Farm Bill: ಭಾರೀ ವಿರೋಧದ ನಡುವೆ ರಾಜ್ಯಸಭೆಯಲ್ಲಿ ವಿವಾದಿತ ಕೃಷಿ ಮಸೂದೆಗೆ ಅಂಗೀಕಾರ: ವಿಪಕ್ಷಗಳ ಖಂಡನೆ

Farm Bill Passed in Rajya Sabha: ಅತ್ತ ರಾಜ್ಯಸಭೆಯಲ್ಲಿ ಬಿಲ್​ ಪಾಸ್​ ಆಗುತ್ತಲೇ ಇತ್ತ ಪಂಜಾಬ್​ ಮತ್ತು ಹರಿಯಾಣದಲ್ಲಿ ರೈತರ ಪ್ರತಿಭಟನೆಯ ಕಾವು ದುಪ್ಪಟ್ಟಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಎರಡೂ ರಾಜ್ಯಗಳ ನಡುವಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಪ್ರತಿಭಟನೆ ತಾರಕಕ್ಕೇರಿದೆ. 

ಪಂಜಾಬ್ ರೈತರ ಪ್ರತಿಭಟನೆ

ಪಂಜಾಬ್ ರೈತರ ಪ್ರತಿಭಟನೆ

 • Share this:
  ನವದೆಹಲಿ: ವಿರೋಧ ಪಕ್ಷಗಳ ಭಾರೀ ವಿರೋಧದ ನಡುವೆಯೂ ರಾಜ್ಯಸಭೆಯಲ್ಲಿ ವಿವಾದಿತ ಕೃಷಿ ಮಸೂದೆಗೆ ಅಂಗೀಕಾರ ಸಿಕ್ಕಿದೆ. ವಿರೋಧ ಪಕ್ಷಗಳು ಮಸೂದೆಯ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿರೋಧ ವ್ಯಕ್ತಪಡಿದ ಹೊರತಾಗಿಯೂ ಮಸೂದೆ ಮಂಡನೆ ಮಾಡಿದ್ದ ಕೇಂದ್ರ, ಅಂಗೀಕಾರವನ್ನು ಪಡೆದಿದೆ. ಮಸೂದೆಗಳು ರೈತಾಪಿ ವರ್ಗದ ವಿರೋಧಿಯಾಗಿವೆ, ಜತೆಗೆ ಕಾರ್ಪೊರೇಟ್​ ಸಂಸ್ಥೆಗಳಿಗಷ್ಟೇ ಇದರಿಂದ ಉಪಯೋಗವಾಗಲಿದೆ ಎಂಬ ಕೂಗು ರಾಷ್ಟ್ರಾದ್ಯಂತ ಕೇಳಿ ಬಂದಿತ್ತು. ಪಂಜಾಬ್​ ಮತ್ತು ಹರಿಯಾಣದಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ಮಸೂದೆ ಸಂಸತ್ತಿನಲ್ಲಿ ಮಂಡನೆಯಾದ ದಿನದಿಂದ ಆರಂಭವಾಗಿದೆ. ಆಡಳಿತಾರೂಢ ಎನ್​ಡಿಎ ಮೈತ್ರಿಕೂಟದಲ್ಲೂ ಮಸೂದೆಗೆ ವಿರೋಧ ವ್ಯಕ್ತವಾಗಿತ್ತು. ಕೇಂದ್ರ ಸಚಿವೆ ಹರ್ಸಿಮ್ರತ್​ ಕೌರ್​ ಮಸೂದೆಯನ್ನು ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

  ರೈತರ ರಕ್ಷಾ ಕವಚ ಎಂಬ ಘೋಷಣೆಯೊಂದಿಗೆ ಕೇಂದ್ರ ಸರ್ಕಾರ ಮೂರು ಕೃಷಿ ಮಸೂದೆಗಳನ್ನು ಕಳೆದ ಗುರುವಾರ ಸಂಸತ್​ನಲ್ಲಿ ಮಂಡಿಸಿತ್ತು. ಆದರೆ, ಈ ಮಸೂದೆಗಳು ರೈತ ವಿರೋಧಿಗಳಾಗಿವೆ, ದೊಡ್ಡ ದೊಡ್ಡ ಕಂಪೆನಿಗಳಿಗಷ್ಟೆ ಇದರಿಂದ ಲಾಭವಾಗಲಿದೆ ಎಂಬ ಕೂಗು ವಿರೋಧ ಪಕ್ಷದಿಂದ ಕೇಳಿ ಬಂದಿತ್ತು. ಈ ವಿಚಾರ ಇಡೀ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆದರೆ ವಿರೋಧ ಪಕ್ಷಗಳು ಮಸೂದೆ ಜಾರಿಗೆ ಲೋಕಸಭೆಯಲ್ಲಿ ಅಂಗೀಕಾರವಾಗುವುದನ್ನು ತಡೆಯಲು ಸಾಧ್ಯವಿರಲಿಲ್ಲ. ಬಿಜೆಪಿ ಲೋಕಸಭೆಯಲ್ಲಿ ಬಹುಮತವಿದೆ. ಆದರೆ ರಾಜ್ಯಸಭೆಯಲ್ಲಿ ಇದನ್ನು ತಡೆಯಲು ವಿರೋಧ ಪಕ್ಷಗಳು ಒಕ್ಕೊರಲಿನಿಂದ ನಿರ್ಧರಿಸಿದ್ದವು. ಆದರೆ ಇಂದು ರಾಜ್ಯಸಭೆಯನ್ನೂ ಮಸೂದೆಗೆ ಹಸಿರು ನಿಶಾನೆ ಸಿಕ್ಕಿದೆ.

  ಈ ಬಗ್ಗೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್​ ರಾಜ್ಯಸಭಾ ಸದಸ್ಯ ಡೆರೆಕ್​ ಒಬ್ರಾಯನ್​, ಬಿಜೆಪಿ ಇಂದು ಪ್ರಜಾಪ್ರಭುತ್ವದ ಮೇಲೆ ಘಾಸಿಮಾಡಿದೆ ಎಂದಿದ್ದಾರೆ. ಜತೆಗೆ ಮಸೂದೆ ಚರ್ಚೆ ವೇಳೆ ರಾಜ್ಯಸಭಾ ಲೈವ್​ ಟಿವಿಯನ್ನು ಸಹ ನಿಷೇಧಿಸುವ ಮೂಲಕ, ರಾಜ್ಯಸಭೆಯಲ್ಲಿ ಏನು ನಡೆಯುತ್ತಿದೆ ಎಂಬ ಸತ್ಯಾಸತ್ಯತೆಯನ್ನು ಜನರಿಂದ ಬಿಜೆಪಿ ದೂರ ಇಟ್ಟಿದೆ. ಸಂವಿಧಾನದ ವಿರುದ್ಧವಾಗಿ ಬಿಜೆಪಿ ರಾಝ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ಪಡೆದಿದೆ ಎಂದು ಖಂಡಿಸಿದ್ದಾರೆ.

  They cheated. They broke every rule in Parliament. It was a historic day. In the worst sense of the word. They cut RSTV feed so the country couldn't see. They censored RSTV. Don’t spread propaganda. We have evidence. But first watch this pic.twitter.com/y4Nh9Vu9DA  ರಾಜ್ಯಸಭೆ ಸದಸ್ಯರ ಸಂಖ್ಯೆ 243 ಆಗಿದ್ದು, ಇಲ್ಲಿ ಮಸೂದೆಗೆ ಬಹುಮತದ ಅಂಗೀಕಾರ ಪಡೆಯಲು ಕನಿಷ್ಟ 122 ಸದಸ್ಯರ ಬೆಂಬಲ ಅಗತ್ಯವಿತ್ತು. ಆದರೆ, ರಾಜ್ಯ ಸಭೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಸದಸ್ಯರ ಸಂಖ್ಯೆ 105 ಮಾತ್ರ. ಈ ನಡುವೆ ಬಿಜೆಪಿ ಪಕ್ಷದ 10ಜನ ಸಂಸದರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಅವರನ್ನು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಲ್ಲೂ ಸಹ 15 ಸಂಸದರಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಹೀಗಾಗಿ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಅಗತ್ಯವಾದ ಬಹುಮತದ ಸಂಖ್ಯೆ ತಗ್ಗಲಿದೆ ಎನ್ನಲಾಗಿತ್ತು. ಈ ಎಲ್ಲದರ ನಡುವೆಯೂ ಕೇಂದ್ರ ಬಹುಮತದ ಅಂಗೀಕಾರ ಪಡೆದಿದೆ.

  ಇದನ್ನೂ ಓದಿ: ಮುಂಗಾರು ಅಧಿವೇಶನ: ಸರ್ಕಾರವನ್ನು ಕಟ್ಟಿ ಹಾಕಲು ಕಾಂಗ್ರೆಸ್​ನಿಂದ ಹೊಸ ಅಸ್ತ್ರ; ಜೆಡಿಎಸ್​ ನಡೆ ನಿಗೂಢ  ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿರುವ ಕರ್ನಾಟಕ ಬಿಜೆಪಿ ಸಂಸದ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ, ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಈ ರೀತಿಯ ಗೂಂಡಾವರ್ತನೆ ದೇಶದ ಜನರ ತೀರ್ಪಿಗೆ ವಿರೋಧವಾಗಿದ್ದು, ಕೇಂದ್ರ ಸರ್ಕಾರ ವಿಪಕ್ಷಗಳ ದುರ್ವರ್ತನೆಯನ್ನು ಸಹಿಸುವುದಿಲ್ಲ ಎಂದಿದ್ದಾರೆ.

  ಇದನ್ನೂ ಓದಿ: ಉಡುಪಿ, ದಕ್ಷಿಣ ಕನ್ನಡ, ಮಲೆನಾಡು, ಕೊಡಗಿನಲ್ಲಿ ಭಾರೀ ಮಳೆ; ಉತ್ತರ ಕರ್ನಾಟಕದಲ್ಲೂ ವರುಣನ ಆರ್ಭಟ

  ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್​ ಕೂಡ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್​ ಮತ್ತು ತೃಣಮೂಲ ಕಾಂಗ್ರೆಸ್​ ರಾಜ್ಯಸಭೆಯಲ್ಲಿ ಗೂಂಡಾಗಳಂತೆ ವರ್ತಿಸಿದರು. ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ರೈತರಿಗೆ ಎಂದೂ ಒಳ್ಳೆಯ ಕೆಲಸ ಮಾಡಿಲ್ಲ, ಇಂದು ರಾಜ್ಯಸಭೆಯಲ್ಲಿ ಬಹುತ್ವ ಇಲ್ಲ ಎಂದು ಅರಿವಾದಾಗ ಕಾಂಗ್ರೆಸ್​ ಗೂಂಡಾಗಿರಿ ಪ್ರದರ್ಶಿಸಿದೆ ಎಂದಿದ್ದಾರೆ.

  ಪಂಜಾಬ್​ - ಹರಿಯಾಣ ಗಡಿಯಲ್ಲಿ ಸಂಚಾರ ನಿಷೇಧ:

  ಅತ್ತ ರಾಜ್ಯಸಭೆಯಲ್ಲಿ ಬಿಲ್​ ಪಾಸ್​ ಆಗುತ್ತಲೇ ಇತ್ತ ಪಂಜಾಬ್​ ಮತ್ತು ಹರಿಯಾಣದಲ್ಲಿ ರೈತರ ಪ್ರತಿಭಟನೆಯ ಕಾವು ದುಪ್ಪಟ್ಟಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಎರಡೂ ರಾಜ್ಯಗಳ ನಡುವಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಪ್ರತಿಭಟನೆ ತಾರಕಕ್ಕೇರಿದೆ.
  Published by:Sharath Sharma Kalagaru
  First published: