Viral Story: ಎಮ್ಮೆ ಹಾಲು ಕೊಡ್ತಿಲ್ಲ ಅಂತ ಪೊಲೀಸರಿಗೆ ದೂರು ಕೊಟ್ಟ ರೈತ: ಆಮೇಲೆ ಏನಾಯ್ತು?

Viral News : ರೈತನೊಬ್ಬ ತನ್ನ ಎಮ್ಮೆ  ಹಾಲು ಕೊಡುತ್ತಿಲ್ಲ ಎಂದು ಪೊಲೀಸ್ ಠಾಣೆಗೆ ತೆರಳಿ ತನ್ನ ದೂರು ನೀಡಿದ್ದಾನೆ. ಪೊಲೀಸರ ಭಯ ಎಮ್ಮೆಗೂ ತಟ್ಟಿದೆಯೋ ಏನೋ, ಮರುದಿನವೇ ಎಮ್ಮೆ ಹಾಲು ಕೊಡಲು ಆರಂಭಿಸಿದೆ.

ಎಮ್ಮೆ ಹಾಲು ಕೊಡ್ತಿಲ್ಲ ಅಂತ ದೂರು ಕೊಟ್ಟ ರೈತ

ಎಮ್ಮೆ ಹಾಲು ಕೊಡ್ತಿಲ್ಲ ಅಂತ ದೂರು ಕೊಟ್ಟ ರೈತ

  • Share this:
ನಮಗೆ ತೊಂದರೆಯಾದರೆ, ನಾವು ಅಪಾಯದಲ್ಲಿದ್ದರೆ, ಅಥವಾ ಅನ್ಯಾಯವಾಗಿದ್ದಾರೆ ತಕ್ಷಣ ನಮ್ಮ ತಲೆಗೆ ಬರುವುದು ಪೊಲೀಸರು(Police). ಸೂರ್ಯ(Sun) ಹುಟ್ಟದ ದಿನವಿಲ್ಲ, ಕ್ರೈಂ(Crime) ನಡೆಯದ ದಿನವಿಲ್ಲ. ಹೌದು, ಪ್ರತಿನಿತ್ಯ ಒಂದಲ್ಲ ಒಂದು ಕ್ರೈಂಗಳು ಆಗುತ್ತಲೆ ಇರುತ್ತವೆ. ಈ ವಿಚಾರವಾಗಿ ಪ್ರತಿ ದಿನ ಪೊಲೀಸರಿಗೆ ಕೆಲಸ ತಪ್ಪಿದ್ದಲ್ಲ. ಪ್ರತಿದಿನ ದೂರ ದಾಖಲಾಗುತ್ತಲೇ ಇರುತ್ತವೆ. ಹಲ್ಲೆ(Attack), ಕಳ್ಳತನ(Theft), ರೇಪ್(Rape)​, ಲೈಂಗಿಕ ಕಿರುಕುಳ(Sexual Harassment), ಅಪಘಾತ(Accident), ಸೂಸೈಡ್​(Suicide) ಇಂಥಹ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ಮಧ್ಯಪ್ರದೇಶ(Madhya Pradesh)ದಲ್ಲಿ ವ್ಯಕ್ತಿಯೊಬ್ಬ ಪೊಲೀಸ್​ ಠಾಣೆಗೆ ದೂರು ನೀಡಲು ಬಂದಿದ್ದ. ಈತನ ದೂರು ನೋಡಿ ಪೊಲೀಸರು ದಂಗಾಗಿ ಹೋಗಿದ್ದರು. ಮಾತು ಬರದೇ ಮೂಕವಿಸ್ಮಿತರಾಗಿದ್ದಾರೆ. ಎಂಥೆಂಥಾ ದೂರುಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆದರೆ ಮೊದಲ ಬಾರಿಗೆ ಈ ರೀತಿಯ  ಪ್ರಕರಣ ದಾಖಲಿಸಿಕೊಂಡಿದ್ದರು.  ಆ ದೂರು ಏನು ಅಂತ ತಿಳಿದರೆ ನೀವು ದಂಗಾಗಿ ಹೋಗ್ತೀರಾ. ಈ ರೀತಿಯ ಘಟನೆಗಳು ನಿಜಕ್ಕೂ ನಡೆಯತ್ತಾ ಎಂದು ಕೇಳುತ್ತೀರ. ಆದರೂ ಇದು ನಿಜ. 

ಎಮ್ಮೆ ಹಾಲು ಕೊಡುತ್ತಿಲ್ಲ ಅಂತ ಮಾಲೀಕನಿಂದ ದೂರು!

ರೈತನೊಬ್ಬ ತನ್ನ ಎಮ್ಮೆ  ಹಾಲು ಕೊಡುತ್ತಿಲ್ಲ ಎಂದು ಪೊಲೀಸ್ ಠಾಣೆಗೆ ತೆರಳಿ ತನ್ನ ದೂರು ನೀಡಿದ್ದಾನೆ. ಪೊಲೀಸರ ಭಯ ಎಮ್ಮೆಗೂ ತಟ್ಟಿದೆಯೋ ಏನೋ, ಮರುದಿನವೇ ಎಮ್ಮೆ ಹಾಲು ಕೊಡಲು ಆರಂಭಿಸಿದೆ. ಈ ವಿಚಿತ್ರ ಘಟನೆ ನಡೆದಿರುವುದು ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ನಯಾಗಾಂವ್ ಹಳ್ಳಿಯಲ್ಲಿ ನಡೆದಿದೆ. 45 ವರ್ಷದ ರೈತ ಬಬೂಲ್ ಜತವ್ ಮನೆಯಲ್ಲಿ ಎಮ್ಮೆ ಕರು ಹಾಕಿ ಕೆಲ ದಿನ ಕಳೆದರೂ ಹಾಲು ನೀಡುತ್ತಿರಲಿಲ್ಲ. ಕರುವಿಗೆ ಕೊಂಚ ಹಾಲು ನೀಡಿ ಎಮ್ಮೆ ಸುಮ್ಮನಾಗುತ್ತಿತ್ತು. ಅದೆಷ್ಟೇ ಪ್ರಯತ್ನ ಪಟ್ಟರೂ ರೈತನಿಗೆ ಎಮ್ಮೆ ಹಾಲು ಮಾತ್ರ ನೀಡಲೇ ಇಲ್ಲ. ರೈತ ತನ್ನ ಎಲ್ಲಾ ಅನುಭವ ಧಾರೆ ಎರೆದರೂ ಎಮ್ಮೆ ಹಾಲು ನೀಡಲಿಲ್ಲ. ಕೋಪಗೊಂಡ ರೈತ ನೇರವಾಗಿ ಪೊಲೀಸ್​ ಠಾಣೆಗೆ ಬಂದು ಎಮ್ಮೆ ವಿರುದ್ಧ ದೂರು ನೀಡಿದ್ದಾರೆ.

ಎಮ್ಮೆಗೆ ಮಾಡಿಸಿದ್ದರಂತೆ ವಾಮಾಚಾರ!

ಎಮ್ಮೆ ಹಾಲು ಕೊಡದೇ ರೈತನಿಗೆ ಸತಾಯಿಸಿದೆ.  ಗ್ರಾಮಸ್ಥರು ಎಮ್ಮೆಗೆ ವಾಮಾಚಾರ ಮಾಡಿದ್ದಾರೆ. ಮಾಟ ಮಂತ್ರ ಮಾಡಿದ ಕಾರಣ ಎಮ್ಮೆ ಹಾಲು ನೀಡುತ್ತಿಲ್ಲ ಎಂದಿದ್ದಾರೆ. ಇದೇ ರೀತಿ ಪಕ್ಕದ ಹಳ್ಳಿಯಲ್ಲೂ ಆಗಿದೆ. ಇದು ವಾಮಾಚಾರದ ಪ್ರಭಾವ ಎಂದು ಸ್ಥಳೀಯರು ಹೇಳಿದ್ದಾರೆ. ಇದರಿಂದ ರೈತ ಬಬೂಲ್ ಜತವ್ ಚಿಂತೆ ಮತ್ತಷ್ಟು ಹೆಚ್ಚಾಗಿದೆ. ದಿಕ್ಕ ತೋಚದ ರೈತ ವಾಮಾಚಾರ ತೆಗೆಯಲು ಹಲವರನ್ನು ಸಂಪರ್ಕಿಸಿದ್ದಾನೆ. ಊರಿನ ಮಾಟಗಾರರು, ಜ್ಯೋತಿಷಿಗಳು, ಪೂಜಾರಿಗಳನ್ನು ಭೇಟಿಯಾಗಿ ಸಲಹೆ ಕೇಳಿದ್ದಾನೆ. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.  ಕೊನೆಗೆ ದಿಕ್ಕು ತೋಚದೆ ನಯಾಂಗಾವ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

ಇದನ್ನು ಓದಿ : ವ್ಹಾ... ಏನ್​ ತಲೆ ಗುರೂ ಈ ಚಿಂಪಾಂಜಿದು, ಇದು ಮಾಡಿರೋ ಕೆಲ್ಸ ನೋಡಿ!

ಠಾಣೆಗೆ ಎಮ್ಮೆ ಕರೆದುಕೊಂಡು ಹೋಗಿ ದೂರು!

ಮೊದಲು ರೈತ ತೆರಳಿ ಪೊಲೀಸ್ ಠಾಣೆಯಲ್ಲಿ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲ ಅಂತ ದೂರು ನೀಡಿದ್ದಾನೆ. ದೂರು ಕೊಟ್ಟು ಮನೆಗೆ ಬಂದಿದ್ದ. ಒಂದು ದಿನವಾದರೂ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮತ್ತೆ ಮರುದಿನ ತನ್ನ ಎಮ್ಮೆಯೊಂದಿಗೆ ಪೊಲೀಸ್​ ಠಾಣೆಗೆ ತೆರಳಿದ್ದಾನೆ. ಠಾಣೆ ಮುಂದು ಹಾಲು ಕರೆಯಲು  ಪ್ರಯತ್ನಿಸಿ ತನ್ನ ಗೋಳು ತೋಡಿಕೊಂಡಿದ್ದಾನೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾನೆ. ಪೊಲೀಸರು ಪಶು ವೈದ್ಯರಿಗೆ ಮಾಹಿತಿ ನೀಡಿ ಎಮ್ಮೆಯ ಸಮಸ್ಯೆ ಪರಿಹರಿಸಲು ಸೂಚಿಸಿದ್ದಾರೆ.

ಇದನ್ನು ಓದಿ : 8 ವರ್ಷಗಳ ಕಾಲ ಶ್ರಮಪಟ್ಟು 28,000 ಆಮೆಗಳನ್ನು ರಕ್ಷಿಸಿದ ಒಬ್ಬಂಟಿ ಮಹಿಳೆ..! ಇವರ ಸಾಹಸ ಮೆಚ್ಚುವಂತದ್ದು

ಮರುದಿನವೇ ಹಾಲು ಕೊಟ್ಟ ಎಮ್ಮೆ!

ತಕ್ಷಣವೇ ಪಶು ವೈದ್ಯರು ಬಬೂಲ್ ರೈತನ ಮನಗೆ ಭೇಟಿ ನೀಡಿದ್ದರು. ಪರೀಕ್ಷೆ ನಡೆಸಿ ಕೆಲ ಸೂಚನೆ ಜೊತೆಗೆ ಔಷಧಿಗಳನ್ನು ನೀಡಿದ್ದಾರೆ. ಇದಾದ ಬಳಿಕ ಮರುದಿನದಿಂದಲೇ ಎಮ್ಮೆ ಹಾಲು ಕೊಡುವುದನ್ನು ಶುರುಮಾಡಿದೆ. ಇದರಿಂದ ಖುಷಿಗೊಂಡ ರೈತ ಪೊಲೀಸ್​ ಠಾಣೆಗೆ ತೆರಳಿ ಧನ್ಯವಾದ ತಿಳಿಸಿದ್ದಾರೆ.
Published by:Vasudeva M
First published: