HOME » NEWS » National-international » FARMERS PROTEST PROTESTERS BARGE INTO RED FORT WITH TRACTORS RHHSN

Farmers Protest | ದೆಹಲಿಯ ಐತಿಹಾಸಿಕ ಕೆಂಪುಕೋಟೆ ಮುತ್ತಿಗೆ ಹಾಕಿದ ರೈತ ಪ್ರತಿಭಟನಾಕಾರರು!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನದಂದೇ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ರೈತರು ದೆಹಲಿ ಹೃದಯ ಭಾಗ ಪ್ರವೇಶಿಸಿದಂತೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಭೇದಿಸಿದ ರೈತರು ದೆಹಲಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿದರು. 

news18-kannada
Updated:January 26, 2021, 2:49 PM IST
Farmers Protest | ದೆಹಲಿಯ ಐತಿಹಾಸಿಕ ಕೆಂಪುಕೋಟೆ ಮುತ್ತಿಗೆ ಹಾಕಿದ ರೈತ ಪ್ರತಿಭಟನಾಕಾರರು!
ದೆಹಲಿ ಕೆಂಪುಕೋಟೆ ಮುತ್ತಿಗೆ ಹಾಕಿದ ರೈತ ಪ್ರತಿಭಟನಾಕಾರರು.
  • Share this:
ನವದೆಹಲಿ: ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಕಳೆದ ಎರಡು ತಿಂಗಳಿನಿಂದ ರೈತರು ದೆಹಲಿಯ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇಂದು ಗಣರಾಜ್ಯೋತ್ಸವದ ದಿನ ರೈತರು ಕಿಸಾನ್ ರಿಪಬ್ಲಿಕ್ ಪರೇಡ್ ನಡೆಸುವ ಮೂಲಕ ಸರ್ಕಾರಕ್ಕೆ ತಮ್ಮ ಪ್ರಾಬಲ್ಯ ತೋರಿಸಲು ಮುಂದಾಗಿದ್ದರು. ಅದರಂತೆ ಇಂದು ಸಾವಿರಾರು ರೈತರು ಟ್ರ್ಯಾಕ್ಟರ್ ಮೂಲಕ ದೆಹಲಿ ಪ್ರವೇಶಿಸಿದರು. ಈ ವೇಳೆ ರೈತರನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್, ಹಾಗೂ ಟಿಯಪ ಗ್ಯಾಸ್ ಪ್ರಯೋಗ  ಮಾಡಿದರು. ಆದರೂ ಎದೆಗುಂದದ ರೈತರು ಪೊಲೀಸರಿಗೆ ಪ್ರತಿರೋಧ ಒಡ್ಡಿ, ದೆಹಲಿಯ ಐತಿಹಾಸಿಕ ಕೆಂಪುಕೋಟೆಯನ್ನು ಪ್ರವೇಶಿಸಿದರು. ಕೆಂಪುಕೋಟೆಯ ಮೇಲೆ ನಿಂತು ತಮ್ಮ ಕಿಚ್ಚು ಹೊರಹಾಕಿದರು.

ರೈತರ ಟ್ರ್ಯಾಕ್ಟರ್ ಪರೇಡ್​ಗೆ ದೆಹಲಿ ಪೊಲೀಸ್ ಇಲಾಖೆ ಕೆಲ ಷರತ್ತುಗಳ ಮೇಲೆ ಅನುಮತಿ ನೀಡಿತ್ತು. ಅದಕ್ಕಾಗಿ ರೂಟ್ ಮ್ಯಾಪ್ ಕೂಡ ಹಾಕಲಾಗಿತ್ತು. ಆದರೆ, ರೈತ ಪ್ರತಿಭಟನಾಕಾರರು ಮಾರ್ಗ ಬದಲಿಸಿ, ದೆಹಲಿ ಹೃದಯ ಭಾಗವಾಗ ಐಟಿಒ ಬಳಿ ಜಮಾಯಿಸಿದರು. ಈ ವೇಳೆ ಪೊಲೀಸರು ರೈತರನ್ನು ತಡೆಗಟ್ಟಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಪೊಲೀಸರು ಲಾಠಿಚಾರ್ಜ್ ಮತ್ತು ಟಿಯರ್ ಗ್ಯಾಸ್ ಸಿಡಿಸಿದರು ಜಗ್ಗದ ಪ್ರತಿಭಟನಾಕಾರರು ಅವರನ್ನು ಭೇದಿಸಿ ಮುನ್ನುಗ್ದಿದರು. ನೂರಾರು ಪ್ರತಿಭಟನಾಕಾರರು ದೊಣ್ಣೆ ಹಿಡಿದು ಪೊಲೀಸ್ ಸಿಬ್ಬಂದಿಯನ್ನು ಓಡಿಸಿಕೊಂಡು ಹೋದ ಘಟನೆಯೂ ನಡೆಯಿತು. ಟ್ರ್ಯಾಕ್ಟರ್ ಮೂಲಕ ಅಡ್ಡಗಟ್ಟಲಾಗಿದ್ದ ಪೊಲೀಸ್ ಬಸ್​ಗಳನ್ನು ತಳ್ಳಿ ರೈತರು ಕೆಂಪು ಕೋಟೆಗೆ ಲಗ್ಗೆ ಇಟ್ಟರು.

ಇದನ್ನು ಓದಿ: Farmers Protest | ದೆಹಲಿಯಲ್ಲಿ ತಾಳ್ಮೆಗೆಟ್ಟ ರೈತ ಪ್ರತಿಭಟನಾಕಾರರು; ಹಿಂಸೆಗೆ ತಿರುಗಿದ ಅನ್ನದಾತರ ಕಿಚ್ಚು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನದಂದೇ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ರೈತರು ದೆಹಲಿ ಹೃದಯ ಭಾಗ ಪ್ರವೇಶಿಸಿದಂತೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ಭೇದಿಸಿದ ರೈತರು ದೆಹಲಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿದರು. ದೆಹಲಿ ಪೊಲೀಸರು ಒಂದು ಟ್ರ್ಯಾಕ್ಟರ್ ಇಂಜಿನ್ ನಲ್ಲಿ ಕೇವಲ ಮೂರು ಜನರು ಮಾತ್ರ ಪರೇಡ್​ ಮಾಡಬೇಕು. ರಾಜಪಥದಲ್ಲಿ ಗಣರಾಜ್ಯೋತ್ಸವದ ಅಧಿಕೃತ ಪರೆಡ್ ಮುಗಿದ  ಬಳಿಕ ರೈತರ ಟ್ರ್ಯಾಕ್ಟರ್ ಪರೇಡ್​ಗೆ ಕೆಲ ನಿರ್ದಿಷ್ಟ ರಸ್ತೆಗಳಲ್ಲಿ ಅವಕಾಶ ನೀಡಲಾಗಿತ್ತು. ಆದರೆ, ರೈತರು ತಮ್ಮ ಮಾರ್ಗ ಬದಲಿಸಿ ಕೇಂದ್ರ ದೆಹಲಿ ಪ್ರವೇಶಿಸಿದರು.
Youtube Video
ರೈತರ ಪ್ರತಿಭಟನೆ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಕೃಷಿ ವಿರೋಧಿ ಕಾನೂನುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಮತ್ತು ರೈತರಿಗೂ ಶಾಂತಿಯುತ ಪ್ರತಿಭಟನೆ ಮಾಡುವಂತೆ ಮನವಿ ಮಾಡಿದ್ದಾರೆ. ಹಿಂಸೆ ಯಾವುದೇ ಸಮಸ್ಯೆಗೂ ಪರಿಹಾರವಲ್ಲ. ಇದರಿಂದ ಯಾರಿಗೆ ತೊಂದರೆಯಾದರೂ, ಹಾನಿಯಾದರೂ ಅದು ದೇಶಕ್ಕೆ ಆಗುವ ನಷ್ಟ ಎಂದು ತಿಳಿ ಹೇಳಿದ್ದಾರೆ.
Published by: HR Ramesh
First published: January 26, 2021, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories