• Home
 • »
 • News
 • »
 • national-international
 • »
 • Farmers News: ಕೃಷಿ ತ್ಯಾಜ್ಯ ಸುಡುವಿಕೆಗೆ ಪರಿಹಾರವೇನು? ಇದಕ್ಕೆ ಚೀನಾ, ಉಗಾಂಡಾದ ರೈತರು ಏನ್ಮಾಡ್ತಾರೆ?

Farmers News: ಕೃಷಿ ತ್ಯಾಜ್ಯ ಸುಡುವಿಕೆಗೆ ಪರಿಹಾರವೇನು? ಇದಕ್ಕೆ ಚೀನಾ, ಉಗಾಂಡಾದ ರೈತರು ಏನ್ಮಾಡ್ತಾರೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಫ್ರಿಕಾದ ಕಾಡಿನ ದೀರ್ಘಕಾಲಿಕ ಅಕ್ಕಿಯೊಂದಿಗೆ ಏಷ್ಯನ್ ದೇಶೀಯ ವಾರ್ಷಿಕ ಅಕ್ಕಿಯನ್ನು ಬೆರೆಸುವ ಮೂಲಕ ಸಂಶೋಧಕರು ಈ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ.

 • Share this:

  ಚೀನಾ ಮತ್ತು ಉಗಾಂಡಾದ (China, Uganda) ರೈತರು ( Farmers) ದೀರ್ಘಾವಧಿಯ ಅಕ್ಕಿಯನ್ನು ( Rice) ಬೆಳಸುತ್ತಿದ್ದು ಇದು ಹೆಚ್ಚಿನ ಇಳುವರಿಯನ್ನು ನೀಡುವುದರ ಜೊತೆಗೆ ಇದಕ್ಕೆ ತಗಲುವ ಕೃಷಿ ವೆಚ್ಚ ಕೂಡ ಕಡಿಮೆಯಾಗಿದೆ. ಭಾರತದಲ್ಲಿ ಈ ತಳಿಯನ್ನು ಬಿತ್ತುವುದು ರೈತರಿಗೆ ಹೆಚ್ಚಿನ ಪ್ರಯೋಜನವನ್ನು ಉಂಟುಮಾಡುವುದರ ಜೊತೆಗೆ ವಾಯುಮಾಲಿನ್ಯಕ್ಕೆ ಕಾರಣವಾಗಿರುವ ಕೃಷಿ ತ್ಯಾಜ್ಯ ಸುಡುವ ಪ್ರಕ್ರಿಯೆಗೂ ಈ ವಿಧಾನ ಪರಿಹಾರವನ್ನೊದಗಿಸಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.


  ಭತ್ತದ ಒಂದು ವಿಧ


  ದೀರ್ಘಾವಧಿಯ ಅಕ್ಕಿ (Long-lived perennial rice) ಮೂಲಭೂತವಾಗಿ ಭತ್ತದ ವೈವಿಧ್ಯವಾಗಿದ್ದು ಇಳುವರಿಗೆ ನಷ್ಟವಿಲ್ಲದೆ ಎಂಟು ಕೊಯ್ಲುಗಳಿಗೆ ಅವಕಾಶ ನೀಡುವ ಮೂಲಕ ರೈತರಿಗೆ ಒಮ್ಮೆ ಮಾತ್ರ ಬಿತ್ತಲು ಅನುಕೂಲವನ್ನೊದಗಿಸುತ್ತದೆ. ಬೆಳೆಗಳನ್ನು ನೆಡುವ ಬಗ್ಗೆ ಚಿಂತಿಸುವುದು ಅಗತ್ಯವಿರುವುದಿಲ್ಲ.


  ಆಫ್ರಿಕಾದ ಕಾಡಿನ ದೀರ್ಘಕಾಲಿಕ ಅಕ್ಕಿಯೊಂದಿಗೆ ಏಷ್ಯನ್ ದೇಶೀಯ ವಾರ್ಷಿಕ ಅಕ್ಕಿಯನ್ನು ಬೆರೆಸುವ ಮೂಲಕ ಸಂಶೋಧಕರು ಈ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಪ್ರಕ್ರಿಯೆಗೆ ಇನ್ನಷ್ಟು ವೇಗವನ್ನೊದಗಿಸಲು ಆಧುನಿಕ ಆನುವಂಶಿಕ ಪರಿಕರಗಳ ಪ್ರಯೋಜನವನ್ನು ಪಡೆದುಕೊಂಡು, ತಂಡವು 2007 ರಲ್ಲಿ ಹೆಚ್ಚಿನ ಭರವಸೆಯ ಹೈಬ್ರಿಡ್ ತಳಿಯನ್ನು ಗುರುತಿಸಿತು.


  ಅಕ್ಕಿಗೆ ಭಾರೀ ಡಿಮ್ಯಾಂಡ್; ಭತ್ತದ ಬೆಳೆಯತ್ತ ದಕ್ಷಿಣ ಕನ್ನಡ ರೈತರ ಚಿತ್ತ
  ಸಾಂದರ್ಭಿಕ ಚಿತ್ರ


  2016 ರಲ್ಲಿ ದೊಡ್ಡ ಪ್ರಮಾಣದಲ್ಲಿ ಕೃಷಿಭೂಮಿಯಲ್ಲಿ ಪೈರುಗಳನ್ನು ನೆಡುವ ಮೂಲಕ ಆವಿಷ್ಕಾರವನ್ನು ನಡೆಸಿತು ಮತ್ತು 2018 ರಲ್ಲಿ ಮೊದಲ ವಾಣಿಜ್ಯ ದೀರ್ಘಕಾಲಿಕ ಭತ್ತದ ವಿಧವಾದ PR23 ಅನ್ನು ಬಿಡುಗಡೆ ಮಾಡಿತು. ಚೀನಾದ ಯುನ್ನಾನ್ ಪ್ರಾಂತ್ಯದಾದ್ಯಂತ ಫಾರ್ಮ್‌ಗಳಲ್ಲಿ ವಾರ್ಷಿಕ ಅಕ್ಕಿಯೊಂದಿಗೆ ದೀರ್ಘಕಾಲಿಕ ಅಕ್ಕಿಯ ಕಾರ್ಯಕ್ಷಮತೆಯನ್ನು ಐದು ವರ್ಷಗಳ ಕಾಲ ಅಧ್ಯಯನ ನಡೆಸಿದ ಸಂಶೋಧಕರು ಇಳುವರಿಯ ಮೊದಲ ನಾಲ್ಕು ವರ್ಷಗಳಲ್ಲಿ ಗುಣಮಟ್ಟ ಒಂದೇ ಆಗಿರುವುದನ್ನು ಕಂಡುಕೊಂಡರು.


  ಆದರೆ ವಿವಿಧ ಕಾರಣಗಳಿಂದ ಐದನೇ ವರ್ಷದಲ್ಲಿ ಇಳುವರಿ ಕುಸಿಯಲಾರಂಭಿಸಿತು, ಇದರ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಿದ ವಿಜ್ಞಾನಿಗಳು ನಾಲ್ಕು ವರ್ಷಗಳ ಅಂತರದ ನಂತರ ದೀರ್ಘಕಾಲಿಕ ಭತ್ತವನ್ನು ಮರುಬಿತ್ತಲು ಶಿಫಾರಸು ಮಾಡಿದರು.


  ದೀರ್ಘಕಾಲಿಕ ಅಕ್ಕಿ ಹೊಂದಿರುವ ಪ್ರಯೋಜನಗಳೇನು?


  ಸಾಮಾನ್ಯ ಅಕ್ಕಿಗಿಂತ ದೀರ್ಘಕಾಲಿಕ ಅಕ್ಕಿ ಹಲವಾರು ಪ್ರಯೋಜನಗಳನ್ನು ಹೊಂದಿದೆ. ರೈತರು ಈ ಬೆಳೆ ಬೆಳೆಯುವಾಗ ಪ್ರತಿ ಋತುವಿನಲ್ಲಿ ನಾಟಿ ಮಾಡುವ ಅಗತ್ಯವಿಲ್ಲದೇ ಇರುವುದರಿಂದ ದೀರ್ಘಕಾಲಿಕ ಅಕ್ಕಿ ಬೆಳೆಯುವ ರೈತರಿಗೆ ಕಾರ್ಮಿಕರ ಪ್ರಮಾಣ 60% ಕ್ಕಿಂತ ಕಡಿಮೆ ಇರುತ್ತದೆ ಹಾಗೂ ಇದು ಬೀಜ, ರಸಗೊಬ್ಬರ ಮತ್ತು ಇತರ ಅಗತ್ಯತೆಗಳ ವೆಚ್ಚವನ್ನು ಅರ್ಧದಷ್ಟು ಕಡಿಮೆಗೊಳಿಸುತ್ತದೆ.


  ಅಕ್ಕಿ


  ದೀರ್ಘಕಾಲಿಕ ಅಕ್ಕಿಯು ಇನ್ನಿತರ ಪ್ರಯೋಜನಗಳನ್ನು ಹೊಂದಿದ್ದು ವಾರ್ಷಿಕ ಅಕ್ಕಿಗಿಂತ ಈ ಅಕ್ಕಿ ನೀಡುವ ಲಾಭವು 17% ದಿಂದ 161% ದಷ್ಟಿರುತ್ತದೆ. ದೀರ್ಘಕಾಲಿಕ ಬೆಳೆಯು ಕೀಟಗಳಿಂದ ಹಾನಿಗೊಳಗಾದರೂ ವಾರ್ಷಿಕ ಬೆಳೆಗಿಂತ ಅಧಿಕ ಲಾಭವನ್ನು ರೈತರಿಗೆ ಉಂಟುಮಾಡಿದೆ. ಅಕ್ಕಿಯ ಸುವಾಸನೆ, ರೋಗನಿರೋಧಕತೆ ಮತ್ತು ಬರವನ್ನು ತಾಳಿಕೊಳ್ಳುವಂತಹ ಇತರ ಗುಣಲಕ್ಷಣಗಳನ್ನು ಹೊಸ ಬೆಳೆಯಲ್ಲಿ ಪರಿಚಯಿಸಲು ಆಧುನಿಕ ಅನುವಂಶಿಕ ಸಾಧನಗಳನ್ನು ಬಳಸಲು ಸದ್ಯ ಸಂಶೋಧಕರು ಯೋಜಿಸಿದ್ದಾರೆ.


  ಉತ್ತರ ಭಾರತದ ಕೃಷಿ ತ್ಯಾಜ್ಯ ಸುಡುವ ಬಿಕ್ಕಟ್ಟಿಗೆ ಇದು ಸಂಭಾವ್ಯ ಪರಿಹಾರವಾಗಬಹುದೇ?


  ಭಾರತದಲ್ಲಿ ಈ ತಳಿಯನ್ನು ಪರಿಚಯಿಸುವುದರಿಂದ ದೊರೆಯುವ ಪ್ರಯೋಜನಗಳು ಸಾಕಷ್ಟಿದ್ದರೂ ದೀರ್ಘಾವಧಿಯ ಅಕ್ಕಿಯು ದೇಶದ ಉತ್ತರ ಪ್ರದೇಶದ ವಾಯುಮಾಲಿನ್ಯದ ಮಟ್ಟವನ್ನು ತಗ್ಗಿಸುವಲ್ಲಿ ಪರೋಕ್ಷ ಪಾತ್ರವಹಿಸಲಿದೆ.


  ಉತ್ತರ ಭಾರತದಲ್ಲಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AQI) ಕುಸಿತವು ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ವಾರ್ಷಿಕ ಸಮಸ್ಯೆಯಾಗಿದ್ದರೂ, ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ನಡೆಸಲಾಗುವ ಕೃಷಿ ತ್ಯಾಜ್ಯ ಸುಡುವ ಅಭ್ಯಾಸದಿಂದಾಗಿ ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಳ್ಳುತ್ತದೆ.


  ಖಾರಿಫ್ ಋತುವಿನ ನಂತರ (ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ) ಬೆಳೆಗಳನ್ನು ಕಟಾವು ಮಾಡಿದ ನಂತರ, ಬೆಳೆಗಳ ಕಡ್ಡಿ ಅಥವಾ ಕೊಳೆ ಇನ್ನೂ ಹೊಲಗಳಲ್ಲಿ ಉಳಿದಿರುತ್ತದೆ. ಮತ್ತು ಇದು ತನ್ನಷ್ಟಕ್ಕೆ ನಶಿಸಿ ಹೋಗಲು ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ಮುಂದಿನ ಬೆಳೆಯನ್ನು ಆದಷ್ಟು ಬೇಗ ಬಿತ್ತಲು ರೈತರು ಈ ತ್ಯಾಜ್ಯವನ್ನು ದಹಿಸುತ್ತಾರೆ. ಹೀಗೆ ಸುಟ್ಟ ತ್ಯಾಜ್ಯವನ್ನು ಗಾಳಿಯು ದೆಹಲಿ- NCR ನೆಡೆಗೆ ಕೊಂಡೊಯ್ಯುವುದರಿಂದ, ಅಲ್ಲಿನ ಪರಿಸರ ಹೆಚ್ಚು ಮಲಿನಕಾರಿಯಾಗುತ್ತದೆ.

  Published by:Kavya V
  First published: