HOME » NEWS » National-international » FARMERS TO OBSERVE JUNE 5 AS SAMPOORNA KRANTI DIVAS MAK

Farmers Protest: ಕೃಷಿ ಕಾನೂನಿಗೆ ವರ್ಷ: ಜೂನ್​.5 ರಂದು ಕ್ರಾಂತಿ ದಿವಸ ಆಚರಣೆ, ಬಿಜೆಪಿ ನಾಯಕರ ಮನೆ ಎದುರು ಪ್ರತಿಭಟನೆಗೆ ಕರೆ

ಜೂನ್ 5 ರಂದು ಕೃಷಿ ಕಾನೂನುಗಳನ್ನು ವಿರೋಧಿಸಿ ಬಿಜೆಪಿ ಸಂಸದರು ಮತ್ತು ಶಾಸಕರ ಕಚೇರಿಗಳ ಮುಂದೆ ಕೃಷಿ ಕಾನೂನುಗಳ ಪ್ರತಿಗಳನ್ನು ಸುಟ್ಟು ಸಂಪೂರ್ಣ ಕ್ರಾಂತಿ ದಿನವನ್ನಾಗಿ ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ.

news18-kannada
Updated:May 30, 2021, 4:37 PM IST
Farmers Protest: ಕೃಷಿ ಕಾನೂನಿಗೆ ವರ್ಷ: ಜೂನ್​.5 ರಂದು ಕ್ರಾಂತಿ ದಿವಸ ಆಚರಣೆ, ಬಿಜೆಪಿ ನಾಯಕರ ಮನೆ ಎದುರು ಪ್ರತಿಭಟನೆಗೆ ಕರೆ
ರೈತರ ಪ್ರತಿಭಟನೆ.
  • Share this:
ರೈತರ ಪ್ರತಿಭಟನೆ-ಹೋರಾಟದ ನಡುವೆಯೂ ಕೇಂದ್ರ ಸರ್ಕಾರ ಕಳೆದ ವರ್ಷ ನೂತನ ಕೃಷಿ ಕಾಯ್ದೆಯನ್ನು ಸಂಸತ್​ನಲ್ಲಿ ಮಂಡಿಸಿತ್ತು. ಕೊರೋನಾ ಸಾಂಕ್ರಾಮಿಕ ರೋಗವನ್ನೂ ಲೆಕ್ಕಿಸದೆ, ಕಳೆದ ವರ್ಷ ಸಾಂಕ್ರಾಮಿಕದ ಕಾರಣಕ್ಕಾಗಿ ಹೇರಲಾದ ಲಾಕ್‌ಡೌನ್‌ ಸಮಯದ ಪರಿಸ್ಥಿತಿಯ ಲಾಭ ಪಡೆದ ಕೇಂದ್ರ ಸರ್ಕಾರ, ಜೂನ್ 5ರಂದು ಸುಗ್ರೀವಾಜ್ಞೆಗಳ ಮೂಲಕ ಹೊಸ ಕೃಷಿ ಕಾನೂನುಗಳನ್ನು ಜಾರಿ ಮಾಡಿತ್ತು. ಅದಕ್ಕೆ ಒಂದು ವರ್ಷ ತುಂಬುತ್ತಿದ್ದು, ಇದೇ ಜೂನ್ 5 ರಂದು ಕೃಷಿ ಕಾನೂನುಗಳನ್ನು ವಿರೋಧಿಸಿ ಬಿಜೆಪಿ ಸಂಸದರು ಮತ್ತು ಶಾಸಕರ ಕಚೇರಿಗಳ ಮುಂದೆ ಕೃಷಿ ಕಾನೂನುಗಳ ಪ್ರತಿಗಳನ್ನು ಸುಟ್ಟು 'ಸಂಪೂರ್ಣ ಕ್ರಾಂತಿ ದಿನ'ವನ್ನಾಗಿ ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ.

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳು ರೈತರನ್ನು ಶೋಷಿಸಲಿವೆ. ಅಲ್ಲದೆ, ಈ ಮೂಲಕ ಖಾಸಗಿ ಕಂಪೆನಿಗಳು ಲಾಭ ಮಾಡಿಕೊಳ್ಳಲಿವೆ ಎಂಬುದು ರೈತರ ಆರೋಪ. ಇದೇ ಕಾರಣಕ್ಕೆ ರೈತರು ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ, ಹರಿಯಾಣ, ಪಂಜಾಬ್ ರೈತರು ಸತತ ಒಂದು 6 ತಿಂಗಳಿನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಈ ಕಾಯ್ದೆಗಳನ್ನು ಕೂಡಲೆ ಹಿಂಪಡೆದು, ರೈತರಿಗೆ ಕನಿಷ್ಟ ಬೆಂಬಲ ಬೆಲೆ ಖಾತರಿ ನೀಡಿ ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ಸರ್ಕಾರ ಈವರೆಗೆ ರೈತರ ಕೋರಿಕೆಗೆ ಕಿವಿಗೊಡುತ್ತಿಲ್ಲ. ಇದೇ ಕಾರಣಕ್ಕೆ ರೈತ ಮುಖಂಡರು ಜೂನ್ 5 ಅನ್ನು ಕ್ರಾಂತಿ ದಿವಸವನ್ನಾಗಿ ಆಚರಿಸಲು ಮುಂದಾಗಿದೆ.

1974 ರಲ್ಲಿ ಜಯಪ್ರಕಾಶ್ ನಾರಾಯಣ್ ಅವರು 'ಸಂಪೂರ್ಣ ಕ್ರಾಂತಿ’ ಎಂದು ಘೋಷಿಸಿ ಅಂದಿನ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಆಂದೋಲನವನ್ನು ಪ್ರಾರಂಭಿಸಿದ್ದರು. ಅದೇ ನೆನಪಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹೊಸ ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದೆ. 1974ರ ಜೂನ್ 5ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜಯಪ್ರಕಾಶ್ ನಾರಾಯಣ್ ಅವರು ಬಿಹಾರದ ಜನರಿಗೆಸಂಪೂರ್ಣ ಕ್ರಾಂತಿ ದಿವಸ್’ ಎಂದು ಆಚರಿಸಿಲು ಕರೆ ನೀಡಿದ್ದರು. ಹೊಸ ಸಾಮಾಜಿಕ ವ್ಯವಸ್ಥೆ ರೂಪಿಸಲು ಪ್ರತಿ ಹಳ್ಳಿಯಲ್ಲೂ `ಜನತಾ ಸರ್ಕಾರ್’ ರಚಿಸಿದ್ದರು.

ಇದನ್ನೂ ಓದಿ: Covid Vaccine: ಖಾಸಗಿ ಆಸ್ಪತ್ರೆಗಳು ಹಾಗೂ ಹೋಟೆಲ್​ಗಳು ಒಂದಾಗಿ ಲಸಿಕೆ ಪ್ಯಾಕೇಜ್ ನೀಡುವಂತಿಲ್ಲ; ಕೇಂದ್ರ ಸರ್ಕಾರ

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಯುಕ್ತ ಕಿಸಾನ್ ಮೋರ್ಚಾ, ‘ಜೂನ್ 5ರಂದು ದೇಶಾದ್ಯಂತ ಸಂಪೂರ್ಣ ಕ್ರಾಂತಿ ದಿವಸ್ ಆಚರಿಸಲಾಗುವುದು ಎಂದು ತಿಳಿಸಿದೆ. ಅಂದು ಬಿಜೆಪಿ ಸಂಸದರು, ಶಾಸಕರು ಮತ್ತು ಜನಪ್ರತಿನಿಧಿಗಳ ಕಚೇರಿಗಳ ಮುಂದೆ ಮೂರು ಕೃಷಿ ಕಾನೂನುಗಳ ಪ್ರತಿಗಳನ್ನು ಸುಡುವಂತೆ ನಾವು ನಾಗರೀಕರಿಗೆ ಮನವಿ ಮಾಡುತ್ತೇವೆ. ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ಹೇಳಿಕೆಯಲ್ಲಿ ತಿಳಿಸಿದೆ.

ಇದೇ ಸಂದರ್ಭದಲ್ಲಿ ಹೋರಾಟನಿರತ ರೈತರು ಮತ್ತು ಗ್ರಾಮಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಪುಣ್ಯಸ್ಮರಣೆ ಅಂಗವಾಗಿ ಅವರಿಗೆ ಗೌರವ ಸಲ್ಲಿಸಿದರು.

ಇದನ್ನೂ ಓದಿ: Corona 2nd Wave: ಭಾರತ ಮತ್ತು ಇಂಗ್ಲೆಂಡ್ ರೂಪಾಂತರಿ ವೈರಸ್​ ಗಾಳಿಯಲ್ಲಿ ಮತ್ತಷ್ಟು ವೇಗವಾಗಿ ಹರಡಬಲ್ಲದು; ಹೊಸ ಸಂಶೋಧನೆ!ಚೌಧರಿ ಚರಣ್ ಸಿಂಗ್ ಅವರು ದೇಶವನ್ನುಆತ್ಮನಿರ್ಭರ್’ (ಸ್ವಾವಲಂಬಿ)ಯನ್ನಾಗಿ ಮಾಡಲು ಬಯಸಿದ್ದರು. ಇದರಲ್ಲಿ ರೈತರು, ಕಾರ್ಮಿಕರು ಮತ್ತು ಹಳ್ಳಿಗಳ ಜನರು ಸಂತೋಷದಿಂದ ಬದುಕಬಲ್ಲರು’. ಇಂದಿನ ಸರ್ಕಾರದ ಬಗ್ಗೆ ರೈತರಿಗಿರುವ ಅಪನಂಬಿಕೆ ಚೌಧರಿ ಚರಣ್ ಸಿಂಗ್ ಅವರನ್ನು ನೆನಪಿಸುತ್ತದೆ. ಅವರು ರೈತರ ಪ್ರತಿಯೊಂದು ಸಮಸ್ಯೆ ಮತ್ತು ನೋವನ್ನು ಸಮಾಜ ಮತ್ತು ಸರ್ಕಾರದ ಮುಂದೆ ಇರಿಸಿ ಪರಿಹರಿಸುತ್ತಿದ್ದರು’ ಎಂದು ರೈತರು ನೆನಪಿಸಿಕೊಂಡರು.
Youtube Video

ರೈತ ಹೋರಾಟವನ್ನು ಬಲಪಡಿಸಲು ಪಂಜಾಬಿನ ದೋಬಾ ಪ್ರದೇಶದ ಅತಿ ಹೆಚ್ಚು ಸಂಖ್ಯೆಯಲ್ಲಿ ರೈತರು ಶನಿವಾರ ಪ್ರತಿಭಟನಾ ಗಡಿಗಳಿಗೆ ಬಂದಿದ್ದಾರೆ. ಆಂದೋಲನವನ್ನು ಮುನ್ನಡೆಸುವ ನಿಟ್ಟಿನಲ್ಲಿ ಇನ್ನೂ ಅನೇಕ ರೈತರು ಬಂದು ಸೇರುವ ನಿರೀಕ್ಷೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ವ್ಯಕ್ತಪಡಿಸಿದೆ.
Published by: MAshok Kumar
First published: May 30, 2021, 4:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories