HOME » NEWS » National-international » FARMERS DECIDES TO CONTINUE AGITATION UNTIL AGRICULTURE LAWS ARE REPEALED SNVS

ಕೃಷಿ ಕಾಯ್ದೆ ರದ್ದಾಗುವವರೆಗೂ ರೈತರ ಪ್ರತಿಭಟನೆ; ಸುಪ್ರೀಂ ರಚಿತ ಸಮಿತಿ ಬಗ್ಗೆ ವಿಪಕ್ಷಗಳಿಗೆ ಅನುಮಾನ

ಸುಪ್ರೀಂ ಕೋರ್ಟ್ ರಚಿಸಿದ ತಜ್ಞರ ಸಮಿತಿಯಲ್ಲಿರುವ ವ್ಯಕ್ತಿಗಳು ಕೃಷಿ ಕಾಯ್ದೆಗಳ ಸಮರ್ಥಕರೇ ಆಗಿದ್ಧಾರೆ. ಅವರಿಂದ ರೈತರಿಗೆ ಯಾವ ನ್ಯಾಯವೂ ಸಿಗುವ ನಿರೀಕ್ಷೆ ಇಲ್ಲ. ಹೀಗಾಗಿ, ಕಾಯ್ದೆಯನ್ನ ರದ್ದುಗೊಳಿಸುವವರೆಗೂ ಹೋರಾಟ ಮುಂದುವರಿಸಲು ರೈತ ಸಂಘಟನೆಗಳು ನಿರ್ಧರಿಸಿವೆ.

news18
Updated:January 13, 2021, 11:49 AM IST
ಕೃಷಿ ಕಾಯ್ದೆ ರದ್ದಾಗುವವರೆಗೂ ರೈತರ ಪ್ರತಿಭಟನೆ; ಸುಪ್ರೀಂ ರಚಿತ ಸಮಿತಿ ಬಗ್ಗೆ ವಿಪಕ್ಷಗಳಿಗೆ ಅನುಮಾನ
ರೈತರ ಪ್ರತಿಭಟನೆ
  • News18
  • Last Updated: January 13, 2021, 11:49 AM IST
  • Share this:
ನವದೆಹಲಿ(ಜ. 13): ಕೇಂದ್ರದ ಕೃಷಿ ಕಾಯ್ದೆಗಳನ್ನ ಜಾರಿ ಮಾಡುವುದಕ್ಕೆ ತಡೆ ನೀಡಿ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಬಹುತೇಕ ಪ್ರತಿಭಟನಾಕಾರರು ಸ್ವಾಗತ ಮಾಡಿದ್ದಾರೆ. ಆದರೆ, ಸಮಸ್ಯೆ ಇತ್ಯರ್ಥಕ್ಕಾಗಿ ಸುಪ್ರೀಂ ಕೋರ್ಟ್ ರಚಿಸಿರುವ ಕೃಷಿ ತಜ್ಞರ ಸಮಿತಿ ಬಗ್ಗೆ ಬಹಳಷ್ಟು ಅನುಮಾನ ಎದುರಾಗಿದೆ. ಇದೇ ವೇಳೆ, ಕೃಷಿ ಕಾಯ್ದೆ ಅನುಷ್ಠಾನಕ್ಕೆ ಸುಪ್ರೀಂ ತಡೆನೀಡಿರುವುದನ್ನ ಪ್ರತಿಭಟನಾನಿರತ ರೈತರು ಸ್ವಾಗತ ಮಾಡಿದ್ದಾರಾದರೂ ಈ ಕಾಯ್ದೆಯನ್ನ ಹಿಂಪಡೆಯುವವರೆಗೂ ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ. ಹಾಗೆಯೇ, ನ್ಯಾಯಾಲಯ ಸ್ಥಾಪಿಸಿದ ಸಮಿತಿಯೊಂದಿಗೆ ಭಾಗಿಯಾಗದಿರಲೂ ರೈತರು ನಿರ್ಧರಿಸಿದ್ದಾರೆ.

ಕೃಷಿ ಕಾಯ್ದೆಗೆ ತಡೆ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸರ್ಕಾರ, ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿರುತ್ತೇವೆ ಎಂದು ಹೇಳಿದೆ. ಹಾಗೆಯೇ, ರೈತರೊಂದಿಗೆ ಸಂಧಾನಕ್ಕಾಗಿ ತಜ್ಞರ ಸಮಿತಿ ರಚಿಸುವ ನ್ಯಾಯಾಲಯದ ನಿರ್ಧಾರವನ್ನೂ ಸರ್ಕಾರ ಸ್ವಾಗತಿಸಿದೆ.

ಇದನ್ನೂ ಓದಿ: ಕೇಂದ್ರದ ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ಸುಪ್ರೀಂ ತಡೆ; ಸಮಸ್ಯೆ ಇತ್ಯರ್ಥಕ್ಕೆ ಸಮಿತಿ ರಚನೆ

ಇನ್ನೊಂದೆಡೆ, ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಬಹುತೇಕ ವಿಪಕ್ಷಗಳು ಸ್ವಾಗತ ಮಾಡಿವೆ. ಆದರೆ, ಸಮಿತಿ ರಚನೆ ವಿಚಾರದಲ್ಲಿ ಭಿನ್ನಸ್ವರಗಳು ಎದ್ದಿವೆ. ಈ ಸಮಿತಿಯಲ್ಲಿರುವ ತಜ್ಞರ ಬಗ್ಗೆಯೇ ಹೆಚ್ಚಿನ ಅನುಮಾನಗಳಿವೆ. ಸಮಿತಿಯಲ್ಲಿರುವವರಲ್ಲಿ ಬಹುತೇಕ ಮಂದಿ ಸರ್ಕಾರದ ಪರವಾದ ನಿಲುವು ಹೊಂದಿರುವವರೇ ಆಗಿದ್ದಾರೆ. ಇವರಿಂದ ಯಾವುದೇ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇಲ್ಲ ಎಂದು ರೈತರ ಪ್ರತಿಭಟನೆ ಮುಂಚೂಣಿಯಲ್ಲಿರುವ ಎಐಕೆಎಸ್​ಸಿಸಿ ಸೇರಿದಂತೆ ಹಲವು ಸಂಘಟನೆಗಳು ಮತ್ತು ವಿಪಕ್ಷಗಳು ಹೇಳುತ್ತಿವೆ.

ಇದನ್ನೂ ಓದಿ: ಭಾರತದ ಲಸಿಕೆಗೆ ಬ್ರೆಜಿಲ್ ಒಪ್ಪಂದ; ಚೀನೀ ಲಸಿಕೆ ಬಗ್ಗೆ ಬ್ರೆಜಿಲ್ ಸಂಶೋಧಕರು ನಿರಾಶೆ

ನಿನ್ನೆ ಸುಪ್ರೀಂಕೋರ್ಟ್ ರಚಿಸಿದ ಈ ಸಮಿತಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್​ನ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್, ಶೆಟ್​ಕೇರಿ ಸಂಘಟನಾ ಅಧ್ಯಕ್ಷ ಅನಿಲ್ ಘಾನ್ವತ್, ಇಂಟರ್​ನ್ಯಾಷನಲ್ ಫೂಡ್ ಪಾಲಿಸಿ ರೀಸರ್ಚ್ ಇನ್ಸ್​ಟಿಟ್ಯೂಟ್​ನ ದಕ್ಷಿಣ ಏಷ್ಯಾ ನಿರ್ದೇಶಕ ಪ್ರಮೋದ್ ಕುಮಾರ್ ಜೋಶಿ, ಕೃಷಿ ಅರ್ಥತಜ್ಞ ಅಶೋಕ್ ಗುಲಾಟಿ ಅವರಿದ್ದಾರೆ. ಇವರೆಲ್ಲರೂ ಕೇಂದ್ರದ ಕೃಷಿ ಕಾಯ್ದೆಗಳ ಸಮರ್ಥಕರೇ ಆಗಿದ್ದಾರೆ ಎಂಬುದು ಪ್ರತಿಭಟನಾಕಾರರ ವಾದವಾಗಿದೆ. ಹೀಗಾಗಿ, ಕೃಷಿ ಕಾಯ್ದೆಯನ್ನ ಸಂಪೂರ್ಣವಾಗಿ ಕಿತ್ತುಹಾಕುವವರೆಗೂ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿವೆ.
Published by: Vijayasarthy SN
First published: January 13, 2021, 11:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories