ನವದೆಹಲಿ (ಡಿ.4 ): ಕಳೆದ ಒಂಭತ್ತು ದಿನಗಳಿಂದ ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಕಾವು ಪಡೆದಿದ್ದು, ಮಂಗಳವಾರ ದೇಶಾದ್ಯಾಂತ ಬಂದ್ಗೆ ಕರೆ ನೀಡಲಾಗಿದೆ. ಇದೇ ವೇಳೇ ದೆಹಲಿಯ ಎಲ್ಲ ರಸ್ತೆಗಳನ್ನು ಬಂದ್ ಮಾಡುವುದಾಗಿ ರೈತ ಸಂಘಟನೆಗಳು ತಿಳಿಸಿವೆ. ಡಿ. 8ರಂದು ದೇಶಾದ್ಯಂತ ಎಲ್ಲಾ ಹೆದ್ದಾರಿ ಟೋಲ್ಗಳನ್ನು ಆಕ್ರಮಿಸುತ್ತೇವೆ. ಸರ್ಕಾರಕ್ಕೆ ಟೋಲ್ ಸಂಗ್ರಹಿಸಲು ಅವಕಾಶ ನೀಡುವುದಿಲ್ಲ ಎಂದು ರೈತ ಪ್ರತಿಭಟನಾ ಗುಂಪಿನ ಮುಖಂಡ ಹರಿಂದರ್ ಸಿಂಗ್ ಲಖೋವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರತಿಭಟನೆಯನ್ನು ಕೈ ಬಿಡುವಂತೆ ನಿನ್ನೆ ಕೃಷಿ ಸಚಿವ ಥೋಮರ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. 32 ರೈತ ಸಂಘಟನೆಗಳ ಮುಖಂಡರು ಈ ಸಭೆಯಲ್ಲಿ ಭಾಗಿಯಾಗಿದ್ದು, ಮೂರು ನೂತನ ಕೃಷಿ ಕಾನೂನನ್ನು ರದ್ದುಪಡಿಸುವಂತೆ ಅವರು ಬಿಗಿ ನಿಲುವು ತಾಳಿದ್ದರು. ಎಂಎಸ್ಪಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಕೇಂದ್ರ ಭರವಸೆ ನೀಡಿದೆ. ಆದರೆ ರೈತರು ಬಿಗಿ ಪಟ್ಟು ಸಡಿಸಲಾದ ಹಿನ್ನಲೆ ಡಿ. 5ರಂದು ಮತ್ತೊಂದು ಸಭೆ ನಡೆಸಲು ನಿರ್ಧರಿಸಲಾಗಿದೆ. ನಾಳೆ ಮತ್ತೊಮ್ಮೆ ಸಚಿವರೊಂದಿಗೆ ರೈತರು ಸಭೆ ನಡೆಸುವ ಮುನ್ನ ಇಂದು ರೈತರೊಂದಿಗೆ ಸಂಘಟನೆ ಮುಖಂಡರು ಸಭೆ ನಡೆಸಿ ಪತ್ರಿಕಾಗೋಷ್ಠಿ ನಡೆಸಿದರು
Yesterday, we told the Government that the farm laws should be withdrawn. On 5 Dec, effigies of PM Modi will be burnt across the country. We have given a call for Bharat Bandh on December 8: Bharatiya Kisan Union (BKU-Lakhowal) General Secretary, HS Lakhowal at Singhu Border pic.twitter.com/dA1Xykds2K
— ANI (@ANI) December 4, 2020
ಇದನ್ನು ಓದಿ: ಬಿಜೆಪಿ ಕಾರ್ಯಕಾರಿಣಿ; ಬೆಳಗಾವಿಗೆ ಬಂದಿಳಿದ ಉಸ್ತುವಾರಿ ಅರುಣ್ ಸಿಂಗ್; ಸಂಪುಟ ವಿಸ್ತರಣೆ ಬಗ್ಗೆ ಸಿಗಲಿದೆಯಾ ಸಂದೇಶ?
ಇನ್ನು ಈ ಕುರಿತು ಮಾತನಾಡಿರುವ ಕೃಷಿ ಸಚಿವ ಥೋಮರ್, ಪ್ರತಿಭಟನೆ ಹಿಂಪಡೆಯುವ ಸಂಬಂಧ ರೈತರೊಂದಿಗೆ ನಿರಂತರ ಚರ್ಚೆ ನಡೆಯುತ್ತಿದೆ. ಈಗಾಗಲೇ ರೈತರು ಹಾಗೂ ಸರ್ಕಾರ ಕೆಲವು ಅಂಶಗಳನ್ನು ಒಪ್ಪಿಕೊಂಡಿದೆ. ಸರ್ಕಾರ ಕಿಸಾನ್ ಯೂನಿಯನ್ನೊಂದಿಗೆ ಮಾತನಾಡುತ್ತಿದ್ದು, ಸಕಾರಾತ್ಮಕ ಬೆಳವಣಿಗೆ ಕಂಡು ಬಂದಿದೆ. ನಾಳೆ ಮತ್ತೆ ರೈತರೊಂದಿಗೆ ಸಭೆ ನಡೆಸಲಿದ್ದು, ಪರಿಹಾರ ಕಾಣಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ರಸ್ತೆಗಳನ್ನು ಬಂದ್ ಮಾಡಿರುವ ಪ್ರತಿಭಟನಾ ರೈತರಿಂದ ವೈದ್ಯಕೀಯ ಮತ್ತು ತುರ್ತು ಸೇವೆಗೆ ಅಡ್ಡಿಯಾಗುತ್ತಿದೆ. ತಕ್ಷಣಕ್ಕೆ ಅವರನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ದಾಖಲಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ