Farm Laws: ವಿಪಕ್ಷಗಳ ಗದ್ದಲದ ನಡುವೆಯೂ ರಾಜ್ಯಸಭೆಯಲ್ಲಿಯೂ ಕೃಷಿ ಕಾನೂನು ರದ್ದು ಮಸೂದೆ ಪಾಸ್

ಲೋಕಸಭೆಯಲ್ಲಿ ಮಸೂದೆ ಮಂಡನೆ ಬಳಿಕ ರಾಜ್ಯಸಭೆಯಲ್ಲೂ ಮಸೂದೆ ಮಂಡಿಸಲಾಯಿತು. ಈ ವೇಳೆ ಕೂಡ ವಿಪಕ್ಷಗಳ ಗದ್ದಲದ ನಡುವೆಯೇ ಮಸೂದೆಯನ್ನು ಅಂಗೀಕರಿಸಲಾಯಿತು

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

  • Share this:
    ನವದೆಹಲಿ (ನ. 29):  ಕಳೆದ ಚಳಿಗಾಲದ ಸಂಸತ್​ ಅಧಿವೇಶನದಲ್ಲಿ (Winter Session) ಕೇಂದ್ರ ಸರ್ಕಾರ ಮಂಡಿಸಿದ್ದ ವಿವಾದಿತ ಮೂರು ಕೃಷಿ ಕಾನೂನು ರದ್ದತಿ ಮಸೂದೆ 2021  (Farm Laws Repeal Bill 2021) ಇಂದು ಲೋಕಸಭೆಯಲ್ಲಿ ಅಂಗೀಕರವಾಯಿತು. ಧ್ವನಿ ಮತದ ಮೂಲಕ ಈ ಮಸೂದೆಯನ್ನು ಅಂಗೀಕರಿಸಲಾಯಿತು. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ( ಅವರು ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಈ ಮಸೂದೆಯನ್ನು ಮಂಡಿಸಿದರು. ಆದರೆ, ಪ್ರತಿಪಕ್ಷಗಳು ಮಾತ್ರ ಯಾವುದೇ ಚರ್ಚೆಯಾಗದೇ ಮಸೂದೆ ಮಂಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಗದ್ದಲ ನಿರ್ಮಿಸಿದವು. ಆದರೆ, ಕೇಂದ್ರ ಸರ್ಕಾರ ಈ ಮಸೂದೆ ಕುರಿತು ಯಾವುದೇ ಚರ್ಚೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

    ಕೃಷಿ ಕಾನೂನು ರದ್ದತಿ ಮಸೂದೆಯ ಕುರಿತು ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷದ ಸಂಸದರು ಸದನದ ಬಾವಿಗೆ ಇಳಿದರು. ಲಖಿಂಪುರ ಖೇರಿ ಘಟನೆ ಮತ್ತು ವಿದ್ಯುತ್ ಬಿಲ್ ಸೇರಿದಂತೆ ರೈತ ಪ್ರತಿಭಟನೆ ಸಂದರ್ಭದಲ್ಲಿ ಸಂದರ್ಭದಲ್ಲಿ ನಡೆದ ಹಲವಾರು ಘಟನೆಗಳ ಬಗ್ಗೆ ಚರ್ಚಿಸಲು ಒತ್ತಾಯಿಸಿದವು ಪ್ರತಿಪಕ್ಷಗಳು ಶಾಂತಿ ಕಾಪಾಡಿದರೆ ಚರ್ಚೆಗೆ ಅವಕಾಶ ನೀಡಬಹುದು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ತಿಳಿಸಿದರು. ಈ ವೇಳೆ ಗದ್ದಲ ಹೆಚ್ಚಾದ ಕಾರಣಕ್ಕೆ ಸದನವನ್ನು ನಾಳೆಯವರೆಗೂ ಮುಂದೂಡಲಾಯಿತು.

    ಲೋಕಸಭೆಯಲ್ಲಿ ಮಸೂದೆ ಮಂಡನೆ ಬಳಿಕ ರಾಜ್ಯಸಭೆಯಲ್ಲೂ ಮಸೂದೆ ಮಂಡಿಸಲಾಯಿತು. ಈ ವೇಳೆ ಕೂಡ ವಿಪಕ್ಷಗಳ ಗದ್ದಲದ ನಡುವೆಯೇ ಮಸೂದೆಯನ್ನು ಅಂಗೀಕರಿಸಲಾಯಿತು



    ಚರ್ಚೆಗೆ ಅವಕಾಶ ನೀಡದ ಕ್ರಮಕ್ಕೆ ವಿಪಕ್ಷಗಳು ಟೀಕೆ

    ಯಾವುದೇ ಚರ್ಚೆಗೆ ಅವಕಾಶ ನೀಡದಂತೆ ಮಸೂದೆಯನ್ನು ರದ್ದುಗೊಳಿಸಿದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಮ್ಮು ಮತ್ತು ಕಾಶ್ಮೀ ಮಾಜಿ ಸಿಎಂ ಒಮರ್​ ಅಬ್ದುಲ್ಲ, ಚರ್ಚೆಯಿಲ್ಲದೇ ಮಸೂದೆ ಅಂಗೀಕರವಾಯಿತು ಚರ್ಚೆ ಇಲ್ಲದೇ ಮಸೂದೆ ರದ್ದಾಯಿತು. ಇದು ಹೊಸ ಭಾರತದ ಹೊಸ ಮಾದರಿ ಪ್ರಜಾಪ್ರಭುತ್ವ ಎಂದು ಟೀಕಿಸಿದ್ದಾರೆ.

    ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯ ಚರ್ಚೆಯಿಂದ ಸರ್ಕಾರ ನುಣುಚಿಕೊಂಡಿದೆ, ಇದಕ್ಕಾಗಿ ಕಳೆದೊಂದು ವರ್ಷದಿಂದ ರೈತರು ಪ್ರತಿಭಟನೆ ನಡೆಸಿದರು ಎಂದು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಕ್ರಮಕ್ಕೆ ಟೀಕಿಸಿದವು.

    ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದನ್ನು ನಾವು ಸ್ವಾಗತಿಸುತ್ತೇವೆ. ಲಖಿಂಪುರ ಖೇರಿ ಘಟನೆ ಸೇರಿದಂತೆ ಪ್ರತಿಭಟನೆ  ಸಂದರ್ಭದಲ್ಲಿ ನಡೆದ ಹಲವಾರು ಘಟನೆಗಳ ಬಗ್ಗೆ ನಾವು ಚರ್ಚೆಗೆ ಒತ್ತಾಯಿಸಿದ್ದೇವೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು

    ಇದನ್ನು ಓದಿ: ಇಂದಿನಿಂದ ಚಳಿಗಾಲದ ಸಂಸತ್​ ಅಧಿವೇಶನ; ವಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧ ಎಂದ ಪ್ರಧಾನಿ

    ಸದನದ ಘನತೆ ಕಾಪಾಡುವಂತೆ ಮೋದಿ ಮನವಿ

    ಸಂಸತ್ತಿನ ಅಧಿವೇಶನ ಹಿನ್ನಲೆ ಭಾನುವಾರ ಕರೆಯಲಾಗಿದ್ದ ಸರ್ವಪಕ್ಷ ಸಭೆಗೆ (All Party Meeting) ಗೈರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಅಧಿವೇಶನದಲ್ಲಿ ವಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವುದಾಗಿ ತಿಳಿಸಿದ್ದಾರೆ. ಈ ಕುರಿತು ಅಧಿವೇಶನಕ್ಕೂ ಮುನ್ನ ಮಾತನಾಡಿದ ಅವರು, ಇದು ಸಂಸತ್ತಿನ ಮಹತ್ವದ ಅಧಿವೇಶನವಾಗಿದೆ. ದೇಶದ ನಾಗರಿಕರುಅಧಿವೇಶನ ಸಮಯ ಕಾಲಹರಣವಾಗದಂತೆ ಬಯಸುತ್ತಾರೆ. ಉಜ್ವಲ ಭವಿಷ್ಯಕ್ಕಾಗಿ ಅವರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಈ ಅಧಿವೇಶನದಲ್ಲಿ ವಿಪಕ್ಷಗಳ ಎಲ್ಲಾ ಟೀಕೆ, ಪ್ರಶ್ನೆಗಳಿಗೂ ಉತ್ತರಿಸಲಿದೆ. ಸದನದಲ್ಲಿ ಘನತೆಯನ್ನು ಕಾಪಾಡಬೇಕಿದೆ ಎಂದಿದ್ದರು

    ಇದನ್ನು ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್; ಕೊರೊನಾದಿಂದ ಸ್ಥಗಿತಗೊಂಡಿದ್ದ ಸೇವೆ ಪುನರಾರಂಭ

    ನಾವು ಸಂಸತ್ತಿನಲ್ಲಿ ಶಾಂತಿಯನ್ನು ಬಯಸುತ್ತೇವೆ. ಸರ್ಕಾರದ ವಿರುದ್ಧ ಅಥವಾ ಸರ್ಕಾರದ ನೀತಿಗಳ ವಿರುದ್ಧ ಧ್ವನಿ ಎತ್ತಿದರೂ - ಸಂಸತ್ತಿನ ಘನತೆ ಮತ್ತು ಸಭಾಧ್ಯಕ್ಷರ ಪೀಠವನ್ನು ಎತ್ತಿಹಿಡಿಯಬೇಕು. ಯುವ ಪೀಳಿಗೆಗೆ ಸ್ಫೂರ್ತಿ ನೀಡುವ ರೀತಿಯ ನಡವಳಿಕೆಯನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದರು
    Published by:Seema R
    First published: