Udaipur Murder: ಕೊಲೆಯಾದ ಕನ್ಹಯ್ಯ ಲಾಲ್ ಕುಟುಂಬಕ್ಕೆ 31 ಲಕ್ಷ ಪರಿಹಾರ

ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದ ಉದಯಪುರ ಕೊಲೆ ಪ್ರಕರಣದಲ್ಲಿ ಸಂತ್ರಸ್ತನ ಕುಟುಂಬಕ್ಕೆ 31 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ.

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಉದರಪುರ(ಜೂ.29): ಇಬ್ಬರು ವ್ಯಕ್ತಿಗಳಿಂದ ಶಿರಚ್ಛೇದ ಮಾಡಿ ಕೊಲ್ಲಲ್ಪಟ್ಟ ಟೈಲರ್ ಕನ್ಹಯ್ಯಾ ಲಾಲ್ ಕುಟುಂಬಕ್ಕೆ ₹31 ಲಕ್ಷ ಆರ್ಥಿಕ ಪರಿಹಾರ (Compensation) ನೀಡಲಾಗುವುದು ಎಂದು ರಾಜಸ್ಥಾನದ (Rajastan) ಉದಯಪುರ (Udaipur) ವಿಭಾಗೀಯ ಆಯುಕ್ತ ರಾಜೇಂದ್ರ ಭಟ್ ತಿಳಿಸಿದ್ದಾರೆ. ಅಮಾನತುಗೊಂಡಿರುವ ಬಿಜೆಪಿ (BJP) ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮದ ಪೋಸ್ಟ್ ಅನ್ನು ಹಂಚಿಕೊಂಡ ಕೆಲವು ದಿನಗಳ ನಂತರ ಉದಯಪುರದ ಮಾಲ್ದಾಸ್ ರಸ್ತೆಯಲ್ಲಿ ಲಾಲ್ ಅವರ ಶಿರಚ್ಛೇದ ಮಾಡಲಾಗಿದೆ. ಶಿರಚ್ಛೇದದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳನ್ನು ರಾಜ್‌ಸಮಂದ್‌ನಿಂದ ಬಂಧಿಸಲಾಗಿದೆ.

ಅಮಾನತುಗೊಂಡಿರುವ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಇಂದು ಉದಯ್‌ಪುರದ (Udaipur) ಮಾಲ್ದಾಸ್ ಪ್ರದೇಶದಲ್ಲಿ ಟೇಲರ್ ಓರ್ವನ ಶಿರಚ್ಛೇದ ಮಾಡಿದ್ದಾರೆ.

ಪ್ರಧಾನಿ ಮೋದಿಗೆ ಬೆದರಿಕೆ

ಅಲ್ಲದೇ ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದಾರೆ. ಉದಯಪುರ ಬಸ್ ನಿಲ್ದಾಣದ ಬಳಿ ನಡೆದ ಸಂಪೂರ್ಣ ಘಟನೆಯನ್ನು ಇಬ್ಬರು ದಾಳಿಕೋರರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ (Prophet Mohammed) ಕುರಿತು ಅವರು ಮಾಡಿದ ಹೇಳಿಕೆಗಳು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿದ್ದವು.

ಕೆಲವೇ ಗಂಟೆಗಳಲ್ಲಿ ಸೆರೆ ಸಿಕ್ಕ ಕೊಲೆಗಾರರು

ವೀಡಿಯೋ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಭೀಕರ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್‌ಸಮಂದ್‌ನ ಹೆದ್ದಾರಿಯೊಂದರ ಬಳಿ ಅವರನ್ನು ಬಂಧಿಸಲಾಗಿದೆ. ಭೀಕರವಾಗಿ ಕೊಲೆಗೀಡಾದವರನ್ನು ಕನ್ನಯ್ಯ ಲಾಲ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಎಲ್ಲಾ ಮಾಡ್ಬಿಟ್ಟು ನೂಪುರ್ ಶರ್ಮಾ ಮನೆಯಲ್ಲಿ ಚಿಲ್ ಮಾಡ್ತಿದ್ದಾರೆ! TMC ಸಂಸದೆಯ ವಾಗ್ದಾಳಿ

ಅವರು ಚಿತ್ರೀಕರಿಸಿದ ವೀಡಿಯೊದಲ್ಲಿ ಕನ್ಹಯ್ಯ ಲಾಲ್ ದಾಳಿಗೆ ಒಳಗಾಗುವ ಮೊದಲು ಒಬ್ಬ ವ್ಯಕ್ತಿಯನ್ನು ಬಟ್ಟೆಗಾಗಿ ಅಳೆಯುವುದನ್ನು ತೋರಿಸಲಾಗಿದೆ. ಕೊಲೆಗಾರರು ನಂತರ ಕ್ಯಾಮರಾದಲ್ಲಿ ಕೊಲೆಯ ಬಗ್ಗೆ ಸಂತೋಷಪಟ್ಟರು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಹಾಕಿದ್ದಾರೆ.

ಪ್ರಚೋದನಕಾರಿ ಹೇಳಿಕೆ

ಪ್ರವಾದಿ ಮೊಹಮ್ಮದ್ ಕುರಿತು ಪ್ರಚೋದನಕಾರಿ ಹೇಳಿಕೆಗಳಿಂದ ಭಾರತದಲ್ಲಿ ಭಾರೀ ವಿವಾದ ಮತ್ತು ಪ್ರತಿಭಟನೆಯನ್ನು ಹುಟ್ಟುಹಾಕಿದ ಮಾಜಿ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರಿಗೆ ಕನ್ಹಯ್ಯಾ ಲಾಲ್ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲ ವ್ಯಕ್ತಪಡಿಸಿದ್ದರು.

ವಿಡಿಯೋವನ್ನು ಶೇರ್ ಮಾಡದಂತೆ ಮನವಿ

ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ನಿರ್ದೇಶಕರಾದ ಹಿರಿಯ ಪೊಲೀಸ್ ಅಧಿಕಾರಿ ಹವಾಸಿಂಗ್ ಘುಮಾರಿಯಾ ಅವರು ಈ ಭೀಕರ ಕೊಲೆಯನ್ನು ವೀಡಿಯೊವನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಕೇಳಿಕೊಂಡಿದ್ದಾರೆ. ಇದು ವೀಕ್ಷಿಸಲು ತುಂಬಾ ಭಯಾನಕವಾಗಿದೆ. ನನ್ನ ಸಲಹೆಯೆಂದರೆ ದಯವಿಟ್ಟು ವೀಡಿಯೊವನ್ನು ನೋಡಬೇಡಿ" ಎಂದು ಅಧಿಕಾರಿ ವಿನಂತಿ ಮಾಡಿದ್ದಾರೆ.

ಇದನ್ನೂ ಓದಿ: ಪಕ್ಷಬೇಧ ಬಿಟ್ಟು ಉದಯಪುರ ಮರ್ಡರ್ ಖಂಡಿಸಿದ ರಾಜಕೀಯ ಮುಖಂಡರು

ಪ್ರವಾದಿ ಬಗ್ಗೆ ನೂಪುರ್ ಶರ್ಮಾ ಹೇಳಿದ್ದೇನು?

ಕೆಲ ದಿನಗಳ ಹಿಂದಷ್ಟೇ ಪ್ರವಾದಿ ಮಹಮ್ಮದ್ ಬಗ್ಗೆ ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆಯಿಂದ ಭಾರೀ ವಿವಾದವೇ ಉಂಟಾಗಿತ್ತು.

ಅಮಾನವೀಯ ಹಾಗೂ ಕ್ರೂರವಾದ ಈ ಘಟನೆಯನ್ನು ದೇಶದ ಎಲ್ಲಾ ರಾಜಕೀಯ ನಾಯಕರು (Political Leaders) ಖಂಡಿಸಿದ್ದಾರೆ (Condemn). ಅವರೆಲ್ಲರೂ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಶಾಂತಿಗಾಗಿ (Peace) ಮನವಿ ಮಾಡಿದ ವಿವಿಧ ರಾಜಕೀಯ ಮುಖಂಡರು ಕಠಿಣ ಶಿಕ್ಷೆಯ ಭರವಸೆ ನೀಡಿದ್ದಾರೆ.
Published by:Divya D
First published: