Kisan Mahapanchayat| ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ರೈತರು ಸೆಡ್ಡು; ಮುಜಾಫರ್ ನಗರದಲ್ಲಿ ರೈತ ಮಹಾ ಪಂಚಾಯತ್

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಿಸಾನ್ ಮಹಾಪಂಚಾಯತ್ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕದಳವು ಕಿಸಾನ್ ಮಹಾಪಂಚಾಯತ್‌ಗೆ ಬೆಂಬಲ ಘೋಷಿಸಿದೆ.

ರೈತ ನಾಯಕ ರಾಕೇಶ್ ಟಿಕಾಯತ್.

ರೈತ ನಾಯಕ ರಾಕೇಶ್ ಟಿಕಾಯತ್.

 • Share this:
  ಮುಜಾಫರ್​ ನಗರ (ಸೆಪ್ಟೆಂಬರ್ 05); ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೇಶದ ರೈತರು ಕಳೆದ ಒಂದು ವರ್ಷಗಳಿಂದ ಸತತವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರ ಮಾತ್ರ ಈ ಕಾಯ್ದೆಗಳನ್ನು ಹಿಂಪಡೆಯುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಈ ನಡುವೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರದ ವಿರುದ್ಧ ಸೆಡ್ಡು ಹೊಡೆದಿರುವ ಸಂಯುಕ್ತ ಕಿಸಾನ್ ಮೋರ್ಚಾ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಕಿಸಾನ್ ಮಹಾಪಂಚಾಯತ್ (Kisan Mahapanchayat) ಆಯೋಜಿಸಿದೆ. ಒಕ್ಕೂಟ ಸರ್ಕಾರದ ವಿವಾದಿತ ಮೂರು ಕೃಷಿ ಕಾನೂನುಗಳ (Agriculture bill) ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಬಿಗಿ ಭದ್ರತೆ ನಡುವೆ ನಡೆಯುತ್ತಿರುವ ಕಿಸಾನ್ ಮಹಾಪಂಚಾಯತ್‌ಗೆ ಉತ್ತರ ಪ್ರದೇಶದ ಪೊಲೀಸರು ಮುಜಾಫರ್‌ನಗರದಲ್ಲಿ ಭಾರಿ ಭದ್ರತೆ ಹೆಚ್ಚಿಸಿದ್ದಾರೆ.

  "ಮುಜಾಫರ್‌ನಗರದಲ್ಲಿ 8,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎರಡು ರಾಪಿಡ್ ಆಕ್ಷನ್ ಫೋರ್ಸ್ ಮತ್ತು 1,200 ಪೊಲೀಸರು ಸೇರಿದ್ದಾರೆ. ಡ್ರೋನ್ ಕ್ಯಾಮೆರಾಗಳನ್ನು ವೈಮಾನಿಕ ಕಣ್ಗಾವಲುಗಾಗಿ ಬಳಸಲಾಗುತ್ತಿದ್ದು, 200 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ" ಎಂದು ಮುಜಾಫರ್ ನಗರ ಎಸ್‌ಎಸ್‌ಪಿ ಅಭಿಷೇಕ್ ಯಾದವ್ ತಿಳಿಸಿದ್ದಾರೆ.

  ಮಹಾಪಂಚಾಯತ್‌ಗೆ ಭಾರಿ ಸಂಖ್ಯೆಯಲ್ಲಿ ರೈತರು ಆಗಮಿಸುತ್ತಿದ್ದು, ಹೊರಗಿಂದ ಬರುವ ರೈತರಿಗಾಗಿ 20 ಸಭಾಂಗಣಗಳನ್ನು ಸಜ್ಜುಗೊಳಿಸಿದೆ. ಯಾವುದೇ ವೈದ್ಯಕೀಯ ತುರ್ತುಸ್ಥಿತಿಯನ್ನು ಎದುರಿಸಲು ಸುಮಾರು 100 ವೈದ್ಯಕೀಯ ಶಿಬಿರಗಳು, 50 ಆಂಬ್ಯುಲೆನ್ಸ್‌ಗಳು ಮತ್ತು ತಾತ್ಕಾಲಿಕ ಆಸ್ಪತ್ರೆಯನ್ನು ಸಹ ಸ್ಥಾಪಿಸಲಾಗಿದೆ.

  ಮುಜಾಫರ್‌ನಗರದ ಸರ್ಕಾರಿ ಇಂಟರ್ ಕಾಲೇಜು ಮೈದಾನದಿಂದ 4 ಕಿಲೋಮೀಟರ್ ವ್ಯಾಪ್ತಿಯಲ್ಲಿ 20 ಕ್ಕೂ ಹೆಚ್ಚು ಎಲ್ಇಡಿ ಪರದೆಗಳು ಮತ್ತು ಮೈಕ್ರೊಫೋನ್ಗಳನ್ನು ಅಳವಡಿಸಲಾಗಿದೆ.  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಿಸಾನ್ ಮಹಾಪಂಚಾಯತ್ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕದಳವು ಕಿಸಾನ್ ಮಹಾಪಂಚಾಯತ್‌ಗೆ ಬೆಂಬಲ ಘೋಷಿಸಿದೆ.  ಹರಿಯಾಣದ ರೈತರೊಬ್ಬರು, "ನಮ್ಮ ಪ್ರಧಾನಿಗೆ ರೈತರ ಬಗ್ಗೆ ಗೌರವವಿಲ್ಲ. ಚಳಿಗಾಲದಲ್ಲಿ ರೈತರನ್ನು ರಸ್ತೆಯಲ್ಲಿ ಕೂರುವಂತೆ ಮಾಡಿದ ಮೋದಿ ಜೀ ಯಾವ ರೀತಿಯ ರಾಜ..?" ಎಂದು ಪ್ರಶ್ನಿಸಿದ್ದಾರೆ.

  "ನಾವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಮಹಾಪಂಚಾಯತ್‌ನಲ್ಲಿ ಜಮಾಯಿಸಿದ್ದೇವೆ. ಈ ಮೂರು ಕರಾಳ ಕಾನೂನುಗಳನ್ನು ಹಿಂಪಡೆಯುವಂತೆ ಪ್ರಧಾನ ಮಂತ್ರಿಗೆ ವಿನಂತಿಸುತ್ತೇವೆ" ಎಂದು ರೈತ ಮಹಿಳೆಯೊಬ್ಬರು ಹೇಳಿದ್ದಾರೆ.  ವಿಧಾನಸಭಾ ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಉತ್ತರಪ್ರದೇಶಕ್ಕೆ ಈ ಕಿಸಾನ್ ಮಹಾಪಂಚಾಯತ್‌ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಈ ಹಿಂದೆ ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ವ್ಯಂಗ್ಯಚಿತ್ರವನ್ನು ಪೋಸ್ಟ್ ಮಾಡಿ ಖಂಡನೆಗೆ ಒಳಗಾಗಿತ್ತು.
  Published by:MAshok Kumar
  First published: