ನವದೆಹಲಿ(ಫೆ.12): ನಾಗರಿಕ ವಿಮಾನಯಾನ ಸಚಿವಾಲಯವು ಗುರುವಾರ ಎಲ್ಲಾ ಬ್ಯಾಂಡ್ಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ವಿಮಾನಯಾನಗಳನ್ನು ಹೆಚ್ಚಿಸಿದೆ. ಇದರಿಂದ ಒಂದು ಕಡೆ, ಆರ್ಥಿಕವಾಗಿ ತೊಂದರೆಗೀಡಾದ ವಿಮಾನಯಾನ ಸಂಸ್ಥೆಗಳಿಗೆ ದೊಡ್ಡ ಪರಿಹಾರವನ್ನು ನೀಡುತ್ತದೆ. ಆದರೆ ಮತ್ತೊಂದೆಡೆ, ಪ್ರಯಾಣಿಕರಿಗೆ ವಿಮಾನ ಪ್ರಯಾಣವನ್ನು ಕನಿಷ್ಠ ಮಾರ್ಚ್ 31 ರವರೆಗೆ ಹೆಚ್ಚಿಸುತ್ತದೆ. ವಿಮಾನಯಾನ ಮೇಲಿನ ಕನಿಷ್ಠ ಮತ್ತು ಗರಿಷ್ಠ ಮಿತಿಗಳನ್ನು ಶೇಕಡಾ 10-30 ರಷ್ಟು ಹೆಚ್ಚಿಸಲಾಗಿದೆ ಎಂದು ಗುರುವಾರ ಹೊರಡಿಸಲಾದ ಅಧಿಸೂಚನೆಯ ಪ್ರಕಾರ ಮಾಹಿತಿ ನೀಡಲಾಗಿದೆ.
ಮೇ 2020 ರಲ್ಲಿ ಕೇಂದ್ರ ಸರ್ಕಾರವು ದೇಶೀಯ ವಾಯುಯಾನವನ್ನು ಮತ್ತೆ ತೆರೆದಾಗ ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಬ್ಯಾಂಡ್ಗಳ ಮೂಲಕ ವಿಮಾನಗಳ ಕ್ರಿಯಾತ್ಮಕ ಬೆಲೆ ನಿಗದಿ ಶುಲ್ಕ ನಿರ್ಬಂಧಗಳನ್ನು ವಿಧಿಸಿತ್ತು. ಈ ಪೈಕಿ ಮೊದಲ ಬ್ಯಾಂಡ್ 40 ನಿಮಿಷಗಳಿಗಿಂತ ಕಡಿಮೆ ಅವಧಿಯ ವಿಮಾನಗಳನ್ನು ಒಳಗೊಂಡಿದೆ. ಈಗ ಮೊದಲ ಬ್ಯಾಂಡ್ನ ಕನಿಷ್ಠ ಮಿತಿಯನ್ನು ಗುರುವಾರ 2,000 ರೂ.ಗಳಿಂದ 2,200 ರೂ.ಗೆ ಹೆಚ್ಚಿಸಲಾಗಿದೆ. ಈ ಬ್ಯಾಂಡ್ನಲ್ಲಿ ಗರಿಷ್ಠ ಮಿತಿಯನ್ನು 7,800 ರೂ.ಗೆ ನಿಗದಿಪಡಿಸಲಾಗಿದೆ. ಮೊದಲು ಈ ಬ್ಯಾಂಡ್ನ ಗರಿಷ್ಠ ಮಿತಿ 6,000 ರೂ. ಇತ್ತು. ವಿಮಾನ ಪ್ರಯಾಣದ ನಂತರದ ಬ್ಯಾಂಡ್ಗಳು 40-60 ನಿಮಿಷಗಳು, 60-90 ನಿಮಿಷಗಳು, 90-120 ನಿಮಿಷಗಳು, 120-150 ನಿಮಿಷಗಳು, 150-180 ನಿಮಿಷಗಳು ಮತ್ತು 180-210 ನಿಮಿಷಗಳು ಆಗಿದೆ.
ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್, ಸೋಲನ್ನು ಒಪ್ಪಿಕೊಳ್ಳಲ್ಲ; ಹಳ್ಳಿಹಕ್ಕಿ ಹೆಚ್. ವಿಶ್ವನಾಥ್ ಲೇವಡಿ
ಬ್ಯಾಂಡ್ - ನೂತನ ದರ (ಕನಿಷ್ಠ ಮಿತಿ-ಗರಿಷ್ಠ ಮಿತಿ) - ಹಳೆಯ ದರ (ಕನಿಷ್ಠ ಮಿತಿ-ಗರಿಷ್ಠ ಮಿತಿ)
40 ನಿಮಿಷಗಳಿಗಿಂತ ಕಡಿಮೆ- 2,200 ರೂ. 7,800 ರೂ.- 2,000 ರೂ. 6,000 ರೂ.
40 - 60 ನಿಮಿಷಗಳು- 2,800 ರೂ. 9,800 ರೂ-. 2,500 ರೂ. 7,500 ರೂ.
60-90 ನಿಮಿಷಗಳು 3,300 ರೂ. 11,700 ರೂ. -3,000 ರೂ. 9,000 ರೂ.
90-120 ನಿಮಿಷಗಳು 3,900 ರೂ. 13,000 ರೂ. -3,500 ರೂ. 10,000 ರೂ.
120-150 ನಿಮಿಷಗಳು 5,000 ರೂ. 16,900 ರೂ. -4,500 ರೂ. 13,000 ರೂ.
150-180 ನಿಮಿಷಗಳು 6,100 ರೂ. 20,400 ರೂ. -5,500 ರೂ. 15,700 ರೂ.
180-210 ನಿಮಿಷಗಳು 7,200 ರೂ. 24,200 ರೂ.- 6,500 ರೂ. 18,600 ರೂ.
ಈ ಹೊಸ ಮಿತಿಗಳು "ಮಾರ್ಚ್ 31, 2021 ರವರೆಗೆ ಅಥವಾ ಮುಂದಿನ ಆದೇಶದವರೆಗೆ" ಜಾರಿಯಲ್ಲಿರುತ್ತವೆ ಎಂದು ಸಚಿವಾಲಯ ತಿಳಿಸಿದೆ. ಕಳೆದ ತಿಂಗಳು, ಸರ್ಕಾರವು ವಿಮಾನಯಾನ ಸಂಸ್ಥೆಗಳಿಗೆ ಸರಾಸರಿ ಶುಲ್ಕಕ್ಕಿಂತ ಕೇವಲ 20 ಶೇಕಡಾ ಟಿಕೆಟ್ಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಿತ್ತು.
ಇನ್ನು, ಕೇಂದ್ರ ಸರ್ಕಾರದ ಈ ಕ್ರಮವನ್ನು ವಿಮಾನಯಾನ ಎಕ್ಸಿಕ್ಯೂಟಿವ್ಸ್ಗಳು ಸ್ವಾಗತಿಸಿದರು. ಆದರೆ ಸರ್ಕಾರವು ಶೀಘ್ರದಲ್ಲೇ ನಿರ್ಬಂಧಗಳನ್ನು ರದ್ದುಗೊಳಿಸಬೇಕು ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ