ಕಬ್ಬಿನ ಬೆಲೆ ಏರಿಕೆ ಮಾಡುವಂತೆ ಆಗ್ರಹಿಸಿ ರೈತರು ಶನಿವಾರ ರೈಲು ಹಳಿ ತಡೆ ಮತ್ತು ಜಲಂಧರ್‌ನಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಿದರು, ಇದು ರೈಲುಗಳ ಸಂಚಾರ ಮತ್ತು ವಾಹನ ಸಂಚಾರದ ಮೇಲೆ ಭಾರೀ ಪರಿಣಾಮ ಬೀರಿತು. ಫಿರೋಜ್‌ಪುರ ವಿಭಾಗದ ರೈಲ್ವೆ ಅಧಿಕಾರಿಗಳ ಹೇಳಿಕೆಯ ಪ್ರಕಾರ, ಸುಮಾರು 50 ರೈಲುಗಳನ್ನು ರದ್ದುಗೊಳಿಸಲಾಗಿದೆ, ಇದರ ಜೊತೆಗೆ ಸುಮಾರು 54 ರೈಲುಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದೆ ಹಾಗೂ ಒಂದಷ್ಟು ರೈಲುಗಳನ್ನು ಅಲ್ಪಾವಧಿಗೆ ಸಂಚಾರ ಮಾಡುವುದುದನ್ನು ನಿಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಬ್ಬಿನ ಬಾಕಿ ಮತ್ತು ಕಬ್ಬಿನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಸ್ವೀಕರಿಸುವಂತೆ ಪಂಜಾಬ್ ಸರ್ಕಾರವನ್ನು ಒತ್ತಾಯಿಸಲು ಹಲವಾರು ರೈತರು ಶುಕ್ರವಾರ ಅನಿರ್ದಿಷ್ಟ ಅವಧಿಯ ಆಂದೋಲನವನ್ನು ಆರಂಭಿಸಿದ್ದರು. ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ದಿಗ್ಬಂಧನವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ರೈತರು ಸರ್ಕಾರದ ಮನವಿಯನ್ನು ಶನಿವಾರ ನಿರಾಕರಿಸಿದರು.
ಪ್ರತಿಭಟನೆಯ ಮಧ್ಯೆಯೂ ತುರ್ತು ವಾಹನಗಳನ್ನು ಓಡಿಸಲು ಅನುಮತಿಸಲಾಗಿದೆ ಎಂದು ಅವರು ಹೇಳಿದರು. ಜಲಂಧರ್ ಜಿಲ್ಲೆಯ ಧನೋವಲಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಜಲಂಧರ್-ಫಗ್ವಾರಾವನ್ನು ಪ್ರತಿಭಟನಾಕಾರರು ತಡೆದಿದ್ದಾರೆ.
ರೈತರು ಹೇರಿರುವ ಈ ನಿರ್ಬಂಧವು ಜಲಂಧರ್, ಅಮೃತಸರ ಮತ್ತು ಪಠಾಣ್‌ಕೋಟ್‌ಗೆ ಮತ್ತು ಹೊರಗಿನ ಸಂಚಾರದ ಮೇಲೆ ಪರಿಣಾಮ ಬೀರಿದೆ, ಆದರೂ ಸರ್ಕಾರ ಕೆಲವು ಪರ್ಯಾಯ ಮಾರ್ಗಗಳ ಮೂಲಕ ಸಂಚಾರ ಕೈಗೊಳ್ಳ ಬಹುದು ಎಂದು ತಿಳಿಸಿದ್ದು ಅನೇಕ ಮಾರ್ಗಗಳನ್ನು ತಿರುಗಿಸಿದೆ. ಜಲಂಧರ್-ಚಾಹೇರು ಭಾಗದಲ್ಲಿ ದಾರಿಗೆ ಅಡ್ಡಲಾಗಿ ಕುಳಿತಿರುವ ರೈತರು ಲುಧಿಯಾನ-ಅಮೃತಸರ ಮತ್ತು ಲುಧಿಯಾನ-ಜಮ್ಮು ರೈಲು ಹಳಿಗಳ ಮೇಲೆ ಜಮಾಯಿಸಿದ್ದಾರೆ, ಅಮೃತಸರ-ಹೊಸದಿಲ್ಲಿ (02030) ಮತ್ತು ಅಮೃತಸರ-ಹೊಸ ದೆಹಲಿ ಶೇನ್-ಇ-ಪಂಜಾಬ್ (04068) ಸೇರಿದಂತೆ ಹಲವು ರೈಲುಗಳ ಮೇಲೆ ಪರಿಣಾಮ ಬೀರಿದೆ. )
ದೆಹಲಿಯ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಒಂದು ಕಡೆಯಾದರೆ, ಕಬ್ಬಿನ ಬೆಂಬಲ ಬೆಲೆ ಹೆಚ್ಚಳಕ್ಕೆ ನಡೆಯುತ್ತಿರುವ ಈ ಹೋರಾಟ ಸರ್ಕಾರವನ್ನು ಕಂಗೆಡಿಸಿದೆ. ಅಲ್ಲದೇ ಮುಂಬರುವ ಪಂಜಾಬ್ ಚುನಾವಣೆ ಎಲ್ಲಾ ಪಕ್ಷಗಳಿಗೂ ಅತ್ಯಂತ ಮಹತ್ವದ್ದಾಗಿದ್ದು, ರೈತರ ಬೇಡಿಕೆಗಳನ್ನು ಈಡೇರಿಸಲೇ ಬೇಕಾದ ತುರ್ತಿಗೆ ಪಂಜಾಬ್ ಕಾಂಗ್ರೆಸ್ ಸರ್ಕಾರ ಸಿಲುಕೊಕೊಂಡಿದೆ.
ಇದನ್ನೂ ಓದಿ: ’’ಕಾಂಗ್ರೆಸ್ನವರು ಮನೆ ಹತ್ರ ಬಂದರೆ ನನ್ನ ಹೆಂಡತಿ ರಾಖಿ ಕಟ್ಟುತ್ತೇನೆ ಎಂದು ಹೇಳಿದ್ದಾಳೆ’’ ಸಿ.ಟಿ.ರವಿ ವ್ಯಂಗ್ಯ
ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಒಂದಷ್ಟು ರಾಜ್ಯಗಳ ವಿಧಾನ ಸಭಾ ಚುನಾವಣೆಗಳು ಹತ್ತಿರದಲ್ಲೇ ಇರುವ ಕಾರಣ ಕೇಂದ್ರ ಬಿಜೆಪಿ ಸರ್ಕಾರವೂ ಮೂರು ಕರಾಳ ರೈತ ವಿರೋಧಿ ಕಾನೂನುಗಳನ್ನು ತಕ್ಷಣಕ್ಕೆ ಜಾರಿಗೆ ಮಾಡುವುದಿಲ್ಲ ಎನ್ನುವ ಸೂಚನೆ ಕೊಟ್ಟಿತ್ತು. ಆದರೆ ರೈತರು ಬಿಜೆಪಿ ಸರ್ಕಾರದ ಮಾತುಗಳನ್ನು ನಂಬಲು ತಯಾರಿಲ್ಲ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ