ಕಳೆದ ಬೇಸಿಗೆಯಲ್ಲಿ ಶಾಖದ ಅಲೆಗಳಿಗೆ (Heatwave) ಸಿಲುಕಿ ನಲುಕಿ ಹೋಗಿದ್ದ ಉತ್ತರ ಭಾರತದಂತಹ ಸ್ಥಿತಿ ಈಗ ಯುರೋಪ್ (Europe) ಮತ್ತು ಯುಕೆ (UK) ದೇಶಗಳಿಗೆ ಶಿಫ್ಟ್ ಆಗಿದೆ. ಪ್ರಸ್ತುತ ಯುರೋಪ್ ದೇಶಗಳು ಹಾಗೂ ಅದರಲ್ಲೂ ವಿಶೇಷವಾಗಿ ಯುಕೆನಲ್ಲಿ ತಾಪಮಾನದ ಮಟ್ಟ 40 ಡಿಗ್ರಿ ಮುಟ್ಟುತ್ತಿದ್ದು ಅಲ್ಲಿನ ರೈತರು ಇದೀಗ ತಮ್ಮ ಜಾನುವಾರಗಳು ಅದರಲ್ಲೂ ವಿಶೇಷವಾಗಿ ಹಂದಿಗಳು (Pig) ಬಳಲದಂತೆ ಸೂರ್ಯನ ಕಿರಣಗಳಿಂದ ರಕ್ಷಿಸುವಂತಹ ಸನ್ ಸ್ಕ್ರೀನ್ (Sunscreen) ಲೇಪನ ಮಾಡುವಿಕೆ ಅಥವಾ ಒದ್ದೆ ಟವೆಲ್ ಗಳನ್ನು ಬಳಸಿ ಅವುಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತಿರುವ ಬಗ್ಗೆ ವರದಿಯಾಗಿದೆ.
ಹಂದಿಗಳನ್ನು ಬಿಸಿಲಿನಿಂದ ಕಾಪಾಡಿಕೊಳ್ಳಲು ಸನ್ ಸ್ಕ್ರೀನ್
ಸದ್ಯ ಬಿಬಿಸಿಯಲ್ಲಿ ವರದಿಯಾಗಿರುವಂತೆ ಯುಕೆಯ ಕೆಲವು ರೈತರು ತಾವು ಸಾಕಿರುವ ಹಂದಿಗಳನ್ನು ಪ್ರದೇಶದಲ್ಲೀಗ ಹೆಚ್ಚಾಗಿರುವ ತಾಪಮಾನದಿಂದ ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ಅವುಗಳಿಗೆ ಸನ್ ಸ್ಕ್ರೀನ್ ಬಳಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಸದ್ಯ ಈಗ ಬ್ರಿಟೀಷ್ ಕೃಷಿ ಸಂಸ್ಕೃತಿಯಲ್ಲಿ ರಾಯಲ್ ವೆಲ್ಶ್ ಉತ್ಸವದ ಸಂಭ್ರಮ ಮನೆಮಾಡಿದ್ದು ಅದೇ ಸಮಯದಲ್ಲಿ ಶಾಖದ ತೀವ್ರ ಅಲೆಗಳ ಹೊಡೆತ ರೈತಾಪಿ ವರ್ಗಕ್ಕೆ ಇಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದೆ.
ಇದನ್ನೂ ಓದಿ: Heatwave: ವಿಪರೀತ ಬಿಸಿಲು, ಹೀಟ್ವೇವ್ನಿಂದ ಸ್ಪೈನ್ನಲ್ಲಿ 500 ಮಂದಿ ಸಾವು
ರಾಯಲ್ ವೆಲ್ಶ್ ಉತ್ಸವವು ಸುಮಾರು ನಾಲ್ಕು ದಿನಗಳ ಅದ್ಭುತ ಉತ್ಸವವಾಗಿದೆ ಹಾಗೂ ಯುಕೆ ಕೃಷಿ ಸಂಸ್ಕೃತಿಗೆ ಸಂಬಂಧಿಸಿದಂತೆ ಅಲ್ಲಿನ ರೈತವರ್ಗವು ಅದ್ದೂರಿಯಾಗಿ ಸಂಭ್ರಮಿಸುವ ಉತ್ಸವ ಇದಾಗಿದೆ. ನಾಲ್ಕು ದಿನಗಳ ಈ ಉತ್ಸವದಲ್ಲಿ ಹಲವು ಕಾರ್ಯಕ್ರಮಗಳು, ಸಂಭ್ರಮಾಚರಣೆಗಳು, ಸ್ಪರ್ಧೆಗಳು, ಮನರಂಜನಾ ಚಟುವಟಿಕೆಗಳು ಇರುತ್ತವೆ.
ಇಲ್ಲಿನ ಜನ ಹಂದಿಗಳನ್ನು ಬಿಸಿಲಿನಿಂದ ಕಾಪಾಡಿಕೊಳ್ಳಲು ಏನೆಲ್ಲಾ ಮಾಡ್ತಾರೆ?
ಈ ಸಂದರ್ಭದಲ್ಲಿ ಬಿಬಿಸಿ ಮಾಧ್ಯಮದೊಂದಿಗೆ ಮಾತನಾಡಿರುವ ಪ್ರಶಸ್ತಿ ವಿಜೆತೆ ಹಂದಿ ಸಾಕಾಣಿಕೆದಾರರಾಗಿರುವ ಎಲಾ ಮೇರ್ ಎಂಬುವವರು ಐದು ಪೆಡಿಗ್ರಿ ವೆಲ್ಶ್ ಹಂದಿಗಳು ಸೇರಿದಂತೆ ತಮ್ಮ ಬಳಿ ಇರುವ ಎಲ್ಲ ಆರು ಹಂದಿಗಳನ್ನು ಸುಡುತ್ತಿರುವ ಶಾಖದಿಂದ ಸಂರಕ್ಷಿಸುವ ನಿಟ್ಟಿನಲ್ಲಿ ಒದ್ದೆಯಾದ ಟವೆಲ್ ಗಳನ್ನು ಅವುಗಳ ಮೇಲೆ ಸುತ್ತುತ್ತಿರುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಹಂದಿಗಳಿಗೆ ಇದು ಕಷ್ಟಕರ ಸಮಯವಾಗಿದ್ದು ಅವುಗಳನ್ನು ಸಾಧ್ಯವಾದಷ್ಟು ತಂಪು ತಂಪಾದ ಅನುಭವ ಪಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಆಮೆಯೊಂದಿಗೆ ಆ್ಯಪಲ್ ಹಂಚಿಕೊಂಡ ಚಿಂಪಾಂಜಿ! ಈ ಪ್ರಾಣಿಗಳ ಪ್ರೀತಿ ಈಗ ನೆಟ್ಟಿಗರ ಫೇವರೇಟ್
45 ರ ಪ್ರಾಯದ ಎಲಾ ಅವರ ಪ್ರಕಾರ ಹಂದಿಗಳ ಶರೀರದ ಮೇಲೆ ಒದ್ದೆಯಾದ ಟವೆಲ್ ಸುತ್ತುವುದರಿಂದ ಅವುಗಳನ್ನು ಶಾಖದಿಂದ ಬಳಲದಂತೆ ಸಂರಕ್ಷಿಸಬಹುದಾದರೂ ಆ ಟವೆಲ್ ಗಳು ಸುಡುತ್ತಿರುವ ತಾಪಮಾನದ ಪರಿಣಾಮದಿಂದಾಗಿ ತ್ವರಿತವಾಗಿ ಒಣಗಿ ಹೋಗದಂತೆಯೂ ಎಚ್ಚರಿಕೆ ವಹಿಸುವುದು ಅವಶ್ಯಕ ಎಂದು ಹೇಳುತ್ತಾರೆ. ಏಕೆಂದರೆ ಇದರಿಂದ ಅವುಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದಾದ ಸಾಧ್ಯತೆಯಿರುತ್ತದೆ ಎಂದು ನುಡಿಯುತ್ತಾರೆ ಎಲಾ ಅವರು. ಎಲಾ ಅವರ ಪ್ರಕಾರ, ಇನ್ನೊಂದು ಸರಳ ಉಪಾಯವೆಂದರೆ ಇಂತಹ ತಾಪಮಾನದಲ್ಲಿ ಹಂದಿಗಳನ್ನು ಸಾಧ್ಯವಾದಷ್ಟು ನೆರಳಿನಲ್ಲಿರುವಂತೆ ನೋಡಿಕೊಳ್ಳುವುದಾಗಿದೆ.
ಹಂದಿಗಳಿಗೆ ಬಳಸಲಾದ ಸನ್ ಸ್ಕ್ರೀನ್ ಹೊಂದಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ ರೈತ
ಈಗಾಗಲೇ ಯುಕೆಯಲ್ಲಿ ತಾಪಮಾನ ಈಗ ಗರಿಷ್ಠ ಮಟ್ಟಕ್ಕೇರಿದ್ದು ಅಲ್ಲಿನ ರೈತ ಜನರು ತಮ್ಮ ತಮ್ಮ ಜಾನುವಾರುಗಳನ್ನು ಬಿಸಿಲಿನಿಂದ ರಕ್ಷಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಬಗ್ಗೆ ಹಲವು ರೈತರು ಸಾಮಾಜಿಕ ಮಾಧ್ಯಮಗಳಲ್ಲಿ ತಾವು ತೆಗೆದುಕೊಂಡ ಕ್ರಮಗಳ ಬಗ್ಗೆ ಚಿತ್ರ ಹಾಕಿ ಪೋಸ್ಟ್ ಸಹ ಮಾಡುತ್ತಿದ್ದಾರೆ. ಸ್ಕಾಟ್ಲ್ಯಾಂಡಿನ ರೈತರೊಬ್ಬರು ತಮ್ಮ ಹಂದಿಗಳಿಗೆ ಬಳಸಲಾದ ಸನ್ ಸ್ಕ್ರೀನ್ ಹೊಂದಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದು "ನನ್ನ ಮುದ್ದಿನ ಹುಡುಗಿಯಾದ ಟ್ಯಾಮಿಗಾಗಿ ಕೊನೆಗೂ ಸನ್ ಸ್ಕ್ರೀನ್ ಹಚ್ಚಲೇಬೇಕಾಯಿತು, ಏಕೆಂದರೆ ಮಡ್ ಪ್ಯಾಕ್ ಅವಳ ಕಿವಿಗಳಿಗೆ ತಲುಪುತ್ತಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ.
Had to go put sunscreen on my gal, Tammy Swinette… her mud pack doesn’t reach her ears 🐖🏴
Does @EstherThePig
have the same problem? #arnbegfarmstayscotland #pigs #Heatwave2022 pic.twitter.com/iihK4vkcFE
— Arnbeg Farmstay Scot (@Arnbeg) July 18, 2022
ಸೋಮವಾರದಂದು ಯುಕೆ ತನ್ನ ಗರಿಷ್ಠ ಪ್ರಮಾಣದ ತಾಪಮಾನವನ್ನು ದಾಖಲಿಸಿತು. ಈ ಸುಡುವಿನ ತಾಪಮಾನವು ಯುಕೆನಲ್ಲಿ ಇನ್ನೆರಡು ದಿನಗಳ ಕಾಲ ಮುಂದುವರೆಯುವ ಸಾಧ್ಯತೆಯಿದೆ ಎಂದು ಈಗಾಗಲೇ ಅಲ್ಲಿನ ಹವಾಮಾನ ಅಧಿಕಾರಿಗಳು ಎಚ್ಚರಿಕೆಯ ಸಂದೇಶವನ್ನೂ ಸಹ ನೀಡಿದ್ದಾರೆಂಬುದನ್ನು ಇಲ್ಲಿ ಗಮನಿಸಬಹುದು. ಒಟ್ಟಿನಲ್ಲಿ ಜನರು ತಮ್ಮನ್ನು ತಾವು ಬಿಸಿಯಿಂದ ಸಂರಕ್ಷಿಸಿಕೊಳ್ಳುವಂತೆ ಯುಕೆಯ ಹಂದಿಗಳಿಗೂ ಸಹ ಸೇವೆ ಲಭಿಸುತ್ತಿದ್ದು ಒಂದು ಮಟ್ಟಕ್ಕೆ ಅವು ಅದೃಷ್ಟವಂತ ಹಂದಿಗಳು ಎಂದೇ ಹೇಳಬಹುದೇನೋ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ