HOME » NEWS » National-international » FARMER PROTESTS ARE BIG BUSINESSES BAD OR JUST EASY TARGETS SESR

Farmers Protest: ದೊಡ್ಡ ಉದ್ಯಮಗಳು ಕೆಟ್ಟವೇ ಅಥವಾ ಸುಲಭ ಗುರಿಯೇ?

ದೊಡ್ಡ ಉದ್ಯಮದ ಅತಿದೊಡ್ಡ ಶಕ್ತಿ ಎಂದರೆ ಯಾವುದೇ ರೀತಿಯ ಉದ್ಯಮಗಳಿಗೆ ಹೋಲಿಸಲಾಗದ ರೀತಿಯಲ್ಲಿ ಕೆಲಸ ಮಾಡುವುದು.

news18-kannada
Updated:January 5, 2021, 10:17 PM IST
Farmers Protest: ದೊಡ್ಡ ಉದ್ಯಮಗಳು ಕೆಟ್ಟವೇ ಅಥವಾ ಸುಲಭ ಗುರಿಯೇ?
ರೈತರ ಪ್ರತಿಭಟನೆ
  • Share this:
ರೈತರ ಪ್ರತಿಭಟನೆಗಳ ಸುತ್ತ ನಡೆದಿರುವ ಬಹಳಷ್ಟು ಚರ್ಚೆಗಳನ್ನು ಗಮನಿಸಿದಾಗ ಇಂಡಿಯಾ ಐ ಎನ್ ಸಿ ಸಂಘಟನೆಯ ಪೋಸ್ಟರ್ ಹುಡುಗರು ಖಂಡಿತವಾಗಿ ಖಳನಾಯಕರಾಗಿದ್ದಾರೆ ಎಂದು ತಿಳಿಯುತ್ತದೆ. ಕೃಷಿ ಉತ್ಪನ್ನ, ಅವುಗಳ ಮಾರಾಟ, ಸಂಗ್ರಹ ಕೃಷಿ ಮಾರುಕಟ್ಟೆ ಮತ್ತು ಒಪ್ಪಂದದ ಕೃಷಿ ಸುಧಾರಣೆಗಳ ಮೇಲಿನ ಕೇಂದ್ರದ 3 ಹೊಸ ಕಾನೂನುಗಳ ವಿರುದ್ಧ 25 ಸೆಪ್ಟೆಂಬರ್ 2020ರ ಭಾರತ ಬಂದನೊಂದಿಗೆ ಸ್ಪಷ್ಟ ಗೊಂಡ ಪ್ರತಿಭಟನೆಗಳು ಅಂಬಾನಿ ಮತ್ತು ಅದಾನಿ ಎಂಬ ಇಬ್ಬರು ಉದ್ಯಮಿಗಳನ್ನು ಬಗ್ಗೆ ಮಾತಾಡುತ್ತಿವೆ. ಈ ಹೊಸ ಕೃಷಿ ಕಾನೂನುಗಳು ಕೇವಲ ರೈತ ವಿರೋಧಿಗಳು ಮಾತ್ರವಲ್ಲ. ಇವು ರಿಲಾಯನ್ಸ್​ ಮತ್ತು ಅದಾನಿ ಎರಡು ಉದ್ಯಮಗಳಿಗೆ ಅನುಕೂಲ ಮಾಡಿಕೊಡುತ್ತವೆ ಎಂಬ ಅಭಿಪ್ರಾಯಗಳು ವಿರೋಧಿ ಶಿಬಿರದ ರಾಜಕಾರಣಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಇದರಿಂದ ಭಾರತದ ಬಂಡಾವಳ ಶಾಹಿಗಳು ಆರೋಪ ಎದುರಿಸುವಂತೆ ಆಗಿದೆ. ಅಲ್ಲದೇ ಇವು ಅನೇಕ ಸಮಸ್ಯೆಗಳಿಗೂ ಕಾರಣವಾಗಿದ್ದು, ಅನೇಕ ಪರಿಣಾಮವನ್ನು ಎದುರಿಸುವಂತೆ ಆಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕೆಲವು ದುಷ್ಕರ್ಮಿಗಳು ಲುಧಿಯಾನದ ರಿಲಯನ್ಸ್​ ಸೂಪರ್​ಸ್ಟೋರ್​ ಮೇಲೆ ನಡೆಸಿದ ದಾಳಿಯಾಗಿದೆ. ಅಲ್ಲದೇ ದೋಬಾ ಪ್ರದೇಶದಲ್ಲಿ ರಿಲಾಯನ್ಸ್​ ಪೆಟ್ರೋಲ್​ ಪಂಪ್​ ವಶಕ್ಕೆ ಪಡೆಯಲಾಯಿತು ಹಾಗೂ ಮೊಗಾ ಜಿಲ್ಲೆಯಲ್ಲಿ ಅದಾನಿಯ ಧಾನ್ಯ ಸಂಗ್ರಹಗಳ ಮೇಲೆ ಹಿಡಿತ ಸಾಧಿಸಲಾಯಿತು. ಜೊತೆಗೆ ಜಿಯೋ ಮೊಬೈಲ್​ ಸಂಪರ್ಕವನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆ ಹೊಸ ರೂಪ ಪಡೆಯಿತು.

ಈ ಮಸೂದೆ ಖಾಸಗಿ ಕಾರ್ಪೋರೆಟ್​ ಕಂಪನಿಗಳು ಸಣ್ಣ ಕೃಷಿಕರ ಮೇಲೆ ಹಿಡಿತ ಸಾಧಿಸುತ್ತವೆ . ಗುತ್ತಿಗೆ ಕೃಷಿಯೂ ರೈತ ಮೇಲೆ ಹಿಡಿತಸಾಧಿಸುತ್ತದೆ. ನಾವು ತಿನ್ನುವುದನ್ನು ಕೂಡ ಬಂಡವಾಳ ಶಾಹಿಗಳ ಲಾಭಾದ ಲೆಕ್ಕಾಚಾರ ನಿರ್ಧರಿಸುತ್ತದೆ ಎಂಬ ವಾದ ಕೂಡ ಅಸಮಂಜಸವಾಗಿದೆ. ದೊಡ್ಡ ಮೊತ್ತದ ಹಣವನ್ನು ಭಾರತೀಯ ಬ್ಯಾಂಕುಗಳಿಂದ ಮನ್ನಾ ಮಾಡಿಸಿ ಕೊಳ್ಳಲೆಂದು ಸಾಲವನ್ನು ಪಡೆಯುವಲ್ಲಿ ಸಮರ್ಥವಾಗಿರುವ ಗೆಳೆತನದ, ವ್ಯಾಪಾರದಲ್ಲಿ ವಿದೇಶಿ ಕಂಪನಿಗಳ ಏಜೆಂಟ್ ರಂತಿರುವ ಬಂಡವಾಳಶಾಹಿಗಳ ರೂಪದಲ್ಲಿ ಮುಂದುವರೆದ ವಾದಗಳನ್ನು ಒದಗಿಸಲಾಗುತ್ತದೆ. ಒಂದು ಆರ್ ಟಿ ಐ ಪ್ರತಿಕ್ರಿಯೆ ಸೂಚಿಸುವಂತೆ 2015 ಮತ್ತು 2019 ರ ನಡುವೆ ರೂಪಾಯಿ 7.95 ಲಕ್ಷ ಕೋಟಿ ಸುಸ್ತಿ ಸಾಲಗಳನ್ನು ಮನ್ನಾ ಮಾಡಲಾಗಿದೆ.

ಈ ವಿಷಯವನ್ನು ಮತ್ತಷ್ಟು ಹದಗೆಡಿಸಲು ಸಾಮಾನ್ಯ ವ್ಯಕ್ತಿ ಕೂಡ ಅದಾನಿ ಸಂಸ್ಥೆಯ ಪ್ರಗತಿಯನ್ನು ನರೇಂದ್ರ ಮೋದಿಯವರ ರಾಜಕೀಯದೊಂದಿಗೆ ಹೋಲಿಕೆ ಮಾಡುವ ಯತ್ನ ನಡೆಸಿದರು. ಕಾಲೇಜು ಬಿಟ್ಟ ವಿದ್ಯಾರ್ಥಿಯೊಬ್ಬ ಉದ್ಯಮಿಯಾಗಿ ರೂಪುಗೊಳ್ಳುವ ಕಥೆ ಅಸಮಾನ್ಯ.  1998 ರಲ್ಲಿ ಆ ಗುಂಪು ಕಚ್ ಪ್ರದೇಶದ ವಿಶಾಲವಾದ ಬಂಜರು ಭೂಮಿಯಲ್ಲಿ ಬಂದರನ್ನು ನಿರ್ಮಿಸುವ ನಿರ್ಧಾರ ತಗೆದುಕೊಂಡು ಒಂದು ರೀತಿಯಲ್ಲಿ ಬಾಜಿ ಕಟ್ಟಿದಾಗ, ಅದರ ಸಮೀಪದಲ್ಲಿದ್ದ ಇದಕ್ಕಿಂತ ಬಹಳ ದೊಡ್ಡದಾದ ರಾಜ್ಯ ಸರ್ಕಾರದಿಂದ ನಡೆಸಲ್ಪಡುತ್ತಿದ್ದ ಕಾಂಡ್ಲಾ ಬಂದರಿನೊಂದಿಗೆ ಅನೇಕರು ಇದಕ್ಕೊಂದು ಅವಕಾಶ ಕೊಟ್ಟಿರಲಿಲ್ಲ. ಮುಂಡ್ರಾ ದಲ್ಲಿನ ಬೃಹತ್ ಪ್ರಮಾಣದ ಔದ್ಯಮಿಕ ಮತ್ತು ಸಾರಿಗೆ ಪರಿಸರ ವ್ಯವಸ್ಥೆಯ ಅಭಿವೃದ್ಧಿಯು ಒಂದು ತೆಗೆದುಹಾಕಲು ಕಠಿಣವಾದ ಮತ್ತು ಬಹುತೇಕ ಅನುಕರಿಸಲು ಅಸಾಧ್ಯವಾದ ಅಸಾಧಾರಣ ಉದ್ಯಮಶೀಲತಾ ವಾದವಾಗಿದೆ.

ಅದೇ ರೀತಿ ಸೆಪ್ಟೆಂಬರ್​ 2016ರಲ್ಲಿ 400 ಮಿಲಿಯನ್​​ ಗ್ರಾಹಕರೊಂದಿಗೆ ಪ್ರಾರಂಭವಾದ ಜಿಯೋ ವ್ಯವಹಾರದ ಏರಿಕೆಯನ್ನು ಸರ್ಕಾರಿ ಸ್ವಾಮ್ಯದ ಬಿಎಸ್​ಎನ್ಎಲ್ ಇಳಿಕೆಯೊಂದಿಗೆ ಹೋಲಿಸಿ, ಕರ್ಪೊರೇಟ್ ಪ್ರಗತಿಯನ್ನು ಸಾರ್ವಜನಿಕ ನೀತಿಯ ಆರೋಪದ ಅಡಿ ಕುಗ್ಇಸುವ ಯತ್ನವಾಗಿದೆ. ಆದಾಗ್ಯೂ ಜಿಯೋ ದೂರದೃಷ್ಟಿ, ತಂತ್ರಜ್ಞಾನದ ಮಹತ್ವಾಕಾಂಕ್ಷೆ, ಹೆಚ್ಚಿನ ವೇಗದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಇಂಟರ್​ನೆಟ್​ ಆಧಾರಿತ ಉದ್ಯಮ ಅಭಿವೃದ್ಧಿ ಪಡಿಸುತ್ತದೆ.

ದೊಡ್ಡ ಉದ್ಯಮಗಳು ಕಂಟಕವೇ?

ಖಂಡಿತಾವಾಗಿಯೂ ಕೆಟ್ಟ ಬಿಲಿನಿಯರ್​ಗಳು ಇದ್ದಾರೆ. ಜೀವನದಲ್ಲಿ ಕೆಟ್ಟ ಹುಡುಗರಿದ್ದಂತೆ ಅವರು ಕೂಡ ಇದ್ದಾರೆ. ಆದರೆ, ದೊಡ್ಡ ಉದ್ಯಮಗಳು ಸಮಾಜದ ಅಗತ್ಯಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಪರಿಣಾಮಕಾರಿಯಾಗಿ ತಲುಪುವ ವಾಹಕಗಳು. ಇಂತಹ ಸಂದರ್ಭದಲ್ಲಿ ಅವರು ಸಣ್ಣ ಸಂಸ್ಥೆಗಳಿಗಿಂತ ಸ್ಥಿರವಾದ ಉದ್ಯೋಗಗಳನ್ನು ಸೃಷ್ಟಿಸುತ್ತಾರೆ. ವಾಸ್ತವಾಗಿ ದೊಡ್ಡ ಉದ್ಯಮಗಳಿಂದಾಗಿ ಸಾವಿರಾರು ಸಣ್ಣ ಸಂಸ್ಥೆಗಳು ಹಾಗೂ ಸ್ಟಾರ್ಟ್​ ಅಪ್​ಗಳು ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ದೊಡ್ಡ ಉದ್ಯಮಗಳಲ್ಲಿರುವ ಉತ್ತಮ ಉದ್ಯೋಗ ಮಾರ್ಗ ಅಭ್ಯಾಸವನ್ನು ಅನುಸರಿಸಲು ಸಹಾಯಕವಾಗುತ್ತದೆ. ಪೀಟರ್​ ಡ್ರಕ್ಕರ್​ (1952) ಪ್ರಕಾರ, ವ್ಯಾಪಾರ ಉದ್ಯಮಗಳು ಅದರಲ್ಲಿಯೀ ದೊಡ್ಡ ಉದ್ಯಮಗಳು ಸಾಮಾಜನದ ಕಲ್ಯಾಣಕ್ಕೆ ಸಂಪೂರ್ಣ ಕೊಡುಗೆ ನೀಡುತ್ತವೆ.

ದೊಡ್ಡ ಉದ್ಯಮದ ಅತಿದೊಡ್ಡ ಶಕ್ತಿ ಎಂದರೆ ಯಾವುದೇ ರೀತಿಯ ಉದ್ಯಮಗಳಿಗೆ ಹೋಲಿಸಲಾಗದ ರೀತಿಯಲ್ಲಿ ಕೆಲಸ ಮಾಡುವುದು. ಟಿಸಿಎಸ್​ ಅಥವಾ ಇನ್ಫೋಸಿಸ್​ ನಂತಹ ಸಾಫ್ಟ್​ವೇರ್​ ಆಗಲಿ ಅಥವಾ ರಿಲಾಯನ್ಸ್​ ಜಾಮ್​ನಗರದ ಸ್ಥಾವರ ಅಥವಾ ಪೆಟ್ರೋಲುಯಂ ಸಂಸ್ಕರಣೆಯಾಗಲಿ ಹಾಗೂ ಬಂದರು ಮತ್ತು ಅದಾನಿಯಿಂದ ವಿಮಾನ ನಿಲ್ದಾಣಗಳನ್ನು ನವೀಕರಿಸುದಾಗಲಿ ಅಥವಾ ರಿಲಯನ್ಸ್​ ಚಿಲ್ಲರೆ ವ್ಯಾಪಾರದಿಂದ ಭಾರತೀಯ ಚಿಲ್ಲರೆ ಕ್ಷೇತ್ರವನ್ನು ಆಧುನಿಕರಿಸುವುದು.ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಶ್ರೀಮಂತರ ಸಂಪತ್ತು ಹೆಚ್ಚಾಗುತ್ತದೆ ಎಂಬ ಪ್ರಶ್ನೆ ಮೂಡುತ್ತದೆ. ಆದರೆ, ಖಾಸಗಿ ಉದ್ಯಮಗಳು ನಾವೂನ್ಯತೆ ಮತ್ತು ಉದ್ಯಮಶೀಲತೆಯನ್ನು ಬೆಳೆಸಿಕೊಂಡಿವೆ ಎಂಬುದನ್ನು ನಿರಾಕರಿಸಬಹುದೇ? ಕ್ರೋನಿಯಿಂಸಂ ಸಂಬಂಧಿಸಿದಂತೆ ಇದು ಆಡಳಿತ ಮತ್ತು ನಿಯಂತ್ರಣದ ವೈಫಲ್ಯವಾಗಿದೆ.

ಗುಜರಾತ್​ ಮಾದರಿ ಮೂಲಕ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದರು. ಇದು ಗುಜರಾತಿನ ಯಶಸ್ವಿ ಉದ್ಯಮಗಳ ಬಗ್ಗೆ ವಿಶೇಷ ಗಮನಸೆಳೆಯಲು ಕೂಡ ಕಾರಣವಾಗಿದೆ. ದಿವಾಳಿತನ ಸಂಹಿತೆ (2016), ವ್ಯವಹಾರಗಳನ್ನು ಸುಲಭಗೊಳಿಸುವ ನೀತಿ , ಹಳೆ ಕಾರ್ಮಿಕ ಪದ್ಧತಿ ಬದಲಾಯಿಸಿ ಹೊಸ ಕಾರ್ಮಿಕ ಸಂಹಿತೆ ಇವಎಲ್ಲವೂ ಕಾರ್ಪೊರೇಟ್​ ವ್ಯವಸ್ಥೆಯನ್ನು ರಾಜಕೀಯದ ಹತ್ತಿರದಿಂದ ತಾಳೆಹಾಕುವಂತೆ ಮಾಡಲಾಯಿತು.

(ಸಂಜೀವ್​ ಶಿವೇಶ್​)
Published by: Seema R
First published: January 5, 2021, 10:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories