• Home
  • »
  • News
  • »
  • national-international
  • »
  • Farmers Stir: ದೆಹಲಿ ರೈತ ಹೋರಾಟಕ್ಕೆ 6 ತಿಂಗಳು; ಇಂದಿನಿಂದ ರೈತರಿಂದ ಕರಾಳ ದಿನ ಆಚರಣೆ

Farmers Stir: ದೆಹಲಿ ರೈತ ಹೋರಾಟಕ್ಕೆ 6 ತಿಂಗಳು; ಇಂದಿನಿಂದ ರೈತರಿಂದ ಕರಾಳ ದಿನ ಆಚರಣೆ

ರೈತ ಹೋರಾಟ (ಪ್ರಾತಿನಿಧಿಕ ಚಿತ್ರ)

ರೈತ ಹೋರಾಟ (ಪ್ರಾತಿನಿಧಿಕ ಚಿತ್ರ)

Farmers Protest: ಆರು ತಿಂಗಳಾದರೂ ತಮ್ಮ ಬೇಡಿಕೆಯನ್ನು ಈಡೇರಿಸದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ರೈತ ಸಂಘಟನೆಗಳು ಇಂದಿನಿಂದ ಕರಾಳ ದಿನ ಆಚರಿಸಲು ನಿರ್ಧರಿಸಿದ್ದಾರೆ.

  • Share this:

ನವದೆಹಲಿ, ಮೇ 26: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾನೂನುಗಳನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿ ರಾಷ್ಟ್ರ ರಾಜಧಾನಿ ದೆಹಲಿಯ ಗಡಿಗಳಲ್ಲಿ 500ಕ್ಕೂ ಹೆಚ್ಚು ರೈತ ಸಂಘಟನೆಗಳು ನಡೆಸುತ್ತಿರುವ 'ದೆಹಲಿ ಚಲೋ' ಹೋರಾಟ ಇಂದು ಆರು ತಿಂಗಳನ್ನು ಪೂರೈಸುತ್ತಿದೆ‌‌. ಆರು ತಿಂಗಳಾದರೂ ತಮ್ಮ ಬೇಡಿಕೆಯನ್ನು ಈಡೇರಿಸದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ರೈತ ಸಂಘಟನೆಗಳು ಇಂದಿನಿಂದ ಕರಾಳ ದಿನ ಆಚರಿಸಲು ನಿರ್ಧರಿಸಿದ್ದಾರೆ.


ದೇಶದ 500ಕ್ಕೂ ರೈತ ಸಂಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾ ವೇದಿಕೆಯಡಿ ಒಂದಾಗಿ ರೈತರ ಪಾಲಿಗೆ ಮರಣ ಶಾಸನವಾಗಲಿರುವ ಮೂರು ಕೃಷಿ ಕಾನೂನುಗಳನ್ನು ರದ್ದು ಮಾಡಬೇಕು ಎಂಬ ವಿಷಯವಾಗಿ ಮೂರು ಸುತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆ ನಡೆಸಿದ್ದವು. ಆದರೆ ಕೇಂದ್ರ ಸರ್ಕಾರ ಕೊಂಚವೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸದ ಕಾರಣಕ್ಕೆ 2020ರ ನವೆಂಬರ್ 26ರಂದು ದೆಹಲಿ ತಲುಪಿ ಅಲ್ಲಿನ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ನಿರ್ಧರಸಿದವು. ದೆಹಲಿ ಪ್ರವೇಶಕ್ಕೆ ಮತ್ತು ರಾಮಲೀಲಾ ಮೈದಾನದಲ್ಲಿ ಸಮಾವೇಶ ನಡೆಸಲು ಪೊಲೀಸರ ಅನುಮತಿ ಕೂಡ ಸಿಕ್ಕಿತ್ತು.


ಇದನ್ನೂ ಓದಿ: Subodh Kumar Jaiswal: CBI ನಿರ್ದೇಶಕರಾಗಿ ಮಹಾರಾಷ್ಟ್ರದ IPS ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ನೇಮಕ


ಆದರೆ ದೇಶದೆಲ್ಲೆಡೆಯಿಂದ ಲಕ್ಷಾಂತರ ಸಂಖ್ಯೆಯ ರೈತರು ದೆಹಲಿಗೆ ಧಾವಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಅಡಿಯಲ್ಲೇ ಬರುವ ದೆಹಲಿ ಪೊಲೀಸರು ದಿಢೀರನೆ ಕೊರೋನಾ ಕಾರಣ ಕೊಟ್ಟು ರೈತರ ಪ್ರತಿಭಟನಾ ಸಮಾವೇಶಕ್ಕೆ ನೀಡಿದ ಅನುಮತಿಯನ್ನು ರದ್ದುಗೊಳಿಸಿದರು. ಅಷ್ಟೇಯಲ್ಲದೆ ರೈತರು ದೆಹಲಿ ಪ್ರವೇಶ ಮಾಡುವುದನ್ನೂ ತಡೆದರು. ತಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕೇಂದ್ರ ಸರ್ಕಾರದ ನಡೆಯಿಂದ ಆಕ್ರೋಶಗೊಂಡ ರೈತರು ಪೊಲೀಸರು ತಡೆದಿದ್ದ ಜಾಗದಲ್ಲೇ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಆರಂಭಿಸಿದ್ದರು.


ಇದನ್ನೂ ಓದಿ: Cyclone Yaas: ಪಶ್ಚಿಮ ಬಂಗಾಳ, ಒರಿಸ್ಸಾದಲ್ಲಿ ಯಾಸ್ ಚಂಡಮಾರುತ; ಭಾರೀ ಮಳೆ ಹಿನ್ನೆಲೆ 20 ಲಕ್ಷ ಜನರ ಸ್ಥಳಾಂತರ


ಇದಾದ ಮೇಲೆ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ 11 ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ ರೈತರ ಪ್ರತಿಭಟನೆಗೂ ಜಗ್ಗದ ಕೇಂದ್ರ ಸರ್ಕಾರ ಯಾವ ಕಾರಣಕ್ಕೂ ತಾನು ತಂದಿರುವ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಿಲ್ಲ ಎಂದು ಹಠ ಹಿಡಿದು ಕುಳಿತಿದೆ. ಇದರ ಪರಿಣಾಮವಾಗಿ ದೇಶಕ್ಕೆ ಅನ್ನ ನೀಡುವ ರೈತರು ದೆಹಲಿ ಗಡಿಗಳಲ್ಲಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಡಿಸೆಂಬರ್ ಮತ್ತು ಜನವರಿ ಚಳಿಗೆ ನೂರಾರು ರೈತರು ಸತ್ತಿದ್ದಾರೆ. ಕೇಂದ್ರ ಸರ್ಕಾರದ ನಡೆ ಖಂಡಿಸಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ದೇಶಾದ್ಯಂತ ವಿವಿಧ ಕ್ಷೇತ್ರದ ತಜ್ಞರು, ಗಣ್ಯರು ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಸೆಲಬ್ರಿಟಿಗಳು ಕೂಡ ರೈತರ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಬೇಕು ಎಂದು ಹೇಳಿದ್ದಾರೆ. ಬ್ರಿಟನ್ ಸಂಸತ್ತಿನಲ್ಲಿ ರೈತ ಹೋರಾಟದ ಪರವಾಗಿ ಚರ್ಚೆಯಾಗಿದೆ. ಏನೇ ಆದರೂ ಕೇಂದ್ರ ಸರ್ಕಾರ ಮಾತ್ರ ಕರಾಳ ಕಾನೂನುಗಳನ್ನು ವಾಪಾಸ್ ಪಡೆಯುತ್ತಿಲ್ಲ. ಆದುದರಿಂದ ರೈತರು ಕೂಡ ತಮ್ಮ ಹೋರಾಟವನ್ನು ಬಿಟ್ಟಿಲ್ಲ. ಆಗ ಚಳಿ ಈಗ ಬಿರು ಬೇಸಿಗೆ, ಆದರೂ ಹೋರಾಟ ನಿರತ ಅನ್ನದಾತರಿಗೆ ಅದು ಲೆಕ್ಕಕ್ಕಿಲ್ಲ.

Published by:Sushma Chakre
First published: