ಮದುವೆ ಮೆರವಣಿಗೆಯಿಂದ ಮಾರಣಹೋಮ; DJ Music ಅಬ್ಬರ ತಡೆಯಲಾರದೆ ಪ್ರಾಣ ಬಿಟ್ಟವು!

63 Broiler Chickens Death: ಜೋರಾದ ಡಿಜೆ ಸಂಗೀತದ ಶಬ್ದದಿಂದ ತನ್ನ ಜಮೀನಿನಲ್ಲಿದ್ದಂತಹ 63 ಬ್ರಾಯ್ಲರ್ ಕೋಳಿಗಳನ್ನು ಕಳೆದು ಕೊಂಡಿದ್ದೇನೆ ಎಂದು ಹೇಳಿದರು. ಘಟನೆಯ ಬಗ್ಗೆ ಪರಿಡಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Chickens Died Due to Loud DJ Music: ಕೆಲವೊಮ್ಮೆ ಬೇರೆಯವರ ಮೋಜು ನಮಗೆ ಕಂಟಕವಾಗುತ್ತದೆ ಎಂಬ ಮಾತು ನಮ್ಮ ಹಿರಿಯರು ಹೇಳಿರುವುದನ್ನು ಅನೇಕ ಬಾರಿ ಕೇಳಿರುತ್ತೇವೆ. ಸಂತೋಷದಲ್ಲಿರುವ (Happiness) ಬಹುತೇಕರು ತಮ್ಮ ಸುತ್ತಮುತ್ತಲಿನ ಪರಿಸರ ಹೇಗಿದೆ, ಯಾರಿಗಾದರೂ ನಮ್ಮಿಂದ ಕಷ್ಟವಾಗಬಹುದೇ (Difficulty) ಎಂದು ಯೋಚಿಸುವುದೇ ಇಲ್ಲ. ಅದರಲ್ಲೂ ನಮ್ಮ ಸಂತೋಷ ಇನ್ನೊಬ್ಬರ ಜೀವಕ್ಕೆ ತೊಂದರೆ ಆಗಬಾರದಲ್ಲವೇ? ಇದರ ಬಗ್ಗೆ ನಾವು ಈಗೇಕೆ ಮಾತಾಡುತ್ತಿದ್ದೇವೆ ಅಂತಾ ನಿಮಗೆ ಅರ್ಥವಾಗದೆ ಇರಬಹುದು. ಅದರಲ್ಲೂ ಮೂಕ ಪ್ರಾಣಿಗಳ ಜೀವಕ್ಕೆ ತೊಂದರೆಯಾದರೆ ಅವುಗಳನ್ನು ಸಾಕಿದ ಮಾಲೀಕನಿಗೆ ಹೇಗೆ ಎನ್ನಿಸುವುದು ಎಂದು ನೀವೊಮ್ಮೆ ಆಲೋಚನೆ ಮಾಡಿ.

  DJ ಶಬ್ಧಕ್ಕೆ ಪ್ರಾಣಬಿಟ್ಟ ಕೋಳಿಗಳು 

  ಒನ್ನಿ ಹಾಗಾದರೆ ಈ ಘಟನೆಯ ಬಗ್ಗೆ ತಿಳಿದುಕೊಳ್ಳೋಣ. ಒಡಿಶಾದಲ್ಲಿ ನಡೆದ ವಿಲಕ್ಷಣ ಘಟನೆಯಲ್ಲಿ, ಕೋಳಿ ಫಾರ್ಮ್ ಮಾಲೀಕರೊಬ್ಬರು ತಮ್ಮ ಜಮೀನಿನಲ್ಲಿರುವ ಸುಮಾರು 63 ಬ್ರಾಯ್ಲರ್ ಕೋಳಿಗಳು ಮದುವೆಯ ಮೆರವಣಿಗೆಯಲ್ಲಿ ಜೋರಾಗಿ ಹಾಕಿದಂತಹ ಡಿಜೆ ಸಂಗೀತದ ಶಬ್ದವನ್ನು ಸಹಿಸಲಾಗದೆ ಜೀವ ಬಿಟ್ಟಿವೆ ಎಂದು ಆರೋಪಿಸಿದ್ದಾರೆ. ನೀಲಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಸೋರ್ ನ ಕಂದಗರಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಲ್ಲಿ ಕೃಷಿ ಭೂಮಿಯನ್ನು ಹೊಂದಿರುವಂತಹ ರಂಜಿತ್ ಪರಿಡಾ ಎಂಬುವವರು ತಮ್ಮ ಹಳ್ಳಿಗೆ ಬಂದ ಮದುಮಗನ ಮದುವೆಯ ಮೆರವಣಿಗೆಯಲ್ಲಿ ತುಂಬಾ ಜೋರಾಗಿ ಸಂಗೀತ ಹಾಕಿದ್ದು ಮತ್ತು ಜೋರಾದ ಡಿಜೆ ಸಂಗೀತದ ಶಬ್ದದಿಂದ ತನ್ನ ಜಮೀನಿನಲ್ಲಿದ್ದಂತಹ 63 ಬ್ರಾಯ್ಲರ್ ಕೋಳಿಗಳನ್ನು ಕಳೆದು ಕೊಂಡಿದ್ದೇನೆ ಎಂದು ಹೇಳಿದರು. ಭಾನುವಾರ ನಡೆದ ಘಟನೆಯ ಬಗ್ಗೆ ಪರಿಡಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  ಮದುವೆಯ ಮೆರವಣಿಗೆಯಿಂದ ಮಾರಣಹೋಮ

  ರಾತ್ರಿ 11 ಗಂಟೆ ಸುಮಾರಿಗೆ ಮದುಮಗನ ಮೆರವಣಿಗೆ ಜೋರಾಗಿ ಸಂಗೀತ ನುಡಿಸುವ ಮೂಲಕ ತನ್ನ ಹಳ್ಳಿಗೆ ಬಂದಿತು ಮತ್ತು ಅವರು ಜೋರಾಗಿ ಪಟಾಕಿಗಳನ್ನು ಸಹ ಸಿಡಿಸಿದರು ಎಂದು ಪರಿಡಾ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. "ನನ್ನ ಜಮೀನಿನಲ್ಲಿ ಸುಮಾರು 2000 ಬ್ರಾಯ್ಲರ್ ಕೋಳಿಗಳಿಗೆ ಶಬ್ದವು ಸಹಿಸಲಾಗದಷ್ಟು ಇದ್ದ ಕಾರಣ, ನಾನು ಮದುವೆಯ ಮೆರವಣಿಗೆಯಲ್ಲಿರುವ ಜನರನ್ನು ಸಂಗೀತದ ಶಬ್ದವನ್ನು ಕಡಿಮೆ ಮಾಡುವಂತೆ ವಿನಂತಿಸಿಕೊಂಡೆ. ಆದಾಗ್ಯೂ, ಅವರೆಲ್ಲರೂ ಕುಡಿದ ಅಮಲಿನಲ್ಲಿದ್ದುದ್ದರಿಂದ ನನ್ನನ್ನು ಮೌಖಿಕವಾಗಿ ನಿಂದಿಸಿದರು" ಎಂದು ಪರಿಡಾ ಹೇಳಿದ್ದಾರೆ.

  ಮಾಲೀಕನಿಗೆ ಭಾರೀ ನಷ್ಟ 

  ಪರಿಡಾ ತನ್ನ ಜಮೀನಿನಲ್ಲಿ ಕೋಳಿಗಳು ಈ ಮೆರವಣಿಗೆಯ ಡಿಜೆ ಸಂಗೀತಕ್ಕೆ ಮತ್ತು ಪಟಾಕಿಯ ಶಬ್ದಕ್ಕೆ ತುಂಬಾ ಹೆದರುತ್ತಿದ್ದು, ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯದ ನಂತರ, ಅವುಗಳನ್ನು ನೋಡುವುದಕ್ಕೆ ಹೋದರು. ಅಲ್ಲಿ ತನ್ನ 63 ಕೋಳಿಗಳು ಸತ್ತಿರುವುದನ್ನು ನೋಡಿದನು. ಅವರು ಮರುದಿನ ವಧುವಿನ ಕುಟುಂಬಕ್ಕೆ ಘಟನೆಯನ್ನು ಹೇಳಲು ಹೋದಾಗ, ಪಟಾಕಿಗಳಿಂದಾಗಿ ಕೋಳಿಗಳು ಸತ್ತಿವೆ ಎಂದು ನಂಬಲು ಕುಟುಂಬವು ನಿರಾಕರಿಸಿತು ಮತ್ತು ಅವನ ನಷ್ಟಕ್ಕೆ ಹಣವನ್ನು ನೀಡಲು ನಿರಾಕರಿಸಿದರು ಎಂದು ವರದಿಯಾಗಿದೆ.

  ಇದನ್ನೂ ಓದಿ: Price Hike: ಹೆಚ್ಚಾಗಲಿದೆ ಪಾರ್ಲೆ ಜಿ, ಕ್ರ್ಯಾಕ್ ಜಾಕ್ ಬಿಸ್ಕೆಟ್ ಬೆಲೆ: ದರ ಏರಿಕೆಗೆ ಕಂಪನಿ ನೀಡಿದ ಕಾರಣ ಏನು?

  ಪ್ರಾಣಿ ಮತ್ತು ಪಕ್ಷಿಗಳ ಮೇಲೆ ಜೋರಾಗಿ ಹಾಕಿದ ಸಂಗೀತದಿಂದ ಪರಿಣಾಮ ಬೀರುತ್ತದೆ ಎಂದು ತಜ್ಞರು ಮತ್ತು ಪಶು ವೈದ್ಯರು ಹೇಳಿದ್ದಾರೆ. ವಾಯು ಮತ್ತು ಶಬ್ದ ಮಾಲಿನ್ಯವು ಸಾಕು ಪ್ರಾಣಿಗಳು ಮತ್ತು ಪಕ್ಷಿಗಳ ಮೇಲೂ ತುಂಬಾ ಹಾನಿಕಾರಕವಾಗಬಹುದು. ಪಟಾಕಿಗಳನ್ನು ಸಿಡಿಸುವುದರಿಂದ ಸಾಕುಪ್ರಾಣಿಗಳನ್ನು ಆವರಿಸಬಹುದು ಮತ್ತು ಪಕ್ಷಿಗಳು ಸಹ ಆಘಾತದಿಂದ ಬಳಲುತ್ತವೆ ಮತ್ತು ಅದರಿಂದ ಸಾಯಬಹುದು ಎಂದು ವೈದ್ಯರು ಹೇಳಿದ್ದಾರೆ.
  Published by:Kavya V
  First published: