ರಾಜ್ಯಸಭೆಯಲ್ಲಿ ಕೇಂದ್ರದ ಮೂರು ಕೃಷಿ ಮಸೂದೆ; ಬಿಜೆಪಿಗಿದೆಯೇ ಬಹುಮತ?, ಸಂಖ್ಯೆಗಳ ಆಟದಲ್ಲಿ ಸರ್ಕಾರ!
ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಬಿಜೆಪಿಯ ಮಿತ್ರಪಕ್ಷವಾದ ಅಕಾಲಿಸ್ ಪಕ್ಷದ ಓರ್ವ ಕೇಂದ್ರ ಕ್ಯಾಬಿನೆಟ್ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಇದರ ಹೊರತಾಗಿಯೂ, ಬಿಜೆಪಿ ಇತರೆ ಪ್ರಾದೇಶಿಕ ಪಕ್ಷಗಳ ಕೈಹಿಡಿಯಲಿವೆ ಎನ್ನಲಾಗುತ್ತಿದೆ.
news18-kannada Updated:September 19, 2020, 7:10 PM IST

ಪ್ರಾತಿನಿಧಿಕ ಚಿತ್ರ.
- News18 Kannada
- Last Updated: September 19, 2020, 7:10 PM IST
ನವ ದೆಹಲಿ (ಸೆಪ್ಟೆಂಬರ್ 19); ರೈತರ ರಕ್ಷಾ ಕವಚ ಎಂಬ ಘೋಷಣೆಯೊಂದಿಗೆ ಕೇಂದ್ರ ಸರ್ಕಾರ ಮೂರು ಕೃಷಿ ಮಸೂದೆಗಳನ್ನು ಕಳೆದ ಗುರುವಾರ ಸಂಸತ್ನಲ್ಲಿ ಮಂಡಿಸಿದೆ. ಆದರೆ, ಈ ಮಸೂದೆಗಳು ರೈತ ವಿರೋಧಿಗಳಾಗಿವೆ, ದೊಡ್ಡ ದೊಡ್ಡ ಕಂಪೆನಿಗಳಿಗಷ್ಟೆ ಇದರಿಂದ ಲಾಭವಾಗಲಿದೆ ಎಂಬ ಕೂಗು ವಿರೋಧ ಪಕ್ಷದಿಂದ ಕೇಳಿ ಬರುತ್ತಿದೆ. ಈ ನಡುವೆ ಕೇಂದ್ರ ಸರ್ಕಾರದ ಈ ಮಸೂದೆಯನ್ನು ವಿರೋಧಿಸಿ ಸ್ವತಃ ಸಚಿವೆ ಹರ್ಸಿಮ್ರತ್ ಕೌರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಈ ವಿಚಾರ ಇಡೀ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಈ ಮಸೂದೆಗಳಿಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆಯುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ವಿಚಾರವೇನಲ್ಲ. ಏಕೆಂದರೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಬಹುಮತ ಇದೆ. ಆದರೆ, ರಾಜ್ಯಸಭೆಯಲ್ಲಿ ಬಿಜೆಪಿಗೆ ಈ ಪ್ರಮಾಣದ ಬಹಮತ ಇಲ್ಲ. ಅಲ್ಲದೆ, ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಸೋಲಿಸಲು ವಿರೋಧ ಪಕ್ಷಗಳು ಒಗ್ಗಟ್ಟಾಗಿದ್ದು, ಇದೀಗ ಅಂಕಿಸಂಖ್ಯೆಯ ಲೆಕ್ಕಾಚಾರಗಳು ಆರಂಭವಾಗಿವೆ.
ರಾಜ್ಯಸಭೆ ಸದಸ್ಯರ ಸಂಖ್ಯೆ 243 ಆಗಿದ್ದು, ಇಲ್ಲಿ ಮಸೂದೆಗೆ ಬಹುಮತದ ಅಂಗೀಕಾರ ಪಡೆಯಲು ಕನಿಷ್ಟ 122 ಸದಸ್ಯರ ಬೆಂಬಲ ಅಗತ್ಯವಿದೆ. ಆದರೆ, ರಾಜ್ಯ ಸಭೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಸದಸ್ಯರ ಸಂಖ್ಯೆ 105 ಮಾತ್ರ. ಈ ನಡುವೆ ಬಿಜೆಪಿ ಪಕ್ಷದ 10ಜನ ಸಂಸದರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಅವರನ್ನು ಮನೆಯಲ್ಲೇ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಲ್ಲೂ ಸಹ 15 ಸಂಸದರಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಹೀಗಾಗಿ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಅಗತ್ಯವಾದ ಬಹುಮತದ ಸಂಖ್ಯೆ ತಗ್ಗಲಿದೆ ಎನ್ನಲಾಗುತ್ತಿದೆ. "ರೈತ ವಿರೋಧಿ" ಮಸೂದೆಗಳನ್ನು ವಿರೋಧಿಸಿ ಬಿಜೆಪಿಯ ಮಿತ್ರಪಕ್ಷವಾದ ಅಕಾಲಿಸ್ ಪಕ್ಷದ ಓರ್ವ ಕೇಂದ್ರ ಕ್ಯಾಬಿನೆಟ್ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಇದರ ಹೊರತಾಗಿಯೂ, ಬಿಜೆಪಿ ಇತರೆ ಪ್ರಾದೇಶಿಕ ಪಕ್ಷಗಳ ಕೈಹಿಡಿಯಲಿವೆ ಎನ್ನಲಾಗುತ್ತಿದೆ.
ಒಡಿಶಾದ ಬಿಜೆಡಿ, ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಮತ್ತು ತೆಲಂಗಾಣದ ಟಿಆರ್ಎಸ್ ಈ ಹಿಂದೆ ಅಗತ್ಯವಿದ್ದಾಗಲೆಲ್ಲಾ ಬಿಜೆಪಿ ಪರವಾಗಿ ರಾಜ್ಯಸಭೆಯಲ್ಲಿ ಮತ ಚಲಾಯಿಸಿವೆ. ಆದರೆ, ಪ್ರಸ್ತುತ ಈ ಮೂರು ಕೃಷಿ ಮಸೂದೆಯಲ್ಲಿ ಈ ಪಕ್ಷಗಳ ನಿಲುವು ಏನು? ಎಂದು ಈವರೆಗೆ ಸ್ಪಷ್ಟಪಡಿಸಿಲ್ಲ.
ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಆರು ಸ್ಥಾನಗಳನ್ನು ಹೊಂದಿದ್ದರೆ, ಕೆ ಚಂದ್ರಶೇಖರ್ ರಾವ್ ಅವರ ಟಿಆರ್ಎಸ್ ಏಳು ಸ್ಥಾನಗಳನ್ನು ಹೊಂದಿದೆ. ನವೀನ್ ಪಟ್ನಾಯಕ್ ಅವರ ಬಿಜೆಡಿಗೆ ಒಂಬತ್ತು ಸ್ಥಾನಗಳಿವೆ.
ಇದನ್ನೂ ಓದಿ : ಲಾಕ್ಡೌನ್ ವೇಳೆ 97 ಜನ ಕಾರ್ಮಿಕರು ಶ್ರಮಿಕ್ ರೈಲಿನಲ್ಲಿ ಮೃತಪಟ್ಟಿದ್ದಾರೆ; ಸಚಿವ ಗೋಯಲ್
ಇದಲ್ಲದೆ ಕಾಂಗ್ರೆಸ್ ತ್ರಿಪಕ್ಷೀಯ ಮೈತ್ರಿಯೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿದೆ. ಕಳೆದ ವಿಧಾನಸಭೆ ಚುನಾವಣೆ ನಂತರ ಬಿಜೆಪಿ ಜೊತೆಗಿನ ಅಧಿಕಾರ ಹಂಚಿಕೆ ಭಿನ್ನಾಭಿಪ್ರಾಯದ ಕಾರಣಕ್ಕೆ ಮೈತ್ರಿಯಿಂದ ಹೊರನಡೆದಿದ್ದ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆಗೂಡಿ ಸರ್ಕಾರ ರಚನೆ ಮಾಡಿತ್ತು. ಬಿಜೆಪಿ ಜೊತೆಗಿನ ಭಿನ್ನಾಭಿಪ್ರಾಯದ ಹೊರತಾಗಿ ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಬೆಂಬಲಿಸುವುದಾಗಿ ಶಿವಸೇನೆ ಈಗಾಗಲೇ ತಿಳಿಸಿದೆ. ಎನ್ಸಿಪಿ ಸಹ ಈ ಮಸೂದೆಗೆ ಒಪ್ಪಿಗೆ ಸೂಚಿಸಿದೆ ಎನ್ನಲಾಗುತ್ತಿದೆ.
ರಾಜ್ಯಸಭೆಯಲ್ಲಿ ಶಿವಸೇನೆಗೆ ಮೂರು ಜನ ಸಂಸದರಿದ್ದರೆ, ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷಕ್ಕೆ ನಾಲ್ಕು ಜನ ಸಂಸದರಿದ್ದಾರೆ. ತೃಣಮೂಲ ಸೇರಿದಂತೆ ವಿರೋಧ ಪಕ್ಷದ ಅನೇಕ ಸಂಸದರು ಸಹ ಅಡ್ಡ ಮತದಾನ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಈ ಲೆಕ್ಕಾಚಾರಗಳ ನಡುವೆ ನೂತನ ಕೃಷಿ ಮಸೂದೆಗಳನ್ನು ಬೆಂಬಲಿಸಿ ಸುಮಾರು 135 ಸಂಸದರು ರಾಜ್ಯಸಭೆಯಲ್ಲಿ ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸ ಸರ್ಕಾರದಲ್ಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ರಾಜ್ಯಸಭೆ ಸದಸ್ಯರ ಸಂಖ್ಯೆ 243 ಆಗಿದ್ದು, ಇಲ್ಲಿ ಮಸೂದೆಗೆ ಬಹುಮತದ ಅಂಗೀಕಾರ ಪಡೆಯಲು ಕನಿಷ್ಟ 122 ಸದಸ್ಯರ ಬೆಂಬಲ ಅಗತ್ಯವಿದೆ. ಆದರೆ, ರಾಜ್ಯ ಸಭೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಸದಸ್ಯರ ಸಂಖ್ಯೆ 105 ಮಾತ್ರ. ಈ ನಡುವೆ ಬಿಜೆಪಿ ಪಕ್ಷದ 10ಜನ ಸಂಸದರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಅವರನ್ನು ಮನೆಯಲ್ಲೇ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಲ್ಲೂ ಸಹ 15 ಸಂಸದರಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಹೀಗಾಗಿ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಅಗತ್ಯವಾದ ಬಹುಮತದ ಸಂಖ್ಯೆ ತಗ್ಗಲಿದೆ ಎನ್ನಲಾಗುತ್ತಿದೆ.