• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • YouTuber: 300 ಕಿಮೀ ವೇಗದಲ್ಲಿ ರೈಡಿಂಗ್ ಮಾಡಲು ಹೋಗಿ ಯೂಟ್ಯೂಬರ್ ಸಾವು! ಹುಚ್ಚು ಸಾಹಸಕ್ಕೆ ಕೈ ಹಾಕಿ ಪ್ರಾಣ ಕಳೆದುಕೊಂಡ ಯುವಕ

YouTuber: 300 ಕಿಮೀ ವೇಗದಲ್ಲಿ ರೈಡಿಂಗ್ ಮಾಡಲು ಹೋಗಿ ಯೂಟ್ಯೂಬರ್ ಸಾವು! ಹುಚ್ಚು ಸಾಹಸಕ್ಕೆ ಕೈ ಹಾಕಿ ಪ್ರಾಣ ಕಳೆದುಕೊಂಡ ಯುವಕ

ಬೈಕರ್ ಅಗಸ್ತ್ಯ ಸಾವು

ಬೈಕರ್ ಅಗಸ್ತ್ಯ ಸಾವು

Bike Stunt: 300 ಕಿಮೀ ವೇಗದಲ್ಲಿ ಬೈಕ್ ಓಡಿಸುತ್ತೇನೆಂದು ಹೋದ ಜನಪ್ರಿಯ ಯೂಟ್ಯೂಬರ್ (YouTuber) ಹಾಗೂ ಬೈಕರ್ ಅಗಸ್ತ್ಯ ಚೌಹಾಣ್ (Agastya Chauhan) ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

  • Share this:

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ (Social Media) ಹೆಚ್ಚು ವೀವ್ಸ್​ ಪಡೆಯುವುದಕ್ಕಾಗಿ ಯುವಕರು ಎಂತಹ ಸಾಹಸವನ್ನಾದರು ಮಾಡುತ್ತಾರೆ. ವೇಗವಾಗಿ ಚಲಿಸುವ ರೈಲಿನ ಬಳಿನಿಂತು ರೀಲ್ಸ್  ಮಾಡುವುದು, ಬೈಕ್​ನಲ್ಲಿ ವೀಲಿಂಗ್ ಮಾಡುವುದು ಸೇರಿದಂತೆ ಯುವಕರು ಫೇಮಸ್ ಆಗುವುದಕ್ಕೆ ಹಲವಾರು ಸ್ಟಂಟ್​ಗಳನ್ನು ಮಾಡುತ್ತಾರೆ.  ಹೀಗೆ  300 ಕಿಮೀ ವೇಗದಲ್ಲಿ ಬೈಕ್ ಓಡಿಸುತ್ತೇನೆಂದು ಹೋದ ಜನಪ್ರಿಯ ಯೂಟ್ಯೂಬರ್ (YouTuber) ಹಾಗೂ ಬೈಕರ್ ಅಗಸ್ತ್ಯ ಚೌಹಾಣ್ (Agastya Chauhan) ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸದಾ ತಮ್ಮ ವಿಡಿಯೋಗಳಲ್ಲಿ ಬೈಕರ್​ಗಳಿಗೆ ಎಚ್ಚರಿಕೆ ನೀಡುತ್ತಿದ್ದ ಆತ, ತಾನೇ ವೇಗವಾಗಿ ಬೈಕ್ ರೈಡಿಂಗ್ ಮಾಡಲು ಹೋಗಿ ರಸ್ತೆ ಅಪಘಾತದಲ್ಲಿ (road accident) ಮೃತಪಟ್ಟಿದ್ದಾರೆ. ದೆಹಲಿಯ ಯಮುನ ಎಕ್ಸ್​ಪ್ರೆಸ್​ ವೇನಲ್ಲಿ ಗಂಟೆಗೆ 300 ಕಿಮೀ ವೇಗದಲ್ಲಿ ಬೈಕ್ ರೈಡ್ ಮಾಡುವ  ಪ್ರಯತ್ನದಲ್ಲಿ ಡಿವೈಡರ್​ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದು ಸಾವನ್ನಪ್ಪಿದ್ದಾರೆ.


ಉತ್ತರಾಖಂಡದ ಡೆಹ್ರಾಡೂನ್ ನಿವಾಸಿಯಾಗಿರುವ ಅಗಸ್ತ್ಯ ಚೌಹಾಣ್ ವೃತ್ತಿಯಲ್ಲಿ ಬೈಕ್ ಸವಾರರಾಗಿದ್ದರು. ಅವರು ತಮ್ಮದೇ ಆದ PRO RIDER 1000 ಎಂಬ ಯೂಟ್ಯೂಬ್ ಚಾನೆಲ್​ ಹೊಂದಿದ್ದು, 12 ಲಕ್ಷ ಫಾಲೋವರ್ಸ್​ ಹೊಂದಿದ್ದರು. ಯುವ ಪೀಳಿಗೆ ಇವರ ವಿಡಿಯೋಗಳೆಂದರೆ ಬಹಳ ಅಚ್ಚುಮೆಚ್ಚಾಗಿತ್ತು.


ಡಿವೈಡರ್​ಗೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಸಾವು


ದೀರ್ಘಕಾಲದಿಂದ ಬೈಕುಗಳನ್ನು ಓಡಿಸುತ್ತಿದ್ದ ಅಗಸ್ತ್ಯ ಹಲವಾರು ವಿಡಿಯೋಗಳನ್ನು ತಮ್ಮ ಚಾನಲ್​ನಲ್ಲಿ ಹಂಚಿಕೊಂಡಿದ್ದರು. ಅಪಘಾತದಲ್ಲಿ ಸಾಯುವ 16 ಗಂಟೆ ಮುಂಚೆ ಅವರು ತಮ್ಮ ಚಾನಲ್​​ನಲ್ಲಿ ವಿಡಿಯೋವೊಂದನ್ನು ಅಪ್​ಲೋಡ್ ಮಾಡಿದ್ದರು. ಕವಾಸಕಿ ಬೈಕ್ ಓಡಿಸುತ್ತಿದ್ದ ಅವರು, ತಾವೂ ಗಂಟೆಗೆ 300 ಕೀಮೀ ವೇಗದಲ್ಲಿ ಬೈಕ್ ಓಡಿಸಬೇಕೆಂದು ಪ್ರಯತ್ನಿಸುತ್ತಿದ್ದರು. ಆದರೆ ಈ ವೇಳೆ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬೈಕ್​ನಿಂದ ಬಿದ್ದ ಅಗಸ್ತ್ಯ ಗಂಭೀರ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಆತ ತೊಟ್ಟಿದ್ದ ಹೆಲ್ಮೆಟ್​ ಕೂಡ ಪೀಸ್​ ಪೀಸ್​ ಆಗಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ:  Gold Kulfi: ರಸ್ತೆ ಬದಿಯಲ್ಲಿ 24 ಕ್ಯಾರೆಟ್​ ಚಿನ್ನದ ಕುಲ್ಫಿ ಮಾರಾಟ! ಟೇಸ್ಟ್ ಹೇಗಿದೆ? ದರ ಎಷ್ಟಿದೆ ಗೊತ್ತಾ?


ಕುಟಂಬಸ್ಥರಿಗೆ ದೇಹ ಹಸ್ತಾಂತರ


ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಅಲಿಗಢ ಜಿಲ್ಲೆಯ ತಪ್ಪಲ್ ಪೊಲೀಸ್ ಠಾಣೆಯ ಪೊಲೀಸರು ಆತನ ಶವವನ್ನು ವಶಕ್ಕೆ ತೆಗೆದುಕೊಂಡಿದ್ದರು. ನಂತರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗ್ರೇಟರ್ ನೋಯ್ಡಾದ ಕೈಲಾಶ್ ಆಸ್ಪತ್ರೆಗೆ ಕಳುಹಿಸಿ, ಮರಣೋತ್ತರ ಪರೀಕ್ಷೆಯ ನಂತರ ಮೃತ ದೇಹವನ್ನು ಅಗಸ್ತ್ಯ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.



ಅಗಸ್ತ್ಯನ ವಿರುದ್ಧ ಹಿಂದೆಯೇ ದೂರು ದಾಖಲು


2023ರ ಆರಂಭದಲ್ಲಿ, ಡೆಹರಾಡೂನ್‌ನ ರಸ್ತೆಗಳಲ್ಲಿ ಅಪಾಯಕಾರಿ ಸ್ಟಂಟ್​ಗಳನ್ನು ಪ್ರದರ್ಶಿಸಿದ್ದಕ್ಕಾಗಿ ಅಗಸ್ತ್ಯನ ಮೇಲೆ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.


ಅಪಘಾತದ ನಂತರ, ಅಲಿಗಢ ಪೊಲೀಸರು ವಾಹನ ಚಾಲಕರಿಗೆ ಜವಾಬ್ದಾರಿಯುತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ಚಾಲನೆ ಮಾಡಲು ಮನವಿ ಮಾಡಿದ್ದಾರೆ. ದ್ವಿಚಕ್ರ ವಾಹನ ಚಾಲಕರು ಮಿತಿಮೀರಿದ ವೇಗದಲ್ಲಿ ಚಾಲನೆ ಮಾಡುವುದನ್ನು ನಿಲ್ಲಿಸುವಂತೆ ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Crime: ಖಾಸಗಿ ವಿಡಿಯೋ ಮಾಡಿ ಹಣಕ್ಕಾಗಿ ಮಹಿಳೆಯಿಂದ ಬ್ಲಾಕ್​ಮೇಲ್​! ಕತ್ತು ಕೊಯ್ದು ಬರ್ಬರವಾಗಿ ಕೊಂದ ​ಯುವಕ


ಬೆಂಗಳೂರಿನ ಬೈಕರ್ ಮೇಲೂ ದೂರು ದಾಖಲಾಗುತ್ತು


COVID ಸಾಂಕ್ರಾಮಿಕ ರೋಗದಿಂದಾಗಿ 2020ರಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ, ಬೆಂಗಳೂರಿನ ಬೈಕರ್ ಕೂಡ ಇದೇ ರೀತಿಯ ಅಪಾಯಕಾರಿ ಸಾಹಸವನ್ನು ಪ್ರಯತ್ನಿಸಿದ್ದರು. ಸಾರ್ವಜನಿಕ ರಸ್ತೆಗಳಲ್ಲಿ ಗಂಟೆಗೆ 299 ಕಿ.ಮೀ ವೇಗದಲ್ಲಿ ಯಮಹಾ YZF-R1 ಬೈಕ್​ನಲ್ಲಿ ರೈಡ್​ ಮಾಡುತ್ತಿರುವ ವೀಡಿಯೊವನ್ನು ಬೈಕರ್ ಪೋಸ್ಟ್ ಮಾಡಿಕೊಂಡಿದ್ದ. ನಂತರ ಪೊಲೀಸರಿಗೆ ಕೈಗೂ ಸಿಕ್ಕಿಬಿದ್ದಿದ್ದ. ಆದರೆ ಆತನ ಅಜಾಗರೂಕತೆ ರೈಡಿಂಗ್​ಗಾಗಿ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.

First published: