HOME » NEWS » National-international » FARMERS PROTEST RIOTS IN DELHI FARMERS PROTEST MAY AFFECT PARLIAMENT CHALO ON FEBRUARY 1ST DBDEL SCT

ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಘರ್ಷಣೆ; ಪಾರ್ಲಿಮೆಂಟ್ ಚಲೋ ಮೇಲೆ ಪರಿಣಾಮ ಸಾಧ್ಯತೆ

Parliament Chalo: ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಹಿಂಸಾಚಾರ ಸಂಭವಿಸಿರುವುದರಿಂದ ಪಾರ್ಲಿಮೆಂಟ್ ಚಲೋ ಹೆಸರಿನಲ್ಲಿ ಸಂಸತ್ ಭವನದತ್ತ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದ ಕಾರ್ಯಕ್ರಮಕ್ಕೆ ಅನುಮತಿ ಸಿಗುವುದು ಅನುಮಾನ.

news18-kannada
Updated:January 27, 2021, 8:59 AM IST
ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಘರ್ಷಣೆ; ಪಾರ್ಲಿಮೆಂಟ್ ಚಲೋ ಮೇಲೆ ಪರಿಣಾಮ ಸಾಧ್ಯತೆ
ದೆಹಲಿ ರೈತರ ಪ್ರತಿಭಟನೆ.
  • Share this:
ನವದೆಹಲಿ (ಜ. 27): ತಮ್ಮ ಪಾಲಿಗೆ ಮರಣಶಾಸನವಾಗಿ ಪರಿಣಮಿಸುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದ 11ನೇ ಸುತ್ತಿನ ಸಭೆಯೂ ವಿಫಲ ಆಗಿರುವುದರಿಂದ‌ ಗಣರಾಜ್ಯೋತ್ಸವದ ದಿನ ಟ್ರ್ಯಾಕ್ಟರ್ ಮೆರವಣಿಗೆ ಹಮ್ಮಿಕೊಂಡಿದ್ದರು. ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಕೆಲವು ಅಹಿತಕರ ಘಟನೆಗಳು ನಡೆದಿರುವುದರಿಂದ ರೈತರು ಹಮ್ಮಿಕೊಂಡಿರುವ 'ಪಾರ್ಲಿಮೆಂಟ್ ಚಲೋ' ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. 

ದೆಹಲಿ ಗಡಿಯಲ್ಲಿ ನೂರಾರು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಅವೆಲ್ಲವುಗಳ ಜೊತೆ ಸಮನ್ವಯ ಸಾಧಿಸಿ ಹೋರಾಟವನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಗಣರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ 'ಕಿಸಾನ್ ರಿಪಬ್ಲಿಕ್ ಡೇ ಪರೇಡ್' ಹೆಸರಿನಲ್ಲಿ ಟ್ರ್ಯಾಕ್ಟರ್ ಮೆರವಣಿಗೆಗೆ ಕರೆ ಕೊಟ್ಟಿತ್ತು. ಇದೇ ವೇಳೆ ಫೆಬ್ರವರಿ 1ರಂದು 'ಪಾರ್ಲಿಮೆಂಟ್ ಚಲೋ' ಹೆಸರಿನಲ್ಲಿ ಸಂಸತ್ ಭವನಕ್ಕೆ ಪಾದಯಾತ್ರೆ ನಡೆಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಆದರೆ, ಈಗ ಗಣರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ 'ಕಿಸಾನ್ ರಿಪಬ್ಲಿಕ್ ಡೇ ಪರೇಡ್' ಹೆಸರಿನಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಹಿಂಸಾಚಾರ ಸಂಭವಿಸಿರುವುದರಿಂದ 'ಪಾರ್ಲಿಮೆಂಟ್ ಚಲೋ' ಹೆಸರಿನಲ್ಲಿ ಸಂಸತ್ ಭವನದತ್ತ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದ ಕಾರ್ಯಕ್ರಮಕ್ಕೆ ಅನುಮತಿ ಸಿಗುವುದು ಅನುಮಾನ ಎನ್ನಲಾಗಿದೆ.
ದೆಹಲಿ ಪೊಲೀಸರು ಟಿಕ್ರಿ, ಸಿಂಘು ಮತ್ತು ಗಾಜಿಯಾಬಾದ್ ಗಡಿಗಳಿಂದ ಔಟರ್ ರಿಂಗ್ ರೋಡ್ ಗೆ ಬಂದು ಔಟರ್ ರಿಂಗ್ ರೋಡ್ ಮೂಲಕವೇ ಮತ್ತೆ ಗಡಿ ಭಾಗಗಳಿಗೆ ಟ್ರ್ಯಾಕ್ಟರ್ ಮೆರವಣಿಗೆ ತೆರಳಲು ಅನುಮತಿ ನೀಡಲಾಗಿತ್ತು. ಅದೂ ಅಲ್ಲದೆ ರಾಜಪಥದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಅಧಿಕೃತವಾಗಿ ಆಯೋಜಿಸುವ ಗಣರಾಜ್ಯೋತ್ಸವದ ಪರೇಡ್ ಬಳಿಕ ಕಿಸಾನ್ ರಿಪಬ್ಲಿಕ್ ಡೇ ಪರೇಡ್ ನಡೆಸಬೇಕೆಂದು ಹೇಳಲಾಗಿತ್ತು. ಆದರೆ ಮೊದಲಿಂದಲೂ ಇನ್ನರ್ ರಿಂಗ್ ರೋಡಿನಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲು ಅನುಮತಿ ನೀಡಬೇಕೆಂದು ರೈತರು ಪಟ್ಟು ಹಿಡಿದಿದ್ದರು.

ಇದನ್ನೂ ಓದಿ: Denotification Case: ಅಕ್ರಮ ಡಿನೋಟಿಫಿಕೇಷನ್ ಪ್ರಕರಣ; ಸುಪ್ರೀಂ ಕೋರ್ಟ್​​ನಲ್ಲಿ ಇಂದು ಸಿಎಂ ಯಡಿಯೂರಪ್ಪ ಅರ್ಜಿ ವಿಚಾರಣೆ

ಇದೆಲ್ಲದರ ನಡುವೆ ಮಂಗಳವಾರ ಗಣರಾಜ್ಯೋತ್ಸವದ ದಿನ ಪ್ರತಿಭಟನಾ ನಿರತ ರೈತರು ತಮಗೆ ನಿಗದಿ ಪಡಿಸಿದ ಮಾರ್ಗ ಬಿಟ್ಟು ದೆಹಲಿಯ ಒಳಗಡೆ ಪ್ರವೇಶಿಸಿದ್ದು ಮತ್ತು ದೆಹಲಿ ಪ್ರವೇಶಿಸುವ ವೇಳೆ ಪೊಲೀಸರೊಂದಿಗೆ ಘರ್ಷಣೆ ನಡೆಸಿರುವುದರಿಂದ 'ಪಾರ್ಲಿಮೆಂಟ್ ಚಲೋ'ಗೆ ಒಪ್ಪಿಗೆ ಸಿಗುವುದು ಅನುಮಾನಾಸ್ಪದವಾಗಿದೆ.

'ಫೆಬ್ರವರಿ 01ರಂದು ದೆಹಲಿಯ ವಿವಿಧ ಭಾಗಗಳಿಂದ ರೈತರು ಪಾರ್ಲಿಮೆಂಟ್ ಕಡೆಗೆ ಪಾದಯಾತ್ರೆ ನಡೆಸುತ್ತೇವೆ' ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್‌ ಅಧ್ಯಕ್ಷ ದರ್ಶನ್ ಪಾಲ್ ತಿಳಿಸಿದ್ದರು. ಅಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದ ಬಜೆಟ್ ಮಂಡನೆ ಮಾಡಲಿದ್ದಾರೆ.
Youtube Video

ನಿನ್ನೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆ ವೇಳೆ 83 ಜನ ಪೊಲೀಸರು ಮತ್ತು ನೂರಕ್ಕೂ ಹೆಚ್ಚು ರೈತರಿಗೆ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ನಿನ್ನೆಯ ಹಿಂಸಾಚಾರದ ಬಗ್ಗೆ ದೆಹಲಿ ಪೂರ್ವ ವಲಯದಲ್ಲಿ ನಾಲ್ಕು ದೂರು ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

(ವರದಿ: ಧರಣೀಶ್ ಬೂಕನಕೆರೆ)
Published by: Sushma Chakre
First published: January 27, 2021, 8:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories