂ ರೈತರ ಮೆರವಣಿಗೆ ನಡೆಯಲಿರುವ ಪಾಲ್ವಾಲ್​ನಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದನ್ನು ನಿಭಾಯಿಸಲು ಹರಿಯಾಣ ಪೊಲೀಸ್ ಸಿಬ್ಬಂದಿಯನ್ನು ಸಿದ್ದಗೊಳಿಸಲಾಗಿದೆ. ನೀರಿನ ಫಿರಂಗಿಗಳು ಮತ್ತು ಇತರ ಸಲಕರಣೆಗಳೊಂದಿಗೆ ನಿಯೋಜಿಸುವುದರ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಪೊಲೀಸ್​ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

  ಇದಲ್ಲದೆ, ಇಂದು ಹರಿಯಾಣ ಪೊಲೀಸರು ರೈತರ ಟ್ರ್ಯಾಕ್ಟರ್ ಮೆರವಣಿಗೆಗೆ ಅನುಮತಿ ನೀಡಿದ್ದಾರೆ. ಆದರೆ, ದೆಹಲಿಯ ಸಿಂಘು ಗಡಿಯಲ್ಲಿರುವ ರೈತರು ಜನವರಿ 26 ರಂದು ಗಣರಾಜ್ಯೋತ್ಸವ ಮೆರವಣಿಗೆ ಬದಲಿಗೆ ತಾವು ಪರ್ಯಾಯ ಟ್ರ್ಯಾಕ್ಟರ್​ ಮೆರವಣಿಗೆಯನ್ನು ದೆಹಲಿಯ ನಗರದಲ್ಲಿ ನಡೆಸುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಈ ಮೆರವಣಿಗೆ ನಡೆದದ್ದೇ ಆದರೆ, ದೆಹಲಿ ಮತ್ತೊಂದು ದೊಡ್ಡ ಗಲಭೆಗೆ ಸಾಕ್ಷಿಯಾಗಲಿರುವುದು ನಿಶ್ಚಿತ ಎನ್ನಲಾಗುತ್ತಿದೆ. ಈ ನಡುವೆ ರೈತರ ಮತ್ತು ಸರ್ಕಾರದ ನಡುವಿನ ಮಾತುಕತೆ ಮತ್ತೆ ವಿಫಲವಾಗಿರುವುದು ಸಹ ಆತಂಕಕ್ಕೆ ಕಾರಣವಾಗಿದೆ.
  Published by:MAshok Kumar
  First published: