TikTok Star : ಸ್ಕೈಡೈವಿಂಗ್ ಮಾಡುವಾಗ ಅನಾಹುತ! ಖ್ಯಾತ ಟಿಕ್​ಟಾಕ್​ ತಾರೆ ಸಾವು

ಆಗಸ್ಟ್​ 27ರಂದು ಕೆನಡಾದ ಒಂಟಾರಿಯೊದಲ್ಲಿ ಒಬ್ಬಳೇ ಸ್ಕೈಡೈವಿಂಗ್ ಕೋರ್ಸ್​ ಮಾಡುತ್ತಿದ್ದಳು. ಆ ಸಮಯದಲ್ಲಿ ಆಕಾಶದಿಂದ ಜಿಗಿಯುವಾಗ ಈ ಅಪಘಾತ ಸಂಭವಿಸಿದೆ. ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ತಾನ್ಯಾ ಪರ್ದಾಜಿ

ತಾನ್ಯಾ ಪರ್ದಾಜಿ

  • Share this:
    ಟಿಕ್‌ಟಾಕ್ (TikTok) ತಾರೆ ತಾನ್ಯಾ ಪರ್ದಾಜಿ (Tanya Pardazi) ಸ್ಕೈಡೈವಿಂಗ್ (Skydiving) ಮಾಡುವಾಗ ಆಕಾಶದಿಂದ ಬಿದ್ದು ಸಾವನ್ನಪ್ಪಿದ್ದಾರೆ. 21ನೇ ವಯಸ್ಸಿನಲ್ಲಿ ಅವರು ಸ್ಕೈಡೈವಿಂಗ್ ಕೋರ್ಸ್​ ಮಾಡುತ್ತಿದ್ದರು. ಈ ವೇಳೆ ಆಕಾಶದಿಂದ ಜಿಗಿಯುವಾಗ ಪ್ಯಾರಾಚೂಟ್​ (Parachute) ಅನ್ನು ತಡವಾಗಿ ತೆಗೆದಿದ್ದಾರೆ. ಈ ವೇಳೆ ನೆಲಕ್ಕೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

    ಆಗಸ್ಟ್​ 27ರಂದು ಕೆನಡಾದ ಒಂಟಾರಿಯೊದಲ್ಲಿ ಒಬ್ಬಳೇ ಸ್ಕೈಡೈವಿಂಗ್ ಕೋರ್ಸ್​ ಮಾಡುತ್ತಿದ್ದಳು. ಆ ಸಮಯದಲ್ಲಿ ಆಕಾಶದಿಂದ ಜಿಗಿಯುವಾಗ ಈ ಅಪಘಾತ ಸಂಭವಿಸಿದೆ. ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

    ಸ್ಕೈಡೈವ್ ಟೊರೊಂಟೊದ ಹೇಳಿಕೆಯ ಪ್ರಕಾರ, ತಾನ್ಯಾ ಪರ್ದಾಜಿ ಪ್ಯಾರಾಚೂಟ್​  ಅನ್ನು ತುಂಬಾ ನಿಧಾನವಾಗಿ ತೆರೆದಳು. ಆದರೆ ಪ್ಯಾರಾಚೂಟ್​ ಗಾಳಿಯನ್ನು ಹಿಡಿದಿಟ್ಟುಕೊಳ್ಳು ಸಾಧ್ಯವಾಗಲಿಲ್ಲ. ಈ ಘಟನೆಯಿಂದ ನೇರವಾಗಿ ನೆಲಕ್ಕೆ ಬಿದ್ದಿದ್ದಾಳೆ.

    ಪೊಲೀಸರು ಸ್ಕೈಡೈವ್ ಟೊರೊಂಟೊ ಸೌತ್ ಸಿಮ್ಕೊ ತಂಡದ ಜೊತೆಗೆ ತನಿಖೆ ನಡೆಸಿದ್ದು, ಸ್ಕೈಡೈವಿಂಗ್ ಗುಂಪಿಗೆ  ತಾನ್ಯಾ ಪರ್ದಾಜಿ ಸೇರಿದ್ದರು. ಅವರನ್ನು ನಾವೆಲ್ಲರೂ ಸ್ವಾಗತದಿಂದ ಬರಮಾಡಿಕೊಂಡಿದ್ದೆವು. ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ 50 ವಷದಿಂದ ತರಬೇತಿ ನೀಡುತ್ತಾ ಬಂದಿದೆ. ಆದರೆ ಆಕೆಯ ಸಾವು ಸ್ಕೈಡೈವ್ ಟೊರೊಂಟೊ ಸೌತ್ ಸಿಮ್ಕೊ ತಂಡಕ್ಕೆ ಆಳವಾಗಿ ನೋವು ನೀಡಿದೆ ಎಂದು ಹೇಳಿದರು.

    ಇದನ್ನೂ ಓದಿ: GST on Toilet: ಟಾಯ್ಲೆಟ್​ಗೆ ಹೋದ್ರೂ ಕಟ್ಬೇಕು 12 ಪರ್ಸೆಂಟ್​ ಜಿಎಸ್​ಟಿ! ಐಆರ್​ಸಿಟಿಸಿ ಸ್ಪಷ್ಟನೆ

    ತಾನ್ಯಾ ಪರ್ದಾಜಿ ಅವರು 2017 ರಲ್ಲಿ ಮಿಸ್ ಕೆನಡಾ ಸೌಂದರ್ಯ ಸ್ಪರ್ಧೆಯಲ್ಲಿ ಸೆಮಿ-ಫೈನಲಿಸ್ಟ್ ಆಗಿದ್ದರು ಮತ್ತು ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದರು. ಅವರ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಜೊತೆಗೆ ತಾನ್ಯಾ ಹಾಕಿ ಪೋಸ್ಟ್‌ಗಳನ್ನು ಜನರು ಲೈಕ್​ ಮಾಡುತ್ತಿದ್ದರು. ಆದರೀಗ ಟಿಕ್​ಟಾಕ್ ತಾರೆ ಸಾವನ್ನಪ್ಪಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಅನೇಕರು ಆಕೆ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತಿದ್ದಾರೆ.

    ಇದನ್ನೂ ಓದಿ: Palaces In Mysuru: ಕಣ್ಮನ ಸೆಳೆಯುವ ಮೈಸೂರಿನ 7 ಅರಮನೆಗಳ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ










    View this post on Instagram






    A post shared by Ne Olmuş (@neolmusmagazin)






    ಕಳೆದ ವರ್ಷ ಇದೇ ರೀತಿಯ ಅಪಘಾತದಲ್ಲಿ, ಚೀನಾದ 23 ವರ್ಷದ ಜನಪ್ರಿಯ ವ್ಯಕ್ತಿಯೋರ್ವ ಸಾವನ್ನಪ್ಪಿದ್ದರು. 160 ಅಡಿ ಕ್ರೇನ್‌ನಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದರು. ಅಪಘಾತ ಸಂಭವಿಸಿದಾಗ ಕ್ಸಿಯಾವೋ ಕ್ಯುಮೆಯ್ ಎಂಬವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಲೆಂದು ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.










    View this post on Instagram






    A post shared by Los 40 Tapachula (@los40tap)






    ಸಾಮಾಜಿಕ ಜಾಲತಾಣದ ಮೂಲಕ ಖ್ಯಾತಿ ಗಳಿಸಿದವರು. ಸದಾ ಏನಾದರೊಂದು ಮಾಡಿ ಗುರುತಿಸಿಕೊಳ್ಳಲು ಬಯಸುತ್ತಿರುತ್ತಾರೆ. ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಲು ಮುಂದಾಗುತ್ತಾರೆ. ಆದರೆ ಕೆಲವರಂತೂ ಟಿಕ್​ಟಾಕ್​, ರೀಲ್ಸ್​ ಹೀಗೆ ಸೆಲ್ಫಿ ವಿಡಿಯೋ ಮಾಡಿ ಸಾವನ್ನಪ್ಪಿದವರು ಇದ್ದಾರೆ. ಆದರೆ  ಇಂತಹ ಹುಚ್ಚು ಸಾಹಸಕ್ಕೆ ಕೈ ಹಾಕುವವರು ಒಂದು ಬಾರಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
    Published by:Harshith AS
    First published: