ನೂತನ ಕೃಷಿ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಲಿವೆ; ಸಚಿವ ತೋಮರ್ ವಿಶ್ವಾಸ
ಈ ನೂತನ ಕೃಷಿ ಮಸೂದೆಗಳಿಂದ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪೆನಿಗಳಿಗಷ್ಟೇ ಲಾಭವಾಗಲಿದೆ. ರೈತರಲ್ಲದವರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡುವ ಮೂಲಕ ಕೇಂದ್ರ ಸರ್ಕಾರ ಮತ್ತೆ ಜಮೀನ್ದಾರಿ ಪದ್ಧತಿಗೆ ನಾಂದಿ ಹಾಡುತ್ತಿದೆ. ಮಸೂದೆ ಎಂಬ ಹೆಸರಿನಲ್ಲಿ ಕೇಂದ್ರ ಸರ್ಕಾರ ರೈತರ ಮರಣ ಶಾಸನವನ್ನು ಬರೆಯುತ್ತಿದೆ ಎಂಬುದು ವಿರೋಧ ಪಕ್ಷಗಳ ಆರೋಪ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್.
- News18 Kannada
- Last Updated: September 24, 2020, 3:32 PM IST
ನವ ದೆಹಲಿ (ಸೆಪ್ಟೆಂಬರ್ 24); ಕೇಂದ್ರ ಸರ್ಕಾರ ಜಾರಿ ತರಲು ಉದ್ದೇಶಿಸಿರುವ ಮೂರು ಕೃಷಿ ಮಸೂದೆಗಳೂ ಪರಿಣಾಮಕಾರಿಯಾಗಿದ್ದು, ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ. ಏಕೆಂದರೆ ಈವರೆಗೆ ರೈತರು ತಮ್ಮ ಉತ್ಪನ್ನಗಳನ್ನು ದಲ್ಲಾಳಿಗಳ ಮೂಲಕ ಮಾರಾಟ ಮಾಡುತ್ತಿದ್ದರು. ಆದರೆ, ಈ ಕಾಯ್ದೆಯ ಮೂಲಕ ರೈತರ ತಮ್ಮ ಉತ್ಪನ್ನಗಳನ್ನು ಯಾವುದೇ ಖರೀದಿದಾರರಿಗೆ ಮಾರಾಟ ಮಾಡಬಹುದಾಗಿದೆ. ಅವರ ಬೆಳೆಗಳಿಗೆ ಸೂಕ್ತ ಬೆಲೆಯ ಖಾತರಿ ಪಡೆಯಬಹುದಾಗಿದೆ. ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಮಾಡಲು ಮತ್ತು ಕೃಷಿ ಕ್ಷೇತ್ರದಲ್ಲಿ ರೈತರು ಈವರೆಗೆ ಮಾಡುತ್ತಿದ್ದ ವೆಚ್ಚವನ್ನು ಕಡಿತಗೊಳಿಸಲು ಈ ಮಸೂದೆಗಳು ಸಹಕಾರಿಯಾಗಲಿವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರದ ಈ ಮೂರು ಕೃಷಿ ಮಸೂದೆಗಳ ವಿರುದ್ಧ ದೇಶದಾದ್ಯಂತ ದೊಡ್ಡ ಮಟ್ಟದ ರೈತ ಹೋರಾಟ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಇಕ್ಕಟ್ಟಾದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ವಿರೋಧ ಪಕ್ಷಗಳೂ ಸಹ ಈ ಮಸೂದೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿವೆ.
"ಈ ನೂತನ ಕೃಷಿ ಮಸೂದೆಗಳಿಂದ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪೆನಿಗಳಿಗಷ್ಟೇ ಲಾಭವಾಗಲಿದೆ. ರೈತರಲ್ಲದವರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡುವ ಮೂಲಕ ಕೇಂದ್ರ ಸರ್ಕಾರ ಮತ್ತೆ ಜಮೀನ್ದಾರಿ ಪದ್ಧತಿಗೆ ನಾಂದಿ ಹಾಡುತ್ತಿದೆ. ಅಥವಾ ಕಾರ್ಪೋರೇಟ್ ಕಂಪೆನಿಯವರು ಈ ಕೃಷಿ ಭೂಮಿಯನ್ನು ಖರೀದಿಸಿ ಕೃಷಿಯೇತರ ಉದ್ದೇಶಗಳಿಗೆ ಬಳಸುವ ಸಾಧ್ಯತೆಗಳಿವೆ. ಹೀಗಾಗಿ ಮಸೂದೆ ಎಂಬ ಹೆಸರಿನಲ್ಲಿ ಕೇಂದ್ರ ಸರ್ಕಾರ ರೈತರ ಮರಣ ಶಾಸನವನ್ನು ಬರೆಯುತ್ತಿದೆ" ಎಂಬುದು ವಿರೋಧ ಪಕ್ಷಗಳ ಆರೋಪ. ಹೀಗಾಗಿ ವಿರೋಧ ಪಕ್ಷಗಳ ಟೀಕೆಗೆ ಉತ್ತರವಾಗಿ ಕೃಷಿ ಮಸೂದೆಗಳಿಂದ ರೈತರಿಗೆ ಆಗುವ ಲಾಭದ ಕುರಿತು ಮಾತನಾಡಿರುವ ಸಚಿವ ನರೇಂದ್ರ ಸಿಂಗ್ ತೋಮರ್ , “ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೂತನ ಕೃಷಿ ಮಸೂದೆಗಳ ಮೂಲಕ ರೈತರಿಗೆ ಸ್ವಾತಂತ್ರ್ಯವನ್ನು ನೀಡಲು ಮುಂದಾಗಿದೆ. ಈ ಮಸೂದೆಗಳು ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಸರಪಳಿಗಳಿಂದ ರೈತರನ್ನು ಮುಕ್ತಗೊಳಿಸುತ್ತವೆ” ಎಂದು ತಿಳಿಸಿದ್ದಾರೆ.
"ಸಣ್ಣ ರೈತರು ಸಹ ಈಗ ಬೆಳೆ ಬಿತ್ತನೆ ಸಮಯದಲ್ಲಿ ಈ ಮಸೂದೆಗಳ ಮೂಲಕ ತಮ್ಮ ಉತ್ಪನ್ನಗಳ ಖಾತರಿಯನ್ನು ಪಡೆಯಬಹುದಾಗಿದೆ. ಅವರು ಈಗ ತಮ್ಮ ಬೆಳೆಗೆ ದುಬಾರಿ ಬೆಲೆಗಳನ್ನು ಪಡೆಯಬಹುದಾಗಿದೆ. ಹೊಸ ತಂತ್ರಜ್ಞಾನ, ಗುಣಮಟ್ಟದ ಭಿತ್ತನೆ ಬೀಜಗಳು, ಉತ್ತಮ ಕೀಟನಾಶಕಗಳನ್ನು ಬಳಸಬಹುದು ಮತ್ತು ತಮ್ಮ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಬಹುದು. ಈ ಮಸೂದೆಗಳು ರೈತರ ಜೀವನದಲ್ಲಿ ನಿರ್ಣಾಯಕ ಮತ್ತು ಕ್ರಾಂತಿಕಾರಿ ಬದಲಾವಣೆಗಳನ್ನು ತರಲಿವೆ. ಈ ಮಸೂದೆಗಳು ಜಾರಿಯಾದಾಗ ಅದನ್ನು ರೈತರೇ ಅರಿತುಕೊಳ್ಳಲಿದ್ದಾರೆ” ಎಂದು ಸಚಿವ ನರೇಂದ್ರ ಸಿಂಗ್ ತೋಮರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : MSP Crisis - ಕನಿಷ್ಠ ಬೆಂಬಲ ಬೆಲೆಗೆ ಸರ್ಕಾರ ಬದ್ಧ; ಆದರೆ ಕಾನೂನಾಗಿ ಸೇರಿಸುವುದಿಲ್ಲ: ಕೇಂದ್ರ ಕೃಷಿ ಸಚಿವ
ಈ ನೂತನ ಕೃಷಿ ಮಸೂದೆಗಳ ಮೇಲಿನ ಟೀಕೆಗಳನ್ನು ಅಲ್ಲಗೆಳೆದ ಸಚಿವ ನರೇಂದ್ರ ಸಿಂಗ್ ತೋಮರ್, “ಮಸೂದೆ ವಿರುದ್ಧ ವಿರೋಧ ಪಕ್ಷಗಳ ಟೀಕೆ ಆಧಾರ ರಹಿತವಾಗಿದೆ. ಏಕೆಂದರೆ ಕನಿಷ್ಟ ಬೆಂಬಲ ಬೆಲೆ ಮತ್ತು ಎಪಿಎಂಸಿ ಎಂದಿನಂತೆ ಮುಂದುವರೆಯಲಿದೆ. ರೈತರ ಹಿತದೃಷ್ಟಿಯಿಂದ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ, ಈ ಕಾನೂನುಗಳಲ್ಲಿ ಬದಲಾವಣೆ ಬರುವವರೆಗೆ ರೈತರಿಗೆ ಸಮರ್ಪಕವಾಗಿ ಪ್ರಯೋಜನವಾಗುವುದಿಲ್ಲ. ಅದಕ್ಕಾಗಿಯೇ ಸರ್ಕಾರ ಎರಡು ಸುಗ್ರೀವಾಜ್ಞೆಗಳ ಮೂಲಕ ಮಸೂದೆಗಳನ್ನು ಜಾರಿಗೆ ತಂದಿದೆ” ಎಂದು ತಿಳಿಸಿದ್ದಾರೆ.
ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ-2020 ಮತ್ತು ರೈತ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ-2020 ಅನ್ನು ಸಂಸತ್ತು ಭಾನುವಾರ ಅಂಗೀಕರಿಸಿದೆ. ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ ತರುವ ಕೃಷಿಗೆ ಸಂಬಂಧಿಸಿದ ಮೂರನೇ ಮಸೂದೆಯನ್ನು ಸಹ ಮುಂಗಾರು ಅಧಿವೇಶನದಲ್ಲಿ ಸಂಸತ್ತು ಅಂಗೀಕರಿಸಿತ್ತು.
"ಈ ನೂತನ ಕೃಷಿ ಮಸೂದೆಗಳಿಂದ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪೆನಿಗಳಿಗಷ್ಟೇ ಲಾಭವಾಗಲಿದೆ. ರೈತರಲ್ಲದವರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡುವ ಮೂಲಕ ಕೇಂದ್ರ ಸರ್ಕಾರ ಮತ್ತೆ ಜಮೀನ್ದಾರಿ ಪದ್ಧತಿಗೆ ನಾಂದಿ ಹಾಡುತ್ತಿದೆ. ಅಥವಾ ಕಾರ್ಪೋರೇಟ್ ಕಂಪೆನಿಯವರು ಈ ಕೃಷಿ ಭೂಮಿಯನ್ನು ಖರೀದಿಸಿ ಕೃಷಿಯೇತರ ಉದ್ದೇಶಗಳಿಗೆ ಬಳಸುವ ಸಾಧ್ಯತೆಗಳಿವೆ. ಹೀಗಾಗಿ ಮಸೂದೆ ಎಂಬ ಹೆಸರಿನಲ್ಲಿ ಕೇಂದ್ರ ಸರ್ಕಾರ ರೈತರ ಮರಣ ಶಾಸನವನ್ನು ಬರೆಯುತ್ತಿದೆ" ಎಂಬುದು ವಿರೋಧ ಪಕ್ಷಗಳ ಆರೋಪ.