Haryana: ಲಖೀಂಪುರ ಖೇರಿ ಬೆನ್ನಲ್ಲೇ ಅಂಬಾಲದಲ್ಲಿ ರೈತರ ಮೇಲೆ ವಾಹನ ಹತ್ತಿಸುವ ಯತ್ನದ ಆರೋಪ

ಕುರುಕ್ಷೇತ್ರದ ಬಿಜೆಪಿ ಸಂಸದ ನಾಯಬ್ ಸೈನಿ ಬೆಂಗಾವಲು ಸಿಬ್ಬಂದಿ ಅಂಬಾಲದ ನಾರಾಯಣಗಢದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹತ್ತಿಸಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಪ್ರತಿಭಟನೆ ಚಿತ್ರ

ಪ್ರತಿಭಟನೆ ಚಿತ್ರ

 • Share this:
  ಚಂಢೀಗಢ: ಉತ್ತರ ಪ್ರದೇಶದ ಲಖೀಂಪುರ ಖೇರಿಯ ಘಟನೆ ಮಾಸುವ ಮುನ್ನವೇ ಹರಿಯಾಣದ ಅಂಬಾಲದಲ್ಲಿ ಅಂತಹುವುದೇ ಒಂದು ಘಟನೆ ನಡೆದಿದೆ. ಬಿಜೆಪಿ ನಾಯಕನನನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹತ್ತಿಸಲು ಪ್ರಯತ್ನಿಸಿರುವ ಆರೋಪ ಕೇಳಿ ಬಂದಿದೆ. ಕುರುಕ್ಷೇತ್ರದ ಬಿಜೆಪಿ ಸಂಸದ ನಾಯಬ್ ಸೈನಿ ( BJP MP Nayab Saini)ಬೆಂಗಾವಲು ಸಿಬ್ಬಂದಿ ಅಂಬಾಲದ ನಾರಾಯಣಗಢ(Naraingarh near Ambala)ದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹತ್ತಿಸಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಘಟನೆಯಲ್ಲಿ ಗಾಯಗೊಂಡಿರುವ ರೈತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಖೀಂಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರು ರೈತರು ಸಾವನ್ನಪ್ಪಿದ್ದು, ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಪುತ್ರ ಆಶೀಶ್ ಮಿಶ್ರಾ ವಿರುದ್ಧ ಆರೋಪಗಳು ಕೇಳಿ ಬಂದಿವೆ.

  ಬಿಜೆಪಿ ನಾಯಕರಿಗೆ ಹುಚ್ಚು ಹಿಡಿದಿದೆಯಾ?
  ಅಂಬಾಲದ ನಾರಾಯಣಗಢ ಘಟನೆ ಕುರಿತು ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಗಿಬಿದ್ದಿದೆ. ಈ ಕುರಿತು ಟ್ವಿಟರ್ ನಲ್ಲಿ ಘಟನೆಯ ವಿಡಿಯೋ ಹಂಚಿಕೊಂಡಿರುವ ಯುಥ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ., ಬಿಜೆಪಿ ನಾಯಕರಿಗೆ ಹುಚ್ಚು ಹಿಡಿದೆಯೇ? ಕುರುಕ್ಷೇತ್ರದ ಬಿಜೆಪಿ ಸಂಸದ ನಾಯಬ್ ಸೈನಿ ಬೆಂಗಾವಲು ಪಡೆ ನಾರಾಯಣಗಢದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹತ್ತಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ನಾರಾಯಣಗಢಗೆ ತೆರಳಬೇಕು. ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾಚಾರ ( Lakhimpur Kheri incident )ಆಗೋದು ಬೇಡ ಎಂದು ಮೈಕ್ ನಲ್ಲಿ ಹೇಳುತ್ತಿರುವುದನ್ನು ಕೇಳಬಹುದು.

  ನಾರಾಯಣಗಢದಲ್ಲಿ ನಡೆದಿದ್ದಾರು ಏನು?
  ಇಂದು ನಾರಾಯಣಗಢದಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭಕ್ಕೆ ಕ್ರೀಡಾ ಸಚಿವ ಸಂದೀಪ್ ಸಿಂಗ್ ಮತ್ತು ಕುರುಕ್ಷೇತ್ರದ ಸಂಸದ ನಾಯಬ್ ಸೈನಿ ಆಗಮಿಸಲಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಕಾರ್ಯಕ್ರಮ ವಿರೋಧಿಸಲು ರೈತರು ನಾರಾಯಣಗಢಕ್ಕೆ ತೆರಳಿ ಬಿಜೆಪಿ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದರು.

  ಇದನ್ನು ಓದಿ: ಯೋಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ನವಜೋತ್ ಸಿಂಗ್ ಸಿಧು

  ಸ್ಥಳೀಯ ವರದಿಗಳ ಪ್ರಕಾರ, ಬೆಳಗ್ಗೆ ಸುಮಾರು 11. 15ಕ್ಕೆ ಭವನ್ ಪ್ರೀತ್ ಸಿಂಗ್ ಹೆಸರಿನ ರೈತ ತನ್ನ ಮೇಲೆ ವಾಹನ ಹತ್ತಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿ ನಾರಾಯಣಗಢ ಡಿಸಿಪಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ವಾಹನ ಸಂಸದ ನಾಯಬ್ ಸೈನಿ ಅವರ ಬೆಂಗಾವಲಿನ ಸಿಬ್ಬಂದಿಯದ್ದು ಎಂದು ಉಲ್ಲೇಖಿಸಿದ್ದರು. ಇದುವರಗೂ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಪೊಲೀಸರ ಪ್ರಕಾರ, ದೂರುದಾರ ಭವನ್ ಪ್ರೀತ್ ಸಿಂಗ್ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ರೈತರು ಘಟನೆ ಸಂಬಂಧ ಎಫ್‍ಐಆರ್ (FIR) ದಾಖಲಾಹಬೇಕೆಂದು ಆಗ್ರಹಿಸುತ್ತಿದ್ದಾರೆ.

  ಇದನ್ನು ಓದಿ: ವಿಪಕ್ಷಗಳ ಟೀಕೆಗೆ ಗುರಿಯಾದ ಪಿಎಂ ಕೇರ್ಸ್​ ನಿಧಿ; ಆಕ್ಸಿಜನ್ ಘಟಕಗಳ ನಿರ್ಮಾಣವಾಗುತ್ತಿರುವುದು ಇದರಿಂದಲೇ

  ಲಖೀಂಪುರ ಹಿಂಸಾಚಾರ:
  ಭಾನುವಾರ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಡಿಸಿಎಂ ಕೇಶವ್ ಮೌರ್ಯ ಲಖೀಂಪುರಕ್ಕೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ತೆರಳಿದ್ದರು. ಕೇಂದ್ರ ಸಚಿವರು ಲಖೀಂಪುರನಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ರೈತರು ಕಪ್ಪು ಧ್ವಜ ಪ್ರದರ್ಶಿಸಿ ದಿಕ್ಕಾರ ಕೂಗಿದ್ದರು. ಈ ವೇಳೆ ಕೇಂದ್ರ ಸಚಿವರ ಪುತ್ರ ಆಶೀಶ್ ಮಿಶ್ರಾ ಇದ್ದ ಎನ್ನಲಾದ ಜೀಪ್ ರೈತರ ಮೇಲೆ ಚಲಾಯಿಸಲಾಗಿತ್ತು. ಬಳಿಕ ಘಟನೆ ಹಿಂಸಾಚಾರವಾಗಿ ಬದಲಾಗಿತ್ತು. ಉತ್ತರ ಪ್ರದೇಶ ಸರ್ಕಾರ ಮೃತ ರೈತ ಕುಟುಂಬಗಳಿಗೆ 45 ಲಕ್ಷ ರೂ. ಪರಿಹಾರ ಮತ್ತು ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡೋದಾಗಿ ಹೇಳಿದೆ.

  ಮಹ್ಮದ್​ ರಫೀಕ್​ ಕೆ
  Published by:Seema R
  First published: