• Home
 • »
 • News
 • »
 • national-international
 • »
 • ಬರೀ ಕಲ್ಲು ಅಂದುಕೊಂಡು ಎರಡು ದೇಶಗಳ ಗಡಿಯನ್ನೇ ಬದಲಿಸಿಬಿಟ್ಟ ರೈತ: ಉಭಯ ರಾಷ್ಟ್ರಗಳು ಮಾಡಿದ್ದೇನು ಗೊತ್ತಾ?

ಬರೀ ಕಲ್ಲು ಅಂದುಕೊಂಡು ಎರಡು ದೇಶಗಳ ಗಡಿಯನ್ನೇ ಬದಲಿಸಿಬಿಟ್ಟ ರೈತ: ಉಭಯ ರಾಷ್ಟ್ರಗಳು ಮಾಡಿದ್ದೇನು ಗೊತ್ತಾ?

ಗಡಿ ಸೂಚಕ ಕಲ್ಲು

ಗಡಿ ಸೂಚಕ ಕಲ್ಲು

ಇದು ಅಂತಾರಾಷ್ಟ್ರೀಯ ನಡುವಿನ ಸಮಸ್ಯೆಗೆ ಕಾರಣವಾಗಬಹುದು ಎನ್ನುವ ನಿರೀಕ್ಷೆಯೂ ರೈತನಿಗೆ ಇಲ್ಲದೇ ಈ ಅಚಾತುರ್ಯ ನಡೆದು ಹೋಗಿದೆ.

 • Share this:

  ಎರಡು ದೇಶದ ಗಡಿಗಳನ್ನು ಗುರುತಿಸುವಿಕೆಗಾಗಿ ಕೆಲವೊಮ್ಮೆ ಕಲ್ಲು, ಗೋಡೆಗಳನ್ನು ಕಟ್ಟುವುದು ಸಾಮಾನ್ಯ. ಇಂತಹ ಕೆಲ ಅಂಶಗಳು ಸಾಮಾನ್ಯ ಜನರ ಗಮನಕ್ಕೆ ಬರುವುದೇ  ಇಲ್ಲ. ಇದರಿಂದಾಗಿ ಅನೇಕ ಅಚಾತುರ್ಯಗಳು ನಡೆದು ಹೋಗಿರುವ ಘಟನೆಗಳಿವೆ. ಇಲ್ಲೂ ತನ್ನ ಕೃಷಿ ಕೆಲಸಕ್ಕೆ ಅಡ್ಡಿಯಾಗುತ್ತಿದ್ದ ಕಲ್ಲನ್ನು ಜರುಗಿಸಿದ್ದ ರೈತನೊಬ್ಬ ಭಾರೀ ಬೆಲೆ ತೆರುವ ಪರಿಸ್ಥಿತಿ ಬಂದೊದಗಿದೆ. ಬೆಲ್ಜಿಯಂನ ಎರ್ಕ್ವೆಲಿನ್ನೆಸ್ ಎನ್ನುವ ಹಳ್ಳಿಯ ರೈತನೊಬ್ಬ ಫ್ರಾನ್ಸ್‌ನ ಗಡಿಯನ್ನೇ ಬದಲಿಸಿರುವಂತಹ ಅಚಾನಕ್ಕಾದ ಘಟನೆಯೊಂದು ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಫ್ರಾನ್ಸ್‌ ಗಡಿ ಎಂದು ಸೂಚಿಸಲು ಇಟ್ಟಿದ್ದ ಕಲ್ಲನ್ನು ಟ್ರ್ಯಾಕ್ಟರ್ ಚಲಿಸುವಾಗ ಆಕಸ್ಮಾತ್ ಆಗಿ ಜರುಗಿಸಿರುವ ಕಾರಣ ಈಗ ಗಡಿಯೇ ಬದಲಾಗಿಬಿಟ್ಟಿದ್ದು, ಕೋಲಾಹಲಕ್ಕೆ ಕಾರಣವಾಗಿದೆ. ಇದು ಅಂತಾರಾಷ್ಟ್ರೀಯ ನಡುವಿನ ಸಮಸ್ಯೆಗೆ ಕಾರಣವಾಗಬಹುದು ಎನ್ನುವ ನಿರೀಕ್ಷೆಯೂ ರೈತನಿಗೆ ಇಲ್ಲದೇ ಈ ಅಚಾತುರ್ಯ ನಡೆದು ಹೋಗಿದೆ.


  ಬಿಬಿಸಿ ಪ್ರಕಾರ, ಸ್ಥಳಾಂತರಗೊಂಡ ಗಡಿ ಸೂಚಕ ಕಲ್ಲು 2.29 ಮೀಟರ್ (7.5 ಅಡಿ) ಮುಂದಕ್ಕೆ ಹೋಗಿದೆ. ಇದು ತನ್ನ ತಾಯ್ನಾಡ ಅನ್ನು ಸುಮಾರು 1,000 ಚದರ ಮೀಟರ್ ವಿಸ್ತರಿಸಿದೆ. ಇನ್ನು ಈ ಕಾಡಿನಲ್ಲಿ ನಡೆದು ಹೋಗುತ್ತಿದ್ದ ಸ್ಥಳೀಯ ಇತಿಹಾಸಕಾರ ಗಡಿ ಕಲ್ಲು ಜರುಗಿರುವುದನ್ನು ಗಮನಿಸಿದ್ದಾರೆ. ಇನ್ನು ಉಭಯ ರಾಷ್ಟ್ರಗಳ ನಡುವಿನ ಗಡಿ ಸುಮಾರು 620 ಕಿಲೋಮೀಟರ್ ಇದೆ. ಇದನ್ನು ಪ್ರತಿನಿಧಿಸುವ ಕಲ್ಲನ್ನು 200 ಕ್ಕೂ ಹೆಚ್ಚು ವರ್ಷಗಳ ಹಿಂದೆ ಇಲ್ಲಿ ಸ್ಥಾಪಿಸಲಾಗಿದೆ. 1819 ರಲ್ಲಿ ಇಲ್ಲಿ ಕಲ್ಲನ್ನು ಇಡಲಾಯಿತು. 1820 ರಲ್ಲಿ ಕಾಟ್ರೀಜ್ಕ್ ಒಪ್ಪಂದಕ್ಕೆ ಮೊದಲೇ ಇದನ್ನು ಅನಧಿಕೃತವಾಗಿ ಗಡಿ ಎಂದು ಸೂಚಿಸಲಾಗಿತ್ತು.


  ಈ ಘಟನೆ ಎರಡು ಯುರೋಪಿಯನ್ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ವಿಷಯವಾಗಿ ಮಹತ್ವ ಪಡೆದುಕೊಳ್ಳುವ ಸಾಧ್ಯತೆಗಳಿತ್ತು. ಆ ಮೂಲಕ ದೊಡ್ಡ ಸಮಸ್ಯೆಯನ್ನೇ ಎದುರಿಸಬೇಕಿತ್ತು. ಆದರೆ ಅದೃಷ್ಟವಶಾತ್ ಎರಡೂ ದೇಶದ ಅಧಿಕಾರಿಗಳು ಈ ಘಟನೆಯನ್ನು ತೀರಾ ಗಂಭೀರವಾಗಿ ಪರಿಗಣಿಸದೇ ತಮಾಷೆಯ ಅಂಶವನ್ನೂ ಗಮನಿಸಿದ್ದಾರೆ.


  ಇದನ್ನು ಓದಿ: ಟಿಎಂಸಿ ಗೂಂಡಾಗಳಿಂದ ನನ್ನ ಬೆಂಗಾವಲು ವಾಹನದ ಮೇಲೆ ದಾಳಿ; ಕೇಂದ್ರ ಸಚಿವ ಮುರಳೀಧರನ್​ ಆರೋಪ


  ಎರ್ಕ್ವೆಲಿನ್ನೆಸ್ ಹಳ್ಳಿಯ ಮೇಯರ್ ಡೇವಿಡ್ ಲಾವೊಕ್ಸ್ ಅವರು ಫ್ರೆಂಚ್ ಟಿವಿ ಚಾನೆಲ್ ನವರು ಈ ಕಲ್ಲಿನ ಚಿತ್ರೀಕರಣವನ್ನು ಮಾಡುತ್ತಿರುವ ಚಿತ್ರವನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಆ ಚಿತ್ರಕ್ಕೆ 'ನಮ್ಮ ಪಟ್ಟಣದ ಅಳತೆ ವಿಸ್ತಾರವಾಗುತ್ತಿರುವುದು ಖುಷಿಯ ಸಂಗತಿಯಾಗಿದೆ' ಎಂದಿದ್ದಾರೆ. ಅದು ಅವರ ಬಾಸಿಗ್ನೀಸ್-ಸುರ್-ರೋಕ್ (ಇದು ಉತ್ತರ ಫ್ರಾನ್ಸ್‌ನ ನಾರ್ಡ್ ವಿಭಾಗದಲ್ಲಿನ ಒಂದು ಕಮ್ಯೂನ್) ವಿನ ಇನ್ನೊಂದು ಭಾಗವಾಗಿಲ್ಲದಿರಬಹುದು.


  ಎರ್ಕ್ವೆಲಿನ್ನೆಸ್‌ನ ಮೇಯರ್ 2019 ರಲ್ಲಿ ಗಡಿ ಸ್ಥಾಪನೆಯ 200 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡುತ್ತಾ, ಈ ಕಲ್ಲು ನಿಖರವಾಗಿ ಭೂ ಸ್ಥಳೀಕರಿಸಲ್ಪಟ್ಟಿದೆ ಎಂದಿದ್ದರು. Bousignies-sur-Roc ಎಂಬುದು ಫ್ರೆಂಚ್ ಕಡೆಯ ಒಂದು ಕಮ್ಯೂನ್ ಆಗಿದೆ. ಬೆಲ್ಜಿಯಂನಲ್ಲಿ ನಡೆದ ವಾಟರ್‌ಲೂ ಕದನದ ನಂತರ ಇದನ್ನು 1820 ರಲ್ಲಿ ಸ್ಥಾಪಿಸಲಾಯಿತು. ಈ ಯದ್ಧದಲ್ಲಿ ನೆಪೋಲಿಯನ್ ಸೋಲನುಭವಿಸಿದನು.
  ಈ ವಿಷಯದಿಂದ ವಿಚಲಿತವಾಗಿರುವ ರೈತ, ಗಡಿ ಕಲ್ಲಿನ ಬಗ್ಗೆ ಯಾವುದೇ ಅರಿವು ಇರದೇ ತನ್ನ ಟ್ರ್ಯಾಕ್ಟರ್ ದಾರಿಗೆ ಈ ಕಲ್ಲು ಅಡ್ಡವಾಗಿದೆ ಎಂದು ಭಾವಿಸಿದ್ದನು. ಟ್ರ್ಯಾಕ್ಟರ್‌ಗೆ ತೊಂದರೆ ನೀಡುತ್ತಿದೆ ಎನ್ನುವ ಕಾರಣಕ್ಕೆ ಈ ಕಲ್ಲನ್ನು ಮುಂದಕ್ಕೆ ಆತ ಸರಿಸಿದ್ದನು ಎನ್ನುವ ಅಂಶ ತಿಳಿದುಬಂದಿದೆ. ಅದಕ್ಕೆ ನೋಡಿ, ಯಾವುದನ್ನೂ ನಿರ್ಲಕ್ಷಿಸಬಾರದು. ಯಾಕಂದ್ರೆ ಯಾವ ಕಲ್ಲಿನಲ್ಲಿ ಯಾವ ಇತಿಹಾಸ ಇರುತ್ತದೋ? ಯಾರು ಬಲ್ಲರು!

  Published by:Seema R
  First published: