ಕೃಷಿ ಸುಧಾರಣೆ ಕಾನೂನಿನ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಜಿಯೋ ಕಂಪನಿ ವಿರುದ್ಧ ಏರ್ಟೆಲ್ ಮತ್ತು ವೋಡಾಫೋನ್ ಐಡಿಯಾ ಸುಳ್ಳು ಗಾಳಿಸುದ್ದಿ ಹಬ್ಬಿಸುತ್ತಿದೆ ಎಂದು ರಿಲಾಯನ್ಸ್ ಜಿಯೋ ಇನ್ಫೋಕಾಮ್ (ಆರ್ಜಿಯೋ) ಆರೋಪಿಸಿದೆ.
ಹೊಸದಾಗಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಸುಧಾರಣೆ ಕಾನೂನಿನಿಂದ ರಿಲಾಯನ್ಸ್ ಲಾಭ ಮಾಡಿಕೊಳ್ಳಲು ಮುಂದಾಗಿದೆ ಎಂದು ಈ ಎರಡು ಸಂಸ್ಥೆಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಈ ಎರಡು ಕಂಪನಿಗಳ ವಿರುದ್ಧ ಭಾರತೀಯ ಟೆಲಿಕಾಂ ರೆಗ್ಯುಲೆಟರ್ ಆಥಾರಿಟಿ (ಟ್ರಾಯ್) ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರಿಲಾಯನ್ಸ್ ಆಗ್ರಹಿಸಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಸುಧಾರಣೆ ಕಾನೂನು ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಭುಗಿಲೆದ್ದಿದೆ.
ಕೃಷಿ ಮಸೂದೆಗಳಲ್ಲಿ ರಿಲಯನ್ಸ್ ಲಾಭ ಪಡೆದುಕೊಳ್ಳುತ್ತಿದೆ ಎಂಬ ಸುಳ್ಳು ಮತ್ತು ಕ್ಷುಲ್ಲಕ ವದಂತಿಗಳನ್ನು ಬೆಂಬಲಿಸುವಲ್ಲಿ ಮತ್ತು ಹೆಚ್ಚಿಸುವಲ್ಲಿ ನೇರವಾಗಿ / ಪರೋಕ್ಷವಾಗಿ ಈ ಎರಡು ಕಂಪನಿಗಳು ತೊಡಗಿಕೊಂಡಿದೆ ಎಂದು ರಿಲಾಯನ್ಸ್ ಆರೋಪಿಸಿದೆ.
ಇದನ್ನು ಓದಿ; Agri Reforms - ಹೊಸ ಕೃಷಿ ಕಾಯ್ದೆ ದಿಢೀರ್ ರೂಪುಗೊಂಡಿಲ್ಲ; ಇಲ್ಲಿದೆ ಎರಡು ದಶಕದ ಟೈಮ್ಲೈನ್
ರಿಲಾಯನ್ಸ್ ಜಿಯೋ ಪ್ರಕಾರ, ಜಿಯೋ ಸೇವೆಯಲ್ಲಿ ಯಾವುದೇ ದೂರುಗಳು ಮತ್ತು ಇತರೆ ಸಮಸ್ಯೆಗಳು ಇಲ್ಲದಿದ್ದರೂ ಗ್ರಾಹಕರು ಜಿಯೋದಿಂದ ಬೇರೆ ನೆಟ್ವರ್ಕ್ಗೆ ಹೋಗಲು ಈ ಸುಳ್ಳು ಅಭಿಯಾನ ಏಕೈಕ ಕಾರಣವಾಗಿದೆ ಎಂದು ಜಿಯೋ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ