news18-kannada Updated:December 12, 2020, 10:05 PM IST
ನಿರ್ಮಲಾ ಸೀತಾರಾಮನ್.
ನವದೆಹಲಿ: ರಾಜಕೀಯ ಪುನರ್ಜನ್ಮಕ್ಕೆ ಯತ್ನಿಸುತ್ತಿರುವವರಿಂದ ಪ್ರತಿಭಟನಾನಿರತ ರೈತರು ಅಂತರ ಕಾಯ್ದುಕೊಳ್ಳಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ನಿರ್ಮಲಾ ಸೀತಾರಾಮನ್ ಅವರು ರೈತರ ಹೋರಾಟವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ರೈತರ ಪ್ರತಿಭಟನೆ ವಿಷಯದಲ್ಲಿ ವಿರೋಧ ಪಕ್ಷ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ರೈತ ಪ್ರತಿಭಟನೆಯನ್ನು ದೇಶ ವಿರೋಧಿ ಪಡೆಗಳು ಹೈಜಾಕ್ ಮಾಡಿವೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನು ತಿದ್ದುಪಡಿ ವಿರೋಧಿಸಿ ರೈತರು ಕಳೆದ 17 ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿವಾದಾತ್ಮಕ ಕೃಷಿ ಕಾನೂನು ರದ್ದುಗೊಳಿಸದಿದ್ದರೆ ಹೋರಾಟ
ತೀವ್ರಗೊಳಿಸುವುದಾಗಿ ರೈತರು ಘೋಷಿಸಿದ್ದಾರೆ. ರೈತ ಸಂಘಗಳು ಜೈಪುರ-ದೆಹಲಿ ಮತ್ತು ದೆಹಲಿ-ಆಗ್ರಾ ಎಕ್ಸ್ಪ್ರೆಸ್ ಹೆದ್ದಾರಿಗಳನ್ನು ನಿರ್ಬಂಧಿಸುವುದಾಗಿ ಬೆದರಿಕೆ ಹಾಕಿದ್ದು, ಡಿಸೆಂಬರ್ 14 ರಂದು ರಾಷ್ಟ್ರವ್ಯಾಪಿ ಆಂದೋಲನಕ್ಕೆ ಪ್ರತಿಭಟನೆಯನ್ನು ವಿಸ್ತರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸೆಪ್ಟೆಂಬರ್ನಲ್ಲಿ ಜಾರಿಗೆ ತಂದ ಸುಧಾರಣೆಗಳ ವಿರುದ್ಧ ರೈತರು ಕಳೆದ ತಿಂಗಳ ಕೊನೆಯಲ್ಲಿ ಹೋರಾಟ ಆರಂಭಿಸಿದ್ದಾರೆ. ಇದು ಕೃಷಿ ಉತ್ಪನ್ನಗಳ ಮಾರಾಟ, ಬೆಲೆ ಮತ್ತು ಶೇಖರಣೆ ಹಾಗೂ ದಶಕಗಳಿಂದ ರೈತರನ್ನು ಮುಕ್ತ ಮಾರುಕಟ್ಟೆಯಿಂದ ರಕ್ಷಿಸುವ ನಿಯಮಗಳನ್ನು ಸಡಿಲಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಕೃಷಿ ವಲಯದಲ್ಲಿ ತಂದಿರುವ ಸುಧಾರಣೆಗಳು ರೈತರಿಗೆ ಉಪಕಾರ ಮಾಡುವ ಉದ್ದೇಶ ಹೊಂದಿದೆ. ಮತ್ತು ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಅನುಕೂಲವಾಗಲಿದೆ ಎಂದು ಪ್ರಧಾನಿ ಮೋದಿ ಅವರು ಶನಿವಾರ ಪ್ರತಿಭಟನಾನಿರತ ರೈತರಿಗೆ ಭರವಸೆ ನೀಡಿದ್ದರು. ಆದರೆ ರೈತರು ಖಾಸಗಿ ಖರೀದಿದಾರರಿಗೆ ಕೃಷಿ ವಸ್ತು ಖರೀದಿಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಹೆದರುತ್ತಿದ್ದಾರೆ.
ಸುಧಾರಣೆಗಳನ್ನು ಸಂಪೂರ್ಣ ಹಿಂಪಡೆಯಬೇಕು ಎಂದು ಒತ್ತಾಯಿಸಿ ರೈತರ ಒಕ್ಕೂಟದ ಮುಖಂಡರು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಸಭೆ ನಡೆಸಿದ್ದಾದರೂ ಇಬ್ಬರ ನಡುವಿನ ಮಾತುಕತೆ ವಿಫಲವಾಗಿದೆ. ಉಭಯ ತಂಡಗಳ ನಡುವೆ ಆರನೇ ಸಭೆ ಬುಧವಾರ ನಡೆಯಬೇಕಿತ್ತು. ಆದರೆ ಆ ಸಭೆಯನ್ನು ರದ್ದುಪಡಿಸಲಾಯಿತು.
ಇದನ್ನು ಓದಿ: ರಮೇಶ್ ಜಾರಕಿಹೊಳಿ ಸರ್ಕಾರಕ್ಕೆ ಕೈಹಾಕಿದ್ದ, ಇವನು ಅವನ ಗೇಟ್ ಕೀಪರ್; ಸಿಪಿವೈಗೆ ಹೆಚ್ಡಿಕೆ ಚಾಟಿನ್ಯೂಸ್ 18 ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, ಸರ್ಕಾರವೂ ಹೆಚ್ಚಿನ ಸಂವಾದಕ್ಕೆ ಸಿದ್ಧವಾಗಿದೆ. ಆದರೆ, ಕೃಷಿ ಮತ್ತು ರೈತರ ಹೋರಾಟ ಈಗ ಅದರ ನಿಜವಾದ ಧ್ವನಿಯಾಗಿ ಉಳಿದಿಲ್ಲ. ರಾಷ್ಟ್ರ ವಿರೋಧಿ ಅಂಶಗಳ ಬೇಡಿಕೆಗಳಿವೆ. ರಾಜಕೀಯ ಪಕ್ಷಗಳು ರೈತರ ಪ್ರತಿಭಟನೆಯನ್ನು ಹೈಜಾಕ್ ಮಾಡುವಲ್ಲ ನಿರತವಾಗಿವೆ ಎಂದು ಅವರು ಹೇಳಿದರು.
ಪ್ರತಿಭಟನಾಗಾರರೊಂದಿಗೆ ಮಾತನಾಡುವುದನ್ನು ನಿಲ್ಲಿಸಿಲ್ಲ. ಅವರು ರೈತರಾಗಿ ಬಂದು ಮಾತನಾಡಿದರೆ ಸ್ವಾಗತಿಸುತ್ತೇವೆ. ಕೃಷಿ ಕಾಳಜಿಯ ಭಾಗವಲ್ಲದ ಸಮಸ್ಯೆಗಳನ್ನು ಎತ್ತಲಾಗಿದೆ. ರೈತರಿಗೆ ನನ್ನ ವಿನಂತಿಯೆಂದರೆ ಮಂತ್ರಿಗಳೊಂದಿಗೆ ಕುಳಿತು, ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಎಂದು ಹೇಳಿದ್ದಾರೆ.
Published by:
HR Ramesh
First published:
December 12, 2020, 10:04 PM IST