Jugaad Ideas: ಚಿರತೆಯಿಂದ ಬೆಳೆ ರಕ್ಷಿಸಲು ರಾತ್ರಿಯಿಡೀ ಪಂಜರದಲ್ಲಿ ಕೂರುವ ವ್ಯಕ್ತಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಪಂಜರವನ್ನು ತಮ್ಮ ಕೃಷಿ ಭೂಮಿಯಲ್ಲಿ ಇಟ್ಟು ಅದರೊಳಗೆ ತಾವೇ ಹೊಕ್ಕಿ ಕುಳಿತಿರ್ತಾರೆ. ರಾತ್ರಿಯಿಡೀ ಪಂಜರದೊಳಗೆ ಕುಳಿತು ಹೊಲ ಕಾಯ್ತಾರೆ ಈ ಭರತ್.

  • Local18
  • 5-MIN READ
  • Last Updated :
  • Gujarat, India
  • Share this:

    ಅಲಹಾಬಾದ್: ಕೃಷಿಕರಿಗೆ ಸಮಸ್ಯೆ ಒಂದಾ ಎರಡಾ! ಇಲ್ನೋಡಿ ಹೀಗೆ ಪಂಜರದಲ್ಲಿ (Farmer In Bone) ಕುಳಿತಿರೋ ವ್ಯಕ್ತಿಯೂ ಓರ್ವ ಕೃಷಿಕರೇ! ಈ ವ್ಯಕ್ತಿ ಹೀಗೆ ಪಂಜರದಲ್ಲಿ ಯಾಕೆ ಹೊಕ್ಕಿ ಕುಳಿತಿದ್ದಾರೆ ಅಂತ ನಿಮಗೂ ಪ್ರಶ್ನೆ ಹುಟ್ಟಿರಬಹುದು. ತಾವು ಬೆಳೆದಿರೋ ಬೆಳೆಯನ್ನ ರಕ್ಷಿಸೋಕೆ ನಿಜಕ್ಕೂ ಶತಪ್ರಯತ್ನ ಪಡ್ತಿರೋ ಕೃಷಿಕರ (Farmers News) ಕಥೆಯಿದು!


    ಗುಜರಾತ್ ಜಿಲ್ಲೆಯ ಮೊಡಸ ತಾಲೂಕಿನ ಭಟ್ಕೋಟ ಗ್ರಾಮದಲ್ಲಿ ನಿತ್ಯವೂ ಚಿರತೆಗಳು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭಯ, ಭೀತಿ ಮೂಡಿಸಿವೆ. ಈ ಊರಿನ 50 ಅಡಿ ದೂರದಲ್ಲೇ ಇರುವ ಶಿಕೋರ್ ಮಾತಾ ಮಂದಿರದ ಬಳಿಯಿರುವ ಕೊಳವೊಂದಕ್ಕೆ ಬಾಯಾರಿಕೆ ತಣಿಸಿಕೊಳ್ಳಲು ಚಿರತೆಗಳು ಬರುತ್ತವೆ.ಈ ಚಿರತೆಗಳಿಂದ ಕೃಷಿಕರು ಬೆಳೆಯುವ ಬೆಳೆಗಳೆಲ್ಲ ಹಾನಿಯಾಗ್ತಿವೆಯಂತೆ.


    ಈ ಐಡಿಯಾ ಹಿಂದಿದೆ ಹೀಗೊಂದು ಕಾರಣ
    ಅಷ್ಟೇ ಅಲ್ಲ, ಮಹಿಳೆಯರು ಆಕಳುಗಳ ಹಾಲು ಕರೆಯೋಕೆ ಮನೆಯಿಂದ ಹೊರಬೀಳೊಕೂ ಆಗ್ತಿಲ್ಲವಂತೆ. ಎಷ್ಟೇ ಕಷ್ಟಪಟ್ರೂ ಚಿರತೆ ದಾಳಿಯಿಂದ ಬೆಳೆಗಳನ್ನ ಕಾಪಾಡೋಕೆ ಸಾದ್ಯವೇ ಆಗಿಲ್ವಂತೆ. ಅದೇ ಕಾರಣಕ್ಕೆ ಈ ಕೃಷಿಕರು ಹೊಸ ಐಡಿಯಾವೊಂದರ ಮೊರೆ ಹೋಗಿದ್ದಾರೆ.


    ಹೀಗೆ ಚಿರತೆ ದಾಳಿಯಿಂದ ಪಾರಾಗೋಕೆ ಭರತ್ ಭಾಯ್ ಎಂಬ ಈ ಕೃಷಿಕರು ಪಂಜರವೊಂದನ್ನು ನಿರ್ಮಿಸಿದ್ದಾರೆ.


    ಇದನ್ನೂ ಓದಿ: Belagavi: ತಂದೆ ತಾಯಿಯೇ ದೇವರು! ಅಪ್ಪ, ಅಮ್ಮನ ಪುತ್ಥಳಿ ಸ್ಥಾಪಿಸಿದ ಮಗ!


    10 ಸಾವಿರದಲ್ಲಿ ಹೊಸ ಐಡಿಯಾ!
    ಆ ಪಂಜರವನ್ನು ತಮ್ಮ ಕೃಷಿ ಭೂಮಿಯಲ್ಲಿ ಇಟ್ಟು ಅದರೊಳಗೆ ತಾವೇ ಹೊಕ್ಕಿ ಕುಳಿತಿರ್ತಾರೆ. ರಾತ್ರಿಯಿಡೀ ಪಂಜರದೊಳಗೆ ಕುಳಿತು ಹೊಲ ಕಾಯ್ತಾರೆ ಈ ಭರತ್.



    ಪಂಜರ ತಯಾರಿಸಲು ಕೇವಲ 10 ಸಾವಿರಕ್ಕೆ ಖರ್ಚಾಗಿದೆ. ಈ ಐಡಿಯಾದಿಂದ ನಾನು ಬೆಳೆದ ಬೆಳೆಗಳು ಉಳಿದಿವೆ ಅಂತಾರೆ ಈ ಕೃಷಿಕ.


    ಇದನ್ನೂ ಓದಿ: Uttara Kannada: ಮಲೆನಾಡ ರೈತರ ಮೊಗದಲ್ಲಿ ನಗು ತಂದ ಬಿಸಿಲನಾಡಿನ ಚೆಲುವೆ!


    ಒಟ್ಟಾರೆ ಈ ಕೃಷಿಕರ ಒಂದು ಚಿಕ್ಕ ಪ್ರಯತ್ನದಿಂದ ಬೆಳೆಯೂ ಚಿರತೆಗಳಿಂದ ಹಾನಿಯಾಗದೇ ಉಳಿಯುತ್ತಿದೆ. ಜೊತೆಗೆ ಈ 'ಪಂಜರ ಪ್ರಯತ್ನ' ವೈರಲ್ ಆಗಿ ಈ ಕೃಷಿಕರು ಫೇಮಸ್ ಸಹ ಆಗಿದ್ದಾರೆ!

    Published by:ಗುರುಗಣೇಶ ಡಬ್ಗುಳಿ
    First published: