Thai Guava: 1.4 ಕಿಲೋ ತೂಗುವ ಸೀಬೆ ಬೆಳೆದು 32 ಲಕ್ಷ ರೂ. ಆದಾಯ ಗಳಿಸಿದ ರೈತ!

ದಿನೇಶ್ ಅವರು ತಮ್ಮ ತೋಟದಲ್ಲಿ ಸುಮಾರು 4,000 ಗಿಡಗಳನ್ನು ಹೊಂದಿದ್ದು ಇವರಿಗೆ ಇದರಿಂದ 32 ಲಕ್ಷ ರೂ. ಆದಾಯ ದೊರೆತಿದೆ. ಮಧ್ಯಪ್ರದೇಶದಲ್ಲಿ ಸುಮಾರು 400 ರೈತರು ದಿನೇಶ್ ಅವರ ಕೃಷಿಪದ್ಧತಿಯನ್ನು ಅವಲಂಬಿಸಿದ್ದಾರೆ.

ರೈತ ದಿನೇಶ್ ಬಗ್ಗದ್

ರೈತ ದಿನೇಶ್ ಬಗ್ಗದ್

 • Share this:
  ಭೂಪಾಲ್​: ಮಧ್ಯಪ್ರದೇಶದ ದಿನೇಶ್ ಬಗ್ಗದ್ (Dinesh Baggad)ಎಂಬಾತ ಒಬ್ಬ ಸಾಂಪ್ರದಾಯಿಕ ಕೃಷಿಕನಾಗಿದ್ದು, ಅವರು ತಮ್ಮ ತೋಟದಲ್ಲಿ ಥಾಯ್ ತಳಿಯ ಸೀಬೆ (Thai Guava)ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.  ಈ ಸೀಬೆಗಳು ಬೃಹತ್ ಗಾತ್ರದಲ್ಲಿವೆ ಮತ್ತು ಅತ್ಯಂತ ಸಿಹಿಯಾಗಿವೆ, ಮತ್ತು ಇದನ್ನು ಬೆಳೆಯುವುದು ತುಂಬಾ ಸುಲಭ ಎಂಬುದು ಕೃಷಿಕ ದಿನೇಶ್ ಅವರ ಮಾತಾಗಿದೆ. ಹೌದು ಈ ಕೃಷಿಕರ ತೋಟಕ್ಕೆ ಭೇಟಿ ನೀಡುವ ಯಾರಾದರೂ ಅಲ್ಲಿನ ಮರಗಳಲ್ಲಿ ನೇತಾಡುತ್ತಿರುವ ಬೃಹತ್ ಪೇರಳೆ (ಸೇಬು) ಹಣ್ಣುಗಳನ್ನು ನೋಡಿ ಆಶ್ಚರ್ಯಪಡುವುದು ಖಂಡಿತ.

  ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ ರೈತ 

  ಕೆಲವು ವರ್ಷಗಳ ಹಿಂದೆ ದಿನೇಶ್ ಅವರ ತೋಟವು ಈಗ ನೋಡುವಂತಿರಲಿಲ್ಲ. ಸಾಜೋದ್-ರಜೋದ್ ಗ್ರಾಮಕ್ಕೆ ಸೇರಿದ ರೈತ ತನ್ನ 4 ಎಕರೆ ಪೂರ್ವಜರ ಭೂಮಿಯಲ್ಲಿ ಸಾಂಪ್ರದಾಯಿಕವಾಗಿ ಮೆಣಸಿನಕಾಯಿ, ಟೊಮೆಟೊ, ಓಕ್ರಾ, ಹಾಗಲಕಾಯಿ ಮತ್ತು ಇತರ ಕಾಲೋಚಿತ ತರಕಾರಿಗಳನ್ನು ಬೆಳೆಯುತ್ತಿದ್ದರು. ಆದರೆ ಕೀಟಗಳ ಬಾಧೆ ಹಾಗೂ ಶಿಲೀಂಧ್ರಗಳ ತೀವ್ರ ಸೋಂಕು ಹೆಚ್ಚಿನ ಕಾರ್ಮಿಕ ವೆಚ್ಚಗಳನ್ನು ವಿಧಿಸುವುದರ ಜೊತೆಗೆ ಆದಾಯವನ್ನು ಕಡಿಮೆ ಮಾಡಿತು. ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಮಾರುಕಟ್ಟೆ ದರಗಳು ಕಡಿಮೆಯಾಗಿರುತ್ತವೆ. ಇದೇ ರೀತಿ ಕಡಿಮೆ ಲಾಭವು ಕೃಷಿಯನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡುತ್ತದೆ ಎಂಬುದು ಸಾಂಪ್ರಾದಾಯಿಕ ಕೃಷಿಯಿಂದ 7 ಲಕ್ಷ ಗಳಿಸುತ್ತಿದ್ದ ದಿನೇಶ್ ದಿ ಬೆಟರ್ ಇಂಡಿಯಾಕ್ಕೆ ತಿಳಿಸಿದ್ದಾರೆ.

  1.4 ಕೆಜಿ ತೂಗುವ ಹಣ್ಣು! 

  2010 ರಲ್ಲಿ ಅವರ ಸ್ನೇಹಿತರೊಬ್ಬರು ಹೊಸ ಮಾದರಿ ತೋಟಗಾರಿಕೆಯನ್ನು ಪ್ರಯತ್ನಿಸಲು ಸಲಹೆ ಇತ್ತರು ಹಾಗೂ ಥಾಯ್ ತಳಿಯ ಸೀಬೆ ಹಣ್ಣಿನ ಕೃಷಿಯನ್ನು ಪರಿಚಯಿಸಿದರು. ನಾನು ನೆರೆಯ ರಾಜ್ಯದ ತೋಟಕ್ಕೆ ಭೇಟಿ ನೀಡಿದ್ದೆ ಮತ್ತು ಪ್ರಭಾವಿತನಾಗಿದ್ದೆ, ಏಕೆಂದರೆ ಪ್ರತಿ ಹಣ್ಣು ಕನಿಷ್ಠ 300 ಗ್ರಾಂ ತೂಗುತ್ತದೆ ಮತ್ತು ಬಹುತೇಕ ಕಸ್ತೂರಿ ಹಣ್ಣಿನ ಗಾತ್ರಕ್ಕೆ ಬೆಳೆಯಿತು ಎಂಬುದು ದಿನೇಶ್ ಅವರ ಮಾತಾಗಿದೆ. ಸೀಬೆಯ ಈ ತಳಿಯನ್ನು VNR-1 ಎಂದು ಕರೆಯಲಾಗುತ್ತದೆ ಹಾಗೂ ಹಣ್ಣಿಗೆ ಆರು ದಿನಗಳ ದೀರ್ಘಾವಧಿಯ ಜೀವಿತಾವಧಿ ಇದೆ ಹಾಗೂ ಸೋಂಕುಗಳಿಗೆ ಒಳಗಾಗುವುದಿಲ್ಲ ಎಂಬುದನ್ನು ಅರಿತುಕೊಂಡೆ. ಲಾಭದಾಯಕ ಬೆಳೆ ಎಂಬುದನ್ನು ಕಂಡುಕೊಂಡ ದಿನೇಶ್ ಬೆಳೆ ಬೆಳೆಯಲು ನಿರ್ಧರಿಸಿದರು.ದಿನೇಶ್ ಅವರು ತಮ್ಮ ತೋಟದಲ್ಲಿ ಸುಮಾರು 4,000 ಗಿಡಗಳನ್ನು ಹೊಂದಿದ್ದು ಇವರಿಗೆ ಇದರಿಂದ 32 ಲಕ್ಷ ರೂ. ಆದಾಯ ದೊರೆತಿದೆ. ಮಧ್ಯಪ್ರದೇಶದಲ್ಲಿ ಸುಮಾರು 400 ರೈತರು ದಿನೇಶ್ ಅವರ ಕೃಷಿಪದ್ಧತಿಯನ್ನು ಅವಲಂಬಿಸಿದ್ದಾರೆ.

  ಇದನ್ನೂ ಓದಿ: Video Viral: ಪ್ರವಾಹ ಇದ್ರೂ ಪಾತ್ರೆಯಲ್ಲಿ ಕುಳಿತುಕೊಂಡು ಮಂಟಪ ಸೇರಿದ ಜೋಡಿ… ಕೊನೆಗೂ ಮದುವೆ ಆದ್ರು!

  ಮಾರುಕಟ್ಟೆಯಲ್ಲಿ ಅದೃಷ್ಟ ಖುಲಾಹಿಸಿತು 

  ಮರಗಳಿಗೆ ಕಡಿಮೆ ನಿರ್ವಹಣೆಯ ಅಗತ್ಯವಿದ್ದು ಕಡಿಮೆ ಗಮನ ಹರಿಸಿದರೆ ಸಾಕು. ಆದರೆ ನಾನು ಹಣ್ಣುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ ಇಷ್ಟು ದೊಡ್ಡ ಬೃಹತ್ ಹಣ್ಣುಗಳನ್ನು ಗ್ರಾಹಕರು ಖರೀದಿಸುವರೇ ಎಂಬ ಸಂಶಯ ದಿನೇಶ್ ಅವರನ್ನು ಕಾಡುತ್ತಿತ್ತು ಜೊತೆಗೆ ಮಾರುಕಟ್ಟೆದಾರರು ಈ ಬೃಹತ್ ಪೇರಳೆಯನ್ನು ಖರೀದಿಸಲು ಗ್ರಾಹಕರು ಮುಂದೆ ಬರಬಹುದೇ ಎಂಬ ಪ್ರಶ್ನೆಯನ್ನು ದಿನೇಶ್ ಮುಂದೆ ಇಟ್ಟಿದ್ದರು. ಆದರೆ ತೋಟಗಾರಿಕೆಯು ಬೇರೆ ಮಾರುಕಟ್ಟೆಗೆ ಆದ್ಯತೆ ನೀಡುತ್ತದೆ ಎಂಬುದನ್ನು ದಿನೇಶ್ ಅರಿತುಕೊಂಡರು.

  ದೇಶಾದ್ಯಂತ ಭರ್ಜರಿ ಬೇಡಿಕೆ 

  ನಾನು ಭಾರತದಾದ್ಯಂತ ಭಿಲ್ವಾರಾ, ಜೈಪುರ, ಉದಯಪುರ, ಅಹಮದಾಬಾದ್, ವಡೋದರಾ, ಸೂರತ್, ಪುಣೆ, ಮುಂಬೈ, ಬೆಂಗಳೂರು, ಭೋಪಾಲ್, ದೆಹಲಿ ಮೊದಲಾದ 12 ಮಾರುಕಟ್ಟೆ ಸ್ಥಳಗಳು ಸೇರಿದಂತೆ ನನ್ನ ಉತ್ಪನ್ನವನ್ನು ಮಾರಾಟಮಾಡಲು ಪ್ರಯತ್ನಿಸಿದೆನು ಎಂದು ತಿಳಿಸುತ್ತಾರೆ. 2016 ರಲ್ಲಿ, ಅವರು ಮುಂಬೈಯಲ್ಲಿ ಪ್ರತಿ ಕಿಲೋಗೆ 185 ರೂ.ಗೆ ಗುವಾವನ್ನು ಮಾರಾಟ ಮಾಡಿದರು. ದೆಹಲಿ ಮತ್ತು ಮುಂಬೈನಲ್ಲಿ ಗ್ರಾಹಕರು ಹಣ್ಣನ್ನು ಮೆಚ್ಚಿದ್ದಾರೆ ಎಂಬುದನ್ನು ಅರಿತುಕೊಂಡ ದಿನೇಶ್, ನಿರ್ದಿಷ್ಟ ಮಾರುಕಟ್ಟೆಗಳನ್ನು ಗುರಿಯಾಗಿಸಲು ಆರಂಭಿಸಿದರು ಎಂದು ಅವರು ಹೇಳುತ್ತಾರೆ.
  Published by:Kavya V
  First published: